ಸಂಸದರ ನೇತೃತ್ವದಲ್ಲಿ ಬೃಹತ್ ರಕ್ತದಾನಶಿಬಿರ, ಅಂಗಾoಗದಾನ ನೋಂದಣಿ ಶಿಬಿರಕ್ಕೆ ಹರಿದು ಬಂದ ಜನಸಾಗರ – ಹೊಸ ದಾಖಲೆ ನಿರ್ಮಾಣ – ಮುನಿಸ್ವಾಮಿ

ಕೋಲಾರ:- ನಗರದ ಒಳಾಂಗಣ ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿನ ಕೊಠಡಿಗಳಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಸಾವಿರಾರು ಮಂದಿ ಯುವಕರು, ಸರ್ಕಾರಿ ನೌಕರರು, ವಿವಿಧ ಕಂಪನಿಗಳ ಕಾರ್ಮಿಕರು, ಅಧಿಕಾರಿಗಳು ಆಗಮಿಸುವ ಮೂಲಕ ಕೋಲಾರ ಜಿಲ್ಲೆಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿದ್ದು, ಸುಮಾರು ಎರಡೂವರೆ ಸಾವಿರ ಯುನಿಟ್ ರಕ್ತ ಸಂಗ್ರಹವಾಗಿದೆ ಎಂದು ಸಂಸದ ಮುನಿಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ತಮ್ಮ ಕನಸಿನಂತೆ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಹಾಗೂ ಅಂಗಾoಗದಾನ ಶಿಬಿರದ ನೋಂದಣಿ ಕಾರ್ಯಕ್ಕೆ ತಾವೂ ಖುದ್ದು ನೋಂದಾಯಿಸಿ ಚಾಲನೆ ನೀಡಿದ ಅವರು, ನಿರೀಕ್ಷೆಗೂ ಮೀರಿ ಜನ ಸೇರಿದ್ದು ವಿಶೇಷವಾಗಿದೆ ಎಂದರು.
ರಕ್ತದ ದಾಸ್ತಾನು ಸಮಸ್ಯೆಯಿಂದಾಗಿ ೧೫ ಸಾವಿರ ಮಂದಿಯಿoದ ರಕ್ತದಾನ ಮಾಡಿಸುವ ಗುರಿ ಹೊಂದಿದ್ದ ಸಂಸದ ಮುನಿಸ್ವಾಮಿ ತಮ್ಮ ನಿರ್ಧಾರದಿಂದ ವಿಧಿಯಿಲ್ಲದೇ ಹಿಂದೆ ಸರಿಯಬೇಕಾಯಿತು
ಈ ಮೊದಲು ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ೧೫೦೦ ಬೆಡ್‌ಗಳನ್ನು ಅಳವಡಿಸುವ ನಿರ್ಧಾರ ಮಾಡಿ ಎಲ್ಲಾರೀತಿಯಲ್ಲೂ ಸಜ್ಜಾಗಿದ್ದ ಸಂಸದರ ಪ್ರಯತ್ನಕ್ಕೆ ವರುಣ ಅಡ್ಡಿಯುಂಟುಮಾಡುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು.
ಈ ಹಿನ್ನಲೆಯಲ್ಲಿ ನಗರದ ಒಳಂಗಣ ಕ್ರೀಡಾಂಗಣಕ್ಕೆ ಶಿಬಿರ ಸ್ಥಳಾಂತರಗೊoಡಿತು. ರಕ್ತದಾನ ಶಿಬಿರ ಎಂದರೆ ಎಲ್ಲೋ ನೂರೋ,ಇನ್ನೂರು ಮಂದಿ ರಕ್ತ ನೀಡಿದರೆ ಅದೇ ದೊಡ್ಡ ಶಿಬಿರ ಎಂಬoತಾಗಿತ್ತು. ಆದರೆ ಸಂಸದ ಮುನಿಸ್ವಾಮಿ ರಕ್ತದಾನ ಶಿಬಿರ ಎಂದರೆ ಜಿಲ್ಲೆಯಲ್ಲಿ ರಕ್ತದ ಕೊರತೆಯೇ ಬರಬಾರದು ಎಂಬುವ ಸಂಕಲ್ಪದೊoದಿಗೆ ನಡೆಸಿದ ಈ ಬೃಹತ್ ಶಿಬಿರ ಸಚಿವ ಅಶ್ವಥ್ಥನಾರಾಯಣ, ಸಂಸದ ತೇಜಸ್ವಿ ಸೂರ್ಯರ ಮೆಚ್ಚುಗೆಗೆ ಪಾತ್ರವಾಯಿತು.
ರಕ್ತದಾನಿಗಳಿಗೆ ಉತ್ತಮ ವ್ಯವಸ್ಥೆ
ರಕ್ತದಾನ ಮಾಡಲು ಬರುವ ಎಲ್ಲರಿಗೂ ಹಣ್ಣಿನ ರಸ, ಸೇಬು, ಬಾಳೆಹಣ್ಣು ವ್ಯವಸ್ಥೆ, ಒಳಾಂಗಣ ಕ್ರೀಡಾಂಗಣದಲ್ಲಿ ಸುಸಜ್ಜಿತ ರೀತಿಯಲ್ಲಿ ಬೆಡ್‌ಗಳ ವ್ಯವಸ್ಥೆ, ಹೊರ ಆವರಣದಲ್ಲಿ ನೋಂದಣಿಕೆ ಪ್ರತ್ಯೇಕ ಕೌಂಟರ್‌ಗಳು, ಜತೆಯಲ್ಲೇ ಅಂಗಾoಗ ನೋಂದಣಿಗೆ ಬರುವವರಿಗೂ ವಿಶೇಷ ಕೌಂಟರ್‌ಗಳು, ಸ್ವಯಂ ಸೇವಕರ ನೇಮಕ ಈ ಎಲ್ಲಾ ಕಾರ್ಯಗಳು ಅತ್ಯಂತ ಸುವವ್ಯಸ್ಥೆ ಎನ್ನುವ ರೀತಿಯಲ್ಲಿ ಆಯೋಜನೆಗೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
೫೯೩ ಮಂದಿಯಿoದ ಅoಗಾoಗ ದಾನ
ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ನಡೆದ ಒಳಾಂಗಣ ಕ್ರೀಡಾಂಗಣದ ಮುಂಭಾಗ ಅಂಗಾoಗ ದಾನ ನೋಂದಣಿಗೂ ಅವಕಾಶ ಕಲ್ಪಿಸಲಾಗಿದ್ದು, ೫೯೩ ಮಂದಿ ಹೆಸರು ನೋಂದಾಯಿಸಿದ್ದಾರೆ.
ಅಂಗಾoಗ ವೈಫಲ್ಯದಿಂದ ರಾಜ್ಯದ ಅನೇಕ ಮಂದಿ ನರಳುತ್ತಿದ್ದು, ಅಂತಹವರಿಗೆ ನೆರವಾಗಲು ಮತ್ತು ಅಂಗಾoಗ ದಾನವನ್ನು ವ್ಯಾಪಾರವಾಗಿಸುವುದನ್ನು ತಪ್ಪಿಸಲು ಈ ನೋಂದಣಿ ಕಾರ್ಯ ನಡೆಸಲಾಯಿತು.
ಸರ್ಕಾರಿ ಯೋಜನೆ ಪ್ರದರ್ಶನಕ್ಕೆ ಕ್ರಮ
ಇದೇ ಸಂದರ್ಭದಲ್ಲಿ ಒಳಾಂಗಣ ಕ್ರೀಡಾಂಗಣದ ಮುಂಭಾಗದ ರಸ್ತೆಯುದ್ದಕ್ಕೂ ಜಿಲ್ಲಾಡಳಿತ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಸಿಗಬಹುದಾದ ಸೌಲಭ್ಯಗಳು, ಕೇಂದ್ರ,ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಹರಿದು ಬಂದ ಹಣ, ಯೋಜನೆಗಳ ಮಾಹಿತಿಯನ್ನು ಪ್ರದರ್ಶಿಸಿಲಾಗಿತ್ತು.
ಇದೇ ಸಂದರ್ಭದಲ್ಲಿ ಗಾಂಧೀಜಿ, ಶಾಸ್ತಿಜಿ ಜಯಂತಿ ನೆನಪಿನಲ್ಲಿ ಖಾದಿ ಉತ್ಸವ್ ನಡೆದಿದ್ದು, ಖಾದಿ ಮಳಿಗೆಗಳೂ ತಲೆಯೆತ್ತಿದ್ದವು, ಜತೆಗೆ ಮಹಿಳಾ ಸಂಘಗಳು ತಾವು ತಯಾರಿಸಿದ್ದ ವಸ್ತುಗಳ ಮಾರಾಟಕ್ಕೂ ವೇದಿಕೆ ಕಲ್ಪಿಸಲಾಗಿತ್ತು.
ಜಿಲ್ಲಾಡಳಿತ,ಜಿಪಂ, ಆರೋಗ್ಯ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು,ಮುಖಂಡರು ಶಿಬಿರದ ಯಶಸ್ಸಿಗೆ ಟೊಂಕ ಕಟ್ಟಿ ನಿಂತು ಕೆಲಸ ಮಾಡಿದ್ದು ಕಂಡು ಬಂತುಬಿಜೆಪಿ ಜಿಲ್ಲಾದ್ಯಕ್ಷಡಾ! ವೇಣು ಗೋಪಾಲ್,ಚಂದ್ರಾರೆಡ್ಡಿ,ಯುವ ಮುಖoಡ ರೋಣೂರು ಚಂದ್ರ ಶೇಖರ್, ಶ್ರೀನಿವಾಸಪುರದ ಬದುಕು ಬದಲಾವಣೆ ಟ್ರಸ್ಟöನ ಎಲ್ಲಾ ಪದಾದಿಕಾರಿಗಳು ಹಾಗು ಸದಸ್ಯರು ಇದ್ದರು.

Leave a Reply

Your email address will not be published. Required fields are marked *