ಕೋಲಾರ:- ಸ್ಪರ್ಧಾತ್ಮಕ ಪ್ರಪಂಚಲ್ಲಿ ಇಂದು ಗಣಕಯಂತ್ರದ ಜ್ಞಾನ ಅತ್ಯಗತ್ಯವಾಗಿದೆ, ಸರ್ಕಾರಿ,ಕಂಪನಿಗಳ ಉದ್ಯೋಗ ಮಾತ್ರವಲ್ಲ, ವ್ಯಾಪಾರ,ವಹಿವಾಟಿಗೂ ಇಂದು ಕಂಪ್ಯೂಟರ್ ಜ್ಞಾನದ ಅಗತ್ಯವಿದ್ದು, ವಿದ್ಯರ್ಥಿಗಳಿಗೆ ಪ್ರಾಥಮಿಕ ಶಾಲಾ ಹಂತದಿoದಲೇ ಕಲಿಕೆ ಆರಂಭಗೊಳ್ಳಬೇಕು ಎಂದು ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್ ರಮೇಶ್ ಕುಮಾರ್ ಕರೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮoದಿರದಲ್ಲಿ ಶ್ರೀ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ೩೪ ನೆಯ ವರ್ಷದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿಧ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವೇ ಭವಿಷ್ಯ ಎಂಬುದನ್ನು ಈ ಸಂಸ್ಥೆ ಹುಟ್ಟಿ ಕೆಲಸ ಮಾಡಿಕೊಂಡು ಬಂದಿದೆ ಮಾನವ ಶಕ್ತಿಯೇ ಎಲ್ಲವನ್ನೂ ಮಾಡುವುದು ಅಸಾಧ್ಯವಾಗಿದೆ ಅ ನಿಟ್ಟಿನಲ್ಲಿ ಕಂಪ್ಯೂಟರ್ ಬಳಕೆಗೆ ಹೆಚ್ಚು ಒತ್ತು ನೀಡುವುದು ಆಗಿದ್ದು ವಿಧ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಸಮರ್ಪಕವಾಗಿ ಬಳಸಿಕೊಂಡು ಸ್ವಾಭಿಮಾನಿ ಜೀವನ ರೂಢಿಸಿಕೊಳ್ಳಬೇಕು ಎಂದರು.
ಪ್ರಾಥಮಿಕ ಹಂತದಿoದಲೆ ಕಂಪ್ಯೂಟರ್ ಶಿಕ್ಷಣ ಇಂದಿನ ಮಕ್ಕಳಿಗೆ ಅವಶ್ಯವಾಗಿದೆ ಸ್ಪರ್ಧಾತ್ಮಕ ಯುಗದಲ್ಲಿ ತಾಂತ್ರಿಕ ಕೌಶಲ್ಯದ ಅವಶ್ಯಕತೆಯೂ ಹೆಚ್ಚಾಗಿದೆ ಮಕ್ಕಳಿಗೆ ಪ್ರಾರಂಭದ ಹಂತದಲ್ಲಿಯೇ ಕಂಪ್ಯೂಟರ್ ಕಲಿಕೆಗೆ ಆಧ್ಯತೆ ನೀಡಬೇಕಾಗಿದೆ ಈ ಕಂಪ್ಯೂಟರ್ ಕಲಿಕೆಯ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು, ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಖಾಸಗಿ ಶಾಲಾ ಮಕ್ಕಳಿಗೆ ಮಾತ್ರವಲ್ಲ, ಸರ್ಕಾರಿ ಶಾಲಾ ಮಕ್ಕಳಿಗೂ ಕಂಪ್ಯೂಟರ್ ಜ್ಞಾನ ಒದಗಿಸುವ ಅಗತ್ಯವಿದೆ, ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಇಂದು ಯಾವುದೇ ನೇಮಖಾತಿಯಲ್ಲೂ ಕಂಫ್ಯೂಟರ್ ಶಿಕ್ಷಣ ಆಗಿದೆಯೇ ಎಂದು ಕೇಳುವುದನ್ನು ನೋಡಿದ್ದೇವೆ ಎಂದರು.
ಸುಧಾಕರ್ ಹಲವು ದಶಕಗಳಿಂದ ಕೋಲಾರದಲ್ಲಿ ಟೈಪಿಂಗ್ ಶಿಕ್ಷಣದೊಂದಿಗೆ ಶಾಲೆ ಆರಂಭಿಸಿ ಇಂದು ಕಂಪ್ಯೂಟರ್ ಶಿಕ್ಷಣವನ್ನು ಸಾವಿರಾರು ಮಕ್ಕಳಿಗೆ ಒದಗಿಸುವ ಮೂಲಕ ವಿದ್ಯಾದಾನ ಮಾಡಿದ್ದಾರೆ, ಅವರ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಇಂದು ಸಾಧಕರಾಗಿ ಉತ್ತಮ ಉದ್ಯೋಗ ಪಡೆದುಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎಸ್.ವಿ ಸುಧಾಕರ್ ಮಾತನಾಡಿ, ಸರಕಾರದ ಪ್ರತಿಯೊಂದು ಉದ್ಯೋಗಕ್ಕೆ ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕವಾಗಿದೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ವಿಧ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಎಲ್‌ಸಿಸಿ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಿಕ್ಷಣ ಮಂಡಳಿಯಿoದ ಮಾನ್ಯತೆ ಪಡೆದ ಕಂಪ್ಯೂಟರ್ ಶಿಕ್ಷಣವನ್ನೇನೀಡುತ್ತಿದ್ದೇವೆ, ನಮ್ಮಲ್ಲಿ ನುರಿತ ಶಿಕ್ಷಕರಿದ್ದು, ಗುಣಮಟ್ಟದ ಕಲಿಕೆಯಲ್ಲಿ ರಾಜೀ ಇಲ್ಲ ಎಂದುತಿಳಿಸಿ, ಅತಿಯಾದ ಶುಲ್ಕದ ಹೊರೆಯಿಲ್ಲದೇ ಸಾಮಾಜಿಕ ಕಾಳಜಿಯಿಂದ ಕಲಿಸುವ ಆಶಯ ನಮ್ಮದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಕೆ.ಎನ್ ಶ್ರೀನಿವಾಸಗೌಡ , ಕಂಪ್ಯೂಟರ್ ಶಿಕ್ಷಣ ಮನುಷ್ಯನ ಭಾಗವಾಗಿದೆ ಯಾವುದೇ ಖಾಸಗಿ ಕೈಗಾರಿಕೆಗಳಲ್ಲಿ ಕೂಡ ಕಂಪ್ಯೂಟರ್ ಜ್ಞಾನ ಅವಶ್ಯಕತೆ ಇದೆ ಸರಕಾರವು ಇಂತಹ ಖಾಸಗಿ ಕಂಪ್ಯೂಟರ್ ವಿದ್ಯಾಸಂಸ್ಥೆಗಳಿಗೆ ಹೆಚ್ಚಿನ ಪೋತ್ಸಾಹ ನೀಡುವ ಮೂಲಕ ಉತ್ತೇಜನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ವಾಣಿಜ್ಯ ವಿದ್ಯಾಶಾಲೆಗಳ ಸಂಘದ ಉಪಾಧ್ಯಕ್ಷ ಎಸ್.ಎಂ ರಮೇಶ್, ಪ್ರಧಾನ ಕಾರ್ಯದರ್ಶಿ ಎನ್ ಕೃಷ್ಣಮೂರ್ತಿ, ರಾಜೇಶ್ವರಿ ಕಂಪ್ಯೂಟರ್ ಸಂಸ್ಥೆಯ ಟಿ.ಎಸ್ ರಾಜಶೇಖರ್, ಎಲ್.ಸಿ.ಸಿ ಕಂಪ್ಯೂಟರ್ ಸಂಸ್ಥೆಯ ನಿರ್ದೇಶಕಿ ಎಂ.ವಿ ರತ್ನ ಸುಧಾಕರ್ ಭೋದಕವೃಂದದವರಾದ ಕುಸುಮ, ನಿಶಾಂತ್, ಲಾವಣ್ಯ, ವಿಜಮ್ಮ, ಮುಂತಾದವರು ಇದ್ದರು.