ರೈತರಿಂದ ರಾಗಿ/ಭತ್ತ ಖರೀದಿ ಪ್ರಕ್ರಿಯೆ ನೋಂದಣಿ ಡಿಸೆಂಬರ್ ೧೫ ರಿಂದ ಪ್ರಾರಂಭ


ಕೋಲಾರ, ರ‍್ಕಾರದ ಕನಿಷ್ಟ ಬೆಂಬಲ ಯೋಜನೆಯಡಿಯಲ್ಲಿ ರೈತರಿಂದ ರಾಗಿ/ಭತ್ತ ಖರೀದಿ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು, ಕೋಲಾರ ಜಿಲ್ಲೆಗೆ ರ‍್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯನ್ನು ಖರೀದಿ ಏಜೆನ್ಸಿಯಾಗಿ ನಿಯೋಜಿಸಲಾಗಿದೆ. ನೋಂದಾವಣಿಯನ್ನು ಡಿಸೆಂಬರ್ ೧೫ ರಿಂದ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಟಾಸ್ಕ್ಫ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ಕ್ವಿಂಟಾಲ್ ರಾಗಿಗೆ ೩೫೭೮/- ರೂ.ಗಳನ್ನು ಮತ್ತು ಭತ್ತ ಸಾಮಾನ್ಯ ೨೦೪೦/- ರೂ.ಗಳನ್ನು ಭತ್ತ ಗ್ರೇಡ್-ಎ ೨೦೬೦/- ರೂ.ಗಳನ್ನು ರ‍್ಕಾರವು ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ರೈತರಿಂದ ಪ್ರತಿ ಎಕರೆಗೆ ೧೦ ಕ್ವಿಂಟಾಲ್‌ನಂತೆ ಗರಿಷ್ಟ ೨೦ ಕ್ವಿಂಟಾಲ್ ವರೆಗೆ ರಾಗಿಯನ್ನು ಖರೀದಿ ಮಾಡಲಾಗುತ್ತದೆ. ಆದೇ ರೀತಿ ಭತ್ತವನ್ನು ಪ್ರತಿ ರೈತರಿಂದ ಉತ್ಪಾದನೆಯ ಅನುಗುಣವಾಗಿ ಪ್ರತಿ ಎಕರೆಗೆ ೨೫ ಕ್ವಿಂಟಾಲ್‌ನಂತೆ ಗರಿಷ್ಠ ೪೦ ಕ್ವಿಂಟಾಲ್ ಮೀರದಂತೆ ಖರೀದಿಸಲಾಗುವುದು. ರೈತರು ಕೃಷಿ ಇಲಾಖೆಯಿಂದ ಈಗಾಗಲೇ ನೀಡಿರುವ FRUITS ID ಯನ್ನು ಖರೀದಿ ಕೇಂದ್ರಗಳಿಗೆ ತಂದು ನೋಂದಣಿ ಮಾಡಿಸಿಕೊಂಡು ತಾವು ಬೆಳೆದ ರಾಗಿ/ಭತ್ತವನ್ನು ಮಾರಾಟ ಮಾಡಬಹುದಾಗಿರುತ್ತದೆ ಎಂದು ತಿಳಿಸಿದರು.
ರೈತರು ನೋಂದಣಿ ಮಾಡಿಸಿಕೊಂಡ ತರುವಾಯ ರಾಗಿ/ಭತ್ತ ಖರೀದಿ ಕೇಂದ್ರಕ್ಕೆ ರೈತರು ತಂದು ರಾಗಿ/ಭತ್ತವನ್ನು ಕೃಷಿ ಇಲಾಖೆಯಿಂದ ನೇಮಿಸಿದ ಗ್ರೇಡರ್‌ಗಳಿಂದ ಪರೀಕ್ಷಿಸಿ, ಗುಣಮಟ್ಟದ ಪ್ರಮಾಣ ಪತ್ರವನ್ನು ಪಡೆದು ರಾಗಿ/ಭತ್ತವನ್ನು ದಿನಾಂಕ: ೩೧-೦೩-೨೦೨೩ ರವರೆವಿಗೂ ಖರೀದಿಸಲಾಗುವುದು ಅನಂತರ ಆನ್‌ಲೈನ್ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಎಂದರು.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನರ‍್ದೇಶಕಿ ಶುತಿ.ಎಂ.ಕೆ ಅವರು ಮಾತನಾಡಿ ನೋಂದಾಯಿತ ರೈತರಿಂದ ದಿನಾಂಕ: ೦೧-೦೧-೨೦೨೩ ರಿಂದ ೩೧-೦೩-೨೦೨೩ ರವರೆಗೆ ರಾಗಿ/ಭತ್ತವನ್ನು ಖರೀದಿಸಲಾಗುತ್ತದೆ ಎಂದರು.
ರಾಗಿ/ಭತ್ತದ ಖರೀದಿ ಕೇಂದ್ರಗಳು ಹಾಗೂ ಖರೀದಿ ಅಧಿಕಾರಿಗಳ ಹೆಸರು ಮತ್ತು ವಿಳಾಸ ಈ ರೀತಿ ಇರುತ್ತದೆ. ಮಾಲೂರು ಸಗಟು ಮಳಿಗೆ, ಇಂಡಸ್ಟಿçಯಲ್ ಏರಿಯ, ಹೊಸೂರು ಮುಖ್ಯ ರಸ್ತೆ, ಮಾಲೂರು ಜೆ.ವಿ.ರಾಜಪ್ಪ ಮೊ.ಸಂ: ೯೯೬೪೭೦೮೨೨೭೬, ಬಂಗಾರಪೇಟೆ ಸಗಟು ಮಳಿಗೆ, ಕೆ.ಸಿ.ರೆಡ್ಡಿ ಕಾಲೇಜು ಹತ್ತಿರ, ಸೂಲಿ ಕುಂಟೆ ರಸ್ತೆ, ಬಂಗಾರಪೇಟೆ ಕಲೀಂ ಉಲ್ಲಾ ಷರೀಫ್ ಮೊ.ಸಂ: ೯೯೪೫೦೬೬೦೪೩, ಮುಳಬಾಗಿಲು ಸಗಟು ಮಳಿಗೆ, ಎ.ಪಿ.ಎಂ.ಸಿ ಯರ‍್ಡ್, ಮುಳಬಾಗಿಲು ಎಸ್.ಎನ್.ವೆಂಕಟೇಶ್ ಮೊ.ಸಂ: ೯೩೪೩೧೪೭೪೬೦, ಶ್ರೀನಿವಾಸಪುರ ಸಗಟು ಮಳಿಗೆ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ, ಶ್ರೀನಿವಾಸಪುರ ಜೆ.ವಿ.ರಾಜಪ್ಪ ಮೊ.ಸಂ: ೯೯೬೪೭೦೮೨೨೭೬, ಕೋಲಾರ ಸಗಟು ಮಳಿಗೆ, ಗದ್ದೆಕಣ್ಣೂರು ಗ್ರಾಮ, ಕೋಲಾರ ಎಂ.ಆರ್.ನಾಗರಾಜ್ ಮೊ.ಸಂ: ೯೪೪೮೩೧೦೪೯೧, ಕೆ.ಜಿ.ಎಫ್ ಸಗಟು ಮಳಿಗೆ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ, ಕೆ.ಜಿ.ಎಫ್ ಎ.ಶ್ರೀನಿವಾಸ್ ಮೊ.ಸಂ: ೯೯೮೬೫೯೦೬೦೦.
ಹೆಚ್ಚಿನ ಮಾಹಿತಿಗಾಗಿ ರ‍್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಕಚೇರಿಯ ದೂ. ೦೮೧೫೨-೨೨೨೬೧೪, ಜಿಲ್ಲಾ ವ್ಯವಸ್ಥಾಪಕರ ಮೊ. ಸಂಖ್ಯೆ ೯೪೪೮೪೯೬೦೨೭ ಸಂರ‍್ಕಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಹೆಚ್.ಸಿ.ಚೌಡೇಗೌಡ, ಕಛೇರಿ ವ್ಯವಸ್ಥಾಪಕ ಹೆಚ್.ಸಿ. ಶ್ರೀಕಾಂತ್, ಕಿರಿಯ ಸಹಾಯಕ ಎಸ್.ಎನ್.ರಮೇಶ್, ಆಹಾರ ಇಲಾಖೆಯ ವ್ಯವಸ್ಥಾಪಕ ಸುಬ್ರಮಣ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *