ಮೇ ೨೯ರಂದು ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣನಂಬಿದ ಭಕ್ತರಿಗೆ ವರ ನೀಡುವ ಮೂಡಲಗಿ ಲಕ್ಷಿö್ಮದೇವಿ

ಮೂಡಲಗಿ, ಇಲ್ಲಿಯ ಢವಳೇಶ್ವರ ಓಣಿಯ ಶ್ರೀ ಲಕ್ಷಿö್ಮದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಜಾತ್ರೆಯು ಮೇ ೨೯, ೩೦ರಂದು ಜರುಗಲಿದೆ.
ಮೇ ೨೯ರಂದು ಬೆಳಿಗ್ಗೆ ಬಸವೇಶ್ವರ ಕಲ್ಯಾಣ ಮಂಟಪದಿoದ ಕುಂಭ ಮೇಳ, ಆರತಿ ವಿವಿಧ ವಾದ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗುವುದು. ದೇವಸ್ಥಾನದಲ್ಲಿ ಹೋ, ಹವನಗಳೊಂದಿಗೆ ಲಕ್ಷಿö್ಮದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಜರುಗುವುದು, ಮಧ್ಯಾಹ್ನ ೧೨ರಿಂದ ಮಹಾಪ್ರಸಾದ ಇರುವುದು. ರಾತ್ರಿ ೯ಕ್ಕೆ ಡೊಳ್ಳಿನ ಹಾಡುಗಳು ಇರುವವು.
ಇತಿಹಾಸ: ನೂರಾರು ವರ್ಷಗಳ ಪೂರ್ವದಲ್ಲಿ ಢವಳೇಶ್ವರ ಓಣಿಯಲ್ಲಿ ಮರವೊಂದರ ಬಳಿಯಲ್ಲಿ ಶಿಲೆಯೊಂದು ಉದ್ಭವಿಸಿದ್ದು, ಊರಿನ ರೈತಾಪಿ ಜನರೆಲ್ಲ ‘ಊರಿಗೆ ಲಕ್ಷಿö್ಮ ಬಂದಳು’ ಎಂದು ಭಕ್ತಿಯಿಂದ ಸಂಭ್ರಮಿಸಿ ಪೂಜೆಯನ್ನು ಮಾಡಿಕೊಂಡು ಬಂದಿದ್ದಾರೆ. ನಂತರ ಲಕ್ಷಿö್ಮ ಪಾದಗಟ್ಟೆ ಎಂದು ಭಕ್ತರು ಆರಾಧಿಸುತ್ತಿರುವರು. ೫-೬ ದಶಕಗಳ ಪೂರ್ವದಲ್ಲಿ ದಿ. ಚನ್ನಪ್ಪ ಢವಳೇಶ್ವರ ಹಾಗೂ ದಿ. ಗಿರೇಪ್ಪ ಢವಳೇಶ್ವರ ಸಹೋದರರು ಚಿಕ್ಕದಾದ ಗುಡಿಯನ್ನು ನಿರ್ಮಿಸಿ ಅತ್ಯಂತ ಭಕ್ತಿಯಿಂದ ಪೂಜೆಯನ್ನು ಮಾಡಿಕೊಂಡು ಬಂದಿರುವುವರು. ಲಕ್ಷಿö್ಮದೇವಿಗೆ ಅಪಾರ ಭಕ್ತವೃಂದವು ಇದ್ದು, ದೇವಿಯ ದರ್ಶನ ಮಾಡಿದವರಿಗೆ ಮತ್ತು ಇಷ್ಟಿತಾರ್ಥ ನೆರವೇರಿಸುವ ಲಕ್ಷಿö್ಮ ಎಂದು ಭಕ್ತರಲ್ಲಿ ನಂಬಿಕೆ ಬೇರೂರಿದೆ. ಹೀಗಾಗಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಕ್ತರು ವಿಶೇಷ ಪೂಜೆ ಮತ್ತು ಉಡಿ ತುಂಬಿ ಹರಕೆ ಹೊರುವರು. ಮೂಲದಲ್ಲಿದ್ದ ಚಿಕ್ಕ ಗುಡಿಯು ಶಿಥಿ¯ಗೊಂಡಿದ್ದರಿoದ ಈಗ ಢವಳೇಶ್ವರ ಕುಟುಂಬದವರು ರೂ. ೧೦ ಲಕ್ಷವರೆಗೆ ಭಕ್ತಿ ಸೇವೆ ಮಾಡಿಜೀರ್ಣೋದ್ದಾರಗೊಳಿಸಿದ್ದಾರೆ.
ಜಾತ್ರೆ: ಪ್ರತಿ ವರ್ಷದಂತೆ ಈ ವರ್ಷವು ಮೇ ೩೦ರಂದು ಶ್ರೀ ಲಕ್ಷಿö್ಮದೇವಿ ಜಾತ್ರೆ ಇರುವುದು. ಬೆಳಿಗ್ಗೆ ೮ಕ್ಕೆ ದೇವಿಗೆ ಅಭಿಷೇಕ, ಉಡಿ ತುಂಬುವುದು ಮತ್ತು ಮಧ್ಯಾಹ್ನ ೧೨ಕ್ಕೆ ಮಹಾಪ್ರಸಾದ ಇರುವುದು.
ಉದ್ಘಾಟನೆ: ಮೂಡಲಗಿಯ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ಹಾಗೂ ಸುಣಧೊಳಿಯ ಶಿವಾನಂದ ಸ್ವಾಮೀಜಿಯವರು ಸಾನ್ನಿಧ್ಯವಹಿಸುವರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಗಿರೇಪ್ಪ ಢವಳೇಶ್ವರ ಅವರು ನೂತನ ದೇವಸ್ಥಾನವನ್ನು ಉದ್ಘಾಟಿಸುವರು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *