ಕೋಲಾರ, ಬಜೆಟ್ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ಘೊಷಣೆ ಮಾಡಬೇಕೆಂದು ರೈತ ಸಂಘದಿoದ ನೂತನ ಜಿಲ್ಲಾಧಿಕಾರಿ ಆಕ್ರಂ ಪಾಷ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಬೆಂಗಳೂರಿಗೆ ಕೂಗಳತೆಗೆ ದೂರದಲ್ಲಿರುವ ಜಿಲ್ಲೆಯನ್ನು ಪ್ರತಿ ಸರ್ಕಾರಗಳು ಉಸ್ತುವಾರಿ ನೇಮಕಾತಿಯಿಂದ ಹಿಡಿದು ಬಜೆಟ್ನಲ್ಲಿ ವಿಶೇಷ ಅನುಧಾನ ನೀಡುವಲ್ಲಿ ವಿಪಲವಾಗಿದ್ದರೂ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರುವಲ್ಲಿ ಶಾಸಕರಿಗೆ ಮನಸಿಲ್ಲವೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ,ನಾರಾಯಣಗೌಡ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ನಕಲಿ ಬಿತ್ತನೆ ಬೀಜ,ರಸಗೊಬ್ಬರ ,ಔಷಧಿಗಳ ಮಾರಾಟ ದಂದೆಯಿoದ ರೈತರು ಲಕ್ಷ ಲಕ್ಷ ಬಂಡವಾಳ ಕೃಷಿಯಲ್ಲಿ ನಷ್ಟ ಹೊಂದುತ್ತಿದ್ದರೆ ಮಾರುಕಟ್ಟೆಯ ಜಾಗದ ಸಮಸ್ಯೆ ಮಾವು, ಟೊಮೋಟೋ , ರೇಷ್ಮೆ, ಬೆಲೆ ಕುಸಿತದಿಂದ ಕಂಗಲಾಗಿರುವ ರೈತರ ನೆರವಿಗೆ ಬಜೆಟ್ನಲ್ಲಿ ಸರ್ಕಾರ ನಿಲ್ಲಬೇಕಾಗಿದೆ ಎಂದು ಒತ್ತಾಯಿಸಿದರು.
ಕೆ.ಸಿ ವ್ಯಾಲಿ ಮೂರನೇ ಹಂತದ ಶುದ್ದೀಕರಣ, ಯರಗೋಳ್ ಉದ್ಘಾಟನೆ, ಗಡಿಭಾಗದ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಮತ್ತು ಕೃಷಿ ಆದಾರಿತ ಮಾವು ಸಂಸ್ಕರಣ ಘಟಕಗಳ ಸ್ಥಾಪನೆಗೆ ಬಜೆಟ್ನಲ್ಲಿ ಅನುದಾನ ಬಿಡುಗಡೆಗೆ ಒತ್ತಾಯ ಮಾಡಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಮಹಿಳಾ ಸಮಾವೇಶದಲ್ಲಿ ನೀಡಿರುವ ಮಾತಿನಂತೆ ಸಹಕಾರ ಸಂಘಗಳ ಮಹಿಳೆಯರ ಸಾಲ ಮನ್ನಾ ಮಾಡಬೇಕು. ರಸ್ತೆ, ಕೆರೆ , ರಾಜಕಾಲುವೆ ಅಭಿವೃದ್ದಿಗೆ ಆದ್ಯತೆ ನೀಡುವ ಜೊತೆಗೆ ಒತ್ತುವರಿ ತೆರೆವುಗೊಳಿಸಲು ವಿಶೇಷ ಕಾನೂನು ಜಾರಿ ಮಾಡಬೇಕೆಂದರು.
ಕೃಷಿ ಭಾಗ್ಯ, ಪಶುಭಾಗ್ಯ ಯೋಜನೆಗಳನ್ನು ಮುಂದುವರೆಸಿ ಆಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವ ಜೊತೆಗೆ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಮತ್ತು ಚೆನ್ನೆ ಕಾರಿಡಾರ್ ಅಭಿವೃದ್ದಿಗೆ ಭೂಮಿ ಕಳೆದುಕೊಂಡಿರುವ ರೈತರ ಮರಗಿಡಗಳ ಪರಿಹಾರ ವಿತರಣೆ ಮಾಡಲು ಸೂಚನೆ ಮಾಡಬೇಕೆಂದು ಆಗ್ರಹಿದರು.
ಒತ್ತುವರಿದಾರರಿಂದ ಸರ್ಕಾರಿ ಆಸ್ತಿಗಳನ್ನು ಉಳಿಸಲು ಇರುವ ಭೂಕಬಳಿಕೆ ನ್ಯಾಯಾಲಯದ ವ್ಯಾಪ್ತಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು, ಕೈಗಾರಿಕೆಗಳಲ್ಲಿ ಸ್ಥಳಿಯರಿಗೆ ಉದ್ಯೋಗ ನೀಡಲು ಕಾನೂನು ಜಾರಿ ಮಾಡುವ ಜೊತೆಗೆ ಎ.ಪಿ.ಎಂ.ಸಿ, ಭೂ ಸುದಾರಣೆ ಕಾಯ್ದೆ, ವಿದ್ಯುತ್ ಕಾಯ್ದೆಯನ್ನು ವಾಪಸ್ ಪಡೆದು ಎ,ಪಿ,ಎಂ,ಸಿ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡುವಂತೆ ಮಾನ್ಯ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದರು
ಮನವಿ ಸ್ವೀಕರಿಸಿ ಮಾತನಾಡಿದ ನೂತನ ಜಿಲ್ಲಾಧಿಕಾರಿಳಾದ ಆಕ್ರಂ ಪಾಷ ರವರು ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾ.ಪ್ರ.ಕಾ ಪಾರುಕ್ಪಾಷ, ವಕ್ಕಲೇರಿ ಹನುಮಯ್ಯ, ಕೆ.ಇ.ಬಿ ಚಂದ್ರು, ಕಿರಣ್, ಮಂಜುಳಾ, ಕಾವ್ಯ, ಮಾ.ತಾ.ಅ ಯಲ್ಲಪ್ಪ, ನಟರಾಜ್, ಗೋವಿಂದಪ್ಪ, ರಾಮಸಾಗರ ವೇಣು, ಸುರೇಶ್ಬಾಬು , ಮಂಗಸoದ್ರ ತಿಮ್ಮಣ್ಣ, ಬಂಗಾರಿ ಮಂಜು, ಸುನಿಲ್ಕುಮಾರ್, ಭಾಸ್ಕರ್, ರಾಜೇಶ್, ವಿಜಯ್ಪಾಲ್, ಹೆಬ್ಬಣಿ ಆನಂದರೆಡ್ಡಿ, ವಿಶ್ವನಾಥ್, ಯಾರಂಘಟ್ಟ ಗೀರೀಶ್, ಚಾಂದ್ಪಾಷ, ಜಾವೇದ್ ಹರೀಶ್, ಅಪ್ಪೋಜಿರಾವ್, ಮುಂತಾದವರಿದ್ದರು.