ಕೋಲಾರ, ಶ್ರೀನಿವಾಸಪುರ ಬೆ.ವಿ.ಕಂ ಉಪ ವಿಭಾಗದ ವ್ಯಾಪ್ತಿಯ ಒಳಪಡುವ ಹೊಸ ಆರ್.ತಿಮ್ಮಸಂದ್ರ ೨೨೦ ಕೆ.ವಿ ವಿತರಣಾ ಕೇಂದ್ರöಕ್ಕೆ ಬರುವ ಈ ಮಾರ್ಗವು ತಾಲ್ಲೂಕಿನ ಜೆ.ತಿಮ್ಮಸಂದ್ರ ದೊಡಮಲದೊಡ್ಡಿ, ಆರಿಕುಂಟೆ, ಮಣಿಗಾನಪಲ್ಲಿ, ಕೊತ್ತೂರು, ಬೈಯಪಲ್ಲಿ ಕುಮ್ಮಗುಂಟೆ, ಬೈರಪಲ್ಲಿ, ನಾಗದೇನಪಲ್ಲಿ, ಆವಲಕುಪ್ಪ, ಆರ್.ತಿಮ್ಮಸಂದ್ರ ಗ್ರಾಮಗಳಲ್ಲಿ ಹಾದು ಹೋಗಿರುತ್ತದೆ.
೬೬ ಕೆವಿ ದಳಸನೂರು-ಶ್ರೀನಿವಾಸಪುರ ಮಾರ್ಗವು ನಾಗದೇಪಲ್ಲಿ, ಆವಲಕುಪ್ಪ, ತಿಮ್ಮಸಂದ್ರ ಗ್ರಾಮಗಳಲ್ಲಿ ಹಾದು ಹೋಗಿರುತ್ತದೆ. ಲಕ್ಷಿö್ಮಪು-ಶ್ರೀನಿವಾಸಪುರ ಈ ಮಾರ್ಗವು ೧೩.೪೨ಕಿ.ಮೀ ನಿರ್ಮಿಸಲಾಗಿದ್ದು, ಈ ಮಾರ್ಗವು ತಿಮ್ಮಸಂದ್ರ, ಹೊದಲಿ, ದೇವಲಪಲ್ಲಿ, ದಿಂಬಾಲ, ರೋಣೂರು, ಚೊಕ್ಕರೆಡ್ಡಿಪಲ್ಲಿ, ನಾರಮಾಕಲಹಳ್ಳಿ, ಲಕ್ಷö್ಮಣಪುರ, ಉಪ್ಪರಪಲ್ಲಿ, ಬುರಕಾಯಲಕೋಟೆ, ಪಾತಕೋಟೆ, ಲಕ್ಷಿö್ಮಪುರ ಗ್ರಾಮಗಳಲ್ಲಿ ಹಾದು ಹೋಗಿರುತ್ತದೆ. ಶ್ರೀನಿವಾಸಪುರ-ಚಿಂತಾಮಣಿ-ಲಕ್ಷಿö್ಮಪುರ ಲೈನ್ ರವರೆಗೆ ೩.೨೬ ಕಿ.ಮೀ ಎಂ.ಸಿ.ಎo.ವಿ ನಿರ್ಮಿಸಲಾಗಿದ್ದು, ಈ ಮಾರ್ಗವು ಬೈರಪಲ್ಲಿ, ಕುಮ್ಮಗುಂಟೆ, ನಾಗದೇಪಲ್ಲಿ, ಆವಲಕುಪ್ಪ, ತಿಮ್ಮಸಂದ್ರ ಗ್ರಾಮಗಳಲ್ಲಿ ಹಾದು ಹೋಗಿರುತ್ತದೆ.
ಈ ಮಾರ್ಗಗಳನ್ನು ಅಕ್ಟೋಬರ್ ೦೯ ರಂದು ಅಥವಾ ತದ ನಂತರ ಚಾಲನೆಗೊಳಿಸಲಾಗುವುದು, ಈ ವಿದ್ಯುತ್ ಹರಿಯುವ ತಂತಿಗಳು ಜೀವಕ್ಕೆ ಅಪಾಯಕಾರಿಯಾಗಿರುವುದರಿಂದ ಈ ಗೋಪುರಗಳಿಗೆ ಹತ್ತವುದಾಗಲಿ, ತಂತಿಗಳ ಮೇಲೆ ಲೋಹದ ತುಂಡುಗಳು ಎಸೆಯುವುದಾಗಲಿ, ಗೋಪುರಗಳಿಗೆ ಧನಕರುಗಳನ್ನು ಕಟ್ಟುವುದಾಗಲಿ ಮಾಡಿದ್ದಲ್ಲಿ ಅದರಿಂದ ಉಂಟಾಗುವ ದುಷ್ಟರಿಣಾಮಗಳಿಗೆ ಬೆ.ವಿ.ಕಂ ಯಾವುದೇ ರೀತಿಯ ಜವಾಬ್ದಾರಿಯಾಗಿರುವುದಿಲ್ಲಾ. ಈ ಮಾರ್ಗಗಳು ಹಾದು ಹೋಗಿರುವ ಜಮೀನುದಾರರು ಮಾರ್ಗದ, ಟವರ್ ಮಧ್ಯದಿಂದ ಎರಡೂ ಬದಿ ೧೭.೫ ಮೀಟರ್ (ಒಟ್ಟು ೩೫ ಮೀಟರ್) ಆವರಣದಲ್ಲಿ ಮರಗಿಡಗಳನ್ನು ಬೆಳೆಸುವುದು ಜೀವಕ್ಕೆ ಅಪಾಯಕಾರಿಯಾಗಿರುವುದರಿಂದ ಈ ಅಂತರದಲ್ಲಿ ಯಾವುದೇ ಮರಗಿಡಗಳನ್ನು ಬೆಳೆಸಬಾರದೆಂದು ಬೆ.ವಿ.ಕಂ ಶ್ರೀನಿವಾಸಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.