ಕೋಲಾರ:- ರೈತರಿಗೆ ಹಕ್ಕುಪತ್ರ ವಿತರಿಸುವಲ್ಲಿ ವಿಫಲವಾದ ತಹಸೀಲ್ದಾರ್‌ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕೆಜಿಎಫ್ ಶಾಸಕಿ ರೂಪಕಲಾ, ತಾಲ್ಲೂಕು ಕಚೇರಿಯಲ್ಲೇ ೩ ಗಂಟೆ ಕಾಲ ಕುಳಿತು ೯ ರೈತರ ಸಾಗುವಳಿ ಕಡತಗಳಿಗೆ ಸಹಿ ಮಾಡಿಸಿ ವಿತರಣೆ ಮಾಡಿದ್ದಲ್ಲದೇ ಉಳಿದ ೩೨ ಸಾಗುವಳಿ ಚೀಟಿಗಳನ್ನು ಒಂದು ವಾರದೊಳಗೆ ಸಿದ್ದಪಡಿಸಿ ಬಗರ್ ಹುಕುಂ ಸಮಿತಿ ಸಭೆಗೆ ಸೂಚಿಸಿದ ಘಟನೆ ನಡೆಯಿತು.
ಶಾಸಕಿ ರೂಪಕಲಾ ಅವರು, ನಮೂನೆ-೫೩ ರಲ್ಲಿ ಅರ್ಜಿ ಹಾಕಿಕೊಂಡಿದ್ದ ೪೧ ರೈತರಿಗೆ ಸೆ. ೭ ರಂದು ಹಕ್ಕು ಪತ್ರ ನೀಡಲು ಸೆ.೨ ರಂದು ಕಂದಾಯ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದರು. ಸಭೆಯಲ್ಲಿ ತಹಶೀಲ್ದಾರ್ ಸುಜಾತ ಅವರು ೪೧ ಕಡತಗಳು ಸಿದ್ದವಾಗಿದ್ದು ಸೆ.೭ ರಂದು ರೈತರಿಗೆ ಹಕ್ಕುಪತ್ರ ನೀಡಲು ತಹಶೀಲ್ದಾರ್ ದಿನಾಂಕವನ್ನು ನಿಗದಿಪಡಿಸಿ, ಬÀಗರ್‌ಹುಕಂ ಸಮಿತಿಯ ಸದಸ್ಯರು ಮತ್ತು ರೈತರಿಗೆ ಸೆ.೭ ರಂದು ಸಭೆಗ ಬರುವಂತೆ ಮಾಹಿತಿಯನ್ನು ನೀಡಿದ್ದರು.
ಆದರೆ ಸೆ. ೭ ರಂದು ರೈತರಿಗೆ ಹಕ್ಕು ಪತ್ರ ನೀಡುಲು ತಹಶೀಲ್ದಾರ್ ಸುಜಾತ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಶಾಸಕರಿಗೆ ಅಪಮಾನ ಮಾಡುವ ಉದ್ದೇಶದಿಂದ ೪೧ ಕಡತಗಳಿಗೆ ಸಹಿ ಮಾಡದೆ ಉಳಿಸಿಕೊಂಡಿದ್ದರು. ತಹಸೀಲ್ದಾರ್ ಒಂದು ರಾಜಕೀಯ ಪಕ್ಷದ ಬ್ರೋಕರ್ ರೀತಿ ವರ್ತಿಸುತ್ತಿದ್ದು, ಒಂದು ವರ್ಷದಿಂದ ಸಾಗುವಳಿ ಚೀಟಿ ನೀಡಿಕೆ ಕಡತಗಳು ಬಾಕಿ ಉಳಿದಿದ್ದು, ಅದನ್ನು ಸಿದ್ದಪಡಿಸಿ ವಿತರಿಸುವಂತೆ ಶಾಸಕರು ಹಲವಾರು ಬಾರಿ ಸೂಚಿಸಿದ್ದರೂ ತಹಸೀಲ್ದಾರ್ ಸ್ಪಂದಿಸಿರಲಿಲ್ಲ.
ಈ ನಡುವೆ ಶಾಸಕರ ಒತ್ತಾಯಕ್ಕೆ ಮಣಿದು ಕಡೆಗೂ ಸೆ.೭ ರಂದು ೪೧ ರೈತರಿಗೆ ಹಕ್ಕುಪತ್ರ ನೀಡಲು ತಹಶೀಲ್ದಾರ್ ಅವರೇ ಸಭೆಯಲ್ಲಿ ಶಾಸಕರಿಗೆ ತಿಳಿಸಿದ್ದರು, ಆದರೆ ತಹಶೀಲ್ದಾರ್ ಸುಜಾತ ಕಾನೂನು ರೀತ್ಯ ಕಡತಗಳನ್ನು ಸಿದ್ದಪಡಿಸಿಯೂ ಇಲ್ಲ, ಸಹಿಯೂ ಹಾಕಿರಲಿಲ್ಲ. ರೈತರನ್ನು ಬರುವಂತೆ ತಿಳಿಸಿ ಸಾಗುವಳಿ ಚೀಟಿ ಸಿದ್ದವಾಗಿಲ್ಲ ಎಂಬ ಸಬೂಬು ಶಾಸಕರ ಆಕ್ರೋಶಕ್ಕೆ ಕಾರಣವಾಯಿತು.
ಡಿಸಿ ಕರೆಸಿ ವಿತರಣೆ
ಶಾಸಕರ ಎಚ್ಚರಿಕೆ
ನೊಂದ ರೈತರ ಪರವಾಗಿ ಕೆಲಸ ಮಾಡದೇ ಇದ್ದಲ್ಲಿ ಸಭೆಗೆ ಜಿಲ್ಲಾಧಿಕಾರಿಗಳನ್ನು ತಾಲ್ಲೂಕು ಕಚೇರಿಗೆ ಕರೆಸಿ ಅವರ ಸಮ್ಮುಖದಲ್ಲಿ ನಿಮ್ಮ ಬಳಿ ಕೆಲಸ ಮಾಡಿಸಿ, ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡಲಾಗುವುದೆಂದು ಶಾಸಕಿ ರೂಪಕಲಾಶಶಿಧರ್ ತಹಶೀಲ್ದಾರ್ ಅವರಿಗೆ ಎಚ್ಚರಿಕೆ ನೀಡಿದರು.
ಬಡ ರೈತರು ಒಂದು ಎಕರೆ, ಅರ್ಧ ಎಕರೆ ಜಮೀನಿನಲ್ಲಿ ದುಡಿದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ, ರೈತರನ್ನು ಕಳೆದ ೩೦ ವರ್ಷಗಳಿಂದ ಸಾಗುವಳಿ ಚೀಟಿಗಾಗಿ ಅಲೆದಾಟಸುತ್ತಿದ್ದೀರಾ, ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆಯೇ, ನಿಮ್ಮ ಮಕ್ಕಳಿಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದು ಆಗಬೇಕಾದರೆ ರೈತರ ಕೆಲಸವನ್ನು ಮಾಡಿಕೊಡಿ ಎಂದು ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ಚಾಟಿ ಬೀಸಿದರು.
ತಹಸೀಲ್ದಾರ್ ರಿಂದ
ನಾಟಕ-ರೈತಪ್ರಸನ್ನ
ರೈತ ಪ್ರಸನ್ನ ಮಾತನಾಡಿ,ಕೆಜಿಎಫ್ ತಹಶೀಲ್ದಾರ್ ನಾಟಕ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ, ಶಾಸಕರ ಮುಂದೆ ತಮ್ಮ ಸಿಬ್ಬಂದಿಯನ್ನು ಹೀಗಳೆಯುವುದು, ನೋಡಿ ಮೇಡಂ ಯಾವ ಸಿಬ್ಬಂದಿಯೂ ಕೆಲಸ ಮಾಡುವುದಿಲ್ಲ ನಾನು ಒಬ್ಬಳೇ ಎಷ್ಟು ಕೆಲಸ ಮಾಡುವುದು ಎಂದು ಶಾಸಕರ ಮುಂದೆ ನಾಟಕವಾಡುತ್ತಾರೆ, ಶಾಸಕರು ಹೋದ ನಂತರ ಸಿಬ್ಬಂದಿಯ ಬಳಿ ನೀವು ಎನು ತಿಳಿದುಕೊಳ್ಳಬೇಡಿ ಶಾಸಕರು ಮುಂದೆ ನಿಮ್ಮನ್ನು ಬಯ್ಯುತ್ತೇನೆ ಎಂದು ಸಿಬ್ಬಂದಿಯನ್ನು ಓಲೈಕೆ ಮಾಡುತ್ತಾರೆ ಎಂದು ತಹಸೀಲ್ದಾರ್‌ರ ದ್ವಂದ್ವ ನೀತಿ ಬಿಚ್ಚಿಟ್ಟರು.
ನೊಂದ ರೈತ ಮುನಿರೆಡ್ಡಿ ಮಾತನಾಡಿ, ತಹಶೀಲ್ದಾರ್ ಸರಕಾರಿ ಅಧಿಕಾರಿ ಅಲ್ಲ, ಬಿಜೆಪಿ ಪಕ್ಷದ ಏಜೆಂಟರAತೆ ವರ್ತಿಸುತ್ತಾರೆ, ಬಿಜೆಪಿಯವರು ಯಾವುದೇ ರೀತಿಯ ಕೆಲಸ ಹೇಳಿದರೂ ಕ್ಷಣಾರ್ಧದಲ್ಲೇ ಸಿಬ್ಬಂದಿಯ ಮೇಲೆ ಒತ್ತಡ ಹೇರಿ ಮಾಡಿಸುತ್ತಾರೆ, ಬಡ ರೈರತರ ಕೆಲಸ ಮಾಡಲ್ಲ ಎಂದು ದೂರಿದರು.
ಸಾಗುವಳಿ ಚೀಟಿ ಫಲಾನುಭವಿ ನಾಗರತ್ಮಮ್ಮ, ರೈತ ಕೃಷ್ಣಪ್ಪ ಮತ್ತಿತರರು ಮಾತನಾಡಿ, ಕಳೆದ ೩೦ ವರ್ಷಗಳಿಂದ ಸಾಗುವಳಿ ಚೀಟಿಗಾಗಿ ಅಲೆದಾಟ ನಡೆಸಿದ್ದೇನೆ, ನೀವು ತಣ್ಣಗೀರಿ ಎಂದು ಶಾಸಕರನ್ನು ಆರೈಸಿ, ಸಾಗುವಳಿ ಚೀಟಿಯನ್ನು ಪಡೆದುಕೊಂಡರು, ಸಾಗುವಳಿ ಚೀಟಿಯಡಿ ೨ ಎಕರೆ ಭೂಮಿ ನನಗೆ ಸಿಕ್ಕಿದೆ ಇದರಿಂದ ನಮ್ಮ ಕುಟುಂಬ ಜೀವನ ಸಾಗಿಸಲು ಅನುಕೂಲವಾಗಿದೆ ಎಂದು ನಾಗರತ್ನಮ್ಮ ಶಾಸಕರಿಗೆ ತಿಳಿಸಿ ಶಾಸಕರಿಗೆ ಧನ್ಯವಾದ ಸಲ್ಲಿಸಿದರು.