ಮಾಲೂರಿನಲ್ಲಿ ಸ್ವಾಭಿಮಾನದ ಹೆಜ್ಜೆ ಹೂಡಿ ವಿಜಯಕುಮಾರ್ ಪಕ್ಷೇತರ ಅಭ್ಯರ್ಥಿ ಅಬ್ಬರದ ಪ್ರಚಾರ

ಟೇಕಲ್, ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್ ರವರು ತಾಲ್ಲೂಕಿನಾದ್ಯಂತ ಬಿರುಸಿನ ಅಬ್ಬರದ ಮನೆ ಮನೆ ಪ್ರಚಾರವು ರಾಷ್ಟಿಯ ಪ್ರಾದೇಶಿಕ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಟೇಕಲ್ ವ್ಯಾಪ್ತಿಯ ಕೆ.ಜಿ.ಹಳ್ಳಿ ಗ್ರಾ.ಪಂ.ನಲ್ಲಿ ಸ್ವಾಭಿಮಾನದ ಹೆಜ್ಜೆಯ ನಡೆ.
ಮಾಲೂರು ಬಿಜೆಪಿಯಲ್ಲಿ ನಾಲ್ಕೂವರೆ ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿದು ಸೇವೆ ಮಾಡಿ ಜನತೆಗೆ ಹತ್ತಿರವಾಗಿ ಅವರ ಪ್ರೀತಿ ವಿಶ್ವಾಸಗಳಿಸಿದ್ದೆ. ಆದರೆ ಕೆಲವರಿಂದ ನನಗೆ ಟಿಕೆಟ್ ತಪ್ಪಿಸಿದರು ಎಂದು ಬಿಜೆಪಿಯ ಬಂಡಾಯದ ಸ್ವಾಭಿಮಾನದ ಹೆಜ್ಜೆ ಎಂದೆ ಬಿಂಬಿತವಾದ ಹೂಡಿ ವಿಜಯಕುಮಾರ್ ತಿಳಿಸಿದರು. ಅವರು ಟೇಕಲ್ ವ್ಯಾಪ್ತಿಯ ಹಳ್ಳಿಗಳಿಗೆ ಬೇಟಿ ನೀಡಿ ಮನೆ ಮನೆ ಮತಯಾಚನೆ ಮಾಡಿ ಮಾತನಾಡುತ್ತಿದ್ದರು. ನನ್ನ ನಾಮಪತ್ರ ವಾಪಸ್ ಪಡೆಯಲು ಸಚಿವರಾದ ಸುಧಾಕರ್‌ರವರು ನನ್ನ ಮನವೊಲಿಸಲು ಪೋನ್ ಕರೆ ಮಾಡಿ ಸರ್ಕಾರ ಬಂದ ಮೇಲೆ ನಿಮಗೆ ನಿಗಮ, ಮಂಡಳಿ ಅಥವಾ ಎಂಎಲ್‌ಸಿ ನೀಡುವ ಆಫರ್ ನೀಡಿದ್ದರು. ಅದನ್ನು ನಿರಾಕರಿಸಿ ನನ್ನ ಕಾರ್ಯಕರ್ತರು ಹಾಗೂ ಮತದಾರರ ಅನಿಸಿಕೆಯಂತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ಸು ಇಲ್ಲವೆಂದು ಹೇಳಿದೆ ಎಂದರು. ನನ್ನ ನಿರಂತರ ಸೇವೆಗೆ ಸಾವಿರಾರು ಜನ ತಮ್ಮ ಸ್ವಾಭಿಮಾನ ಜನರು ನನ್ನ ಜೊತೆ ನಿಂತು ಕೈಹಿಡಿದು ಯಾವುದೇ ಊರಿಗೆ ಹೋದರು ಜನರು ಪ್ರೀತಿ ವಿಶ್ವಾಸದಿಂದ ಹಾರೈಸುತ್ತಿದ್ದಾರೆಂದರು.
ಇದು ಮಾಲೂರು ತಾಲ್ಲೂಕಿನ ಸ್ವಾಭಿಮಾನ ಜನರ ಪ್ರಶ್ನೆಯಾಗಿದ್ದು ಅವರ ಅಭಿಪ್ರಾಯವೇ ನನ್ನ ಅಂತಿಮ ನಿರ್ಧಾರವಾಗಿದ್ದು, ಅವರ ಸೇವೆ ಮಾಡುತ್ತಿದ್ದು, ಕೋವಿಡ್ ಸಮಯದಲ್ಲಿ ತಾಲ್ಲೂಕಿನಲ್ಲಿ ಪ್ರತಿಯೊಬ್ಬರಿಗು ನನ್ನ ಸೇವೆ ನೀಡಿದ್ದು ಅವರ ಕಷ್ಟಕ್ಕೆ ಸ್ಪಂಧಿಸಿದ್ದೇನೆ ಅವರು ಎಂದಿಗೂ ನನ್ನ ಕೈ ಬಿಡುವುದಿಲ್ಲವೆಂದರು.
ಶ್ರೀನಿವಾಸಪುರಕ್ಕೆ ಟಿಕೆಟ್ : ನಾಲ್ಕೂವರೆ ವರ್ಷದಿಂದ ಮಾಲೂರು ತಾ.ಬಿಜೆಪಿಯಲ್ಲಿ ಗುರುತಿಸಿ ಕೊಂಡು ಸೇವೆ ಮಾಡಿದ್ದು ಅಂತಿಮ ಹಂತದಲ್ಲಿ ನಿಮಗೆ ಶ್ರೀನಿವಾಸಪುರಕ್ಕೆ ಟಿಕೆಟ್ ನೀಡುವುದಾಗಿ ತಿಳಿಸಿದ್ದರೆಂದು ಅದು ಬಲಿಷ್ಟವಾದ ಕ್ಷೇತ್ರವಾದ್ದರಿಂದ ಮಾಲೂರಿನಲ್ಲಿ ಪಕ್ಷದ ಮನೆ ಕಟ್ಟಿ ಬೆಳೆಸಿ ಪಕ್ಷದ ಮನೆಗೆ ಹೇಗೆ ಹೋಗುವುದು ಎಂದರು.
ಈ ಸಂದರ್ಭದಲಲಿ ಟೇಕಲ್ ವ್ಯಾಪ್ತಿಯ ಕೊಂಡಶೆಟ್ಟಹಳ್ಳಿ ಗ್ರಾಮದಲ್ಲಿ ಬಹುತೇಕ ಮುಸ್ಲಿಂ ಬಾಂಧವರು ಕಾಂಗ್ರೇಸ್, ಜೆಡಿಎಸ್ ತೊರೆದು ಹೂಡಿ ವಿಜಯಕುಮಾರ್ ಸಮ್ಮುಖದಲ್ಲಿ ಪಕ್ಷೇತರ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ಕೆ.ಜಿ.ಹಳ್ಳಿ ಗ್ರಾ.ಪಂ.ನ ಹುಣಸಿಕೋಟೆ, ಕೂಗಿಟಗಾನಹಳ್ಳಿ, ಜಂಗಾನಹಳ್ಳಿ, ಬಲ್ಲೇರಿ, ಓಬಟ್ಟಿ, ಕದಿರೇನಹಳ್ಳಿ, ಹಳೇಪಾಳ್ಯ, ಕೆಂಪಸoದ್ರ, ಊರಗುರ್ಕಿ, ಮಾದಾಪುರ, ಉಳ್ಳೇರಹಳ್ಳಿ, ಕೆ.ಜಿ.ಹಳ್ಳಿ, ಯಲುವಗುಳಿ ಗ್ರಾಮಗಳಿಗೆ ಬೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಚಂಬೆ ನಾರಾಯಣಗೌಡ, ಆರ್.ಪ್ರಭಾಕರ್, ನೂಟುವೆ ವೆಂಕಟೇಶಗೌಡ, ಪಿ.ನಾರಾಯಣಸ್ವಾಮಿ, ಇನ್ನೂ ಅನೇಕ ಮಂದಿ ಕಾರ್ಯಕರ್ತರು ಮುಖಂಡರು ಜೊತೆಯಲ್ಲಿದ್ದರು.

Leave a Reply

Your email address will not be published. Required fields are marked *