ಕೋಲಾರ, ೬೬ಕೆವಿ ಲಕ್ಷಿö್ಮಪುರ-ಅಡ್ಡಗಲ್ ಮಾರ್ಗದಲ್ಲಿ ಪ್ರಸ್ತಾಪಿತ ೬೬ಕೆವಿ ಜೋಡಿ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯನ್ನು ನಿರ್ವಹಿಸಲು ೨೨೦ಕೆವಿ ಸ್ವೀಕರಣಾ ಕೇಂದ್ರ, ಚಿಂತಾಮಣಿಯಿoದ ಸರಬರಾಜಾಗುವ ಶ್ರೀನಿವಾಸಪುರ ತಾಲ್ಲೂಕು ವ್ಯಾಪ್ತಿಯ ಗೌನಪಲ್ಲಿ ಉಪಕೇಂದ್ರದಿoದ ಗೌನಿಪಲ್ಲಿ, ಮರಸನಪಲ್ಲಿ, ಬೈರಗಾನಪಲ್ಲಿ, ಕೋಡಿಪಲ್ಲಿ, ಅವಗಾನಪಲ್ಲಿ, ಚಿಲ್ಲಾರಪಲ್ಲಿ, ಚೀಲೇಪಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳು, ರಾಯಲ್ಪಾಡು ಉಪಕೇಂದ್ರಗಳಿoದ ರಾಯಲಪಾಡು, ಮುದಿಮೊಡಗು, ಸುಣ್ಣಕಲ್, ಆನೇಪಲ್ಲಿ, ಎಂ.ತುಮಲಪಲ್ಲಿ, ಜಿಂಕಲವಾರಿಪಲ್ಲಿ, ಮಂಜೇವಾರಿಪಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳು, ಅಡ್ಡಗಲ್ ಉಪಕೇಂದ್ರದಿoದ ಅಡ್ಡಗಲ್, ರ‍್ರಂವಾರಿಪಲ್ಲಿ, ಕೂರಿಗೇಪಲ್ಲಿ, ಪೆದ್ದೂರು, ಕದಿರಂಪಲ್ಲಿ, ಮುಡಿವಾರಿಪಲ್ಲಿ, ಮಲ್ಲಿಮೋರಪಲ್ಲಿ, ಕಂಬಾಲಪಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳು ನವೆಂಬರ್ ೧೯ ರಂದು ಬೆಳಿಗ್ಗೆ ೧೦.೦೦ ಗಂಟೆಯಿoದ ಸಂಜೆ ೫.೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕು ಎಂದು ಕೋಲಾರ ಬೆಸ್ಕಾಂ, ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರು ತಿಳಿಸಿದ್ದಾರೆ.