ಕೋಲಾರ,ಈ ಪ್ರಪಂಚದ ಶಕ್ತಿ ಚೈತನ್ಯವೇ ಕರ್ಮ, ಕರ್ಮವಿದ್ದಲ್ಲಿ ಜೀವ ಚೈತನ್ಯವಿಲ್ಲ. ಪ್ರಪಂಚದ ತಂದೆ ವಿಶ್ವಕರ್ಮ ಎಲ್ಲಾ ದೇವರುಗಳನ್ನು ಸೃಷ್ಟಿಸಿ ಅವರಿಗೆಲ್ಲ ಹೆಸರಿಟ್ಟವರು. ವಿಶ್ವದ ಸೃಷ್ಟಿಕರ್ತ ವಿಶ್ವಕರ್ಮ ರವರು ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು ಎಂದು ಕೋಲಾರ ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.
ಇಂದು ನಗರದ ಶ್ರೀ ಟಿ.ಚನ್ನಯ್ಯ ರಂಗಮoದಿರದಲ್ಲಿ ಹಮ್ಮಿಕೊಂಡಿದ್ದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿಶ್ವಕರ್ಮ ಮಹೋತ್ಸವ ಸಮಿತಿ, ಕೋಲಾರ ಇವರ ಸಹಯೋಗದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋಲಾರ ಜಿಲ್ಲೆಯಲ್ಲಿ ಕಲ್ಲಿಗೆ ಮತ್ತು ಶಿಲ್ಪ ಕಲಾವಿದರಿಗೆ ಉತ್ತಮ ಸಂಬoಧವಿದೆ. ಜಿಲ್ಲೆಯ ಶಿಲ್ಪಕಲೆ ವಿಶ್ವಕ್ಕೆ ತಲುಪಬೇಕು. ಶಿವಾರಪಟ್ಟಣವನ್ನು ಶಿಲ್ಪ ಗ್ರಾಮವನ್ನಾಗಿಸಲು ಎರಡು ಕೋಟಿ ಹಣವನ್ನು ನೀಡಲಾಗಿದೆ. ಬ್ರಹ್ಮಾಂಡದ ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮರವರ ಮಾರ್ಗದರ್ಶನಗಳನ್ನು ಮುಂದಿನ ಪೀಳೆಗೆಗೆ ಸಾರಬೇಕು. ಸಮುದಾಯದ ಯಾವುದೇ ಬೇಡಿಕೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಸಲ್ಲಿಸಿದ್ದಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ನಿಯಮಾನುಸಾರ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ ರವರು ಮಾತನಾಡಿ, ಸಮಾಜದಲ್ಲಿ ಎಲ್ಲರಿಗೂ ಹೊಂದಿಕೊoಡು ಹೋಗುವಂತಹ ಸಮುದಾಯ ವಿಶ್ವಕರ್ಮ ಸಮುದಾಯವಾಗಿದೆ. ವಿಶ್ವಕರ್ಮ ಜನಾಂಗದವರು ಎಲ್ಲಾ ರಂಗದಲ್ಲಿ ಕಾರ್ಯನಿರ್ವಹಿಸುವಂತಹ ವ್ಯಕ್ತಿಗಳಾಗಿರುತ್ತಾರೆ. ವಿಶ್ವಕರ್ಮ ಜಯಂತಿಯನ್ನು ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಮಾತನಾಡಿ, ವಿಶ್ವವನ್ನು ಹಾಗೂ ಸ್ವರ್ಗಲೋಕವನ್ನು ಸೃಷ್ಟಿಸಿದ ವ್ಯಕ್ತಿ ವಿಶ್ವಕರ್ಮ. ಋಗ್ವೇದದಲ್ಲಿ ವಿಶ್ವಕರ್ಮರ ಬಗ್ಗೆ ವಿವರ ಉಲ್ಲೇಖಿಸಲಾಗಿದೆ. ವಿಶ್ವಕರ್ಮರು ಕಲ್ಲನ್ನು ಮೂರ್ತಿಯನ್ನಾಗಿ ಮಾಡುವುದರಿಂದ ಆ ಕಲ್ಲಿನ ಮೂರ್ತಿಯು ಆಕರ್ಷಕವಾಗಿ ಕಾಣುತ್ತದೆ. ವಿಶ್ವಕರ್ಮ ಸಮುದಾಯದ ಯಾವುದೇ ಬೇಡಿಕೆಗಳಿದ್ದಲ್ಲಿ ಕಾನೂನಿನ ರೀತಿಯಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ನಗರದ ಶ್ರೀ ಕಾಳಿಕಾಂಬ ಕಮ್ಮಟೇಶ್ವರ ಸ್ವಾಮಿ ದೇವಾಲಯದ ಬಳಿ ಮೆರವಣಿಗೆಗೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಹಿರಿಯ ಪತ್ರಕರ್ತ ಕಲಾವಿದ ವಿಷ್ಣು ಸೇರಿದಂತೆ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಕೋಲಾರ ಡಿವೈಎಸ್ಪಿ ಮುರಳೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್.ನರೇಂದ್ರಬಾಬು, ಹಿರಿಯ ಪತ್ರಕರ್ತ ಕಲಾವಿದ ವಿಷ್ಣು, ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು