ಶ್ರೀನಿವಾಸಪುರ ಪಟ್ಟಣದ ವಾರ್ಡ್ ನಂ.17 ವೆಂಕಟೇಶ್ವರ ಬಡಾವಣೆಯ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ನನ್ನ ಸಂಜೆಯ ಸುರಿದ ಮಳೆಯಿಂದ ರಸ್ತೆ ಉದ್ದಕ್ಕೂ ನೀರು ನಿಂತು ಸಾರ್ವಜನಿಕರಿಗೆ ಮತ್ತು ಇಲ್ಲಿನ ನಿವಾಸಿಗಳಿಗೆ ಓಡಾಡಲು ತುಂಬಾ ಅನಾನುಕೂಲವಾಗಿದೆ
ಇದೇ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಜನರು ಮತ್ತು ವಾರ್ಡ್ ನ ಸಾರ್ವಜನಿಕರು ಸೇರಿದಂತೆ ಶಾಲಾ ಮಕ್ಕಳು ಎಸ್ಎಫ್ಎಸ್ ಶಾಲೆಗೆ ಸೇರಿದಂತೆ ಸರ್ಕಾರಿ ಶಾಲೆಗಳಿಗೂ ತೆರಳುವ ಮಕ್ಕಳು ಇದೇ ದಾರಿಯಲ್ಲಿ ಓಡಾಡುವುದು ಪ್ರತಿನಿತ್ಯ ಸಾಮಾನ್ಯವಾಗಿರುತ್ತದೆ
ನನ್ನ ಸಂಜೆ ಸುರಿದ ಮಳೆಯಿಂದ ಹಲವಾರು ಮಕ್ಕಳು ಇದೆ ದಾರಿಯಲ್ಲಿ ನೀರು ನಿಂತಿರುವ ಕಾರಣ ಶಾಲೆಯಿಂದ ಬಂದ ಮಕ್ಕಳು ಜಾರಿ ಜಾರಿ ಬಿದ್ದ ಘಟನೆಗಳು ಹೆಚ್ಚಾಗಿದ್ದವು ಎಂದು ಸ್ಥಳೀಯ ನಿವಾಸಿಗಳು ಸೇರಿದಂತೆ ಮಕ್ಕಳ ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ
ಸ್ಥಳೀಯ ಹಾಲಿ ಶಾಸಕರಾದ ಜಿಕೆ ವೆಂಕಟಶಿವಾ ರೆಡ್ಡಿ ಅವರಿಗೆ ದೂರವಾಣಿ ಮುಖಾಂತರ ಸಹ ಹಲವಾರು ಸಾರ್ವಜನಿಕರು ಇಲ್ಲಿನ ಪರಿಸ್ಥಿತಿಯನ್ನು ವಿವರಿಸಿ ಈ ರಸ್ತೆಗೆ ಸಿಸಿ ರಸ್ತೆಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿರುವ ಪ್ರಸಂಗ ನಡೆದಿದೆ
ಇಲ್ಲಿ ನಿಂತಿರುವ ನೀರನ್ನು ಕೂಡಲೇ ಪುರಸಭೆಯ ಅಧಿಕಾರಿಗಳು ಅಥವಾ ಸ್ಥಳೀಯ ವರ್ಣ ಪುರಸಭಾ ಸದಸ್ಯರು ಮುಂದೆ ನಿಂತು ರಸ್ತೆಯಲ್ಲಿ ನಿಂತಿರುವ ನೀರನ್ನು ಕಾಲುವೆಗೆ ಹರಿಸಲು ತಾತ್ಕಾಲಿಕವಾಗಿ ಕೆಲಸವನ್ನು ಮಾಡಬೇಕಾಗಿದೆ ಶಾಲಾ ಮಕ್ಕಳಿಗೂ ಸೇರಿದಂತೆ ಸ್ಥಳೀಯ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಒತ್ತಾಯಿಸಿದ್ದಾರೆ
ಶೀಘ್ರವಾಗಿ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ನಿರ್ಮಿಸಿದರೆ ಅನುಕೂಲವಾಗುತ್ತದೆ ಇಲ್ಲವಾದರೆ ಇದೇ ರೀತಿ ಮಳೆಯಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆ ಆದರೆ ಮಕ್ಕಳಿಗೆ ಅನಾನುಕೂಲವಾದರೆ ಶಾಲಾ ಮಕ್ಕಳು ಸಮೇತ ವಾರ್ಡ ನ ಎಲ್ಲ ನಿವಾಸಿಗಳು ಬಂದು ಪುರಸಭೆಯ ಮುಂದೆ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಈ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ ನೂತನವಾಗಿ ತಾಲೂಕಿನ ಶಾಸಕರಾಗಿ ಆಯ್ಕೆಯಾಗಿರುವ ಜಿಕೆ ವೆಂಕಟಶಿವಾರೆಡ್ಡಿ ರವರು ಸಹ ಇತ್ತ ಗಮನವನ್ನು ಹರಿಸಬೇಕಾಗಿದೆ ಎಂದು ಮನವಿಯನ್ನು ಮಾಡಿದ್ದಾರೆ