ವಕೀಲರ ಸಂಘದ ತಾಲೂಕು ಅಧ್ಯಕ್ಷರಾಗಿ ೫ನೇ ಭಾರಿ ಎನ್.ವಿ.ಜಯರಾಮಗೌಡ, ಪ್ರದಾನ ಕಾರ್ಯದರ್ಶಿ ಪಿ.ಸಿ.ನಾರಾಯಣಸ್ವಾಮಿ ಆಯ್ಕೆ

ಶ್ರೀನಿವಾಸಪುರ:- ವಕೀಲರ ಸಂಘದ ತಾಲೂಕು ಅಧ್ಯಕ್ಷರಾಗಿ ಎನ್.ವಿ.ಜಯರಾಮಗೌಡ , ಪ್ರದಾನ ಕಾರ್ಯದರ್ಶಿ ಪಿ.ಸಿ.ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಂಕರಪ್ಪನಾಯಕ್ ತಿಳಿಸಿದರು.
ಶನಿವಾರ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘಕ್ಕೆ ೨ ವರ್ಷದ ಅವಧಿಗೆ ನಡೆದ ಚುನಾವಣೆಯು ನಡೆಯಿತು.
ಒಟ್ಟು ಮತಗಳು ೫೭ ಮತಗಳು ಇದ್ದು, ಅದರಲ್ಲಿ ಒಬ್ಬರು ಗೈರುಹಾಜರಾಗಿ ೫೬ ಮತಗಳು ಚಲಾವಣೆಯಾಗಿದೆ. ಅಧ್ಯಕ್ಷ ಗಾಧೆಗಾಗಿ ಎನ್.ಮಂಜುನಾಥರೆಡ್ಡಿ , ಎನ್.ವಿ.ಜಯರಾಮೇಗೌಡ , ರಾಜಗೋಪಾಲರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಹಾಗೂ ಪ್ರದಾನ ಕಾರ್ಯದರ್ಶಿಗೆ ಪಿ.ಸಿ.ನಾರಾಯಣಸ್ವಾಮಿ, ವಿ.ಅರ್ಜುನ್ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಗಾದೆಗೆ ನಡೆದ ಚುನಾವಣೆಯಲ್ಲಿ ಎನ್.ಮಂಜುನಾಥರೆಡ್ಡಿ ೧೭ , ರಾಜಗೋಪಾಲರೆಡ್ಡಿ ೭ ಮತಗಳು ಅಧ್ಯಕ್ಷರಾಗಿ ಎನ್.ವಿ.ಜಯರಾಮೇಗೌಡ ೩೨ ಮತಗಳು ಪಡೆದು ಜಯಶೀಲರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಗಾದೆಗೆ ಸಂಬoದಿಸಿದoತೆ ಪಿ.ಸಿ.ನಾರಾಯಣಸ್ವಾಮಿ ೩೦ ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಖಜಾಂಚಿಯಾಗಿ ಅವಿರೋಧ ಆಯ್ಕೆಯಾಗಿ ಬಿ.ವೆಂಕಟೇಶ್, ಉಪಾಧ್ಯಕ್ಷರಾಗಿ ಟಿ.ವಿ.ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾದ ಎನ್.ವಿ.ಜಯರಾಮೇಗೌಡ ಮಾತನಾಡಿ ನನ್ನ ಆಯ್ಕೆಗಾಗಿ ಸಹಕರಿಸಿದ ಎಲ್ಲಾ ವಕೀಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಲ್ಲದೆ ನನ್ನನ್ನು ೫ ಬಾರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದುಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ಎಲ್ಲ ವಕೀಲರನ್ನು ವಿಶ್ವಾಸಕ್ಕೆ ತೆಗದುಕೊಂಡು ಸಂಘದ ಅಭಿವೃದ್ಧಿಗಾಗಿ ಶ್ರಮಿಸಿ, ಮಾದರಿ ಸಂಘವನ್ನಾಗಿ ಮಾಡುತ್ತೇನೆ ಎಂದರು.
ಪ್ರದಾನ ಕಾರ್ಯದರ್ಶಿ ಪಿ.ಸಿ.ನಾರಾಯಣಸ್ವಾಮಿ ಮಾತನಾಡಿ ಪಟ್ಟಣದ ಹೊರವಲಯದ ಕಲ್ಲೂರು ಗ್ರಾಮದ ಬಳಿ ನೂತನ ನ್ಯಾಯಾಲಯ ಕಟ್ಟಡ ಕಾಮಗಾರಿ ನಿರ್ಮಾಣವಾಗುತ್ತಿದೆ. ಉತ್ತಮ ಸೇವೆ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಕೋವಿಡ್‌ನಿಂದಾಗಿ ಕಳೆದ ಮೂರು ವರ್ಷಗಳಿಂದಲೂ ಸರ್ಕಾರದಿಂದ ಯಾವುದೇ ಸಮರ್ಪಕವಾಗಿ ಅನುದಾನಗಳು ಬಂದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನಗಳನ್ನು ಪಡೆದು, ಹಿರಿಯ,ಕಿರಿಯ ವಕೀಲರ ಸಲಹೆ ಪಡೆದು, ವಕೀಲರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಕೀಲರಾದ ನಟರಾಜು, ಶ್ರೀನಿವಾಸಶೆಟ್ಟಿ, ವೆಂಕಟೇಶ್, ವೆಂಕಟಾಚಲಪತಿ, ಎನ್.ಶ್ರೀನಿವಾಸಗೌಡ, ಹರೀಶ್.ಎಮ್, ಮಂಚಿನೀಳ್ಳಕೋಟೆ ಮುನಿರಾಜು, ಸೌಭಾಗ್ಯಮ್ಮ, ರಾಧಕೃಷ್ಣ, ವಿನಯ್‌ಕುಮಾರ್, ಜಿ.ವಿ.ವೆಂಕಟರಮಣ, ಗೆಂಗಿರೆಡ್ಡಿ, ಕೆ.ಎನ್.ಇಂದುಧರ್, ಎಚ್.ಎಂ.ವೆoಕಟೇಶ್, ಎಸ್.ಕೆ.ವೆಂಕಟರಮಣ, ಶಿವಶಂಕರ್, ಸಂತೋಷ್, ಮೂರ್ತಿ, ಅಶ್ವತರೆಡ್ಡಿ, ಜೊನ್ನಪಲ್ಲಿ ಮುನಿರಾಜು, ಜೊನ್ನಪಲಿ ವೆಂಕಟೇಶ್, ಎಮ್.ಮುರಳಿ, ಬಿ.ಜಿ.ಮುರಳಿ, ಲೋಕೇಶ್, ಮಹಮಧ್ ಜಾಫರ್, ಉಪಸ್ಥತಿರಿದ್ದರು.

Leave a Reply

Your email address will not be published. Required fields are marked *