ಶ್ರೀನಿವಾಸಪುರ, ಕಾಂಗ್ರೆಸ್ , ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಮುಳಗುವ ಪಕ್ಷಗಳಾಗಿವೆ. ರಾಜ್ಯದ ಜನತೆ ಈ ಭಾರಿ ಎರಡು ಪಕ್ಷಗಳನ್ನು ದಿಕ್ಕರಿಸುತ್ತವೆ ಎಂದು ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿನ ಪುಂಗನೂರು ಕ್ರಾಸ್‌ನ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಒಂದು ಪುಕ್ಕಲ ಪಕ್ಷ. ಕಾಂಗ್ರೆಸ್ ಪಕ್ಷ ಯಾವ ರ್ದುಗತಿಗೆ ಬಂದಿದೆ ಎಂದರೆ ಪಕ್ಷದ ನೀತಿಗಳು, ದುರಾಡಳಿತವೇ ಕಾರಣ . ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತವಾರಿ ರಣದೀಪ್‌ಸಿಂಗ್ ಸರ್ಜೇವಾಲರವರು ಗೊಡ್ಡು ಬೆದರಿಕೆಗೆ ಸೂರ್ಯ ಹುಟ್ಟುವ ಮುಂಚೆಯೇ ಕ್ಷೇತ್ರದ ಶಾಸಕ ಮನೆಬಾಗಿಲಿಗೆ ಬಂದಿರುವು ವಿರ್ಪಯಾಸವೇ ಸರಿ ಎಂದು ವ್ಯಾಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ತ್ಯಾಗದ ಪದಕ್ಕೆ ಅರ್ಥ ಗೊತ್ತಿಲ್ಲ. ಬಿಜೆಪಿ ಪಕ್ಷವು ತ್ಯಾಗದ ಪಕ್ಷ . ಬಿಜೆಪಿ ಪಕ್ಷದಲ್ಲಿ ವಾಜಪೇಯಿ, ಅಡ್ವಾನಿ, ಮುರಳಿಮನೋಹ ಜೋಷಿ ಯಂತಹ ಮಹಾನ್ ನಾಯಕರು ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ.
ರಾಜ್ಯದಲ್ಲಿ ಕುಟುಂಬ ರಾಜಕಾರಣ, ವಂಶ ರಾಜಕಾರಣಕ್ಕೆ ತಿಲಾಂಜಲಿ ಆಡುವ ನಿಟ್ಟಿನಲ್ಲಿ ಬಿಜೆಪಿ ಪಕ್ಷವು ಶಪಥ ತೊಟ್ಟಿದ್ದಾರೆ ಹಾಗೂ ಪ್ರತಿಜ್ಞೆ ಮಾಡಿದ್ದಾರೆ.
೨ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಿದ್ದರಾಮಯ್ಯರವರನ್ನ ಕೋಲಾರಲ್ಲಿ ನಿಲ್ಲಲು ಶತಪ್ರಯತ್ನ ಮಾಡಿದರು . ಸಿದ್ದರಾಮಯ್ಯ ಮುಖ್ಯ ಮಂತ್ರಿ ಮಾಡಲು ಅಲ್ಲ . ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ತಾವು ಗೆಲ್ಲಲು ಅಸ್ತ ಮಾಡಿಕೊಂಡಿದ್ದರು. ಸಿದ್ದರಾಮಯ್ಯರವರು ಈ ಜಿಲ್ಲೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಮೊದಲೇ ಗೊತ್ತಿತ್ತು. ಆದರೆ ಇದರಿಂದ ಘಟಬಂದನ್ ನಾಯಕರಿಗೆ ಮುಖಭಂಗವಾಗಿದೆ .
ಬಿಜೆಪಿ ಪಕ್ಷದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ.ನಮ್ಮ ಹೆಡ್ ಮಾಸ್ಟರ್ ಹಾಗೂ ನಮ್ಮ ಕುಟುಂಬದ ಯಜಮಾನರು ಗಟ್ಟಿಯಾಗಿದ್ದಾರೆ. ಈ ಕ್ಷೇತ್ರಕ್ಕೆ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ನಾವು ಏಕಪಕ್ಷೀಯವಾಗಿ ಯಾವುದೇ ನಿರ್ಧರ ತೆಗೆದುಕೊಳ್ಳುವುದಿಲ್ಲ. ಈ ಭಾರಿ ಗುಂಜೂರು ಆರ್.ಶ್ರೀನಿವಾಸರೆಡ್ಡಿಯವರನ್ನು ಮತದಾರರು ಗೆಲ್ಲಿಸುತ್ತಾರೆ ಎಂದು ನಂಬಿಕೆ ಇದ್ದು, ಈ ಭಾರಿ ಶ್ರೀನಿವಾಸರೆಡ್ಡಿ ಗೆಲ್ಲಿಸಿ ನನ್ನ ಜೊತೆ ವಿಧಾನಸೌದಕ್ಕೆ ಕರೆದು ಕೊಂಡು ಹೋಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಗುಂಜೂರು ಆರ್.ಶ್ರೀನಿವಾಸರೆಡ್ಡಿ, ಮುಖಂಡರಾದ ಲಕ್ಷಣಗೌಡ, ರಾಜಶೇಖರರೆಡ್ಡಿ, ಪೆದ್ದರೆಡ್ಡಿ ರಾಜೇಂದ್ರಪ್ರಸಾದ್, ಈ. ಶಿವಣ್ಣ, ಅಶೋಕ್‌ರೆಡ್ಡಿ, ಕೊಟ್ರಗುಲಿ ನಾರಾಯಣಸ್ವಾಮಿ, ಪುರಸಭೆ ನಾಮನಿರ್ದೇಶಿತ ಸದಸ್ಯ ರಮೇಶ್, ವಕೀಲ ನಾಗರಾಜ್, ಬಂಗವಾದಿ ನಾಗರಾಜ್, ಯಲ್ದೂರು ಪದ್ಮನಾಭ್, ಯಚ್ಚನಹಳ್ಳಿ ರಮೇಶ್, ಬಲ್ತಮರಿ ರೆಡ್ಡಪ್ಪ ಇನ್ನೂ ಹಲವಾರು ಮುಖಂಡರು ಇದ್ದರು.