ಶ್ರೀನಿವಾಸಪುರದ ೨೮೯ ಮತಕಟ್ಟೆಗಳಿಗೆ ಇವಿಎಂಗಳು ಹಾಜರು.

ಶ್ರೀನಿವಾಸಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೮೯ ಮತಕಟ್ಟೆಗಳಿದ್ದು ಈ ಮತಕಟ್ಟೆಗಳಿಗೆ ಬಿಎಸ್‌ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳ ಭದ್ರತಾ ಸಿಬ್ಬಂದಿಯೊoದಿಗೆ ಅಧಿಕಾರಿಗಳು ಮತದಾನ ಪಡೆಯುವ ಈವಿಎಂ ಯಂತ್ರಗಳನ್ನು ಹೊತ್ತೊಯ್ದರು.
ಪ್ರತಿ ಮತಕಟ್ಟೆಗೂ ನಾಲ್ಕು ಮಂದಿ ಸಿಬ್ಬಂದಿ ಹಾಗೂ ಎರಡು ಪೊಲೀಸ್ ಸಿಬ್ಬಂದಿ ಇವರೊಂದಿಗೆ ಗೃಹರಕ್ಷಕ ದಳದವರು ಕಾರ್ಯನಿರ್ವಹಿಸಲಿದ್ದಾರೆ.
೨೮೯ ಮತಗಟ್ಟೆಗಳ ಪೈಕಿ ಅತಿ ಸೂಕ್ಷ್ಮ ಪ್ರದೇಶಗಳ ಮತಗಟ್ಟೆಗಳಾಗಿ ೭೮ ಗುರುತಿಸಲಾಗಿದೆ.
ಇವುಗಳಲ್ಲಿ ಒಂಬತ್ತು ಮತಕಟ್ಟೆಗಳು ಕಳೆದು ಹೋದ ಚುನಾವಣೆಗಳಲ್ಲಿ ನಡೆದಿರುವಂತಹ ಘಟನೆಗಳನ್ನು ಆಧರಿಸಿ ವಿಶೇಷ ಮತಕಟ್ಟೆ ಗಳೆಂದು ಹೆಚ್ಚಿನ ಭದ್ರತಾ ಸಿಬ್ಬಂದಿ ಯನ್ನು ಒದಗಿಸಿ ಶಾಂತಿಯುತ ಮತದಾನ ನಡೆಯಲು ಅನುಕೂಲ ವಾತಾವರಣ ಸೃಷ್ಟಿಸಲಾಗಿದೆ.
ಮತದಾರರನ್ನು ಆಕರ್ಷಿಸಲು ಸಖಿ ಮತ್ತೆ ಕಟ್ಟೆಗಳು ಅತ್ಯಾಕರ್ಷಕವಾಗಿ ಮತ್ತು ವರ್ಣ ರಂಜಿತವಾಗಿ ವಿಶೇಷವಾಗಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸುಂದರವಾಗಿ ಅಲಂಕರಿಸಲಾಗಿದೆ
ಶ್ರೀನಿವಾಸಪುರ ಪಟ್ಟಣದಲ್ಲಿ ಪಟ್ಟಣದ ಸರೋಜಿನಿ ರಸ್ತೆ ಮತ್ತು ಚಿಂತಾಮಣಿ ರಸ್ತೆಯಲ್ಲಿ ಇರುವ ಮೊಲ ಆಸ್ಪತ್ರೆ ಮತಕಟ್ಟೆಗಳಿದ್ದು ಈ ಮತ ಕಟ್ಟೆಗಳನ್ನು ಸಖೀ ಮತಕಟ್ಟೆಗಳನ್ನು ರಂಗು ರಂಗಿನ ಸಿಂಗಾರವನ್ನು ಮಾಡಿ ಆಕರ್ಷಿಸಲಾಗಿದೆ.
ಹಾಗೆಯೇ ಶ್ರೀನಿವಾಸಪುರ ತಾಲೂಕಿನ ಆಲವಟ್ಟ ಗ್ರಾಮದ ಮತಕಟ್ಟೆಯನ್ನು ಪ್ರಪಂಚ ಪ್ರಸಿದ್ಧಿ ಮಾವಿನ ನಗರಕ್ಕೆ ಇಂಬು ನೀಡುವಂತೆ ಮತ್ತು ವಿಶೇಷ ಆಕರ್ಷಣೆಯಾಗಿ ಮತ್ತು ತಾಲೂಕಿನ ವಾಣಿಜ್ಯ ಬೆಳೆಯಾಗಿರುವ ಪ್ರಪಂಚ ಪ್ರಸಿದ್ಧಿಯನ್ನು ಹೊಂದಿರುವ ಮಾವಿನಹಣ್ಣಿನ ನಗರ ಮತ್ತು ಮಾವಿನ ಮಡಿಲು ಖ್ಯಾತಿಯ ಮತಕಟ್ಟೆಯನ್ನು ವರ್ಣ ರಂಜಿತವಾಗಿ ಆಕರ್ಷಿಸಲಾಗಿದೆ.
ವಿಶೇಷ ಚೇತನರಿಗೆ ಅನುಕೂಲವಾಗುವ ರೀತಿಯಲ್ಲಿ ಸರಾಗವಾಗಿ ಮತದಾನವನ್ನು ಮಾಡಲು ಪಟ್ಟಣದ ಡಾಕ್ಟರ್ ಜಾಕಿರ್ ಹುಸೇನ್ ಮೊಹಲ್ಲಾದಲ್ಲಿ ವಿಶೇಷವಾಗಿ ಮತಕಟ್ಟೆಯನ್ನು ಸಿಂಗರಿಸಲಾಗಿದೆ
ನಾಡಿನ ಕಲಾ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮಗಳ ಚಿತ್ತಾರಗಳನ್ನು ಬಿತ್ತರಿಸಿ ಪಟ್ಟಣದ ತ್ಯಾಗರಾಜ ಬಡಾವಣೆಯ ಸರ್ಕಾರಿ ಶಾಲೆಯನ್ನು ವೈಭವಿಕರಿಸಿ ಆಕರ್ಷಣೆಗೆ ಮತದಾರರನ್ನು ಸೆಳೆಯಲು ಮತ್ತು ಮತದಾನ ಮಾಡಲು ಅನುಕೂಲಕರ ವಾತಾವರಣವನ್ನು ನಿರ್ಮಿಸಲಾಗಿದೆ.
ರಾಜ್ಯದ್ಯಂತ ಒಂದೇ ಬಾರಿಗೆ ನಡೆಯುವ ಮೇ ಹತ್ತರಂದು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಅಂತಿಮ ಹಂತದ ಮತದಾನ ಪ್ರಕ್ರಿಯೆಗೆ ತಾಲೂಕು ಕೇಂದ್ರದಿoದ ಗಡಿ ಭಾಗಗಳ ಎಲ್ಲ ಗ್ರಾಮಗಳಿಗೂ ಈವಿಎಂ ಮತಯಂತ್ರಗಳನ್ನು ಸಿಬ್ಬಂದಿಗಳ ಸಮೇತ ಸಾಗಿಸಲಾಯಿತು.

Leave a Reply

Your email address will not be published. Required fields are marked *