ಕೆಜಿಎಫ್, ವಿಶ್ವಮಾನವ ಬಸವಣ್ಣನ ಆದರ್ಶ, ತತ್ವಗಳನ್ನು ರೂಢಿಸಿಕೊಂಡು, ಶ್ರೀಯುತರ ವಚನಗಳನ್ವಯ ಇಂದಿನ ಸಮಾಜವು ಮುನ್ನಡೆದಲ್ಲಿ ಬಸವಣ್ಣನನ್ನು ಇಂದಿಗೂ ಕಾಣಬಹುದೆಂದು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಭಾನುವಾರದಂದು ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರು ಮಾತನಾಡಿ, ಬಸವಣ್ಣ ೧೨ನೇ ಶತಮಾನದ ಸಮಾಜ ಸುಧಾರಕರು, ಬಸವಣ್ಣನವರು ಮಹಾತ್ಮರು, ಜಗತ್ತಿನಲ್ಲಿ ಹೊಸ ವಿಚಾರ ಧಾರೆಯನ್ನು ಹರಿಸಿದವರು, ಜಾತಿ ನಿರ್ಮೂಲನೆಗಾಗಿ ಅಸ್ಪೃಶ್ಯತೆಯ ವಿನಾಶಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಬಸವಣ್ಣ ಇಂದಿನ ಸಮಾಜಕ್ಕೆ ಅವಶ್ಯಕವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ವಿ.ಎಲ್.ರಮೇಶ್, ಸಹಾಯಕ ಆಡಳಿತಾಧಿಕಾರಿ ಜಿ. ವಿಶ್ವನಾಥ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಕುಮಾರಸ್ವಾಮಿ, ಮಂಜುನಾಥ ಎ ಲಿಂಗಾರೆಡ್ಡಿ, ನಿಸ್ತಂತು ಪಿಐ ನವೀನ್ಕುಮಾರ್, ಆರ್ಪಿಐ ಪ್ರದೀಫ್ಕುಮಾರ್, ಪಿಎಸ್ಐ ನಾಗಪ್ಪ ಖಾನಾಪೂರ, ಪ್ರಶಾಂತ್ ಹಾಜರಿದ್ದರು.
ಪೊಲೀಸ್ ಅಧೀಕ್ಷಕರ ಆಪ್ತ ಸಹಾಯಕಿ ಜಿ.ಮಮತಾ, ಎಎಸ್ಐ ಜಿ.ರಮೇಶ್, ಎನ್.ಸುರೇಶ್ಬಾಬು, ವಿ.ಸೋಮಶೇಖರ, ಕೃಷ್ಣಮೂರ್ತಿ, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.
ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಹಾಗೂ ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ಬಸವಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.