ಶ್ರೀನಿವಾಸಪುರ ಪಟ್ಟಣದ ಆಜಾದ್ ರಸ್ತೆಯ ಬಡಾವಣೆಯ ನಿವಾಸಿಯಾದ ಮಿಸ್ಬಾ ತಬ್ ಸುಮ್ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಇಂದು ಸಮಾಜಸೇವಕರು ಹಾಗೂ ಹಿರಿಯ ಪತ್ರಕರ್ತರು ಮತ್ತು ನಿರ್ಣಯ ಪತ್ರಿಕೆ ಸಂಪಾದಕರು ಆಗಿರುವ ನಾರಾಯಣಸ್ವಾಮಿ ರವರು ಸನ್ಮಾನವನ್ನು ಮಾಡಿ ಪ್ರೋತ್ಸಾಹ ಧನವನ್ನು ನೀಡಿದರು
ಪಟ್ಟಣದ ವಿದ್ಯಾರ್ಥಿ ಮನೆಗೆ ಅಗಮಿಸಿ ನಾರಾಯಣಸ್ವಾಮಿ ರವರು ಪೋಷಕರಾದ ಅಥಾವುಲ್ಲಾ ಖಾನ್ ಹಾಗೂ ತಾಯಿ ಪರೀದ ಬೇಗಮ್ ಹಾಗೂ ಮಿಸ್ಬಾ ತಬ್ಸಮ್ ರವರಿಗೆ ಶಾಲುಹೊದಿಸಿ ಹಣ್ಣು-ಹಂಪಲು ವಿತರಣೆ ಮಾಡಿ ಪ್ರೋತ್ಸಾಹಧನವನ್ನು ನೀಡಿ ನಂತರ ಮಾತನಾಡಿದ ಅವರು ವಿದ್ಯಾರ್ಥಿಯು ಮುಂದಿನ ವ್ಯಾಸಂಗ ಮಾಡಲು ಪ್ರೋತ್ಸಾಹ ನೀಡುವುದಾಗಿ ಸಹ ತಿಳಿಸಿದರು
ಯಾರೇ ಮಕ್ಕಳು ಆಗಿರಲಿ ಚಿನ್ನದ ಪದಕ ಪಡೆದ ವಿಜೇತರು ಉನ್ನತ ವ್ಯಾಸಂಗಕ್ಕೆ ಆರ್ಥಿಕವಾಗಿ ಸಹಾಯ ಹಸ್ತ ನೀಡುವುದಾಗಿ ಭರವಸೆಯನ್ನು ಸಹ ಇದೇ ವೇಳೆಯಲ್ಲಿ ನೀಡಿದರು
ತನ್ನ ಕೈಲಾದ ಸಹಾಯವನ್ನು ವಿದ್ಯಾರ್ಥಿಗಳಿಗೆ ನೀಡಿ ತನ್ನ ಅಳಿಲು ಸೇವೆಯನ್ನು ಸಮಾಜ ಸೇವೆಯಾಗಿ ಮಾಡುವುದಾಗಿ ತಿಳಿಸಿದರು
ಇದೇ ವೇಳೆಯಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಆಯಿಶಾ ನಯಾಜ್, ಮಾಜಿ ಉಪಾಧ್ಯಕ್ಷರಾದ ನಯಜ್ ಅಹಮದ್, ಪುರಸಭಾ ಸದಸ್ಯ ಶಬೀರ್ ಖಾನ್, ಹಿರಿಯ ಮುಖಂಡರಾದ ನೂರುಲ್ಲಾ ಖಾನ್,ಅಮೀರ್ ಖಾನ್,ಅಸ್ಲಂ, ಹಾಗೂ ಇನ್ನೂ ಹಲವಾರು ಮುಖಂಡರು ಇದ್ದರು
ಪುರಸಭಾ ಉಪಾಧ್ಯಕ್ಷ ಆಯಿಷಾ ನಾಯಜ್ ಎಸ್ಸಿಎಸ್ಟಿ ಹಾಗೂ ಮುಸ್ಲಿಂ ಜನಾಂಗದ ಮಕ್ಕಳು ಹೆಚ್ಚಿನ ವ್ಯಾಸಂಗ ಪಡೆಯಲು ಕರೆ
ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯುವ ನಿಟ್ಟಿನಲ್ಲಿ ವಿದ್ಯಾಭ್ಯಾಸವನ್ನು ಪಡೆಯಬೇಕು ಸರ್ಕಾರಿ ಶಾಲೆಗಳು ಇದ್ದರು ಹೆಣ್ಣುಮಕ್ಕಳು ಹೆಚ್ಚಿನ ವ್ಯಾಸಂಗ ಪಡೆಯಲು ಹಿಂಜರಿಯುತ್ತಿದ್ದಾರೆ
ಹೆಣ್ಣುಮಕ್ಕಳು ಮುಂದೆ ಬಂದು ವಿದ್ಯಾಭ್ಯಾಸವನ್ನು ಪಡೆದು ಉನ್ನತ ವ್ಯಾಸಂಗವನ್ನು ಪಡೆದು ಉನ್ನತ ಸ್ಥಾನಕ್ಕೆ ಏರಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ
ಹೆಣ್ಣುಮಕ್ಕಳು ವಿದ್ಯಾಭ್ಯಾಸವನ್ನು ಪಡೆಯಲು ಪುರಸಭಾ ವತಿಯಿಂದ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಈ ಸದವಕಾಶವನ್ನು ಎಲ್ಲ ಎಸ್ಸಿಎಸ್ಟಿ ಜನಾಂಗದ ಮಕ್ಕಳು ಹಾಗೂ ಅಲ್ಪಸಂಖ್ಯಾತರ ಮಕ್ಕಳು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು
ಶ್ರೀನಿವಾಸಪುರ ಪುರಸಭೆಯ ವ್ಯಾಪ್ತಿಯಲ್ಲಿ ಇರುವ ಎಲ್ಲ ಮಕ್ಕಳು ಪುರಸಭೆಯಲ್ಲಿ ಶಾಲ ದಾಖಲೆಗಳನ್ನು ಮತ್ತು ಅಂಕಪಟ್ಟಿಗಳನ್ನು ನೀಡಿ ಪುರಸಭೆಯ ಕಾನೂನು ಪಾಲನೆ ಅಂತೆ ನಿಯಮಾನುಸಾರ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಧನವನ್ನು ನೀಡಲಾಗುವುದು ಅರ್ಜಿಗಳನ್ನು ಪುರಸಭೆಯಲ್ಲಿ ಸಲ್ಲಿಸಬೇಕೆಂದು ಕರೆ ನೀಡಿದ್ದಾರೆ
ಐಎಎಸ್ ಮಾಡುವುದು ನನ್ನ ಗುರಿ ಮಿಸ್ಬಾ ತಬಸುಮ್
ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಅವಕಾಶಗಳು ಇದ್ದು ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು ಉನ್ನತ ಗುಣಮಟ್ಟ ಶಿಕ್ಷಣವನ್ನು ನೀಡುತ್ತಾರೆ ಈ ಸದಾವಕಾಶವನ್ನು ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು ಮಿಸ್ಬಾ ತಬ್ಸಮ್ ಕಿವಿಮಾತು ಹೇಳಿದರು
ನಾನು ಶ್ರೀನಿವಾಸಪುರದಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಆಲ್ ಮಿನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು 8ನೇ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಬಾಲಕಿಯರ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ್ದೇನೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಅನ್ನು ಶ್ರೀನಿವಾಸ್ ಪುರದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ವ್ಯಾಸಂಗ ಪಡೆದಿದ್ದೇನೆ ಹಾಗೆಯೇ ಬಿಎಸ್ ಸಿ ಪದವಿಯನ್ನು ಶ್ರೀನಿವಾಸಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಡೆದು ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಪಡೆದಿದ್ದೇನೆ
ಈ ನನ್ನ ಎಲ್ಲ ವ್ಯಾಸಂಗ ವು ಸರ್ಕಾರಿ ಶಾಲೆಗಳಿಂದಲೇ ಪ್ರಾರಂಭವಾಗಿದೆ ಈಗಲೂ ಸಹ ಎಂಎಸ್ಸಿ ಪದವಿಯನ್ನು ಕೋಲಾರದ ಟಮಕ ಬಳಿಯಿರುವ ಬೆಂಗಳೂರು ನಾರ್ತ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ
ಈ ನನ್ನ ವ್ಯಾಸಂಗಕ್ಕೆ ಎಲ್ಲಾ ಸರ್ಕಾರಿ ಶಾಲೆ ಶಿಕ್ಷಕರು ಹಾಗೂ ಪ್ರಾಚಾರ್ಯರು ಮತ್ತು ಪ್ರಾಂಶುಪಾಲರು ಸಹ ಎಲ್ಲ ರೀತಿಯಲ್ಲಿ ಸಹಕಾರ ನೀಡಿ ಉನ್ನತ ವ್ಯಾಸಂಗಕ್ಕೆ ಉತ್ತಮ ಶಿಕ್ಷಣವನ್ನು ಸಹ ನೀಡಿದ್ದಾರೆ ಇವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ
ಸರ್ಕಾರಿ ಶಾಲೆಗಳಿಗೆ
ಎಲ್ಲ ಮಕ್ಕಳು ಸೇರಿ ನನ್ನಂತಹ ಉನ್ನತ ವ್ಯಾಸಂಗಕ್ಕೆ ಏರಿ ಹಾಗೂ ಇನ್ನೂ ಹೆಚ್ಚಿನ ಶಿಕ್ಷಣವನ್ನು ಪಡೆಯಬೇಕು ಎಂದು ಈ ಮೂಲಕ ಹೆಣ್ಣು ಮಕ್ಕಳಿಗೆ ಕರೆ ನೀಡಿದರು