ಸತ್ಯಸಾಯಿ ವಿದ್ಯಾ ಸಂಸ್ಥೆ ಅವರಣದಲ್ಲಿ ಮೂರು ವಿದ್ಯಾರ್ಥಿಗಳ ಮೇಲೆ ವಿದ್ಯುತ್ ಕಂಬ ಬಿದ್ದು ಅವಘಡ

ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಯಲ್ಲಿ ಇರುವ ಸತ್ಯಸಾಯಿ ವಿದ್ಯಾಸಂಸ್ಥೆಯ ಆವರಣದಲ್ಲಿ ಇರುವ ವಿದ್ಯುತ್ ಕಂಬಗಳು ಮುರಿದುಬಿದ್ದು ಘಟನೆಯಲ್ಲಿ ದಿನೇಶ್ ,ಭರತ್, ಚರಣ್ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ದಿನೇಶ್ ಗೆ ಗಂಭೀರ ಗಾಯವಾಗಿದ್ದು ಬೆಂಗಳೂರಿನ ನಿಮ್ಮ ಆಸ್ಪತ್ರೆಗೆ ದಾಖಲಾಗಿ ಭರತ್ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ ಚರಣ್ ಎಂಬ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.

ಮಧ್ಯಾಹ್ನದ ವೇಳೆ ವಿದ್ಯಾರ್ಥಿಗಳು ಊಟವನ್ನು ಸೇವಿಸುವ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ನಡೆದಿದೆ ಕಂಬಗಳ ಹಾಗೂ ವಿದ್ಯುತ್ ತಂತಿಗಳ ಮೇಲೆ ಹಾದು ಹೋಗುವ ರಂಬೆ ಕೊಂಬಗಳನ್ನು ಕಟಾವು ಮಾಡುತ್ತಿದ್ದಾಗ ಒಂದು ಕೊಂಬೆಯು ವಿದ್ಯುತ್ ತಂತಿಗಳ ಮೇಲೆ ಬಿದ್ದ ಕಾರಣ ಈ ಅವಘಡ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ

ಸತ್ಯಸಾಯಿ ವಿದ್ಯಾ ಸಂಸ್ಥೆ ಆವರಣದಲ್ಲಿ ಇದ್ದ ಕಂಬಗಳ  ವಿದ್ಯುತ್ ತಂತಿಗಳು ಹಾದು ಹೋಗಿದ್ದು ಈ ವಿದ್ಯುತ್ ಸಂಪರ್ಕವನ್ನು ಮೂರು ದಿನಗಳ ಹಿಂದೆ ಲೂಸ್ ಕನೆಕ್ಷನ್ ಇದ್ದ ಕಾರಣ ಕೆಇಬಿ ರವರಿಗೆ ಶಾಲೆಯ ವತಿಯಿಂದ ತಿಳಿಸಲಾಗಿದ್ದು ಈ ಕಂಬಗಳಿಗೆ ಹರಿಯುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿರುತ್ತದೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು ಮರು ವಿದ್ಯುತ್ ಸಂಪರ್ಕವನ್ನು ನೀಡುವ ಸಲುವಾಗಿ ಸರ್ವಿಸ್ ಮೆನ್ ಹೊಸದಾಗಿ ಹಾಕಿ ಮರಳಿ ಸಂಪರ್ಕ ನೀಡುವ ಸಮಯದಲ್ಲಿ ಲೈನ್ ಮ್ಯಾನ್ ಗಳಾದ ಮೋಹನ್ ಹಾಗೂ ಗ್ಯಾಂಗ್ ಮ್ಯಾನ್ ಆದ ಮೊಹಮ್ಮದ್ ರವರು ಒಂದು ಗಂಟೆ ಯಾಗಿದ್ದು  ನಾವು ಊಟವನ್ನು ಮಾಡಿಕೊಂಡು ಬಂದು ಆನಂತರ ತಂತಿಗಳ ಮೇಲೆ ಹಾದುಹೋಗಿರುವ ರೆಂಬೆ ಕೊಂಬೆಗಳನ್ನು ಕಟಾವು ಮಾಡುತ್ತೇವೆ ಎಂದು ಹೇಳಿ ಅವರು ಊಟಕ್ಕೆ ಹೋಗಿರುತ್ತಾರೆ ಆ ಸಮಯದಲ್ಲಿ ಶಾಲೆಯ ಪರಿ  ಚಾರಕ ತಾನೇ ಆ ವಿದ್ಯುತ್ ಕಂಬಗಳ ಮೇಲೆ ಹಾದು ಹೋಗಿದ್ದ ಕೊಂಬೆಗಳನ್ನು ಹೊಡೆಯುವ ಸಮಯದಲ್ಲಿ ಆ ಕೊಂಬೆಗಳು ಕಡಿದಾಗ ವಿದ್ಯುತ್ ತಂತಿಗಳ ಮೇಲೆ ಕೊಂಬೆಯು ಬಿದ್ದ ನಂತರ ಆ ವಿದ್ಯುತ್ ತಂತಿಯ ಮೇಲೆ ಕೊಂಬೆಯನ್ನು ಜೋರಾಗಿ ಎಳೆದಿರುವ ಕಾರಣದಿಂದ  ವಿದ್ಯುತ್ ಕಂಬಗಳು ಮುರಿದುಬಿದ್ದಿವೆ ಎನ್ನಲಾಗಿದೆ ಈ ಘಟನೆ ಸಮಯದಲ್ಲಿ ಅದೇ ಆವರಣದಲ್ಲಿ ಮಕ್ಕಳು ಊಟ ಮಾಡುವ ಸಮಯದಲ್ಲಿ ಈ ಅವಘಡ ನಡೆದು ಒಬ್ಬ ವಿದ್ಯಾರ್ಥಿಗೆ ಗಂಭೀರವಾಗಿ ಗಾಯಗಳಾಗಿ ಉಳಿದ ಇಬ್ಬರು ವಿದ್ಯಾರ್ಥಿಗಳು ಶ್ರೀನಿವಾಸಪುರ ಸರ್ಕಾರ ಆಸ್ಪತ್ರೆಯಲ್ಲಿ ಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ ಇನ್ನೊಬ್ಬ ವಿದ್ಯಾರ್ಥಿಯು ಗೋಣಿಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾಲಿಗೆ ಪೆಟ್ಟಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ ಎನ್ನಲಾಗಿದೆ ಈ ಘಟನೆಯಲ್ಲಿ ಅತಿಹೆಚ್ಚಿನ ಗಾಯಗಳಾಗಿ ನಿಮಾನ್ಸ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಒಬ್ಬ ವಿದ್ಯಾರ್ಥಿಯನ್ನು ದಾಖಲು ಮಾಡಲಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ರಾಮತೀರ್ಥರವರು ತಿಳಿಸಿದ್ದಾರೆ

Leave a Reply

Your email address will not be published. Required fields are marked *