ರಮೇಶ್ ಕುಮಾರ್ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ವಿವಿದ ಪಕ್ಷಗಳಿಂದ ಸುಮಾರು ೨೦೦ ಕುಟುಂಬಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಶ್ರೀನಿವಾಸಪುರ: ರಾಹುಲ್ ಗಾಂದಿಯವರನ್ನು ನರೇಂದ್ರ ಮೋದಿ ನೇತೃತ್ವ ಕೇಂದ್ರಸರ್ಕಾರ ನಡೆಸಿಕೊಂಡ ರೀತಿ ಬಾರತದ ಸಂವಿದಾನಾತ್ಮಕ ಪ್ರಜಾ ಪ್ರಭುತ್ವದ ಅತ್ಯಂತ ಕರಾಳದಿನ ಎಂದು ಮಾಜಿ ಸ್ಪೀಕರ್ ಹಾಗು ಶಾಸಕ ಕೆ.ಆರ್ ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಮಾರುತಿ ಸಬಾಭವನದಲ್ಲಿ ರಮೇಶ್ ಕುಮಾರ್ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ವಿವಿದ ಪಕ್ಷಗಳಿಂದ ಸುಮಾರು ೨೦೦ ಕುಟುಂಬಗಳು ಹಾಗು ಪುರಸಭಾ ಮಾಜಿ ಅದ್ಯಕ್ಷ ಬಿ.ಎಂ ಪ್ರಕಾಶ್ ನೇತೃತ್ವದಲ್ಲಿ ೪೦ ಕುಟುಂಬಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ರಮೇಶ್ ಕುಮಾರ್ ಈಗಿನ ಮೋದಿ ಸರ್ಕಾರ ದೇಶ ಹಾಗು ಒಲಸು ರಾಜಕೀಯಕ್ಕೆ ನ್ಯಾಯಾಂಗ ಹಾಗು ಶಾಸಕಾಂಗಗಳ ದುರ್ಬಳಕೆ ಮಾಡಿಕೊಂಡು ಬಿಜೆಪಿ ಎಂಬ ಪಕ್ಷ ವಿಶ್ವ ಮಟ್ಟದಲ್ಲಿ ಬಾರತದ ಸಾರ್ವಬೌಮತ್ವವನ್ನು ಅವಮಾನಿಸಿದೆ, ಅಮಾನತ್ತ್ತಿಲ್ಲಿರುವ ನ್ಯಾಯಾಲಯದ ಆದೇಶದ ಆದಾರದಮೇಲೆ ಒಬ್ಬ ಚುನಾಯಿತ ಪ್ರತಿನಿಧಿಯನ್ನು ಸಂಸದ ಸ್ಥಾನದಿಂದ ಅಮಾನತ್ತುಮಾಡುವುದು ಬಾಬಾಸಾಹೇಬರು ಬರೆದ ಸಂವಿದಾನವನ್ನು ಅಪಮಾನ ಮಾಡಿದೆ, ಒಬ್ಬ ಸಂಸದರಿಗೆ ಈರೀತಿಯಾದರೆ ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದರು.
ಜೆಡಿಎಸ್ ಹಾಗು ಬಿಜೆಪಿ ಈ ರಾಜ್ಯದಲ್ಲಿ ಒಂದೇನಾಣ್ಯದ ಎರಡು ಮುಖಗಳಂತೆ ಎಂದಿಗೂ ನಾವು ಅವರನ್ನು ನಂಬಬಾರದು, ಅಲ್ಪ ಸಂಖ್ಯಾತರಿಗೆ ಹಿಜಾಬ್ ಹೆಸರಿನಲ್ಲಿ ಸಂಘರ್ಷಣೆಗಳಾದಾಗ ಜೆಡಿಎಸ್ ಕಣ್ಣುಮುಚ್ಚಿ ಕುಳಿತಿತ್ತು, ಇವರ ನೆರವಿಗೆ ಬರಲೇಇಲ್ಲಾ ಅಂತಹ ಪಕ್ಷವನ್ನು ಈಗಿನಿಂದಲೇ ದೂರಮಾಡಬೇಕು, ಬಿಜೆಪಿ ಸರ್ಕಾರ ೨ಬಿ ಅಡಿ ಮುಸ್ಲೀಮರಿಗೆ ಇದ್ದ ೪% ಹಾಗು ಓಬಿಸಿ ಮೀಸಲಾತಿಯನ್ನು ರದ್ದುಮಾಡಿದೆ ಏಕ ಪಕ್ಷೀಯವಾಗಿ ನಿರ್ದಾರ ಮಾಡಿ ಈರೀತಿಮಾಡಿದೆ ಇದು ಅಲ್ಪ ಸಂಖ್ಯಾತರಿಗೆ ಮಾಡಿರುವ ಅನ್ಯಾಯ, ಹಿಂದೂ-ಮುಸಲ್ಮಾನರು ಭಾಯಿ-ಭಾಯಿ ಎಂಬoತೆ ಇರಬೇಕೆಂಬುದು ಈ ಕಾರ್ಯಕ್ರಮ ಉದ್ದೇಶ. ಬಿಜೆಪಿ ಸರ್ಕಾರ ನಮ್ಮ ಮಧ್ಯೆಗೋಡೆ ಕಟ್ಟಲು, ವೈಮನಸ್ಸು ತರಲು ಯತ್ನಿಸುತ್ತಿದೆ ಅದಕ್ಕೆ ಸವಾಲು ಎನ್ನುವಂತೆ ಇಂದು ನಾವು ಈ ಸಭೆ ಸೇರಿದ್ದೇವೆ. ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸಬೇಕೆಂದರು.
ಮಹಾತ್ಮಗಾಂದಿ, ರಾಜೀವ್ ಗಾಂದಿ, ಇಂದಿರಾಗಾoದಿಯನ್ನು ಹತ್ಯೆಮಾಡಿದಾಗ ಈ ಮೋದಿ ಎಲ್ಲಿದ್ದರು ಆರ್.ಎಸ್.ಎಸ್ ನ ಮಾರ್ಗದರ್ಶನದಂತೆ ಈ ದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ, ಇವರ ವಿರುದ್ದ ದೇಶದ ಜನ ದಂಗೆ ಏಳುವ ದಿನಗಳು ಹತ್ತಿರವಾಗುತ್ತಿವೆೆ ಕರೋನಾ ಸಮಯದಲ್ಲಿ ದೀಪವನ್ನು ಆರಿಸಿ ಚಪ್ಪಾಳೆ ತಟ್ಟಿ ಕೊರೋನಾವನ್ನು ಓಡಿಸಿ ಎಂದು ಹೇಳಿದ ಇವರಿಗೆ ಅಧಿಕಾರ ನೀಡಬೇಕೆ ? ಈಗಿನಿಂದಲೇ ಎಚ್ಚೆತ್ತುಕೊಂಡು ೨೦೨೪ ರಲ್ಲಿ ನಡೆಯುವ ಸಂಸತ್ ಚುನಾವಣೆಯಲ್ಲಿ ಇವರಿಗೆ ಬುದ್ದಿಯನ್ನು ಕಲಿಸಿ ಎಂದ ಇವರು ಈ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವನ್ನು ಪತನ ಗೊಳಿಸುವವರೆಗೂ ನಾವು ನಿದ್ದೆ ಮಾಡುವುದಿಲ್ಲಾ ಎಂದು ಶಪಥಮಾಡುತ್ತಾ ಇವತ್ತಿನಜನ ಬದುಕುವುದಕ್ಕೂ ಆಗುತ್ತಿಲ್ಲಾ ಕಾರಣ ಜಿ.ಎಸ್.ಟಿ ಟ್ಯಾಕ್ಸ್ ಹಾಕುತ್ತಿದ್ದಾರೆ ನಿಮ್ಮ ಆಟಗಳು ಬಹಳದಿನ ನಡೆಯುವುದಿಲ್ಲಾ ಎಂದು ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು.

ಮಿಸ್ಟರ್ ಸುದಾಕರ್ ನಿನಗೆ ದಮ್ಮು ತಾಕತ್ ದೈರ್ಯ ಇದ್ದರೆ ಇನ್ನೊಂದುಬಾರಿ ನಮ್ಮ ಕ್ಷೇತ್ರಕ್ಕೆ ಬಾ ಎಂದು ಸವಾಲೆಸೆದ ರಮೇಶ್ ಕುಮಾರ್.

ಆರೋಗ್ಯ ಸಚಿವ ಸುದಾಕರ್ ನಮ್ಮ ತಾಲ್ಲೂಕಿನ ಗೌನಿಪಲ್ಲಿಯಲ್ಲಿ ನನ್ನನ್ನು ಸೋಲಿಸಲು ಈ ಕ್ಷೇತ್ರಕ್ಕೆ ಮತ್ತೆ-ಮತ್ತೆ ಬರುತ್ತೇನೆ ಎಂದು ಸವಾಲನ್ನು ಹಾಕಿದ್ದರು ಇಂತಹ ಮಹಾನುಭಾವರು ಎಷ್ಟುಜನ ಬಂದರೆ ನನ್ನನ್ನು ಸೋಲಿಸುವುದಕ್ಕಾಗುವುದಿಲ್ಲಾ, ನನಗೆ ಈ ಕ್ಷೇತ್ರದ ಜನರ, ಪುಟ್ಟಪರ್ತಿ ಸಾಯಿಬಾಬಾ ರವರ ಆಶೀರ್ವಾದ ಇರುವವರೆಗೂ ಯಾರೂ ಏನುಮಾಡಲು ಆಗುವುದಿಲ್ಲಾ ರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ನೀವು ಕಲಹಗಳನ್ನು ಎಬ್ಬಿಸುವುದು, ಜಾತಿಗಳನಡುವೆ ವೈಶಮ್ಯಗಳನ್ನು ಬೆಳೆಸುವ ನೀವು ನನ್ನಬಗ್ಗೆ ಮಾತನಾಡುವ ನೈತಿಕತೆ ಇದೆಯೇ, ನಾನು ಏನೆನ್ನುವುದು ಈ ರಾಜ್ಯಕ್ಕೆ ಗೊತ್ತು ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಎಚ್ಚರಿಕೆ ನೀಡಿದರು.
   ಕೆ.ಸಿವ್ಯಾಲಿ ಯೋಜನೆ ಡಿಸಿಸಿ ಬ್ಯಾಂಕ್ ನಿಂದ ನೀಡುವ ಸಾಲ ನನ್ನ ಅಭಿವೃದ್ದಿಕಾರ್ಯಕ್ರಮಗಳು ತಾಕತ್ತಿದ್ದರೆ ನಿಲ್ಲಿಸಲಿ ಎಂದು ವಿರೋದ ಪಕ್ಷಗಳಿಗೆ ಸವಾಲ್‌ಹಾಕಿದರು.
 ಇದೇ ಬಾನುವಾರ ಸುಗುಟೂರು ಹೋಬಳಿಯಲ್ಲಿ ಡಿಸಿಸಿಬ್ಯಾಂಕ್ ವತಿಯಿಂದ ಮಹಿಳೆಯರ ಸಬಲೀಕರಣಕ್ಕಾಗಿ ೧೨ ಕೋಟಿ ಹಣವನ್ನು ನೀಡುತ್ತಿದ್ದೇವೆ ನಿಮಗೆ ತಾಕತ್ತಿದ್ದರೆ ನಿಲ್ಲಿಸಿ, ಕೆಸಿವ್ಯಾಲಿ ಯೋಜನೆಯಡಿಯಲ್ಲಿ ೧೨೬ ಕೆರೆಗಳಿಗೆ ನೀರನ್ನು ಹರಿಸುತ್ತಿದ್ದೇವೆ, ಈ ಕ್ಷೇತ್ರಕ್ಕೆ ೨೩ ಸಾವಿರ ಮನೆಗಳನ್ನು ತಂದು ಗುಡಿಸಲುಮುಕ್ತ ಮಾಡಿದ್ದೇನೆ ರೋಣೂರು ಮತ್ತು ಸೋಮಾಜಲಹಳ್ಳಿ ಕೆರೆಗಳಿಗೆ ಪೈಪ್ ಲೈನ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ನಾನು ಕಾಂಗ್ರೇಸ್ ಪಕ್ಷದ ಶಾಸಕನಾದರೂ ಕೋಟ್ಯಾಂತರ ರೂಗಳನ್ನು ಈ ಕ್ಷೇತ್ರಕ್ಕೆ ತಂದು ಅನೇಕ ಅಭಿವೃದ್ದಿಕೆಲಸಗಳನ್ನು ಮಾಡುತ್ತಿದ್ದೇನೆ ಇದು ರಮೇಶ್ ಕುಮಾರ್ ತಾಕತ್ತು ಈ ವಿಷಯದಲ್ಲಿ ತಗ್ಗೇದೇ ಲೇದು ಎಂದರು.

 ಈ ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಕೋಮುಲ್ ನಿರ್ದೇಶಕ ಎನ್.ಹನುಮೇಶ್, ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ಜಿ.ಪಂ.ಮಾಜಿ ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದ ಸ್ವಾಮಿ, ರಾಯಲ್ಪಾಡ್ ಬ್ಲಾಕ್ ಕಾಂಗ್ರೇಸ್ ಮಾಜಿ ಅದ್ಯಕ್ಷ ಸಂಜಯ್ ರೆಡ್ಡಿ, ಪುರಸಭೆ ಸದಸ್ಯರಾದ ಅನೀಸ್ ಅಹಮ್ಮದ್, ಎನ್‌ಎನ್‌ಆರ್ ನಾಗರಾಜ್, ಮುನಿರಾಜು, ಯೂತ್ ಕಾಂಗ್ರೇಸ್ ಅದ್ಯಕ್ಷ ಮಂಜುನಾಥ್ ರೆಡ್ಡಿ, ಮುಖಂಡರಾದ ಬಿ.ಎಂ.ಪ್ರಕಾಶ್, ಕೆ.ಕೆ.ಮಂಜು, ಅಕ್ಬರ್ ಷರೀಪ್, ಕೆಎನ್‌ಎಸ್ ನಾರಾಯಣಸ್ವಾಮಿ, ಬಾರ್ ಕೃಷ್ಣೇಗೌಡ, ಜಮಕಾಯಲ ವೆಂಕಟೇಶ್, ಆರ್.ಗಂಗಾದರ್, ಮದರಂಕಪಲ್ಲಿ ಪ್ರಶಾಂತ್ ಇತರರು ಇದ್ದರು

Leave a Reply

Your email address will not be published. Required fields are marked *