ಸಹಾಯಧನಕ್ಕೆ ಅರ್ಜಿ ಆಹ್ವಾನ


ಕೋಲಾರ, ತೋಟಗಾರಿಕೆ ಇಲಾಖೆಯಲ್ಲಿ ೨೦೨೨-೨೩ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ತೋಟಗಾರಿಕೆ ಬೆಳೆಗಳಲ್ಲಿ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ಕಾರ್ಯಕ್ರಮದಡಿ, ಹಣ್ಣಿನ ಬೆಳೆಗಳಲ್ಲಿ ಬೆಳೆ ಹೊದಿಕೆ, ಸುರಂಗ ಮಾದರಿಯ ಪಾಲಿ ಹೌಸ್ ನಿರ್ಮಾಣ, ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆ, ಕೊಯ್ಲೊತ್ತರ ನಂತರದ ಚಟುವಟಿಕೆಗಳಿಗೆ ಬಳಸುವ ಪ್ಲಾಸ್ಟಿಕ್ ಕ್ರೇಟ್/ಕೋರಗೇಟೆಡ್ ಬಾಕ್ಸ್, ಮೋಹಕ ಕೀಟ ಬಲೆಗಳು/ಸೋಲಾರ್ ಮೋಹಕ ಕೀಟ ಬಲೆಗಳು, ತೋಟಗಾರಿಕೆಯಲ್ಲಿ ಯಾಂತ್ರೀಕರಣ, ಸೋಲಾರ್ ಪಂಪ್ ಸೆಟ್, ಸಂರಕ್ಷಿತ ಬೇಸಾಯದಡಿ ಪಾಲಿಥಿನ್ ಹೊದಿಕೆಗಳ ಬದಲಾವಣೆಗೆ, ಪಾಲಿಹೌಸ್‌ನಲ್ಲಿ ಮೂರು ವರ್ಷಕ್ಕಿಂತ ಹಳೆಯ ಹಾಗೂ ಅನುತ್ಪಾದಕ ಹೂವಿನ ಗಿಡಗಳನ್ನು ಮತ್ತು ತರಕಾರಿ ಗಿಡಗಳನ್ನು ತೆಗೆದು ಹೊಸ ಸಸಿಗಳನ್ನು ನಾಟಿ ಮಾಡಲು ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳಿಗೆ ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಾವು ಹಾಗೂ ತರಕಾರಿ ಬೆಳೆಗಳಿಗೆ ಮಾವು ಮತ್ತು ತರಕಾರಿ ಸ್ಪೆಷಲ್‌ನ್ನು ವಿತರಿಸಲಾಗುತ್ತಿದ್ದು, ಆಸಕ್ತ ರೈತರು ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಪ.ಜಾತಿ/ಪ.ಪಂಗಡ ರೈತರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರವರ ಕಛೇರಿಯಲ್ಲಿ ಸಲ್ಲಿಸಿ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಕೋಲಾರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *