ಕೋಲಾರ,೨೦೨೩-೨೪ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕೋಲಾರ ಜಿಲ್ಲೆಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಾದ ಕೋಲಾರ, ಬಂಗಾರಪೇಟೆ, ಮಾಲೂರು ಮತ್ತು ಮುಳಬಾಗಿಲು ತಾಲ್ಲೂಕುಗಳಲ್ಲಿನ ವಿದ್ಯಾರ್ಥಿನಿಲಯಗಳಿಗೆ (ಪಿ.ಯು.ಸಿ ಮತ್ತು ಪಿ.ಯು.ಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ರಾಜ್ಯ ವಿದ್ಯಾರ್ಥಿನಿಲಯ (ಎಸ್.ಎಚ್,ಪಿ) ತಂತ್ರಾoಶದ ಮೂಲಕ ಆನ್ಲೈನ್ನಲ್ಲಿ ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಅರ್ಜಿ ಸಲ್ಲಿಸಲು ಮತೀಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೇ.೭೫ ರಷ್ಟು (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ದ ಮತ್ತು ಪಾರ್ಸಿ) ಹಾಗೂ ಶೇ.೨೫ ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತದೆ. ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ರಾಜ್ಯದ ನಿವಾಸಿಯಾಗಿರಬೇಕು. ಹಿಂದಿನ ವರ್ಷದ ತರಗತಿಯಲ್ಲಿ ವಾರ್ಷಿಕ/ಸೆಮಿಸ್ಟರ್ನಲ್ಲಿ ಎಲ್ಲಾ ವಿಷಯದಲ್ಲಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ರೂ. ೨.೫೦ ಲಕ್ಷ ಮೀರಿರಬಾರದು. ಮೂಲಪ್ರತಿಯನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿAದ ದೃಢೀಕರಿಸಿ, ಆದಾಯ ಪ್ರಮಾಣ ಪತ್ರ ಹಿಂದಿನ ವರ್ಷದ ಅಂಕಪಟ್ಟಿ, ಆಧಾರ್ ಕಾರ್ಡ್, ಇತರೆ ದಾಖಲೆಗಳನ್ನು ಸಲ್ಲಿಸುವುದು.
ರಾಜ್ಯ ವಿದ್ಯಾರ್ಥಿನಿಲಯ ಆನ್ಲೈನ್ ಪೋರ್ಟಲ್ನಲ್ಲಿ https://shp.karnataka.gov.in/ ಜುಲೈ ೧೫, ೨೦೨೩ ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ/ತಾಲ್ಲೂಕು ಮಾಹಿತಿ ಕೇಂದ್ರಗಳು ಹಾಗೂ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನೆಲ ಮಹಡಿ, ಮೌಲಾನಾ ಆಜಾದ್ ಭವನ, ಶ್ರೀ ದೇವರಾಜ್ ಅರಸು ಬಡಾವಣೆ, ೨ನೇ ಬ್ಲಾಕ್, ಟಮಕ ವಾರ್ಡ್ ನಂ.೧, ಕೋಲಾರ ದೂರವಾಣಿ ಸಂಖ್ಯೆ: ೦೮೧೫೨-೨೯೫೨೫೭ ಅನ್ನು ಸಂಪರ್ಕಿಸಬಹುದು ಎಂದು ಕೋಲಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.