ಶ್ರೀನಿವಾಸಪುರ ರಾಜಕೀಯ ಇತಿಹಾಸದಲ್ಲಿ ಕಳೆದ ನಾಲಕ್ಕು ದಶಕಗಳಿಂದ ರಕ್ತ ಸಿಕ್ತ ರಾಜಕಾರಣಿಗಳು ನಡೆದು ಹೋದಂತಹ ಘಟನೆಗಳು ಇವೆ. ಆದರೆ ಕಳೆದ ಕೆಲವೊಂದು ವರ್ಷಗಳಿಂದ ಯಾವುದೇ ರೀತಿಯ ಹಿತಕರ ಘಟನೆಗಳು ನಡೆಯದೇ ರಕ್ತಸಿಕ್ತ ರಾಜಕಾರಣಕ್ಕೆ ಶ್ರೀನಿವಾಸಪುರ ತಾಲೂಕಿನ ಜನತೆಯು ಅವಕಾಶವನ್ನು ನೀಡುತ್ತಿಲ್ಲ ಮತದಾರರು ಎಲ್ಲರೂ ಜಾಗೃತರಾಗಿದ್ದಾರೆ.
ನಾಲ್ಕು ದಶಕಗಳ ಹಿಂದೆ ರೆಡ್ಡಿಪರ ಮತ್ತು ಸ್ವಾಮಿ ಪರ ಎಂಬ ಕಟ್ಟಾಳುಗಳು ಇದ್ದು ಅಂದಿನ ರಾಜಕೀಯಕ್ಕೆ ಸಿನಿಮಾ ಶೈಲಿಯಲ್ಲಿ ಮತದಾನಗಳು ನಡೆದಿರುವ ಘಟನೆಗಳು ತಾಲೂಕಿನಲ್ಲಿ ಜನತೆಯ ಮನದಲ್ಲಿ ಚಿರಸ್ತಯಿಯಾಗಿ ಉಳಿದಿವೆ.
ತನ್ನದೇ ಆದಂತಹ ಭದ್ರಕೋಟೆಗಳನ್ನು ಸಹ ವೋಟ್ ಬ್ಯಾಂಕ್ ಇಟ್ಟುಕೊಂಡಿದ್ದ ಉದಾಹರಣೆಗಳು ಇಂದುಗೂ ಜನರ ಬಾಯಲ್ಲಿ ಹರಿದಾಡುತ್ತಿವೆ
ಸರ್ಕಾರ ಹೆಚ್ಚಿನ ಭದ್ರತೆಯನ್ನು ಒದಗಿಸಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಕಟ್ಟೆಗಳಾಗಿ ವಿಂಗಡಣೆ ಮಾಡಿ ಮತದಾರರು ನಿರ್ಭಯದಿಂದ ಮತವನ್ನು ಚಲಾಯಿಸಲು ಅನುಕೂಲ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ತಾಲೂಕು ಅತಿ ಶಾಂತ ಚಿತ್ತವಾಗಿ ಮತದಾನ ಮಾಡಲು ಮತದಾರರಿಗೆ ಅನುಕೂಲ ಮಾಡಿಕೊಟ್ಟಿದೆ.ಸರ್ಕಾರದ ಈ ಶಿಸ್ತಿನ ಕ್ರಮವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಶಕಗಳಿಂದ ಮತದಾರರು ಸರ್ಕಾರದ ಈ ನಿಟ್ಟಿನ ಕ್ರಮವನ್ನು ಭದ್ರತೆಯನ್ನು ಸ್ವಾಗತಿಸುತ್ತಾ ಶಾಂತ ಚಿತ್ತಕ್ಕೆ ಸರ್ಕಾರದ ಕ್ರಮವನ್ನು ನಿರಂತರವಾಗಿ ಸ್ಮರಿಸುತ್ತಾರೆ. ಶ್ರೀನಿವಾಸಪುರ ವಿಧಾನಸಭೆಯಲ್ಲಿ ಒಟ್ಟು ಮತದಾರರು216763
ಮಹಿಳೆಯರು109000 ಅಧಿಕ. ಪುರುಷರು 107000 ಅಧಿಕ
ಹಾಲಿ ಶಾಸಕ ಕೆಆರ್ ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ವಿಧಾನಸಭೆಯ ವ್ಯಾಪ್ತಿಯಲ್ಲಿ ಬಡವರಿಗೆ ಸೂರು ಕಲ್ಪಿಸುವಲ್ಲಿ ಹಾಗೂ ಮಹಿಳೆಯರಿಗೆ ನಬಾರ್ಡ್ ಸಾಲ ನೀಡುವಲ್ಲಿ ಕೆ ಸಿ ವ್ಯಾಲಿ ನೀರು ತರುವಲ್ಲಿ ಪಟ್ಟಣದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ.
ಮಾಜಿ ಶಾಸಕ ಜಿಕೆ ವೆಂಕಟಶಿವಾರೆಡ್ಡಿ ಪುರಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ ಕಟ್ಟಡಗಳನ್ನು ಅವರ ಅವಧಿಯಲ್ಲಿ ನಿರ್ಮಿಸುವಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಅಂದಿನ ಸಮಯಕ್ಕೆ ತಕ್ಕಂತೆ ಅವರ ಅವಧಿಯಲ್ಲಿ ಸುರುಗಳನ್ನು ಕಲ್ಪಿಸುವಲ್ಲಿಯೂ ಜನಪರ ಯೋಜನೆಗಳನ್ನು ಹಾಲಿ ಮತ್ತು ಮಾಜಿ ಶಾಸಕರಿಬ್ಬರೂ ತಮ್ಮದೇ ಆದ ಕರ್ತವ್ಯಗಳನ್ನು ಮಾಡಿದ್ದಾರೆ
ಜಿದ್ದಾಜಿದ್ದಿನ ರಾಜಕೀಯಕ್ಕೆ ಬಂದಂತೆ ಕೆ ರಮೇಶ್ ಕುಮಾರ್ ರವರು ತಮ್ಮ ರಾಜಕೀಯ ತಂತ್ರಗಾರಿಕೆಯಲ್ಲಿ ಹಲವಾರು ಏಳುಬೀಳು ಕಂಡಲ್ಲಿ ಈ ಬಾರಿಯ ಘಟಬಂಧನ್ ರಾಜಕೀಯ ಅವರದೇ ಆದ ಮಾತಿನ ಸೇವೆಯಲ್ಲಿ ಜನಮಾನಸದಲ್ಲಿ ಅವರೇ ತೊಡಕುಗಳನ್ನು ಮಾಡಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಕಾಣಬಹುದು ಹಾಲಿ ಶಾಸಕ ಕೆಆರ್ ರಮೇಶ್ ಕುಮಾರ್ ಅವರ ಜನಪರ ಯೋಜನೆಗಳ
ಕಾರ್ಯಕ್ರಮಗಳ ಕೈಹಿಡಿಯುವರೇ ಮತದಾರರು?
ಮಾಜಿ ಶಾಸಕ ಜಿಕೆ ವೆಂಕಟಶಿವಾರೆಡ್ಡಿ ಸತತ 10 ವರ್ಷಗಳಿಂದ ಅಧಿಕಾರ ಇಲ್ಲದೆ ಇಂದಿಗೂ ಉಮ್ಮಸನ್ನು ಕಳೆದುಕೊಳ್ಳದೆ ಈ ಬಾರಿ ಚುನಾವಣಾ ಕಣದಲ್ಲಿ ತನ್ನ ನಾಲ್ಕು ಬಾರಿಯ ಶಾಸಕರ ಅವಧಿಯಲ್ಲಿ ತಾನು ಕೈ ಕೊಂಡಿರುವ ಜನಪರ ಕಾರ್ಯಕ್ರಮಗಳ ಕುರಿತು ಮತ್ತು ಅಧಿಕಾರವನ್ನು ತನ್ನದೇ ಆದಂತಹ ರಾಜಕೀಯ ತಂತ್ರಗಾರಿಕೆ ಎಣೆ ಯುವಲ್ಲಿ ಮುಂದುವರೆದಿದ್ದಾರೆ.
ಈ ಬಾರಿ ಕ್ಷೇತ್ರದ ಮತದಾರರು ಸಿಂಪತಿ ಒಲೈಕೆ ಮಾಡಲಿದ್ದಾರೆ ಇದರ ಜೊತೆಗೆ ಇತ್ತೀಚೆಗೆ ವಿಧಾನಸಭಾ ಅಭ್ಯರ್ಥಿಯಾಗಬೇಕು ಎಂಬ ಕನಸನ್ನು ಕಾಣುತ್ತಿದ್ದ ಎಸ್ಎಲ್ಎನ್ ಮಂಜುನಾಥ್ ರವರ ಸಹಕಾರ ಜೆಡಿಎಸ್ ಗೆ ಸಿಗುವುದೇ ಜಿ ಕೆ ವೆಂಕಟಶಿವಾರೆಡ್ಡಿರವರ ಕೈ ಹಿಡಿಯುವರೇ ಮತದಾರ?
ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿರುವ ಹ್ಯಾಟ್ರಿಕ್ ಗೆಲುವು ಎಂಬ ಖ್ಯಾತಿಗೆ ಶಾಸಕ ರಮೇಶ್ ಕುಮಾರ್ ರವರಿಗೆ ಒಲಿಯುವುದೇ ಜಿ ಕೆ ವೆಂಕಟಶಿವಾರೆಡ್ಡಿರವರ ಹ್ಯಾಟ್ರಿಕ್ ಸೋಲಿಗೆ ಬ್ರೇಕ್ ಹಾಕಿ ಮತದಾರರು ಕರುಣಿಸಲಿದ್ದಾರೆಯೇ ಸಿಂಪತಿಗೆ ಎಂಬುದು ತಾಲೂಕಿನಲ್ಲಿ ಪಿಸು ಪಿಸು ಮಾತುಗಳಾಗಿವೆ.
ಹಾಲಿ ಮತ್ತು ಮಾಜಿ ಶಾಸಕರು ಅಭಿಮಾನಿಗಳು ಮತ್ತು ಕಾರ್ಯಕರ್ತರು ತಮ್ಮದೇ ಆದಂತಹ ಫೇಸ್ಬುಕ್ ಗಳಲ್ಲಿ ಅವರವರ ನಾಯಕರ ಪರವಾಗಿ ಅತಿಹೆಚ್ಚಿನ ಪ್ರಚಾರಗಳನ್ನು ನೀಡುತ್ತಾ ಮತದಾರರನ್ನು ಸೆಳೆಯಲು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ ಒಬ್ಬರ ಮೇಲೆ ಇನ್ನೊಬ್ಬರು ಸೇರ್ಪಡೆಗಳ ಸುಗ್ಗಿಯನ್ನು ಹಬ್ಬುತ್ತಿದ್ದಾರೆ ಆದರೂ ಮತದಾರರು ಯಾರ ಪರವಾಗಿ ಮತದಾನ ಮಾಡಲಿದ್ದಾರೆ ಎಂಬುದು ಪ್ರಶ್ನತೀತವಾಗಿದೆ.
ಈ ತಾಲೂಕಿನಲ್ಲಿ ರೆಡ್ಡಿ ಸ್ವಾಮಿಯವರಿಬ್ಬರದೇ ವ್ಯಕ್ತಿಗತ ರಾಜಕಾರಣ ಪಕ್ಷಗಳಿಗೆ ಇಲ್ಲಿ ಬೆಲೆ ಇಲ್ಲ ವ್ಯಕ್ತಿ ಪ್ರತಿಷ್ಠೆ ಈ ಕ್ಷೇತ್ರದಲ್ಲಿ ನಡೆದುಕೊಂಡು ಬಂದಿರುವ ಜಿದ್ದಾಜಿದ್ದಿನ ರಾಜಕೀಯ.
ಸುಪುತ್ರರ ಮತಯಾಚನೆ
ಮಾಜಿ ಶಾಸಕ ಜಿಕೆ ವೆಂಕಟಶಿವಾರೆಡ್ಡಿರವರ ಮಗ ಬೀರೇಂದ್ರ ರೆಡ್ಡಿ ತಂದೆಯ ಜೊತೆ ಪ್ರಚಾರದಲ್ಲಿ ತೊಡಗಿದ್ದರು ಬಿ ರೇಂದ್ರ ರೆಡ್ಡಿ ತನ್ನದೇ ಆದಂತಹ ಅಭಿಮಾನ ಬಳಗವನ್ನು ಕಟ್ಟಿಕೊಂಡು ತನ್ನ ತಂದೆಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಹಾಲಿ ಶಾಸಕ ಕೆ ರಮೇಶ್ ಕುಮಾರ್ ಅವರ ಹರ್ಷ ರವರು ಸಹ ತಂದೆಯ ಜೊತೆ ಮಾತ್ರವಲ್ಲದೆ ರಾತ್ರಿ ವೇಳೆಯಲ್ಲಿಯೂ ಪ್ರಚಾರದಲ್ಲಿ ತೊಡಗಿದ್ದಾರೆ ತಂದೆಯ ಪರವಾಗಿ ಮತಯಾಚನೆಯನ್ನು ಮಾಡುತ್ತ ತಂದೆಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಕಳೆದ ಬಾರಿ ಚುನಾವಣೆ ಕೋಲಾರದ ಫಲಿತಾಂಶ ಈ ಬಾರಿಯ ಶ್ರೀನಿವಾಸಪುರ ಫಲಿತಾಂಶ ಆಗುವುದೇ? ಶ್ರೀನಿವಾಸಪುರ ಹ್ಯಾಟ್ರಿಕ್ ಇತಿಹಾಸ ಬರೆಯಲಿದೆ ಯೇ? ಮತದಾರ ಯಾರ ಪರ? ಶಾಸಕ ಕೆಆರ್ ರಮೇಶ್ ಕುಮಾರ್ ವಿರುದ್ಧ ವಿರೋಧಿ ಅಲೆ ತನ್ನದೇ ಆದಂತಹ ಕಾಂಗ್ರೆಸ್ ಪಕ್ಷದ ದಳಸುನೂರು ಗೋಪಾಲಕೃಷ್ಣ ಮುನಿಸಿಕೊಂಡಿರುವ ಹಾಗೆಯೇ ಶೇಷಾಪುರ ಗೋಪಾಲಗೌಡ ಪಕ್ಷಾಂತರ ವಾಗಿ ಜೆಡಿಎಸ್ ಪಕ್ಷಕ್ಕೆ ಸೇರಿರುವ ಮತಗಳ ಕೊರತೆ ಯಾಗುವುದೇ ರಮೇಶ್ ಕುಮಾರ್ ರವರಿಗೆ ಈ ಅಲೆಯಲ್ಲಿ ಜಿ ಕೆ ವೆಂಕಟಶಿವಾರೆಡ್ಡಿ ರವರ ಪರವಾಗಿ ಮತಗಳ ಬೇಟೆ ಮಾಡಲು ಎಸ್ಎಲ್ಎನ್ ಹಾಗೂ ಶೇಷಾಪುರ್ ಗೋಪಾಲ್ ಗೌಡ ಫಲ ಫಲಿಸುವುದೇ?