ಕಳೆದ ಭಾನುವಾರ ಪಟ್ಟಣದ ಮಾರುತಿ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸುಮಾರು 250 ಕುಟುಂಬಗಳು ಎಂದು ಹೇಳಿಕೊಳ್ಳುವ ಹಾಲಿ ಶಾಸಕ ಕೆಆರ್ ರಮೇಶ್ ಕುಮಾರ್ ರವರು 250 ಕುಟುಂಬಗಳ ಸಮೇತ ಸ್ಪಷ್ಟನೆ ನೀಡಲಿ ಎಂದು ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಬಿವಿ ಶಿವಾರೆಡ್ಡಿ ಸವಾಲನ್ನು ಹಾಕಿದ್ದಾರೆ.
ಶ್ರೀನಿವಾಸಪುರ ಪಟ್ಟಣದ ಹೋಂಡಾ ಶೋರೂಮ್ ಆವಲಕು ಪ್ಪ ನಾರಾಯಣಸ್ವಾಮಿ ರವರ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ ವಿ ಶಿವಾರೆಡ್ಡಿರವರು ಶಾಸಕ ಕೆಆರ್ ರಮೇಶ್ ಕುಮಾರ್ ಅವರ ಹಿಂಬಾಲಕರು ಹಾಗೂ ಅವರ ಅನುಯಾಯಿಗಳು ಆಗಿದ್ದ ಮಾಜಿ ಪುರಸಭಾ ಅಧ್ಯಕ್ಷ ಬಿಎಂ ಪ್ರಕಾಶ್ ಹಾಗೂ ವಕೀಲರು ಆದ ಕೆ ನಾರಾಯಣಸ್ವಾಮಿ ರವರು ಮಾರುತಿ ಸಭಾಭವನದಲ್ಲಿ ಸೇರ್ಪಡೆಯಾಗಿದ್ದಾರೆ ಇವರ ಹಿಂದೆ 250 ಕುಟುಂಬಗಳು ಸೇರ್ಪಡೆಯಾಗಿಲ್ಲ ಕೇವಲ ಇಬ್ಬರು ವ್ಯಕ್ತಿಗಳು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಹೋಗಿದ್ದಾರೆ ವಿನಹ ವಿವಿಧ ಪಕ್ಷಗಳಿಂದ ಯಾವುದೇ ಕುಟುಂಬಗಳು ಸೇರ್ಪಡೆಯಾಗಿಲ್ಲ ಆ ರೀತಿ ಸೇರ್ಪಡೆಯಾಗಿದ್ದರೆ ದಾಖಲೆಗಳನ್ನು ನೀಡಲಿ ಎಂದು ಶಾಸಕ ಕೆಆರ್ ರಮೇಶ್ ಕುಮಾರ್ ರವರಿಗೆ ವಿವಿ ಶಿವಾ ರೆಡ್ಡಿ ಸವಾಲನ್ನು ಎಸೆದಿದ್ದಾರೆ.
ಮಾಧ್ಯಮದವರು ಎಲ್ಲವನ್ನು ಅರಿತು ಸುದ್ದಿಯನ್ನು ಮಾಡಬೇಕು ಸುಮ್ಮನೆ ಅವರು ಹೇಳಿದಂತೆ ಸುದ್ದಿಗಳನ್ನು ಮಾಡಿದರೆ ಜನತೆಗೆ ತಪ್ಪು ಸಂದೇಶವನ್ನು ರವಾನಿಸಿದಂತೆ ಆಗುತ್ತದೆ ಮಾಧ್ಯಮದವರು 250 ಕುಟುಂಬಗಳ ಹೆಸರುಗಳನ್ನು ಸಹ ಸೇರ್ಪಡೆಯ ಸಂದರ್ಭದಲ್ಲಿ ಕೇಳಿ ಹಾಕಬೇಕಾಗಿತ್ತು ಆದರೆ ಮಾಧ್ಯಮದವರು ದುಡುತ್ತಿದ್ದಾರೆ ಈ ರೀತಿ ನಿರ್ಧಾರಗಳನ್ನು ಕೈಗೊಳ್ಳಬೇಡಿ ಎಂದು ಮನವಿ ಮಾಡಿದರು
ಶ್ರೀನಿವಾಸಪುರ ತಾಲೂಕಿನ ಗಡಿ ಭಾಗಗಳಾದ ಗೌನಿ ಪಲ್ಲಿ ರಾಯಲ ಪಾಡು ಸೇರಿದಂತೆ ಎಲ್ಲ ಗಡಿ ಪ್ರದೇಶಗಳಲ್ಲಿ ಮಾಧ್ಯಮದಲ್ಲಿ ಬಂದ ಸುದ್ದಿಯನ್ನು ನೋಡಿ ಶ್ರೀನಿವಾಸಪುರ ಪಟ್ಟಣದಲ್ಲಿ ಅದೆಷ್ಟೋ ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹರಿದಾಡಿ ಸುಳ್ಳನ್ನು ಹೇಳಿಕೊಳ್ಳುತ್ತಿದ್ದಾರೆ ಹಾಲಿ ಶಾಸಕ ಕೆಆರ್ ರಮೇಶ್ ಕುಮಾರ್ ರವರು ಇವರ ಮಾತುಗಳಿಂದ ಮತದಾರರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ.
ಬಲಜಿಗ ಸಮುದಾಯದ ಶಂಕರ್ ಅವರು ಮಾತನಾಡಿ ಸೀತಾರಾಮ್ ರವರು ಬಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ನಮ್ಮ ಸಮುದಾಯದ ಎಲ್ಲ ಮುಖಂಡರನ್ನು ಕರೆಸಿ ಕರೆಯನ್ನು ನೀಡಿದ್ದಾರೆ.
ಆದರೆ ಈ ಕರೆಯನ್ನು ನಾವು ಸ್ವೀಕರಿಸುವುದಿಲ್ಲ ನಾವು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಜಿಕೆ ವೆಂಕಟಶಿವಾರೆಡ್ಡಿರವರಿಗೆ ಬೆಂಬಲಿಸುವುದಾಗಿ ಹೇಳಿದರು.
ಬಲಜಿಗ ಸಮುದಾಯವನ್ನು ಯಾವುದೋ ಒಂದು ಸಭೆ ಇದೆ ಎಂದು ಸಮುದಾಯದ ಕುರಿತಂತೆ ಮಾಹಿತಿ ನೀಡಲು ಕರೆದು ಅಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಹೇಳುವುದು ಸಮಾಜಸವಲ್ಲ ಇದು ನಮ್ಮ ಸಮುದಾಯದ ಹಿರಿಯರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ನಮಗೆ ಯಾವುದೇ ರೀತಿಯಲ್ಲಿ ಪ್ರೋತ್ಸಾಹ ನೀಡಲಿಲ್ಲ : ಇಂದಿರಾ ಭವನ್ ರಾಜಣ್ಣ
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಇಂದಿರಾ ಭವನ್ ರಾಜಣ್ಣ ರವರು ಮಾತನಾಡಿ ಶ್ರೀನಿವಾಸಪುರದ ಸಮಗ್ರ ಅಭಿವೃದ್ಧಿಯು ಶಾಸಕ ಕೆಆರ್ ರಮೇಶ್ ಕುಮಾರ್ ಅವರ ಅಭಿವೃದ್ಧಿಯಲ್ಲ ಎಂದು ಹೇಳಿ ನಾನು ಬಿ ಫಾರಂ ನೀಡುವ ವಿಚಾರದಲ್ಲಿ ಮಧ್ಯವರ್ತಿಗಳಿಗೆ ಹಾಗೂ ನನಗೂ ಸ್ವಲ್ಪ ಮಾತುಕತೆ ನಡೆದು ಅಂದಿನ ದಿನದಲ್ಲಿ ಜಿಕೆ ವೆಂಕಟಶಿವಾರೆಡ್ಡಿ ರವರಿಂದ ದೂರವಾಗಿ ಹಾಲಿ ಶಾಸಕ ಕೆಆರ್ ರಮೇಶ್ ಕುಮಾರ್ ಅವರ ಜೊತೆಗೂಡಿ ಸ್ವಲ್ಪ ಸಮಯ ಕಳೆದೆ ಆದರೆ ಯಾವುದೇ ರೀತಿಯಲ್ಲಿ ನಮಗೆ ಸಹಕಾರ ನೀಡಲಿಲ್ಲ ಅಂದಿನ ದಿನದಲ್ಲಿ 3600 ಮತಗಳನ್ನು ಬಲಜಿಗ ಸಮುದಾಯದ ಎಲ್ ವಿ ಗೋವಿಂದಪ್ಪ ಹಾಗೂ ನಾನು ಪಟ್ಟ ಶ್ರಮದಿಂದ ಅಂದಿನ ದಿನದಲ್ಲಿ ಶಾಸಕರಾದರು ಕೆ ಆರ್ ರಮೇಶ್ ಕುಮಾರ್ ರವರು ಅನಂತರ ನಮ್ಮನ್ನು ಕಡ ಗಣನೆ ಮಾಡಿ ನಮಗೆ ಯಾವುದೇ ರೀತಿಯಲ್ಲಿ ಪ್ರೋತ್ಸಾಹ ನೀಡಲಿಲ್ಲ ಎಂದು ಆಕ್ರೋಶ ಭರಿತರಾಗಿ ನುಡಿದರು.
ಏನಾದರೂ ಶ್ರೀನಿವಾಸಪುರ ತಾಲೂಕಿನಲ್ಲಿ ಅಭಿವೃದ್ಧಿಯಾಗಿರುವುದಾದರೆ ಅದು ಮಾಜಿ ಶಾಸಕ ಜಿ ಕೆ ವೆಂಕಟಶಿವಾರೆಡ್ಡಿ ರವರಿಂದ ಮಾತ್ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಕೆ ವೆಂಕಟಶಿವಾರೆಡ್ಡಿರವರಿಗೆ ಮತಗಳನ್ನು ನೀಡಬೇಕು ಎಂದು ಹೇಳಿದರು.
ಅಂಬೇಡ್ಕರ್ ಪಾಳ್ಯ ರವಿ ಮಾತನಾಡಿ ದಲಿತರನ್ನು ಒಲೈಕೆ ಮಾಡಲು ಕೇವಲ ಮಸಲೇ ಕಣ್ಣೀರು ಸುರಿಸುತ್ತಾರೆ
ವಿನಹ ಶಾಸಕ ಕೆಆರ್ ರಮೇಶ್ ಕುಮಾರ್ ಅವರು ಯಾವುದೇ ರೀತಿಯಲ್ಲಿ ದಲಿತರನ್ನು ಉನ್ನತ ಹುದ್ದೆಗಳಿಗೆ ಏರಿಸಿಲ್ಲ ಆದರೆ ಜಿ ಕೆ ವೆಂಕಟಶಿವಾ ರೆಡ್ಡಿ ರವರು ಹಲವಾರು ರೀತಿಯಲ್ಲಿ ಎಲ್ಲಾ ವರ್ಗದ ಜನರಿಗೆ ಉನ್ನತ ಹುದ್ದೆಗಳನ್ನು ನೀಡಿ ಗೌರವಿಸಿದ್ದಾರೆ.
ಇತ್ತೀಚೆಗೆ ಮಡಿದ ಹಿರಿಯ ವಕೀಲ ಕೆ ಶಿವಪ್ಪ ರವರು ಹಾಲಿ ಶಾಸಕರ ಬಲಗೈ ಬಂಟನಾಗಿದ್ದು ಆ ದಿನಗಳಲ್ಲಿ ಅವರನ್ನು ದಲಿತರ ಮುಖಂಡರೆಂದು ಹೇಳಿಕೊಂಡು ದಲಿತರ ಮತಗಳನ್ನು ಪಡೆಯುವಲ್ಲಿ ಶಾಸಕ ರಮೇಶ್ ಕುಮಾರ್ ಅವರು ಉತ್ತಮ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ ಆನಂತರ ಕೆ ಶಿವಪ್ಪ ರವರಿಗೆ ಯಾವುದೇ ರೀತಿಯಲ್ಲಿ ರಾಜಕೀಯ ಅಧಿಕಾರವನ್ನು ನೀಡಿಲ್ಲ ಎಂದು ಆರೋಪಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ಕಾರ್ ಬಾಬು, ಜಗದೀಶ್ ಬಾಬು, ಶಿವಣ್ಣ, ಏಜು ಅಮರನಾಥ್ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರು ಭಾಗಿಯಾಗಿದ್ದರು.