ಮೂಡಲಗಿ: ಮನುಷ್ಯನಿಗೆ ಶುದ್ಧವಾದ ಗಾಳಿ, ಶಾಂತ ವಾತಾವರಣ, ಅಗತ್ಯ ಪ್ರಮಾಣದ ಮಳೆ ಇವೆಲ್ಲವೂ ನಾವು ನೆಡುವ ಗಿಡಗಳಿಂದಲೇ ಪಡೆಯಲು ಸಾಧ್ಯ ಎಂದು ತುಕ್ಕಾನಟ್ಟಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಾದೇವ ಗೋಮಾಡಿ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರದಂದು ಧರ್ಮಸ್ಥಳ ಗ್ರಾಮಾಭವೃದ್ಧಿ ಯೋಜನೆಯಿಂದ ಹಮ್ಮಿಕೊಂಡ ಪರಿಶರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೂ ಪರಿಸರ ಜಾಗೃತಿ ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳೊಂದಿಗೆ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾದದ್ದು.
ಈಗಿನ ಮಕ್ಕಳಿಗೆ ಪರಿಸರ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಲು ಪ್ರೋತ್ಸಾಹಿಸುವುದು. ಮನೆಗೊಂದು ಮರ ಊರಿಗೊಂದು ವನ ಎಂಬoತೆ ಪ್ರತಿ ಮಗು ತನ್ನ ಹುಟ್ಟು ಹಬ್ಬದ ದಿನದಂದು ಒಂದು ಸಸಿಯನ್ನು ನೆಡುವುದು ಅದನ್ನು ಪೋಷಿಸುವುದು ಮತ್ತು ಬೆಳೆಸುವುದನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು ಸಾಲುಮರದ ತಿಮ್ಮಕ್ಕ ಪರಿಸರ ಪ್ರೇಮದಿಂದಾಗಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಭಾರಿ ಗುರುಮಾತೆ ಶ್ರೀಮತಿ ಕೆ.ಎಲ್.ಚಿಗುರಿ ಮತ್ತು ಯೋಜನೆಯ ಕೃಷಿ ಮೇಲ್ವಿಚಾರಕ ಮೈಲಾರಪ್ಪ ಪೈಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ ಕುಮಾರ ಮರ್ದಿ, ಗ್ರಾ.ಪ ಉಪಾಧ್ಯಕ್ಷೆ ಯಲ್ಲವ್ವ ಬಿಳಿಗೌಡರ್ ಸದಸ್ಯರಾದ ಗಾಯತ್ರಿ ಬಾಗೇವಾಡಿ ಲಕ್ಕವ್ವ ಕೊಣ್ಣೂರ್ ಸುನಂದ ಭಜಂತ್ರಿ ಗೋವಿಂದ್ ನಾವಿ ಮತ್ತು ಶಾಲಾ ಶಿಕ್ಷಕರು ಮತ್ತಿತರರು ಇದ್ದರು.
ಸೇವಾ ಪ್ರತಿನಿಧಿ ಸುನಂದ ಭಜಂತ್ರಿ ಸ್ವಾಗತಿಸಿದರು. ವಲಯದ ಮೇಲ್ವಿಚಾರಕ ಅಣ್ಣಪ್ಪ ಬಾರ್ಕೆರ್ ನಿರೂಪಿಸಿದರು. ಶಿಕ್ಷಕ ಕೆ.ಆರ್.ಭಜಂತ್ರಿ ವಂದಿಸಿದರು