ಸೋಲು ಗೆಲುವಿನ ಸೋಪಾನವಾಗಲಿ- ಅರವಿಂದ ದಳವಾಯಿ

ಮೂಡಲಗಿ: ಅರಭಾವಿಯಲ್ಲಿ ಕಾಂಗ್ರೆಸ್ಸಿನ ಸೋಲು, ಗೆಲುವಿನ ಸೋಪಾನವಾಗಲಿ ಎಂದು ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಅರವಿಂದ್ ದಳವಾಯಿ ಕರೆ ನೀಡಿದರು. ಸೋಮವಾರ ಕೌಜಲಗಿಯ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಗೃಹಜ್ಯೋತಿ ಯೋಜನೆ ಉದ್ಘಾಟನಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ದಳವಾಯಿಯವರು, ಅರಬಾವಿಯಲ್ಲಿ ಕಾಂಗ್ರೆಸ್ ಸೋತರು ರಾಜ್ಯದಲ್ಲಿ ಅಧಿಕಾರ ಪಡೆದುಕೊಂಡಿದೆ. ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯತ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅರಬಾವಿಯ ಕಾಂಗ್ರೆಸ್ ಕಾರ್ಯಕರ್ತರು ಎದೆಗುಂದದೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು. ಸ್ಥಳೀಯ ಕಾರ್ಯಕರ್ತರಿಗೆ ಎಲ್ಲೆಲ್ಲಿ ನಾಮ ನಿರ್ದೇಶಕ ಸದಸ್ಯರಾಗಲು ಸಾಧ್ಯವಾಗುತ್ತದೆಯೋ ಅಲ್ಲಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಅರಭಾವಿ ರಾಜ್ಯದಲ್ಲಿಯೇ ಅತ್ಯಂತ ದುರ್ಗಮ ಮತಕ್ಷೇತ್ರ ವಾಗಿದ್ದು,ಇದನ್ನು ಭೇದಿಸಬೇಕಾದರೆ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟಿತರಾಗುವುದು ಅವಶ್ಯಕ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡರಾದ ವಿ.ಪಿ.ನಾಯಕ, ಎಸ್ ಆರ್ ಸೋನವಾಲ್ಕರ, ಸದಾಶಿವ ಮಾಂಗ, ದರೆಪ್ಪ ಪಾಟ್ಕರ, ಮಹಾದೇವ ಬಂಟನೂರ, ಮಲಿಕ್ ಲಾಡ್ಕನ, ಗುರುನಾಥ ಉಪ್ಪಾರ ಮಾತನಾಡಿ ಪಕ್ಷ ಸಂಘಟಿಸಲು ಸಿದ್ದರಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಅರಭಾವಿ ಬ್ಲಾಕ್ ಅಧ್ಯಕ್ಷ ಸುರೇಶ್ ಮಗದುಮ, ಕೌಜಲಗಿ ಬ್ಲಾಕ್ ಅಧ್ಯಕ್ಷ ಪ್ರಕಾಶ ಅರಳಿ, ಮುಖಂಡರಾದ ಕೆ.ಟಿ.ಗಾಣಿಗೇರ, ವಿರೂಪಾಕ್ಷ ಮುಗಳಖೋಡ, ಲಕ್ಕಪ್ಪ ಶಾಬಣ್ಣವರ, ಸಿದ್ಧಾರೂಡ ಕಂಬಳಿ, ದುರ್ಗಪ್ಪ ಮೇತ್ರಿ, ದುಂಡಪ್ಪ ಹುಕ್ಕೇರಿ, ಲಕ್ಷ್ಮಣ ಸಾಬಣ್ಣವರ, ಇಮಾಮ್ ಹುಸೇನ ಹುನ್ನೂರ, ಮೀರಾಸಾಬ ಅನಸಾರಿ, ದುರ್ಗಪ್ಪ ಮೇತ್ರಿ, ರವಿ ಮೂಡಲಗಿ, ಸದಾಶಿವ ಹೊಸೂರ, ಮಲಿಕ್ ನದಾಫ, ಮಹದೇವ ಸಮಗಾರ, ಮಾಯಪ್ಪ ಬೆಂಚಿನಮರಡಿ ಹಾಗೂ ಅರಬಾವಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಹಾಜರಿದ್ದರು

Leave a Reply

Your email address will not be published. Required fields are marked *