ಮೇಲುಪಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ ನವೀಕೃತ ಕಟ್ಟಡ ಉದ್ಘಾಟಸಿದ : ಶಾಸಕಿ ರೂಪಕಲಾ ಎಂ ಶಶಿಧರ್

ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ರವರು ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿಯ ಮೇಲುಪಲ್ಲಿ ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ ನವೀಕೃತ ಕಟ್ಟಡ ಉದ್ಘಾಟನೆ ನೆರವೇರಿಸಿದರು ನಂತರ ಶಾಸಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶವನ್ನು ವೇದಿಕೆಯಲ್ಲಿ ಹಾಜರಿದ್ದ ಎಲ್ಲಾ ಗಣ್ಯರು ಸೇರಿ ಜ್ಯೋತಿ ಬೆಳಗುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಮುಖಂಡರು ಮಾತನಾಡಿ ಶಾಸಕರು ಅಧಿಕಾರಕ್ಕೆ ಬಂದ ನಂತರ ಕ್ಷೇತ್ರವು ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಕಂಡಿರುತ್ತದೆ. ನಗರ ಭಾಗದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ ನೀರಿನ ವ್ಯವಸ್ಥೆ ಹೀಗೆ ಹತ್ತು ಹಲವಾರು ಅಭಿವೃದ್ಧಿ ಕರ‍್ಯಗಳು ನಡೆದಿರುತ್ತದೆ. ಮಂದಿನ ದಿನಗಳಲ್ಲಿ ಮಾನ್ಯ ಶಾಸಕರಿಗೆ ಆಶರ‍್ವಾದ ಮಾಡಿ ಮತ್ತೊಮ್ಮೆ ಜಯಶೀಲರನ್ನಾಗಿ ಮಾಡಲು ನೆರೆದಿದ್ದ ಜನರಿಗೆ ಕರೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸೋತ ನಂತರ ತಮ್ಮನ್ನು ಆಶರ‍್ವದಿಸಿ ಶಾಸಕರನ್ನಾಗಿ ಮಾಡಿದ ಕ್ಷೇತ್ರದ ಜನರಿಗೆ. ಕರ‍್ಯರ‍್ತರಿಗೆ ಹಾಗೂ ಮುಖಂಡರಿಗೆ ತುಂಬು ಹೃದಯದ ದನ್ಯವಾದಗಳನ್ನು ತಿಳಿಸಿದರು. ಕ್ಷೇತ್ರದಲ್ಲಿ ಮಹಿಳೆಯರ ಹಾಗೂ ರೈತರ ಸಹಾಯಕ್ಕಾಗಿ ನಿಂತು ಅವರನ್ನು ರ‍್ಥಿಕವಾಗಿ ಸಬಲರನ್ನಾಗಿ ಮಾಡಲು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ತಮಗೆ ಅವಕಾಶ ಮಾಡಿಕೊಟ್ಟರು ಎಂದು ಹೇಳಿ ಅವರಿಗೆ ತಮ್ಮ ದನ್ಯವಾದಗಳನ್ನು ತಿಳಿಸಿದರು.

ಶಾಸಕರು ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಆಗಿರುವ ಆಭಿವೃದ್ಧಿ ಕೆಲಸಗಳನ್ನು ವಿವರವಾಗಿ ಜನರ ಮುಂದೆ ಇಟ್ಟರು. ಒಂದು ರ‍್ಷ ಐದು ತಿಂಗಳು ತಮ್ಮ ರ‍್ಕಾರ ಇದ್ದ ಸಮಯದಲ್ಲಿ ನಂತರ ಬಿ.ಜೆ.ಪಿ. ರ‍್ಕಾರ ಅಸ್ಥಿತ್ವಕ್ಕೆ ಬಂದ ನಂತರ ರ‍್ಕಾರದ ಮಟ್ಟದಲ್ಲಿ ತಾವು ಕ್ಷೇತ್ರದ ಅಭಿವೃದ್ಧಿ ಕರ‍್ಯಗಳಿಗಾಗಿ ಪಟ್ಟ ಶ್ರಮವನ್ನು ವಿರವಾಗಿ ತಿಳಿಸಿದರು.

ಕೆ.ಜಿ.ಎಫ್. ನರದ ಅಶೋಕ ನಗರದ ರಸ್ತೆ ಪರ‍್ಣಗೊಳಿಸಿದ್ದು, ನಿಂತು ಹೋಗಿದ್ದ ಬಂಗಾರಪೇಟೆ – ವಿ.ಕೋಟೆ ರಸ್ತೆ ಕಾಮಗಾರಿಯನ್ನು ಪುನಾರಾರಂಭಿಸಲು ಪಟ್ಟ ಶ್ರಮ, ಕೆ.ಜಿ.ಎಫ್. ನಗರದ ಸ್ಟೇಶನ್ ರಸ್ತೆ ಮತ್ತು, ಆಂಡರಸನ್ ಪೇಟೆ ರಸ್ತೆಗಳನ್ನು ಡಬಲ್ ರಸ್ತೆಯಾಗಿ ಅಭಿವೃದ್ಧಿಗೊಳಿಸುತ್ತಿರುವ ಬಗ್ಗೆ ವಿವರಿಸಿದರು. ಬೇತಮಂಗಲ ಕೆರೆಯಲ್ಲಿ ಬೆಳೆದಿದ್ದ ಜಾಲಿ ಗಿಡಗಳನ್ನು ತಮ್ಮ ಸ್ವಂತ ರ‍್ಚಿನಲ್ಲಿ ಸ್ವಚ್ಚಗೊಳಿಸಿದ ಬಗ್ಗೆ, ಬೇತಮಂಗಲ ಬಸ್ ನಿಲ್ದಾಣದಿಂದ ಹೋಗುವ ಹಳೇ ಮದ್ರಾಸ್ ರಸ್ತೆ, ಕ್ಯಾಸಂಬಳ್ಳಿಯಿಂದ ಜೆ.ಕೆ.ಪುರದವರೆಗೆ ಹಾಗೂ ಇನ್ನಿತರೆ ಪ್ರಮುಖ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿರುತ್ತದೆ ಎಂದು ತಿಳಿಸಿದರು. ರೈತರು ಹಾಗೂ ಸರ‍್ವಜನಿಕರ ಅನುಕೂಲಕ್ಕಾಗಿ ರೂ.೧೦.೦೦ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನರ‍್ಮಾಣ, ರೂ.೨.೦೦ ಕೋಟಿ ವೆಚ್ಚದಲ್ಲಿ ತಾಲ್ಲೂಕು ಪಂಚಾಯಿತಿ ಕಟ್ಟಡ ನರ‍್ಮಾಣ, ಕೆ.ಜಿ.ಎಪ್. ಸರ‍್ವಜನಿಕ ಆಸ್ಪತ್ರೆಯ ಆವರಣದಲ್ಲಿ ರೂ.೮.೦೦ ವೆಚ್ಚದಲ್ಲಿ ನೂತನ ಕಟ್ಟಡ ನರ‍್ಮಾಣ ಹೀಗೆ ಪ್ರತಿ ಕಾಮಗಾರಿಯ ಬಗ್ಗೆ ವಿವರಗಳನ್ನು ನೀಡಿದರು. ಸುಮಾರು ನೂರಾರು ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕರ‍್ಯಗಳನ್ನು ಕೈಗೊಳ್ಳಲಾಗಿರುತ್ತದೆ ಎಂದು ತಿಳಿಸಿದರು.
ಕ್ಷೇತ್ರದ ಜನರು ನಂಬಿಕೆ ಇಟ್ಟು ತಮಗೆ ಆಶರ‍್ವಾದ ಮಾಡಿದ್ದು ಆ ನಂಬಿಕೆಯನ್ನಯನ್ನು ಎಂದಿಗೂ ಸುಳ್ಳಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿ ತಮ್ಮ ಶಕ್ತಿ ಮೀರಿ ಕ್ಷೇತ್ರದ ರ‍್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *