ಬಕ್ರಿದ್ ಹಬ್ಬದ ಪ್ರಯುಕ್ತ ವಿಶೇಷವಾಗಿ ಕುರಿ ವ್ಯಾಪಾರಸ್ಥರು ಅಧಿಕ ಲಾಭವನ್ನು ಪಡೆಯುತ್ತಿದ್ದರು ಆದರೆ ಈ ಬಾರಿ ಬಕ್ರಿದ್ ಹಬ್ಬದ ಪ್ರಯುಕ್ತ ವರ್ಷ ಕುರಿ ಸಾಗಾಣಿಕೆದಾರರು ಮೇಯಿಸಿ ಕುರಿ ಗಳನ್ನು ತಂದು ರೋಜರುಪಲ್ಲಿ ಸಂತೆಯಲ್ಲಿ ವ್ಯಾಪಾರ ಮಾಡಲು ಬಂದಾಗ ಹಲವಾರು ಘಟನೆಗಳು ಒಂದು ಕಡೆ ಮಹಿಳೆಯೊಬ್ಬರು ವರ್ಷಪೂರ್ತಿ ಸಾಗಾಣಿಕೆ ಮಾಡಿ ತಂದು ಕುರಿಗಳನ್ನು ನಾಲ್ಕೈದು ಕುರಿಗಳನ್ನು ಮಾರಾಟ ಮಾಡಿ ಇನ್ನು ಏಳೆಂಟು ಕುರಿಗಳು ಹಾಗೆಯೇ ಉಳಿದುಕೊಂಡಿದ್ದವು ಏನಮ್ಮ ಈ ವ್ಯಾಪಾರ ನಿನಗೆ ಲಭಿಸಿದೆ ಎಂದರೆ ಎಲ್ಲಾ ನಮಗೆ ಈ ಬಾರಿ ವ್ಯಾಪಾರ ಸಂಪೂರ್ಣವಾಗಿದೆ ಲಾಭದ ನಿರೀಕ್ಷೆ ನಾವು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಮುದುವಾಡಿ ಹೊಸಳ್ಳಿ ಗ್ರಾಮದ ಶ್ರೀನಿವಾಸ್ ಯುವ ರೈತನಾಗಿದ್ದು ಇವರ ತಂದೆ ಸಹ ರೈತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಇವರು ಸುಮಾರು ಹತ್ತಕ್ಕೂ ಹೆಚ್ಚು ಕುರಿಗಳನ್ನು ತಂದು ಮಾರಾಟ ಮಾಡಲು ಮುಂದಾಗಿದ್ದರು ಈ ಬಾರಿ ಸಂಪೂರ್ಣ ವ್ಯಾಪಾರ ಕುಸಿತವಾಗಿದೆ ನಮ್ಮ ಕುರಿಗಳನ್ನು ಕೇಳುವವರು ಅತಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಏಕೆಂದರೆ ಯೂಟ್ಯೂಬ್ ಚಾನೆಲ್ ಗಳಲ್ಲಿ ವಿವಿಧ ಬಗೆಯ ತಳಿಗಳನ್ನು ತಂದು ಮರಾಠ ಮಾಡಿ ಅತಿಹೆಚ್ಚಿನ ಲಾಭಗಳಿಸಬಹುದು, ಲಕ್ಷ ಲಕ್ಷ ನಿರೀಕ್ಷೆ ಕಾಣಬಹುದು ಎಂಬ ಯುವ ಉತ್ಸಾಹಗಳಿಗೆ ಈ ಒಡೆತ ತಂದಿದೆ ಏಕೆಂದರೆ ನಾವು ಸುಮಾರು 10 ಸಾವಿರ ರೂಪಾಯಿಗಳು ಒಂದು ಕುರಿಮರಿಯಂತೆ ತಂದಿದ್ದವು ಅ ಕುರಿಗಳನ್ನು ಮೇಯಿಸಿ ನಮಗೆ ಒಂದು ಕುರಿ ಮರಿಗೆ 20 ರಿಂದ 22 ಸಾವಿರ ರೂಪಾಯಿಗಳ ಖರ್ಚು ಮಾಡಿದ್ದೇವೆ ಆದರೆ ಈ ಸಂತೆಯಲ್ಲಿ ನಮ್ಮ ಕುರಿಗಳನ್ನು ಕೇವಲ 15 ಸಾವಿರ ರೂಪಾಯಿಗಳಿಗೆ ಮಾತ್ರ ಕೇಳುತ್ತಿದ್ದಾರೆ ಇದರಿಂದ ರೈತರಿಗೆ ನಷ್ಟವೇ ಹೊರತು ಲಾಭಾಂಶ ಇಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ ಯುವ ಉತ್ಸಾಹಿಗಳು ಸೂಕ್ತ ತಳಿಗಳನ್ನು ಆರಿಸಿ ಲಾಭಾಂಶ ನಿರೀಕ್ಷೆಯನ್ನು ಮಾಡುವ ಇವರ ರೈತರು ಸ್ವಲ್ಪ ತಾಳ್ಮೆಯಿಂದ ಪರೀಕ್ಷಿಸಿ ಕುರಿಗಳನ್ನು ಮೇಯಿಸಬೇಕು ನನ್ನ ಅಭಿಪ್ರಾಯದಂತೆ ಈ ಕುರಿ ವ್ಯಾಪಾರದಲ್ಲಿ ಮತ್ತು ಮೇಯಿಸುವಲ್ಲಿ ಈ ಬಾರಿ ನಷ್ಟವೇ ಹೊರತು ರೈತರಿಗೆ ಲಾಭ ಅಂಶವಿಲ್ಲ ಎಂದು ಅವರ ಅಭಿಪ್ರಾಯವನ್ನು ತಿಳಿಸಿದರು.