ಶ್ರೀನಿವಾಸಪುರ : ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲ ಮಂತ್ರ, ನನಗೆ ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ ಎಂದು ಕೆ.ಆರ್.ರಮೇಶ್‌ಕುಮಾರ್ ಹೇಳಿದರು.
ಮುದಿಮಡುಗು ಗ್ರಾಮಪಂಚಾಯಿತಿ ವ್ಯಾಪ್ತಿಯ ಎಂ. ತುಮ್ಮಲಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲಾವರಣದ ಬಳಿ ಗುರುವಾರ ನಡೆದ ಬೂತ್ ಮಟ್ಟದ ಸಭೆಯಲ್ಲಿ ಗ್ರಾಮದ ಸಾರ್ವಜನಿಕರೊಂದಿಗೆ ಕುಂದುಕೊರತೆಗಳನ್ನು ವಿಚಾರಿಸಿ ಮಾತನಾಡಿದರು.
ನನ್ನ ಕ್ಷೇತ್ರಕ್ಕೆ ಸಂಬAದಿಸಿದ ಗ್ರಾಮಗಳಲ್ಲಿ ಬಡಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದ್ದು , ಅವರ ಅಭಿವೃದ್ದಿಯೇ ನನ್ನ ಗುರಿ . ಅವರಿಗೆ ಸರ್ಕಾರದ ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ಪಕ್ಷಾತೀತವಾಗಿ ಮನೆಯ ಬಾಗಿಲಿಗೆ ನೀಡಿ, ಮತದಾರನ ಋಣವನ್ನು ತೀರಿಸುತ್ತಾ , ಮತದಾರನು ನೀಡಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುಲಾಗುವುದು ಎಂದರು.
ಜನತೆ ನನ್ನ ಮೇಲಿನ ಪ್ರೀತಿ ವಿಶ್ವಾಸಕ್ಕೆ ಮತ ಹಾಕಿ ನನ್ನನ್ನು ಗೆಲ್ಲಿಸಿಕೊಟ್ಟಿದ್ದಾರೆ ಅದಕ್ಕಾಗಿ ಇಂದು ನಾನು ಅವರ ಋಣ ತೀರಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ಬಡವರಿಗೆ ಮನೆಗಳ ನಿರ್ಮಾಣ, ಶುದ್ದ ಕುಡಿಯುವ ನೀರಿನ ಸೌಲಭ್ಯ, ಸುಸಜ್ಜಿತ ರಸ್ತೆಗಳು ಸೇರಿದಂತೆ ಸಾರ್ವಜನಿಕರ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿದ್ದೇನೆ ಎಂದರು.
ನೀವು ನನಗೆ ಸೂಚಿಸಿದ ಎಲ್ಲಾ ಕುಂದುಕೊರತೆಗಳನ್ನು ಪಕ್ಷಾತೀತವಾಗಿ ಬಹುತೇಕ ಕಾರ್ಯಗತಗೊಳಿಸಿದ್ದು, ಇನ್ನು ಬೆರಳಣಿಕೆಯ ಕುಂದುಕೊರತೆಗಳನ್ನು ಇದ್ದು, ಅವುಗಳು ಇದ್ದರೆ ನನಗೆ ಸೂಚಿಸಿ ಅವುಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಅವುಗಳನ್ನು ಸಹ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಗ್ರಾಮಗಳ ಅಭಿವೃದ್ಧಿಗೆ ನರೇಗಾ ಯೋಜನೆಯು ಪೂರಕ. ಗ್ರಾಮಗಳ ಅಭಿವೃದ್ದಿಗೆ ಪಕ್ಷಾತೀತವಾಗಿ ಸರ್ಕಾರದ ಯೋಜನೆಗಳನ್ನು ಬಳಿಸಿಕೊಂಡು ಗ್ರಾಮಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕು.
ಮುದಿಮಡುಗು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಬೇಟಿ , ಆ ಗ್ರಾಮಗಳ ಸಾರ್ವಜನಿಕರೊಂದಿಗೆ ಕುಂದುಕೊರತೆಗಳನ್ನು ವಿಚಾರಿಸಿ ಸ್ಥಳದಲ್ಲಿಯೇ ಇದ್ದ ಸಂಬAದಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಚಿಂತಮಾನಪಲ್ಲಿ ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಹಾರಗಳನ್ನು ಹಾಕಿ, ಆರತಿ ಮಾಡುವುದರ ಮೂಲಕ ಗ್ರಾಮಕ್ಕೆ ಶಾಸಕರನ್ನ ಬರಮಾಡಿಕೊಂಡರು. ಟಿಎಪಿಸಿಎಂಎಸ್ ತಾಲೂಕು ಅಧ್ಯಕ್ಷ ಬಗ್ಗಲಘಟ್ಟ ಶ್ರೀನಿವಾಸರೆಡ್ಡಿ, ಎಪಿಎಂಸಿ ಮಾಜಿ ಸದಸ್ಯ ಪೆದ್ದರೆಡ್ಡಿ, ಗ್ರಾ.ಪಂ ಅಧ್ಯಕ್ಷ ಚಿನ್ನರೆಡ್ಡಪ್ಪ, ಮುಖಂಡರಾದ ರಾಮಸ್ವಾಮಿಶೆಟ್ಟಿ , ರಾಮಾನುಜಚಾರ್ಯ, ಅಮರನಾರಾಯಣ , ಬಾವಾರೆಡ್ಡಿ, ರಾಮಸ್ವಾಮಿ, ಚನ್ನಕೇಶವ, ಮುಡಿಯನೂರು ಮಂಜುನಾಥ್, ತುಮ್ಮಲಪಲ್ಲಿ ಅಪ್ಪಲ್ಲ, ಪಿಡಿಒ ನರೇಂದ್ರಬಾಬು ಹಾಗೂ ಗ್ರಾ.ಪಂ. ಸದಸ್ಯರು ಇದ್ದರು.