ಮಾಲೂರು ತಾಲ್ಲೂಕಿನ ಜನಸೇವೆ ಮಾಡಲು ನಿಮ್ಮ ಮನೆ ಮಗ ಜಿ.ಇ.ರಾಮೇಗೌಡರಿಗೆ ಬೆಂಬಲಿಸಿ, ಪ್ರೋತ್ಸಾಹಿಸಿ ಜಿ.ಇ.ರಾಮೇಗೌಡ ಮನೆ ಮನೆ ಮತಯಾಚನೆ

ಟೇಕಲ್ , ಮಾಲೂರು ತಾಲ್ಲೂಕಿನಲ್ಲಿ ನಿವೆಲ್ಲ ನಂಬಿಕೆ ಇಟ್ಟು ಮತ ಹಾಕಿದವರು ಗೆದ್ದು ತಾಲ್ಲೂಕನ್ನು ಅಭಿವೃದ್ಧಿ ಮಾಡದೆ ರಸ್ತೆ ಅಭಿವೃದ್ಧಿ ಹಣ ಹಾಗೂ ತಾಲ್ಲೂಕು ವಿವಿಧ ಯೋಜನೆ ಹಣ, ಕೋಚಿಮುಲ್‌ನಲ್ಲಿ ಹಾಲು, ಮೊಸರು, ತುಪ್ಪ, ಬೆಣ್ಣೆಯಲ್ಲಿ ದುಡ್ಡು ಮಾಡಿ ತೇಗಿದ್ದಾರೆ. ಮತ್ತೊಬ್ಬರು ಈ ಹಿಂದೆ ಗೆದ್ದು ಕ್ಷೇತ್ರವನ್ನೇ ಮರೆತು ಐದು ವರ್ಷ ರಜಾ ತೆಗೆದುಕೊಂಡಿರುವುದಾಗಿ ಹೇಳಿ ಮತ್ತೆ ಬಂದಿದ್ದಾರೆ. ಆದರೆ ಈ ಬಾರಿ ತಾಲ್ಲೂಕಿನ ಜನತೆ ಬದಲಾವಣೆ ಬಯಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ನಿಮ್ಮ ಮನೆ ಮಗನನ್ನು ಜೆಡಿಎಸ್ ಪಕ್ಷಕ್ಕೆ ಬೆಂಬಲಿಸುವುದರ ಮೂಲಕ ನನಗೆ ಮತ ನೀಡುತ್ತಾರೆ ಎಂಬ ವಿಶ್ವಾಸವನ್ನು ಮಾಲೂರು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡರು ವ್ಯಕ್ತಪಡಿಸಿದರು. ಅವರು ಟೇಕಲ್‌ನ ಕೆ.ಜಿ.ಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಬೇಟಿ ನೀಡಿ ಮನೆ ಮನೆ ಮತಯಾಚನೆ ಮಾಡಿ ಮತನಾಡುತ್ತಿದ್ದರು.ಕಳೆದ ೨೦ ವರ್ಷಗಳಿಂದ ತಾಲ್ಲೂಕಿನಲ್ಲಿ ಜನಸೇವೆ ಮಾಡಿಕೊಂಡು ಬರುತ್ತಿದ್ದು, ನಿಮ್ಮಗಳ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತಿರುವುದಾಗಿ ತಿಳಿಸಿದರು. ನಾನು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಬಹಳ ಕಷ್ಟವನ್ನು ಪಟ್ಟಿದ್ದು ಅದನ್ನು ಮನಗಂಡು ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ನೋಟ್‌ಪುಸ್ತಕ, ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯ ನೀಡುತ್ತಾ ಬಂದಿದ್ದು, ಮಾಲೂರಿನಲ್ಲಿ ಸುಮಾರು ೧೫ ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ವಿದ್ಯಾರ್ಥಿಗಳಿಗಾಗಿ ಡಿಪ್ಲೊಮಾ ಕಾಲೇಜು ಕಟ್ಟಲು ಬರೆದು ಕೊಟ್ಟಿದ್ದು ಯಾವ ರಾಜಕಾರಣಿ ಇಂತಹ ಕೆಲಸ ಮಾಡಿದ್ದಾರೆ ಎಂದು ಸವಾಲು ಹಾಕಿದರು. ಈ ಬಾರಿ ನನಗೆ ಒಂದು ಅವಕಾಶ ಕೊಡಿ ನಾನು ಪಧವಿಧರ ನಿಮ್ಮಗಳ ಎಲ್ಲಾ ಬಗೆಯ ಸೌಕರ್ಯಗಳಿಗೆ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಇದಕ್ಕೂ ಮುಂಚೆ ಮುಂಜಾನೆ ಮಾಲೂರು ದೇವ ಮೂಲೆ ಎಂದೆ ಖ್ಯಾತಿ ಪಡೆದಿರುವ ಅಗಲಕೋಟೆಯ ಮಾರಮ್ಮನ ದೇವಾಲಯಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಬಸಾಪುರ, ಕೆಂಪಸoದ್ರ, ಹಳೇಪಾಳ್ಯ, ಅನಿಗಾನಹಳ್ಳಿ, ಊರಗುರ್ಕಿ, ಅನಂತಪುರ, ಕರಡಗುರ್ಕಿ, ಹುಲಿಗುಟ್ಟೆ, ಲಕ್ಷಿö್ಮಸಾಗರ, ಮಾದಾಪುರ, ಚಿನಪಗಾನಹಳ್ಳಿ, ಕೂಗಟಿಗಾನಹಳ್ಳಿ, ಹುಣಸಿಕೋಟೆ, ಓಬಟ್ಟಿ, ಕದಿರೇನಹಳ್ಳಿ, ಬಲ್ಲೇರಿ, ಜಂಗಾನಹಳ್ಳಿ, ಕೆ.ಜಿ.ಹಳ್ಳಿ, ದಾಸರಹಳ್ಳಿ, ಹುಳದೇನಹಳ್ಳಿ, ಕೂರ್ನಹೊಸಹಳ್ಳಿ, ಚಿಕ್ಕಮಲ್ಲೆ, ಗ್ರಾಮಗಳಿಗೆ ಬೇಟಿ ನೀಡಿದರು.ಆರತಿ ಬೆಳಗಿದರು : ಬಹುತೇಕ ಗ್ರಾಮಗಳಲ್ಲಿ ಸಮಂಗಲಿಯರು ರಾಮೇಗೌಡರಿಗೆ ಆರತಿ ಬೆಳಗಿದ್ದು ವಿಶೇಷವಾಗಿತ್ತು. ಕೆಲವು ಯುವಕ ವೃಂದ ಪಟಾಕಿ ಅಂಟಿಸಿ ಸ್ವಾಗತ ಕೋರಿದರು. ಇದೇ ವೇಳೆ ಕೆಲವು ದೇವಾಲಯಗಳಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಸಮಿತಿ ಹೆಚ್.ಎನ್.ಚಂದ್ರಶೇಖರಗೌಡ, ತಾ.ಜೆಡಿಎಸ್ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ರಾಜ್ಯ ಎಸ್.ಸಿ. ಮೋರ್ಚದ ಎನ್.ವೆಂಕಟರಾಮ್, ಆನೇಪುರ ದೇವರಾಜ್, ಸೋಮಶೇಖರ್, ಪ್ರಶಾಂತ್‌ಗೌಡ, ಯಲುವಗುಳಿ ನಾಗರಾಜ್, ದಾಸರಹಳ್ಳಿ ಶಾಮಣ್ಣ, ತಿರುಮಲಹಟ್ಟಿ ಜಯಣ್ಣ, ಸಾಧಿಕ್‌ಪಾಷ, ಛೋಟುಸಾಬ್, ಟೇಕಲ್ ಆಂಜಿನಪ್ಪ. ವೇಣು, ಮುನಿರಾಜು, ಅನೇಕ ಮಂದಿ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *