ಮುಳಬಾಗಿಲು, ಚೆನೈ ಕಾರಿಡಾರ್ ರಸ್ತೆ ಅಭಿವೃದ್ದಿಯ ಭೂ ಸ್ವಾಧೀನ ಮಾಡಿಕೊಂಡಿರುವ ಮರಗಿಡಗಳಿಗೆ ಪರಿಹಾರ ನೀಡದ ವಿಶೇಷ ಭೂಸ್ವಾಧೀನಾಧಿಕಾರಿಗಳ ರೈತ ವಿರೊಧಿ ದೋರಣೆ ಖಂಡಿಸಿ ಮೇ-೧೧ ರಿಂದ ಕಾಮಗಾರಿ ಸ್ಥಳದಲ್ಲಿ ಆಹೋರಾತ್ರಿ ದರಣಿ ಮಾಡಲು ನೊಂದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗಡಿಭಾಗದ ಚೆನೈ ಕಾರಿಡಾರ್ ರಸ್ತೆಯ ಅಭಿವೃದ್ದಿಗೆ ಭೂಮಿ ಕಳೆದುಕೊಂಡಿರುವ ರೈತರ ಜಮೀನಿನ ಕಾಮಗಾರಿ ಸ್ಥಳದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಪೋಟೋ ಇಟ್ಟು ಕಡ್ಡಾಯ ಮತದಾನ ಮಾಡುವ ಜೊತೆಗೆ ನಮ್ಮ ಪರಿಹಾರಕ್ಕಾಗಿ ಮೇ-೧೧ ರಂದು ಆಹೋರಾತ್ರಿ ದರಣಿ ಮಾಡಲು ನೊಂದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗಡಿಭಾಗದ ಏತರಹಳ್ಳಿ, ಚುಕ್ಕನಹಳ್ಳಿ ವ್ಯಾಪ್ತಿಯ ಬಡ ರೈತರ ಸೇರಿದ ಕೃಷಿ ಜಮೀನನ್ನು ಚೆನೈ ಕಾರಿಡಾರ್ ರಸ್ತೆ ಅಭಿವೃದ್ದಿಗೆ ವಿಶೇಷ ಭೂ ಸ್ವಾದೀನಾಧಿಕಾರಿಗಳು ಭೂ ಸ್ವಾಧೀನ ಮಾಡಿಕೊಂಡು ೫ ವರ್ಷಗಳು ಕಳದಿವೆ. ಭೂಮಿಗೆ ಕಡಿಮೆ ಮೊತ್ತದ ಪರಿಹಾರ ನೀಡಿ ಆ ಕೃಷಿ ಭೂಮಿಯಲ್ಲಿದ್ದ ಮರ ಗಿಡಗಳಿಗೆ ಪರಿಹಾರ ನೀಡುತ್ತೇವೆಂದು ಅಮಾಯಕ ರೈತರನ್ನು ಯಾಮಾರಿಸಿ ಭೂ ಸ್ವಾಧೀನ ಮಾಡಿಕೊಂಡ ನಂತರ ಪಿನಂಬರ್ ನೆಪದಲ್ಲಿ ಪರಿಹಾರ ನೀಡದೆ ವಂಚನೆ ಮಾಡುತ್ತಿದ್ದಾರೆಂದು ನೊಂದ ರೈತರಾದ ವೆಂಕಟೇಶ್ ಹಾಗೂ ಮಂಗಮ್ಮ ಕಣ್ಣೀರು ಹಾಕಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಾವು ಡಾ|| ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವಂತಹ ಮತ ದಾನವನ್ನು ಕಡ್ಡಾಯವಾಗಿ ಮಾಡುವ ಮೂಲಕ ಜಿಲ್ಲಾಡಳಿತ ತಾಲ್ಲೂಕು ಆಡಳಿತಕ್ಕೆ ಸಹಕರಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಇರುವುದರಿಂದ ಮತದಾನದ ಬಹಿಷ್ಕಾರವನ್ನು ಕೈ ಬಿಟ್ಟು ಮತದಾನ ಮುಗಿದ ಮರುದಿನ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಗುಡಿಸಲುಗಳ ಸಮೇತ ಹೋರಾಟ ಹಮ್ಮಿಕೊಳ್ಳುವ ಮೂಲಕ ನಮ್ಮ ನ್ಯಾಯಯುತ ಪರಿಹಾರವನ್ನು ಪಡೆದುಕೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕೇಂದ್ರ ಸರ್ಕಾರ ಮರ ಗಿಡಗಳಿಗೆ ಪರಿಹಾರದ ಹಣವನ್ನು ವಿಶೇಷ ಭೂ ಸ್ವಾಧೀನಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಿದ್ದು, ಆ ಹಣವನ್ನು ರೈತರಿಗೆ ನೀಡದೆ ದಿನಕ್ಕೊಂದು ನೆಪವನ್ನು ಹೇಳುತ್ತಿದ್ದಾರೆ. ಮಾನ್ಯ ಜಿಲ್ಲಾಧಿಕಾರಿಗಳು ಆದೇಶ ಮಾಡಿದರೆ ನಾವು ಒಂದೇ ದಿನದಲ್ಲಿ ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತೇನೆ ಎನ್ನುತ್ತಾರೆ. ಇನ್ನೊಂದು ಕಡೆ ಪಿನಂಬರ್ ದುರಸ್ತಿ ಮಾಡದೆ ಪರಿಹಾರ ಸಿಗುವುದಿಲ್ಲವೆಂದು ರೈತರನ್ನು ವಂಚನೆ ಮಾಡಿ ರೈತರ ಹೆಸರಿನಲ್ಲಿ ಅಧಿಕಾರಿಗಳೇ ಪರಿಹಾರ ಹಣವನ್ನು ಲೂಟಿ ಮಾಡಲು ಮುಂದಾಗಿದ್ದಾರೆoದು ಅಧಿಕಾರಿಗಳ ವಿರುದ್ದ ಗಂಬೀರ ಆರೋಪ ಮಾಡಿದರು.
ಜಿಲ್ಲೆಯ ಜನ ಪ್ರತಿನಿಧಿಗಳಿಂದ ಹಿಡಿದು ಜಿಲ್ಲಾಧಿಕಾರಿಗಳು ತಾಲ್ಲೂಕು ಆಡಳಿತ ಅಧಿಕಾರಿಗಳ ಕೈ ಮುಗಿದು ಕಾಲು ಹಿಡಿದು ಬೇಡಿಕೊಂಡರೂ ಬಡ ರೈತರ ಪರಿಹಾರ ಮಾತ್ರ ಸಿಗುತ್ತಿಲ್ಲ. ಆದರೆ ಇತ್ತೀಚೆಗೆ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು ರೈತರ ಪರ ನಿಂತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬoಧಪಟ್ಟ ಅಧಿಕಾರಿಗಳ ಸಭೆ ಕರೆದು ಪಿನಂಬರ್ ದುರಸ್ತಿ ಮಾಡುವಂತೆ ಸೂಚನೆ ಮಾಡಿ ೩ ತಿಂಗಳು ಕಳೆದರೂ ಇದುವರೆಗೂ ಕನಿಷ್ಠ ಪಕ್ಷ ದಾಖಲೆಗಳನ್ನು ಸಹ ಪರಿಶೀಲನೆ ಮಾಡದೆ ಕಂದಾಯ ಹಾಗೂ ಸರ್ವೆ ಅಧಿಕಾರಿಗಳು ರೈತ ವಿರೋಧಿ ದೋರಣೆಯನ್ನು ಅನುಸರಿಸುತ್ತಿದ್ದಾರೆ. ಮೇ-೧೦ ರ ಮತದಾನದ ನಂತರ ೧೧ನೇ ತಾರಿಖಿನಿಂದ ಗಡಿಭಾಗದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಆಹೋರಾತ್ರಿ ದರಣಿಯನ್ನು ಹಮ್ಮಿಕೊಳ್ಳುವ ಮುಖಾಂತರ ನೊಂದ ರೈತರ ಪರಿಹಾರವನ್ನು ಪಡೆದುಕೊಳ್ಳುವ ಎಚ್ಚರಿಕೆಯನ್ನು ವಿಶೇಷ ಭೂ ಸ್ವಾಧೀನಾಧಿಕಾರಿಗಳಿಗೆ ಸಭೆಯಲ್ಲಿ ನೀಡಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಮೇಗೌಡ, ರಾಜಣ್ಣ, ವಿಶ್ವನಾಥ, ಕುಮಾರ್, ಜಗದೀಶ್, ಚಂಗೇಗೌಡ, ಜನಾರ್ಧನ್ ಮುಂತಾದವರು ಇದ್ದರು.