ಸೆ.೩ ರಂದು ಜಿಲ್ಲೆಯ ೧೭ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಿದ್ದತೆ೭೩೯೫ ಅಭ್ಯರ್ಥಿಗಳು ನೋಂದಣಿ-ಸುಗಮ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು – ಅಕ್ರಂ ಪಾಷಾ

ಕೋಲಾರ:- ನಗರದ ೧೭ ಕೇಂದ್ರಗಳಲ್ಲಿ ಸೆ.೩ ಭಾನುವಾರ ನಡೆಯಲಿರುವ ೨೦೨೩-೨೪ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜಿಲ್ಲೆಯಲ್ಲಿ ಬೆಳಗ್ಗಿನ ಅವಧಿ ಪರೀಕ್ಷೆಗೆ ೩೨೫೫, ಮಧ್ಯಾಹ್ನದ ಅವಧಿ ಪರೀಕ್ಷೆಗೆ ೪೧೪೦ ಮಂದಿ ಸೇರಿದಂತೆ ಒಟ್ಟು ೭೩೯೫ ಅಭ್ಯರ್ಥಿಗಳು ನೋಂದಾಯಿಸಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ನಗರದ ಎಲ್ಲಾ ೧೭ ಕೇಂದ್ರಗಳಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವಭಾವಿ ಸಭೆ ನಡೆಸಿದ ಅವರು, ರಾಜ್ಯದ ೩೫ ಶೈಕ್ಷಣಿಕ ಜಿಲ್ಲೆಗಳ ೭೧೧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗ್ಗಿನ ಅವಧಿಯಲ್ಲಿ ಪತ್ರಿಕೆ-೧ಕ್ಕೆ ೫೪೪ ಕೇಂದ್ರಗಳಲ್ಲಿ ೧.೪೩೭೦೫ ಮಂದಿ ಹಾಗೂ ಮಧ್ಯಾಹ್ನದ ಪತ್ರಿಕೆ-೨ಕ್ಕೆ ೧.೮೯೯೯೪ ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು ೩.೩೩೬೯೯ ಮಂದಿ ಪರೀಕ್ಷೆ ಬರೆಯುತ್ತಿದ್ದು, ಜಿಲ್ಲೆಯಲ್ಲಿ ೧೭ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದರು.
ಮೊದಲ ಅಧಿವೇಶನ ಬೆಳಗ್ಗೆ ೯-೩೦ ಗಂಟೆ ಹಾಗೂ ಅಪರಾಹ್ನದ ಅಧಿವೇಶನ ಮಧ್ಯಾಹ್ನ ೨ ಗಂಟೆಗೆ ಆರಂಭಗೊಳ್ಳಲಿದ್ದು, ನಂತರ ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪರೀಕ್ಷೆಗೆ ಸಂಬoಧಿಸಿದoತೆ ಪೂರ್ವಸಿದ್ದತಾ ಸಭೆಯಲ್ಲಿ ಈ ಸಂಬoಧ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಕ್ರಮವಹಿಸಿ, ಪರೀಕ್ಷೆ ನಡೆಯುವ ಸೆ.೩ ರಂದು ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ಇದ್ದು, ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿ, ಪರೀಕ್ಷಾ ಪಾವಿತ್ರö್ಯತೆಗೆ ಧಕ್ಕೆಯಾಗದಂತೆ ಗಮನಹರಿಸಲು ಸೂಚಿಸಿದರು.
ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು, ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಯಾರನ್ನು ಒಳ ಪ್ರವೇಶಿಸಲು ಅವಕಾಶ ನೀಡದಿರಿ, ಕೇಂದ್ರದಲ್ಲಿ ಕ್ಯಾಮರಾ,ಮೊಬೈಲ್, ಎಲೆಕ್ಟಾನಿಕ್ ಗಡಿಯಾರ ಬಳಕೆಗೆ ಅವಕಾಶ ನೀಡಬಾರದು, ಎಲ್ಲಾ ಸಿಬ್ಬಂದಿಗೂ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಅನುಮಾನಾಸ್ಪದ ರೀತಿಯ ವರ್ತನೆಗಳು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪರೀಕ್ಷೆಗಳು ನಗರದಲ್ಲಿ ಬೆಳಗ್ಗೆಯ ಪತ್ರಿಕೆ-೧ಕ್ಕೆ ೩೨೫೫ ಮಂದಿ ನೊಂದಾಯಿಸಿದ್ದಾರೆ, ಮಧ್ಯಾಹ್ನದ ಅವಧಿಯ ಪತ್ರಿಕೆ-೨ಕ್ಕೆ ೪೨೩೫ ಮಂದಿ ನೋಂದಾಯಿಸಿದ್ದು, ಬೆಳಗ್ಗೆ ಭಾಷೆ, ಗಣಿತ,ವಿಜ್ಞಾನದ ಪರೀಕ್ಷೆ, ಮಧ್ಯಾಹ್ನ ಭಾಷೆ ಮತ್ತು ಸಮಾಜ ವಿಜ್ಞಾನದ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
೧೪೪ನೆ ಸೆಕ್ಷನ್ಅ ಡಿ ನಿಷೇಧಾಜ್ಞೆ :
ಬೆಳಗ್ಗಿನ ಅವಧಿಯ ಪರೀಕ್ಷೆ ನಗರದ ಎಲ್ಲಾ ೧೭ ಕೇಂದ್ರಗಳಲ್ಲೂ ನಡೆಯಲಿದ್ದು, ಮಧ್ಯಾಹ್ನದ ಅವಧಿಯ ಪರೀಕ್ಷೆ ೧೪ ಕೇಂದ್ರಗಳಲ್ಲಿ ಮಾತ್ರ ನಡೆಯಲಿದೆ ಎಂದ ಅವರು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ ೨೦೦ ಮೀಟರ್ ಪ್ರದೇಶವನ್ನು ನಿಷೇದಿತ ಪ್ರದೇಶವೆಂದು ಘೋಷಿಸಿದ್ದು, ಸೆಕ್ಷನ್ ೧೪೪ ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಎಲ್ಲಾ ೨೩ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ದಿನಗಳಂದು ಬೆಳಿಗ್ಗೆ೮.೦೦ಗಂಟೆಯಿoದ ಸಂಜೆ ೫.೦೦ಗಂಟೆಯವರೆಗೆ ಮುಚ್ಚಲು ಆದೇಶಿಸಿದರು.
ಪರೀಕ್ಷಾ ಕೇಂದ್ರದಲ್ಲಿ ೨ ಹಂತದ ತಪಾಸಣೆ :
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಈ ಸಂಬoಧ ಮಾಹಿತಿ ನೀಡಿ, ವಿಶೇಷವಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ತಪಾಸಣೆಗೆ ಒಳಪಡಬೇಕಾಗುತ್ತದೆ. ಪರೀಕ್ಷಾ ಸಿಬ್ಬಂದಿ ಅಭ್ಯರ್ಥಿಗಳನ್ನು ಗುರುತಿಸಿ ಪರೀಕ್ಷಾ ನಿಷೇದಿತ ವಸ್ತುಗಳಾದ ಮೊಬೈಲ್ ಪೋನ್ ಬ್ಲೂಟೂತ್ ಡಿವೈಸ್, ಕ್ಯಾಲುಕಲೇಟರ್ ಕೈಗಡಿಯಾರ ಇತರೆ ಎಲೆಕ್ಟಾçನಿಕ್ ವಸ್ತುಗಳು ಇಲ್ಲದಿರುವ ಬಗ್ಗೆ ಪರಿಶೀಲಿಸಿಸುತ್ತಾರೆ ಎಂದು ತಿಳಿಸಿದರು.
ಪರೀಕ್ಷಾ ಕಾರ್ಯಕ್ಕೆ ಈಗಾಗಲೇ ಮಾರ್ಗಾಧಿಕಾರಿಗಳು, ೧೭ ಕೇಂದ್ರಗಳಿಗೂ ಮುಖ್ಯ ಅಧೀಕ್ಷಕರು, ೧೭ ಮಂದಿ ಸ್ಥಾನಿಕ ಜಾಗೃತದಳದ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಪರೀಕ್ಷಾ ಕಾರ್ಯಕ್ಕೆ ಓರ್ವ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್, ಡಿಡಿಪಿಐ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಜಯಣ್ಣ, ಡಿವೈಪಿಸಿ ಗುರಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕನ್ನಯ್ಯ, ಗಂಗರಾಮಯ್ಯ, ನೋಡಲ್ ಅಧಿಕಾರಿ ಶಂಕರೇಗೌಡ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *