153 ಶ್ರೀನಿವಾಸಪುರ ವಿಧಾನಸಭಾ ಚುನಾವಣೆ 1962 ರಲ್ಲಿ ಜಿ ನಾರಾಯಣಗೌಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 20311 ಮತಗಳನ್ನು ಪಡೆದು ಬಿಎಲ್ ನಾರಾಯಣಸ್ವಾಮಿ ಪ್ರತಿಸ್ಪರ್ಧಿಯಾಗಿ ಸ್ವತಂತ್ರ ಅಭ್ಯರ್ಥಿಯಾಗಿ 15082 ಮತಗಳನ್ನು ಪಡೆದರೆ5229 ಅಂತರದಲ್ಲಿ ಜಯಶೀಲರಾಗಿ ಜಿ ನಾರಾಯಣಗೌಡ ಶಾಸಕರಾಗಿದ್ದರು.
66 ವಿಧಾನಸಭಾ ಚುನಾವಣೆಯಲ್ಲಿ1967 ಬಿಎಲ್ ನಾರಾಯಣಸ್ವಾಮಿ ಸ್ವತಂತ್ರ ಅಭ್ಯರ್ಥಿಯಾಗಿ 18801 ಎಸ್ ಬಿ ರೆಡ್ಡಿ ಕಾಂಗ್ರೆಸ್ ಪಕ್ಷದ ಪ್ರತಿಸ್ಪರ್ಧಿಯಾಗಿ 16094 ಮತಗಳನ್ನು ಪಡೆದರೆ2707 ಮತಗಳ ಅಂತರದಿಂದ ಜಯಶೀಲರಾಗಿ ಶಾಸಕ ರಾಗಿ ಬಿ ಎಲ್ ನಾರಾಯಣಸ್ವಾಮಿ ಅಧಿಕಾರ ಪಡೆದುಕೊಂಡಿದ್ದರು.
66 ವಿಧಾನಸಭಾ ಚುನಾವಣೆ1972 ಎಸ್ ಬಚ್ಚ ರೆಡ್ಡಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆರ್ಗನೈಸೇಷನ್ 29616 ಎಚ್ ಸಯ್ಯದ್ ಅಬ್ದುಲ್ ಅಲೀಮ್ ಕಾಂಗ್ರೆಸ್ ಪಕ್ಷದ ಪ್ರತಿಸ್ಪರ್ಧಿಯಾಗಿ 12067 ಮತಗಳನ್ನು ಪಡೆದರೆ ಎಸ್ ಬಚ್ಚ ರೆಡ್ಡಿ ರವರು 17888 ಮತಗಳ ಅಂತರದಿಂದ ಜಯಶೀಲರಾಗಿ ಶ್ರೀನಿವಾಸಪುರ ಶಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
69 ವಿಧಾನಸಭಾ ಚುನಾವಣೆ 1978 ಕೆಆರ್ ರಮೇಶ್ ಕುಮಾರ್ ಐಎನ್ಸಿ (ಐ ) 31867 ಆರ್ ಜಿ ನಾರಾಯಣ ರೆಡ್ಡಿ ಐ ಎನ್ ಸಿ 13067ಪ್ರತಿಸ್ಪರ್ಧಿಯಾಗಿ ಪಡೆದರು ಮೊದಲ ಬಾರಿಗೆ19800 ಮತಗಳ ಅಂತರವನ್ನು ಪಡೆದು ಜಯಶೀಲರಾಗಿ ವಿಧಾನಸಭೆಯನ್ನು ಶಾಸಕ ಕೆಆರ್ ರಮೇಶ್ ಕುಮಾರ್ ಅವರು ಪ್ರವೇಶಿಸಿದರು.
69 ವಿಧಾನಸಭೆ ಚುನಾವಣೆ 1983 ಜಿಕೆ ವೆಂಕಟಶಿವಾರೆಡ್ಡಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಿ 30031 ಪದಗಳನ್ನು ಪಡೆದರೆ ಕೆ ಆರ್ ರಮೇಶ್ ಕುಮಾರ್ ಅವರು ಐ ಎನ್ ಡಿ ಇಂದ ಪ್ರತಿಸ್ಪರ್ಧಿಯಾಗಿ 29389 ಮತಗಳನ್ನು ಪಡೆದರೆ 642 ಮತಗಳ ಅಂತರದಿಂದ ಜಿಕೆ ವೆಂಕಟಶಿವಾರೆಡ್ಡಿರವರು ಜಯಶೀಲರಾಗಿ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು.
69 ವಿಧಾನಸಭೆ ಚುನಾವಣೆ 1985 ಕೆ ಆರ್ ರಮೇಶ್ ಕುಮಾರ್ ಜನತಾ ಪಾರ್ಟಿಯಿಂದ 38074 ಮತಗಳನ್ನು ಪಡೆದರೆ ಜಿ ಕೆ ವೆಂಕಟಶಿವಾರೆಡ್ಡಿ ಕಾಂಗ್ರೆಸ್ ಪಕ್ಷದ ಪ್ರತಿಸ್ಪರ್ಧಿಯಾಗಿ 31941 ಮತಗಳನ್ನು ಪಡೆದರೆ ಕೆಆರ್ ರಮೇಶ್ ಕುಮಾರ್ 6133 ಮತಗಳ ಅಂತರದಿಂದ ಜಯಶೀಲರಾಗಿ ಎರಡನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು.
69 ವಿಧಾನಸಭೆ ಚುನಾವಣೆ 1989 ಜಿಕೆ ವೆಂಕಟಶಿವಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ 48231 ಮತಗಳನ್ನು ಪಡೆದರೆ ಕೆಆರ್ ರಮೇಶ್ ಕುಮಾರ್ ಜನತಾದಳ ಪಕ್ಷದಿಂದ ಪ್ರತಿಸ್ಪರ್ಧಿಯಾಗಿ 38938 ಮತಗಳನ್ನು ಪಡೆದರು ಜಿಕೆ ವೆಂಕಟಶಿವಾರೆಡ್ಡಿರವರು 9293 ಮತಗಳ ಅಂತರದಿಂದ ಜಯಶೀಲರಾಗಿ ಎರಡನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು.
69 ವಿಧಾನಸಭೆ ಚುನಾವಣೆ 1994 ಕೆಆರ್ ರಮೇಶ್ ಕುಮಾರ್ ಜನತಾದಳ ಪಕ್ಷದಿಂದ 52304 ಮತಗಳನ್ನು ಪಡೆದರೆ ಜಿ ಕೆ ವೆಂಕಟಶಿವಾರೆಡ್ಡಿ ಕಾಂಗ್ರೆಸ್ ಪಕ್ಷದಿಂದ ಪ್ರತಿಸ್ಪರ್ಧಿಯಾಗಿ 48157 ಮತಗಳನ್ನು ಪಡೆದರೆ ಕೆಆರ್ ರಮೇಶ್ ಕುಮಾರ್ 4147 ಮತಗಳ ಅಂತರದಿಂದ ಜಯಶೀಲರಾಗಿ ಮೂರನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು ಅವಧಿಯಲ್ಲಿ ವಿಧಾನಸಭೆಯ ಅಧ್ಯಕ್ಷರಾಗಿ ಕೆ ರಮೇಶ್ ಕುಮಾರ್ ರವರು ಅಧಿಕಾರವನ್ನು ವಹಿಸಿಕೊಂಡು ಕಾರ್ಯನಿರ್ವಹಿಸಿದ್ದಾರೆ.
69 ವಿಧಾನಸಭಾ ಚುನಾವಣೆ 1999 ಜಿ ಕೆ ವೆಂಕಟಶಿವಾರೆಡ್ಡಿ ಕಾಂಗ್ರೆಸ್ ಪಕ್ಷದ ವತಿಯಿಂದ 52490 ಮತಗಳನ್ನು ಪಡೆದರೆ ಕೆಆರ್ ರಮೇಶ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಪ್ರತಿಸ್ಪರ್ಧಿಯಾಗಿ 51297 ಮತಗಳನ್ನು ಪಡೆದರೆ ಜಿಕೆ ವೆಂಕಟಶಿವಾರೆಡ್ಡಿರವರು 1193 ಮತಗಳ ಅಂತರದಿಂದ ಜಯಶೀಲರಾಗಿ ಮೂರನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು.
69 ವಿಧಾನಸಭೆ ಚುನಾವಣೆ 2004 ಕೆಆರ್ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ವತಿಯಿಂದ 65041 ಮತಗಳನ್ನು ಪಡೆದರೆ ಜಿ ಕೆ ವೆಂಕಟಶಿವಾರೆಡ್ಡಿರವರು ಪ್ರತಿಸ್ಪರ್ಧಿಯಾಗಿ ಬಿಜೆಪಿ ಪಕ್ಷದ ವತಿಯಿಂದ 56431 ಮತಗಳನ್ನು ಪಡೆದರು ಕೆಆರ್ ರಮೇಶ್ ಕುಮಾರ್ ರವರು 8610 ಮತಗಳ ಅಂತರದಿಂದ ಜಯಶೀಲರಾಗಿ ನಾಲ್ಕನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು.
144 ವಿಧಾನಸಭೆ ಚುನಾವಣೆ 2008 ಜಿ ಕೆ ವೆಂಕಟಶಿವಾರೆಡ್ಡಿ ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ 70282 ಮತಗಳನ್ನು ಪಡೆದರೆ ಕೆಆರ್ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಸ್ಪರ್ಧಿಯಾಗಿ 66613 ಮತಗಳನ್ನು ಪಡೆದರು ಇದಕ್ಕೆ ವೆಂಕಟಶಿವಾರೆಡ್ಡಿ 3669 ಮತಗಳ ಅಂತರದಿಂದ ಜಯಶೀಲರಾಗಿ ನಾಲ್ಕನೆಯ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು.
144 ವಿಧಾನಸಭೆ ಚುನಾವಣೆ 2013 ಕೆಆರ್ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ವತಿಯಿಂದ83426 ಮತಗಳನ್ನು ಪಡೆದರೆ ಜಿ ಕೆ ವೆಂಕಟಶಿವಾರೆಡ್ಡಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಪ್ರತಿಸ್ಪರ್ಧಿಯಾಗಿ 79533 ಮತಗಳನ್ನು ಪಡೆದರು. ಕೆ ಆರ್ ರಮೇಶ್ ಕುಮಾರ್ 3893 ಮತಗಳ ಅಂತರದಿಂದ ಜಯಶೀಲರಾಗಿ ಐದನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿ ದರು. ಈ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕರ್ತವ್ಯವನ್ನು ನಿರ್ವಹಿಸಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ತಂದು ರಾಜ್ಯದ ಗಮನವನ್ನು ಸೆಳೆದರು.
144 ವಿಧಾನಸಭಾ ಚುನಾವಣೆ 2018 ಕೆಆರ್ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ವತಿಯಿಂದ93571 ಮತಗಳನ್ನು ಪಡೆದರೆ ಜಿಕೆ ವೆಂಕಟಶಿವಾರೆಡ್ಡಿ ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಪ್ರತಿಸ್ಪರ್ಧಿಯಾಗಿ 83019 ಮತಗಳನ್ನು ಪಡೆದರು ಕೆಆರ್ ರಮೇಶ್ ಕುಮಾರ್ ರವರು 10552 ಮತಗಳ ಅಂತರದಿಂದ ಜಯಶೀಲರಾಗಿ ಆರನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ ಮುಖ್ಯಮಂತ್ರಿಗಳ ಅವಧಿಯಲ್ಲಿ ವಿಧಾನಸಭಾ ಅಧ್ಯಕ್ಷರಾಗಿ ಎರಡನೇ ಬಾರಿಗೆ ಕರ್ತವ್ಯವನ್ನು ನಿರ್ವಹಿಸಿ ಅವಧಿಯಲ್ಲಿ.
ದೇಶದ ಗಮನವನ್ನು ಸೆಳೆಯುವಂತಹ ಹಲವಾರು ಶಾಸಕರ ಅನರ್ಹತೆಯನ್ನು ಗೊಳಿಸಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದಾರೆ.