ಶ್ರೀನಿವಾಸಪುರದಲ್ಲಿ ಆರ್,ಸಿ,ಸಿ ಚರಂಡಿಗಳು ನುಂಗುವ ಹುನ್ನಾರವೇ?ಸಿಸಿ ರಸ್ತೆಗಳ ಕಾಮಗಾರಿ ಜೋರು. ಅಧಿಕಾರಿಗಳ ಸಾಥ್, ಗುತ್ತಿಗೆದಾರರು ಫುಲ್ ಖುಷ್! ಚರಂಡಿಗಳು ಇಲ್ಲದೆ ಪರದಡುತ್ತಿರುವ ಮನೆ ಮಾಲಿಕರ ಆಕ್ರೋಶ

ಮೊದಲು ಚರಂಡಿ ಮಾಡಿ ನಂತರ ಸಿಸಿ ರಸ್ತೆ ಮಾಡಿ ಇಲ್ಲದಿದ್ದರೇ ವಾರ್ಡ್ನಲ್ಲಿ ಸಿ ಸಿ ರಸ್ತೆಗಳನ್ನೆ ಮಾಡಬೇಡಿ ಗುತ್ತಿಗೆದಾರರಿಗೆ ಶ್ರೀನಿವಾಸಪುರ ಪಟ್ಟಣದ ಸಾರ್ವಜನಿಕರ ಅಗ್ರಹ.
ಶ್ರೀನಿವಾಸಪುರ ಪಟ್ಟಣದಲ್ಲಿ ಇತ್ತೀಚೆಗೆ ಗುತ್ತಿಗೆದಾರರು ಕಳಪೆ ಕಾಮಗಾರಿಗಳನ್ನು ನಡೆಸಲು ಅತಿ ಜರುರಾಗಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.
ಶ್ರೀನಿವಾಸಪುರದ ಪಟ್ಟಣದಿಂದ ಇರುವ ಎಲ್ಲಾ ವಾರ್ಡ್ಗಳಲ್ಲಿಯೂ ಸೇರಿದಂತೆ ಸಿಸಿ ರಸ್ತೆಗಳು ಮತ್ತು ಚರಂಡಿಗಳು ಎರಡು ಸಹ ಕಾಮಗಾರಿ ಎಷ್ಟ್ ಮೆಂಟ್ ನಲ್ಲಿ ಮಾತ್ರ ಇರುತ್ತವೆ.
ಎಸ್ಟ್ ಮೆಂಟ್ ನಲ್ಲಿ ಇರುವಂತೆ ಕಾಮಗಾರಿಗಳು ಶ್ರೀನಿವಾಸಪುರದಲ್ಲಿ ನಡೆಯುತ್ತಿಲ್ಲ ಎಂಬುದು ಪ್ರತ್ಯಕ್ಷ ಸಾಕ್ಷಿಯಾಗುತ್ತಿದೆ
ಏಕೆಂದರೆ ಇಲ್ಲೊಂದು ಘಟನೆಯು ಪ್ರತ್ಯಕ್ಷವಾಗಿ ನಡೆಯುತ್ತಿರುವಾಗಲೇ ಪಟ್ಟಣದ ನಾಗರಿಕರು ಗುತ್ತಿಗೆದಾರರ ಮೇಲೆ ಹಿಡಿ ಶಾಪ ಹಾಕಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಶ್ರೀನಿವಾಸ ಪಟ್ಟಣದಿಂದ ಚಿಂತಾಮಣಿ ಮುಖ್ಯ ರಸ್ತೆಗೆ ಹೋಗುವ ಎಪಿಎಂಸಿ ಯಾರ್ಡ್ ಬಳಿ ಎಡಗಡೆ ಇರುವ ಮಿಲನ್ ಸರ್ ಮಂಡಿ ಪಕ್ಕದ ರಸ್ತೆಯಲ್ಲಿ ಹಾದು ಹೋಗುವ ಜೈನಬ್ ಮಸೀದಿ ಇರುವ ಬಡಾವಣೆಯಲ್ಲಿ ಚರಂಡಿಯನ್ನು ನುಂಗುವ ಗುತ್ತಿಗೆದಾರರ ಕಾಮಗಾರಿ ಬರದಿಂದ ಸಾಗಿದೆ.
ಚುನಾವಣೆಗೆ ಮುಂಚಿತವಾಗಿ ಎರಡು ಮೂರು ದಿನಗಳ ಅಂತರದಲ್ಲಿ ರಸ್ತೆಯನ್ನು ಜೆಸಿಬಿಯಲ್ಲಿ ಸ್ವಚ್ಛಗೊಳಿಸಿ ಅನಂತರ ಜಲ್ಲಿ ಯನ್ನು ಹಾಕಿರುತ್ತಾರೆ ಆದರೆ ಇಂದಿಗೂ ಸಹ ಆ ಕಡೆ ಗಮನ ಹರಿಸಿಲ್ಲ ಇದೊಂದು ಘಟನೆಯಾದರೆ.
ಇಲ್ಲಿಗೆ ಬಂದು ಹೋಗುವ ಗುತ್ತಿಗೆದಾರರು ಚರಂಡಿಯನ್ನು ಮಾಡದೆ ಖಾಲಿ ರಸ್ತೆಯನ್ನೇ ಮಾಡಿ ಚರಂಡಿಯನ್ನು ನುಂಗುವ ಹುನ್ನಾರ ನಡೆಸಿದ್ದಾರೆ ಎಂಬ ಪ್ರತ್ಯಕ್ಷ ಸಾಕ್ಷಿ ಈ ಕಾಮಗಾರಿಯಾಗಿದೆ.
ಸ್ಥಳೀಯ ವಾರ್ಡ್ ನಾಗರಿಕರು ಮನೆಗಳಿಂದ ನೀರು ಹಾಯಿಸಲು ಯಾವ ಕಡೆ ಮೋರಿ ಇದೆ ಎಂದು ತಡಕಾಡಬೇಕಾಗಿದೆ ಏಕೆಂದರೆ ಈ ರಸ್ತೆಯಲ್ಲಿ ಮೊರಿಯೊನ್ನೇ ಮಾಡದೆ ರಸ್ತೆಯನ್ನು ಮಾಡಲು ಗುತ್ತಿಗೆದಾರರ ಜೊತೆ ಸ್ಥಳೀಯ ಅಧಿಕಾರಿಗಳು ಸಹ ಕೈಜೋಡಿಸಿದ್ದಾರೆ
ಮನೆಯ ಬಾಗಿಲಿಗೆ ಹೊಂದಿಕೊಂಡಿರುವಂತೆ ಸಿಸಿ ರಸ್ತೆಯ ಜಲ್ಲಿ ಯು ಹಾಕಿದ್ದು ಈ ಜೆಲ್ಲಿಯ ಮೇಲೆ ನೀರು ಹೋಗುವ ರೀತಿಯಲ್ಲಿ ಸಾರ್ವಜನಿಕರು ಪರದಾಡುತ್ತಿದ್ದಾರೆ.


ಮನೆಗಳಲ್ಲಿ ಬಳಸುವ ನೀರು ಹಾಗೂ ಶೌಚಾಲಯದ ನೀರನ್ನು ಯಾವ ಕಡೆ ಬಿಡಬೇಕು ಎಂದು ಸಾರ್ವಜನಿಕರು ಒದ್ದಾಡುವಂತಾಗಿದೆ ಈ ರೀತಿಯ ಕಾಮಗಾರಿ ನಡೆಸಲು ಪುರಸಭೆಯ ಅಧಿಕಾರಿ ವೃಂದ ಸಾತ್ ನೀಡುತ್ತಿರುವುದು ಕಾಕತಾಳಿಯವಾಗಿದೆ.
ಕಾಮಗಾರಿಗಳನ್ನು ನಡೆಸುತ್ತಿರುವ ಪುರಸಭೆಯ ಅಧಿಕಾರಿಗಳು ಗುತ್ತಿಗೆದಾರರು ಇವರ ಮನೆಗಳ ಬಳಿಯೂ ಸಹ ಇದೇ ರೀತಿಯ ಕಾಮಗಾರಿಗಳನ್ನು ನಡೆಸುತ್ತಿರುವವರೇ ಇವರು ಸಹ ಇಂತಹ ಬಡಾವಣೆಯಲ್ಲಿ ವಾಸವಾಗಿದ್ದರೆ ಅವರಿಗೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತಿತ್ತು ಎಂಬುದು ಸಾರ್ವಜನಿಕರ ಅಗ್ರಹವಾಗಿದೆ.
ಈ ರಸ್ತೆಯಲ್ಲಿ ಚರಂಡಿ ಮಾಡಿದರೆ ಮಾತ್ರ ರಸ್ತೆಯನ್ನು ಮಾಡಲು ನಾವು ಒಪ್ಪುತ್ತೇವೆ ಇಲ್ಲದೆ ಹೋದರೆ ಈ ರಸ್ತೆಯಲ್ಲಿ ಸಿಸಿ ರಸ್ತೆಗಳೇ ಬೇಡ ನಮಗೆ ನೀರು ಹೋಗಲು ಮೊದಲು ಚರಂಡಿಯನ್ನು ಮಾಡಿ ಶೌಚಾಲಯದ ಕೊಳಚೆ ನೀರು ಸಹ ಹೋಗಲು ಯುಜಿ ಡಿಯನ್ನು ಹಾಕಿ ನಾವು ಬಳಸುವ ನೀರು ಸರಾಗವಾಗಿ ಬೇರೆ ಕಡೆ ಹೋಗಲು ಅನುಕೂಲ ಮಾಡಿಕೊಟ್ಟ ನಂತರ ಈ ಸಿಸಿ ರಸ್ತೆಯನ್ನು ಮಾಡಬೇಕಾಗಿದೆ ಇಲ್ಲದೆ ಹೋದರೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸಿಸಿ ರಸ್ತೆಯನ್ನು ಮಾಡಲು ನಾವು ಬಿಡುವುದಿಲ್ಲ ಎಂದು ಸ್ಥಳೀಯ ನಿವಾಸಿಯಾದ ಏಜೇಜ್ ತಮ್ಮ ಆಕ್ರೋಶ ವ್ಯಕ್ತಪಡಿಸಿ ಅಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *