ಮತವನ್ನು ಹೆಂಡ ಸಾರಾಯಿ ಹಣಕ್ಕಾಗಿ ಮಾರಿಕೊಳ್ಳಬೇಡಿ ಸಂವಿಧಾನ ರಕ್ಷಣೆಗೆ ನಿಲ್ಲುವ ಜನನಾಯಕನನ್ನು ಆಯ್ಕೆ ಮಾಡಿ : ಉಚ್ಚ ನ್ಯಾಯಾಲಯದ ವಕೀಲ ಜಗದೀಶ್

ಶ್ರೀನಿವಾಸಪುರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟದಿಂದ ಆಯೋಜಿಸಲಾಗಿದ್ದ ಸಮಾಲೋಚನ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ  ಹೈಕೋರ್ಟ್ ವಕೀಲರಾದ ಜಗದೀಶ್ ರವರು ಮಾತನಾಡಿ ನಮ್ಮ ದೇಶದಲ್ಲಿ ಮತದಾನದ ಹಕ್ಕನ್ನು ತಂದುಕೊಟ್ಟ ಊರು ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ರವರು ಮತದಾನವನ್ನು ತಂದ ಕಾರಣವೇನೆಂದರೆ ನಮ್ಮ ದುನಿಯಾಗಿ ನಿಲ್ಲುವ ನಾಯಕನನ್ನು ನಾವು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸುವ ಜನನಾಯಕನಾಗಿರಬೇಕು ಅವರು ನಮ್ಮ ಪರವಾಗಿ ಮಾತನಾಡಿ ನಮ್ಮ ಮೂಲಭೂತ ಸೌಕರ್ಯಗಳನ್ನು ಮತ್ತು ನಮ್ಮ ನೋವು ಸಂಕಟಗಳನ್ನು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಂವಿಧಾನ ರಕ್ಷಣೆ ಮಾಡುವ ಒಬ್ಬ ಜನನಾಯಕನನ್ನು ಆಯ್ಕೆ ಮಾಡುವ ಉದ್ದೇಶದಿಂದ ಮತದಾನದ ಹಕ್ಕನ್ನು ತಂದು ಕೊಟ್ಟರು ಈ ಮತದಾನದ ಹಕ್ಕನ್ನು ನಾವು ಹೆಂಡ ಸಾರಾಯಿ ಮತ್ತು ಹಣಕ್ಕಾಗಿ ಮತ್ತು ಗಿಫ್ಟ್ ಗಳಿಗೆ ಮರೆ ಹೋಗಿ ನಮ್ಮ ಮತವನ್ನು ಮಾರಿಕೊಳ್ಳಬಾರದು ನಮ್ಮ ದೇಶದ ಅತ್ಯುನ್ನತ ಸಂವಿಧಾನವನ್ನು ರಕ್ಷಣೆ ಮಾಡುವಂತಹ ಒಬ್ಬ ಜನನಾಯಕನನ್ನು ನಾವು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಿವಿಮಾತು ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿಶ್ವ ಕಂಡ ಮಹಾನ್ ನಾಯಕ ಮತ್ತು ಪ್ರಪಂಚದ ಉದ್ದಗಲಕ್ಕೂ ನಮ್ಮ ಸಂವಿಧಾನವು ಉತ್ತಮ ಮೌಲ್ಯವನ್ನು ಹೊಂದಿರುವ ಸಂವಿಧಾನವನ್ನು ನಮ್ಮ ದೇಶಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಪಣತೊಡಲುವಂತೆ ಕೈಜೋಡಿಸಬೇಕು.

ಬಾಬಾ ಸಾಹೇಬ್ರವರು ಯಾವುದೇ ಒಂದು ದೇಶಕ್ಕೆ ಸೀಮಿತವಲ್ಲದೆ ಇಡೀ ವಿಶ್ವದ ಉದ್ದಗಲಕ್ಕೂ ಸಹ ಅವರ ಜನ್ಮದಿನಾಚರಣೆಯನ್ನು ಮಾಡುವುದು ನಾವು ಕಾಣಬಹುದು ಆದರೆ ಈ ನಮ್ಮ ಭಾರತ ದೇಶದಲ್ಲಿ ಇಂದಿಗೂ ಸಹ ಹಲವು ಕಡೆ ಅವರ ಜನ್ಮದಿನಾಚರಣೆಯನ್ನು ಮಾಡಲು ಹಿಂಜರಿಯುವುದು ನಮಗೆ ಮುಜುಗರವನ್ನು ತರುತ್ತಿದೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಇಂದು ನಮ್ಮ ದೇಶದಲ್ಲಿ ವಿವಿಧ ಪಕ್ಷಗಳು ಸೇರಿದಂತೆ ಎಲ್ಲಾ ರಾಜಕೀಯ ನಾಯಕರು ನಾವು ಮೀಸಲಾತಿಯನ್ನು ಹೆಚ್ಚಿಸಿಕೊಂಡಿದ್ದೇವೆ ಎಂದು ಉಡಾಫೆಯ ಮಾತುಗಳನ್ನಾಡುತ್ತಾರೆ ಆದರೆ ಅಂದಿನ ದಿನಗಳಲ್ಲಿಯೇ ಅಂಬೇಡ್ಕರ್ ಅವರು ಇಂತಿಷ್ಟು ಮೀಸಲಾತಿ ಎಂದು ಎಲ್ಲರಿಗೂ ಸಹ ಸಮಾನತೆ ನಿಟ್ಟಿನಲ್ಲಿ ನಮಗೆ ಮೀಸಲಾತಿಯನ್ನು ನೀಡಿದ್ದಾರೆ.

ಮೀಸಲಾತಿ ಎಲ್ಲಿಯವರೆಗೂ ಇರಬೇಕು ಎಂದು ಒಂದು ಬಾರಿಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರನ್ನು ಕೇಳಿದಾಗ ಎಲ್ಲಿಯವರೆಗೂ ಸಮಾನತೆ ಬರುತ್ತದೆಯೋ ಅಲ್ಲಿಯವರೆಗೂ ಹಾಗೂ ಅಸ್ಪೃಶ್ಯತೆ ಎಂದಿಗೆ ಮಾಯವಾಗುತ್ತದೆಯೋ ಅಂದಿನವರೆಗೂ ಮೀಸಲಾತಿಯು ಇರಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೆಲುಕು ಹಾಕಿದರು.

ಇಂದಿನ ಯುವ ಪೀಳಿಗೆಯು ವಿದ್ಯಾವಂತರಾಗಿ ತಮ್ಮ ಕುಟುಂಬ ಪೋಷಣೆಗಾಗಿ ಮಾತ್ರ ನಿಲ್ಲದೆ ಜನಾಂಗದ ಏಳಿಗೆಗಾಗಿ ಎಲ್ಲರೂ ಪಣತೊಡಬೇಕಾಗಿದೆ ವಿದ್ಯಾವಂತರಾದವರು ಬಡಬಗ್ಗರಿಗೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸವನ್ನು ನೀಡಿ ತಮ್ಮ ಕೈಲಾದ ಸೇವೆಯನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡಬೇಕು ಎಂದು ಸಲಹೆ ನೀಡಿದರು.

ಸ್ವತಂತ್ರ ಹೋರಾಟದ ಸಮಯದಲ್ಲಿ ಎಲ್ಲರೂ ಸ್ವತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ ಆದರೆ ಡಾ. ಬಿಆರ್ ಅಂಬೇಡ್ಕರ್ ರವರು ಸ್ವತಂತ್ರ ಹೋರಾಟಕ್ಕೆ ಕೈಜೋಡಿಸಿಲ್ಲ ಎನ್ನುವವರು ಅವರ ದಡ್ಡತನವೇ ಸಾಕ್ಷಿ ಆಗಿರುತ್ತದೆ ಏಕೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ದೇಶ ವಿಭಜನೆಯ ಸಮಯದಲ್ಲಿ ಜಿನ್ನಾರವರು ಮತ್ತು ಬ್ರಿಟಿಷರು ಗಾಂಧೀಜಿ ಸೇರಿದಂತೆ ಪಾಕಿಸ್ತಾನವನ್ನು ವಿಭಜಿಸಿದಾಗ ಜನರವರು ನೀವು ನಮ್ಮ ದೇಶಕ್ಕೆ ಬಂದು ಇಲ್ಲಿ ನೆಲೆಸಿ ನಿಮಗೆ ಏನು ಹುದ್ದೆ ಬೇಕಾದರೂ ನಾವು ನೀಡುತ್ತೇವೆ ಎಂದು ಪರಿಪರಿಯಾಗಿ ಬೇಡಿಕೊಂಡರೂ ಹಾಗೆ ಹಿಂದುಸ್ಥಾನದಲ್ಲಿ ನಿಮಗೆ ದಲಿತ ಸ್ಥಾನ ಕೂಡ ನೀಡುತ್ತೇವೆ ಎಂದು ಕೇಳಿದಾಗ ಬ್ರಿಟಿಷರು ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಾನು ಈ ಭಾರತ ದೇಶದ ಹೆಮ್ಮೆಯ ಪುತ್ರನಾಗಿ ಭಾರತ ದೇಶವನ್ನು ಚಿದ್ರವಾಗಲು ಬಿಡುವುದಿಲ್ಲ ಮತ್ತು ಈ ನಮ್ಮ ಭಾರತ ದೇಶವನ್ನು ಐಕ್ಯತೆಯಾಗಿ ದೇಶವನ್ನು ಹೊಡೆಯಲು ಯಾವುದೇ ರೀತಿಯಲ್ಲಿ ನಾನು ಸಹಕಾರ ನೀಡುವುದಿಲ್ಲ ಎಂದು ಬ್ರಿಟಿಷರಿಗೆ ಮತ್ತು ಜಿನ್ನಾ ರವರಿಗೆ ಹೇಳಿರುವ ಘಟನೆಯನ್ನು ಸವಿವರವಾಗಿ ವಿವರಿಸಿದರು.

ಇಂದಿನ ದಿನಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹಿರಿಯರು ಉನ್ನತಕ ಸಂಘ ಪಡೆದಿರುವವರು ಸೇರಿದಂತೆ ಉನ್ನತ ಶಿಕ್ಷಣ ಪಡೆದವರು ಸಹ ತಮ್ಮ ಅಳಿಲು ಸೇವೆಯನ್ನು ಈ ದೇಶದ ಭವಿಷ್ಯ ಬುನಾದಿಗಾಗಿ ಮಕ್ಕಳಿಗೆ ತಮ್ಮ ಹಿಂದಿನ ಘಟನೆಗಳನ್ನು ಮಿಲ್ಕು ಹಾಕುತ್ತಾ ಮುಂದಿನ ಯುವ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸಿ ವಿದ್ಯಾಭ್ಯಾಸವನ್ನು ಕೊಡಿಸಿ ಕೊಡಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪರಿಶಿಷ್ಟ ಜನಾಂಗದ ಪರಿಶಿಷ್ಟ ಪಂಗಡದ ಹಳೆಯ ವಿದ್ಯಾರ್ಥಿಗಳಾದ ಕೊನ್ನಹಳ್ಳಿ ಟಿ ಎನ್ ನಾರಾಯಣಸ್ವಾಮಿ, ಪಾತಬಲಪಲ್ಲಿ ಅಪಲನ್ನ,  ಸಿ ನಾರಾಯಣಸ್ವಾಮಿ, ರಮೇಶ್, ಬ್ಯಾಂಕ್ ಅಂಬರೀಶ್, ಪರಮಪಲ್ಲಿ ಅಮರ, ಚಿಲ್ಲರಪಲ್ಲಿ ರಮೇಶ್ ಸದಾಶಿವ ಅಡವಿ ಚಂಬಕೂರು, ಲಕ್ಷ್ಮಿಸಾಗರ ನಾಗರಾಜು, ಉಪ್ಪರಪಲ್ಲಿ ಶಿವ, ಶೋಬನ್ ಬಾಬು, ರವಣಪ್ಪ, ನಾಗರಾಜು ಹಾಗೂ ಎಲ್ಲಾ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

One thought on “ಮತವನ್ನು ಹೆಂಡ ಸಾರಾಯಿ ಹಣಕ್ಕಾಗಿ ಮಾರಿಕೊಳ್ಳಬೇಡಿ ಸಂವಿಧಾನ ರಕ್ಷಣೆಗೆ ನಿಲ್ಲುವ ಜನನಾಯಕನನ್ನು ಆಯ್ಕೆ ಮಾಡಿ : ಉಚ್ಚ ನ್ಯಾಯಾಲಯದ ವಕೀಲ ಜಗದೀಶ್

Leave a Reply

Your email address will not be published. Required fields are marked *