ಹಿರಿಯದಲಿತ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ ಶ್ರೀನಿವಾಸನ್ ಅಲಿಯಾಸ್ ಕೌನ್ಸಿಲರ್ ಸೀನಪ್ಪ ಮೇಲೆ ಹಾಡು ಹಗಲೇ ಕೊಲೆ ಯತ್ನ, 24 ಗಂಟೆಯಲ್ಲಿ ಕೊಲೆ ಆರೋಪಿಗಳ ಬಂಧನ ಖಚಿತ ಗೃಹ ಸಚಿವ ಪರಮೇಶ್ವರ್

ಹಿರಿಯದಲಿತ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ ಶ್ರೀನಿವಾಸನ್ ಅಲಿಯಾಸ್ ಕೌನ್ಸಿಲರ್ ಸೀನಪ್ಪ ಮೇಲೆ ಹಾಡು ಹಗಲೇ ಕೊಲೆ ಯತ್ನ ನಡೆಯಲಾಗಿದ್ದು ರಕ್ತದ ಮಡುವಿನಲ್ಲಿ ಇದ್ದ ಎಂ ಶ್ರೀನಿವಾಸರನ್ ರವರನ್ನು ಶ್ರೀನಿವಾಸಪುರ ಆಸ್ಪತ್ರೆಗೆ ಸಾಗಿಸಲಾಗಿ ಅಲ್ಲಿಂದ ಕೋಲಾರದ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆ ಕಳಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ದಲಿತ ಮುಖಂಡ ಎಂ ಶ್ರೀನಿವಾಸನ್ ಹಾಗೂ ಹಿರಿಯ ರಾಜಕಾರಣಿಯಾಗಿದ್ದ ಎಂ ಶ್ರೀನಿವಾಸನ್ ರವರು ಶ್ರೀನಿವಾಸಪುರ ಪಟ್ಟಣದ ವ್ಯಾಪ್ತಿಯಲ್ಲಿ ಜಗಜೀವನ ಪಾಳ್ಯ ನಿವಾಸಿಯಾಗಿರುತ್ತಾರೆ ಇವರು ಶ್ರೀನಿವಾಸಪುರದಲ್ಲಿ ಕೌನ್ಸಿಲರ್ ಶ್ರೀನಿವಾಸ್ ಎಂಬುದು ಖ್ಯಾತಿಯಾಗಿದೆ ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ ಅಂದಿನ ಪುರಸಭೆಗೆ ಸದಸ್ಯನಾಗಿ ಇದ್ದ ಕಾರಣ ಈ ಹೆಸರು ಶಾಶ್ವತವಾಗಿ ಉಳಿಯಿತು.
ಆನಂತರ 2009ರಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಗೌನಿ ಪಲ್ಲಿ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿ ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸಿದ್ದರು.

ಆನಂತರ ಎಮ್ ಶ್ರೀನಿವಾಸನ್ ರವರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಅಲ್ಲಿ ಕೆಆರ್ ರಮೇಶ್ ಕುಮಾರ್ ಅವರ ಗೆಲುವಿಗೆ ಕಾರಣಕರ್ತರಾಗಿ ಅತಿಹೆಚ್ಚಿನ ಮತಗಳನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಕೆ ಆರ್ ರಮೇಶ್ ಕುಮಾರ್ ಅವರ ಆಪ್ತ ಬಲಗೈ ಬಂಟನಾಗಿದ್ದು ಇಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು.
ಜೆಡಿಎಸ್ ಪಕ್ಷದಲ್ಲಿ ಇದ್ದ ವರ್ಷಗಳು ಸಹ ಜಿಕೆ ವೆಂಕಟಶಿವಾರೆಡ್ಡಿರವರ ಬಳಿ ಸಹ ಉತ್ತಮ ಕಾರ್ಯವನ್ನು ನಿರ್ವಹಿಸಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಮಿಂಚಿನ ಹಿರಿಯ ರಾಜಕಾರಣಿ ಮತ್ತು ಅನುಭವ ರಾಜಕಾರಣಿ ಮತ್ತು ದಲಿತ ಮುಖಂಡರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಮುಖಂಡರಾಗಿ ದಲಿತರ ಪರವಾಗಿ ಧ್ವನಿ ಎತ್ತುವ ಏಕೈಕ ನಾಯಕರಾಗಿ ಎಂ ಶ್ರೀನಿವಾಸನ್ ತಮ್ಮ ಕಾರ್ಯವೈಕರಿಯಲ್ಲಿ ಹಿರಿಮೆಗೆ ಪಾತ್ರರಾಗಿದ್ದರು. ನೆನ್ನೆ ಮಧ್ಯಾಹ್ನ ಶ್ರೀನಿವಾಸನ್ ರವರ ಹೊಗಳಗೆರೆ ಕ್ರಾಸ್ ಬಳಿ ಇರುವ ಮಾವಿನ ತೋಟ ದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಕಾಮಗಾರಿಯನ್ನು ವೀಕ್ಷಿಸಲು ಸಹಚರರಾದ ಕೃಷ್ಣ ಮತ್ತು ಅಮರ್ ರವರ ಜೊತೆಯಲ್ಲಿ ತೆರಳಿದ್ದರು.

ಅಮರ್ ಹಾಗೂ ಕೃಷ್ಣ ಎಂಬುವರು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಬಾರ್ ಅಂಡ್ ರೆಸ್ಟೋರೆಂಟ್ ಕಾಮಗಾರಿ ಸುತ್ತಲೂ ಕಾಮಗಾರಿ ವೀಕ್ಷಿಸಿ ಉಳಿದ ಕಾಮಗಾರಿಯ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎಂದು ವಿಚಾರಣೆ ನಡೆಸಲಾಗುತ್ತಿದ್ದ ಸಮಯದಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಆರೇ ಳು ಜನರ ಗುಂಪು ಬಂದು ದಸರಾ ಹಬ್ಬದ ಶುಭಾಶಯ ಹೇಳುವ ನೆಪದಲ್ಲಿ ಬಂದ ವ್ಯಕ್ತಿಗಳು ಸುಮಾರು 18 ರಿಂದ 25 ವರ್ಷದ ಯುವಕರಾಗಿದ್ದು ಈ ಯುವಕರು ಶುಭಾಶಯ ತಿಳಿಸುತ್ತಿದ್ದಂತೆ ಕೈಯನ್ನು ಹಿಡಿದು ಲಾಕ್ ಮಾಡಿ ಮುಖಕ್ಕೆ ಸ್ಪ್ರೇಯನ್ನು ಸಿಂಪಡಿಸಿ ಮಾರ ಕಸ್ತಗಳಿಂದ ಕೊಚ್ಚಿ ಕೊಲೆ ಮಾಡಿದರು ಈ ವೇಳೆಯಲ್ಲಿ ಅಮರ್ ಆದ ನನ್ನನ್ನು ಸಹ ಹಲ್ಲೇ ಮಾಡಲು ಯತ್ನಸಿದರು ನಾನು ಭಯಭೀತನಾಗಿ ಶ್ರೀನಿವಾಸಪುರ ಪಟ್ಟಣದ ನಿವಾಸಿ ಕೆಎನ್ ಎಸ್ ರವರ ತೋಟದ ಬಳಿಯಲ್ಲಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಹೋಗಿ ಅವಿದುಕೊಂಡು ನನ್ನ ಪ್ರಾಣರಕ್ಷಣೆಯನ್ನು ಮಾಡಿಕೊಂಡೆ ನನ್ನ ಮೇಲೆ ಹಲ್ಲೆ ಮಾಡಲು ಲಾಂಗ್ ನಿಂದ ಬೀಸಿದ್ದಾಗ ನಾನು ನನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಹೊರಟುಹೋದೆ ಆ ನಂತರ ಏನು ನಡೆಯಿತು ಎಂಬುದು ನನಗೆ ತಿಳಿಯಲಿಲ್ಲ. ಆದರೆ ನಂತರ ಎಂ ಶ್ರೀನಿವಾಸನ್ ಅವರನ್ನು ಹಲ್ಲೇ ಮಾಡಿದ್ದಾರೆ ಎಂದು ತಿಳಿದುಬಂದಿತು ಎಂದು ಪ್ರತ್ಯಕ್ಷ ದರ್ಶಿ ಹಾಗೂ ಎಮ್ ಶ್ರೀನಿವಾಸನ್ ರವರ ಸಹಚರ ಅಮರ್ ಮಾಹಿತಿಯನ್ನು ತಿಳಿಸಿದ್ದಾರೆ.

ಆಸ್ಪತ್ರೆಗೆ ಹಾಲಿ ಗೃಹ ಸಚಿವರಾದ ಪರಮೇಶ್ವರ್ ರವರು ಭೇಟಿ ನೀಡಿ ಶ್ರೀನಿವಾಸ್ ರವರ ಪಾರ್ಥಿವ ಶರೀರವನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಘಟನೆ ಆಗಬಾರದಿತ್ತು ಯಾರು ಮಾಡಿದ್ದಾರೆ ಯಾರು ಕಾರಣಕರ್ತರು ಎಂದು ತನಿಖೆಯಿಂದ ಹೊರ ಬೀಳಬೇಕಾಗಿದೆ ಶೀಘ್ರವಾಗಿ ತಂಡಗಳನ್ನು ರಚಿಸಿ 24 ಗಂಟೆ ಅವಧಿಯಲ್ಲಿ ಅಥವಾ 48 ಗಂಟೆಗಳ ಅವಧಿಯಲ್ಲಿ ಆರೋಪಿಗಳನ್ನು ನಮ್ಮ ಪೊಲೀಸ್ ಇಲಾಖೆಯವರು ಬಂಧಿಸುತ್ತಾರೆ ಎಂದು ಆಶ್ವಾಸನೆ ನೀಡಿದ್ದರು ಇಂತಹ ಘೋರ ಹತ್ಯೆ ಮಾಡಿದವರಿಗೆ ಕ್ಷಮೆ ಇರುವುದಿಲ್ಲ ಇಂತಹ ಘಟನೆಗೆ ಕಾರಣಕರ್ತರಾದ ಯಾರನ್ನು ಸಹ ಕೈ ಬಿಡುವುದಿಲ್ಲ ಎಲ್ಲಾ ಪ್ರಯತ್ನ ಮಾಡಿ ಆರೋಪಿಗಳನ್ನು ಬಗ್ಗು ಬಡಿಯುತ್ತೇವೆ ಮತ್ತು ತಕ್ಕ ಶಿಕ್ಷೆಯನ್ನು ಕೊಡಲು ಕಾನೂನು ಕ್ರಮದಲ್ಲಿ ಕೈಗೊಳ್ಳುತ್ತೇವೆ ಎಂದು ಸಚಿವ ಪರಮೇಶ್ವರ್ ಅವರು ತಿಳಿಸಿದರು.
ದಲಿತ ಮುಖಂಡರ ಒತ್ತಾಯಕ್ಕೆ ಮಣಿದ ಗೃಹ ಸಚಿವ ಪರಮೇಶ್ವರ ಅವರು ನನಗೂ ಸಹ ಮನಸ್ಸಿಗೆ ನೋವು ಉಂಟಾಗುತ್ತಿದೆ ನಾನು ಸಹ ಒಬ್ಬ ಸಹೋದರನನ್ನು ಕಳೆದುಕೊಂಡ ನೋವು ನನ್ನಲ್ಲಿದೆ ಎಂದು ತಮ್ಮ ಅನುಕಂಪದ ಅಲೆಯನ್ನು ದಲಿತ ಮುಖಂಡರು ಬಳಿ ವಿಷಾದ ವ್ಯಕ್ತಪಡಿಸಿದರು.

ಈ ವೇಳೆಯಲ್ಲಿ ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ರವರು ಸೇರಿದಂತೆ ಇನ್ನಿತರಗಣ್ಯರು ಭೇಟಿ ನೀಡಿದ್ದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ಎಂ ಶ್ರೀನಿವಾಸನ್ ರವರ ಮನೆಯ ಬಳಿ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಹೂಮಾಲೆಯನ್ನು ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶ್ರೀನಿವಾಸನ್ ರವರ ಅಗಲಿಕೆಯ ನೋವನ್ನು ಬರಿಸಲು ದೇವರು ಆ ಕುಟುಂಬಕ್ಕೆ ಶಕ್ತಿಯನ್ನು ನೀಡಲಿ ಎಂದು ಹೇಳಿ ನಂತರ ಮಾತನಾಡಿದ ಅವರು ಈ ಘಟನೆ ನಡೆಯಬಾರದಿತ್ತು ಎಷ್ಟೇ ರಾಜಕೀಯ ಇದ್ದರು ಸಹ ರಾಜಕೀಯದಲ್ಲಿ ಚರ್ಚೆ ಮಾತ್ರ ಸೀಮಿತವಾಗಿರಬೇಕು. ಪೊಲೀಸ್ ಇಲಾಖೆಯವರು ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು ನನ್ನ ಕಳೆದ ನಾಲ್ಕು ಚುನಾವಣೆಗಳಿಗೆ ಎಂ ಶ್ರೀನಿವಾಸನ್ ರವರು ರಾಜಕೀಯವಾಗಿ ಸಹಕಾರ ನೀಡಿ ನನ್ನ ಜೊತೆ ಇದ್ದರು ರಾಜಕೀಯವಾಗಿ ಎಂ ಶ್ರೀನಿವಾಸನ್ ರವರ ಸಂಪೂರ್ಣ ಸಹಕಾರ ನೀಡಿದ್ದರು ಎಂದು ಕೆ ಹೆಚ್ ಮುನಿಯಪ್ಪ ರವರು ಸ್ಮರಿಸಿದರು.

Leave a Reply

Your email address will not be published. Required fields are marked *