ವಕೀಲರ ರಕ್ಷಣಾ ಕಾಯ್ದೆ ಜಾರಿಯಾಗಲಿ : ಆಲ್ ಇಂಡಿಯಾ ಅಡ್ವೋಲೇಟ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಕೀಲ ಕೆ.ನರೇಂದ್ರಬಾಬು

ಕೋಲಾರ: ವಕೀಲರ ರಕ್ಷಣಾ ಕಾಯ್ದೆಯನ್ನು ಈ ಕೂಡಲೇ ರಾಜ್ಯ ಸರ್ಕಾರವು ಜಾರಿ ಮಾಡಲಿ ಎಂದು ಆಲ್ ಇಂಡಿಯಾ ಅಡ್ವೋಲೇಟ್ಸ್ ಅಸೋಸಿಯೇಷನ್‌ನ ಕೋಲಾರ ಜಿಲ್ಲಾಧ್ಯಕ್ಷ ವಕೀಲ ಕೆ.ನರೇಂದ್ರಬಾಬು ಆಗ್ರಹಿಸಿದರು.
ಕ್ರಿಮಿನಲ್, ಸಿವಿಲ್, ವೈವಾಹಿಕ, ಔಧ್ಯೋಗಿಕ, ಕಾರ್ಮಿಕ, ಆಡಳಿತಾತ್ಮಕ, ಕಂದಾಯ ಇಲಾಖೆ ಸಂಬAಧಿತ, ಇತರೆ ಯಾವುದೇ ವ್ಯಾಜ್ಯ ನಿರ್ಮಾಣವಾದರೂ ವಕೀಲರ ಅನಿವಾರ್ಯತೆ ಮೂಡುತ್ತದೆ. ಆದರೆ ಒಮ್ಮೊಮ್ಮೆ ಕಕ್ಷಿದಾರರೇ ತಮ್ಮ ವಕೀಲರ ಮೇಲೆ ಅಥವಾ ಎದುರುದಾರರು ತಮ್ಮ ಎದುರು ವಕೀಲರ ಮೇಲೆ ಹಲ್ಲೆ ಮಾಡುವ, ಅವರ ಘನತೆ-ಗೌರವವಕ್ಕೆ ಧಕ್ಕೆ ತರುವ, ಅವರ ಕುಟುಂಬ ವರ್ಗದವರ ವಿರುದ್ಧವೂ ಅಪರಾಧಿಕ ಕಾರ್ಯಾಚರಣೆ ನಡೆಸುವ ಸಂಭವಗಳು ಸಾಕಷ್ಟಿವೆ. ಇದಲ್ಲದೇ ವೃತ್ತಿಪರ ವಕೀಲರ ಮೇಲೆ ಪೊಲೀಸರು ಅಥವಾ ಇತರೆ ಇಲಾಖೆಗಳ ಅಧಿಕಾರಿ-ಸಿಬ್ಬಂದಿಯೂ ಹಲ್ಲೆ ನಡೆಸುವ, ವೃಥಾ ಸುಳ್ಳು ಆರೋಪ ಮಾಡುವ ಸಂಭವವೂ ಇವೆ. ಇವೆಲ್ಲಕ್ಕೂ ಪರಿಹಾರ ವಕೀಲರ ರಕ್ಷಣಾ ಕಾಯ್ದೆ ಜಾರಿಯೇ ಆಗಿದೆ ಎಂದರು.
ಬಹುತೇಕ ಪ್ರಕರಣ, ದಾವೆಗಳಲ್ಲಿ ವಕೀಲರು ದಾವಾಸ್ತಿಯನ್ನು ನೋಡಬೇಕಾದ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ವಕೀಲರ ಇಂಥ ಭೇಟಿ ಸಮಯಗಳಲ್ಲಿ ಅವರ ಮೇಲೆ ಹಲ್ಲೆಗಳು ನಡೆದ ಪ್ರಕರಣಗಳು ಸಾಕಷ್ಟಿವೆ. ಕೆಲವೊಮ್ಮೆ ವಕೀಲರು ತಮ್ಮ ಕರ್ತವ್ಯದ ಮೇರೆಗೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆ ನಡೆದ, ಅವಮಾನಿಸಿದ, ಸುಳ್ಳು ದೂರು ದಾಖಲಿಸಿದ, ಬಂಧಿಸಿದ, ಚಿತ್ರಹಿಂಸೆ ನೀಡಿದ, ಅವರ ಘನತೆ-ಗೌರವವನ್ನು ಹಾಳುಗೆಡವಿದೆ ನಿಧರ್ಶನಗಳೂ ಇವೆ. ಹೀಗಾಗಿ ವಕೀಲರ ರಕ್ಷಣಾ ಕಾಯ್ದೆ ಇಂಥ ಅಭಾಸಗಳಿಗೆ ಕಡಿವಾಣವಾಗುತ್ತದೆ ಎಂದು ತಿಳಿಸಿದರು.
ವಕೀಲರು ತಮ್ಮ ಕಾರ್ಯನಿಮಿತ್ತ ಕಂದಾಯ ಇಲಾಖೆ, ಆಸ್ಪತ್ರೆ, ಇನ್ನಿತರೆ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕೆಲಸದ ಒತ್ತಡವನ್ನು ಪರಿಗಣನೆಗೆ ತೆಗೆದುಕೊಳ್ಳದೇ ವೃಥಾ ಕಾಯಿಸಿದ, ಕೊನೆಗೆ ಅವರಿಗೆ ಬೇಟಿಗೆ ಅವಕಾಶ ನೀಡದ, ಅವರು ಕೋರಿದ ದಾಖಲೆಗಳನ್ನು ನೀಡದ, ದಾಖಲೆಗಳು ಲಭ್ಯವಿದ್ದರೂ ನೀಡುವುದಕ್ಕೆ ವೃಥಾ ಕಾಲಹರಣ ಮಾಡಿದ, ದಾಖಲೆಗಳು ಲಭ್ಯವಿದ್ದರೂ ಇಲ್ಲವೆಂದು ತಿಳಿಸಿದ, ದಾಖಲೆಗಳನ್ನು ನೀಡುವುದಕ್ಕೆ ಅಥವಾ ನೋಡುವುದಕ್ಕೆ ಮೇಲಾಧಿಕಾರಿಗಳ ಅನುಮತಿಯನ್ನು ಪಡೆದುಕೊಳ್ಳಿ ಎಂದು ವೃಥಾ ಕಿರುಕುಳ ನೀಡಿದ ಉಧಾಹರಣೆಗಳು ಪ್ರತಿದಿನವೂ ಸಂಭವಿಸುತ್ತಿವೆ ಎಂದರು.
ವಕೀಲರು ಅನಾರೋಗ್ಯಕ್ಕೆ ಈಡಾದಾಗ, ಅಪಘಾತ-ಪಾರ್ಶ್ವವಾಯು-ಅಂಗವೈಕಲ್ಯತೆಗೆ ಈಡಾದಾಗ ಅವರಿಗೆ ಚಿಕಿತ್ಸೆಗೆ, ಆರ್ಥಿಕ ನೆರವಿಗೆ ವಿಶೇಷ ಆಧ್ಯತೆ ನೀಡುವುದು ಅತ್ಯಗತ್ಯವಿದೆ. ವಿಮಾನ-ರೈಲು-ಬಸ್ ಸಂಚಾರಕ್ಕೂ ಅವರನ್ನು ಆಧ್ಯತಾ ವಲಯಕ್ಕೆ ಸೇರಿಸುವುದು ಅತ್ಯಗತ್ಯವಿದೆ. ಏಕೆಂದರೆ ರಾಷ್ಟçದಲ್ಲಿ ನ್ಯಾಯಾಂಗಕ್ಕೆ ಇಚ್ಛಸ್ಥಾನವನ್ನು ಕಲ್ಪಿಸಿದೆ. ಹೀಗಾಗಿ ನ್ಯಾಯಪ್ರಕ್ರಿಯೆಯಲ್ಲಿರುವ ವಕೀಲರಿಗೂ ಆಧ್ಯತಾವಲಯಕ್ಕೆ ಸೇರಿಸುವುದು ಅನಿವಾರ್ಯವಿದೆ. ವಕೀಲರ ಮಕ್ಕಳ ವಿದ್ಯಾಭ್ಯಾಸಕ್ಕೆ, ಔಧ್ಯೋಗಿಕತೆಗೆ, ವಕೀಲರ ರಕ್ಷಣಾ ಕಾಯ್ದೆ ನಾಂದಿಯಾಗಿರಲಿ, ವಕೀಲರಲ್ಲಿ ದಲಿತ ವಕೀಲರಿಗೆ ನೈತಿಕ ಬೆಂಬಲ ನೀಡುವುದು, ಅವರನ್ನೂ ನ್ಯಾಯಪ್ರಕ್ರಿಯೆಯ ಮುಖ್ಯವಾಹಿನಿಗೆ ತರುವುದಕ್ಕೆ ವಕೀಲರ ರಕ್ಷಣಾ ಕಾಯ್ದೆ ವೇದಿಕೆಯಾಗಬೇಕು ಎಂದು ಒತ್ತಾಯಿಸಿದರು.
ಹೀಗಾಗಲೇ ರಾಜ್ಯ ಪ್ರಮುಖ, ಹಿರಿಯ ವಕೀಲರು ವಕೀಲರ ರಕ್ಷಣಾ ಕಾಯ್ದೆಯ ಕರಡು ಪ್ರತಿಯನ್ನು ರಚಿಸಿ ಸರ್ಕಾರದ ಅವಗಾಹನೆಗೆ ತಂದಿದ್ದಾರೆ. ಆದರೆ ಅದನ್ನು ಜಾರಿಗೊಳಿಸುವುದಕ್ಕೆ ಸರ್ಕಾರ ಕಾಲವಿಳಂಬ ಮಾಡುವುದು ಶೋಭೆಯಲ್ಲ ಎಂದರು.

Leave a Reply

Your email address will not be published. Required fields are marked *