ಕೋಲಾರ,ಪೋಷಕರನ್ನು, ಗುರು-ಹಿರಿಯರನ್ನು ಗೌರವಿಸಲು ಹಾಗೂ ಕನ್ನಡನಾಡನ್ನು ಪ್ರೀತಿಸಲು ಮಕ್ಕಳಿಗೆ ಕನ್ನಡದ ಸಂಸ್ಕೃತಿ ಕಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|| ಸಿ.ಸೋಮಶೇಖರ ಅವರು ತಿಳಿಸಿದರು.
ಇಂದು ಶ್ರೀನಿವಾಸಪುರ ತಾಲ್ಲೂಕಿನ ಲಕ್ಷಿö್ಮÃಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ ಸಹಯೋಗದೊಂದಿಗೆ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ವಿಶೇಷ “ಗಡಿನಾಡ ಉತ್ಸವ ಗಡಿಯಲ್ಲಿ ಕನ್ನಡ ಕಲರವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ೨೦೧೦ ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಪ್ರಾಧಿಕಾರದ ಮೂಲ ಆಶಯ ಗಡಿಭಾಗದಲ್ಲಿ ಕನ್ನಡದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರೆ ಪರಭಾಷೆಗಳ ಪ್ರಭಾವದಿಂದ ನಮ್ಮ ಭಾಷೆ ಶಿಥಿಲವಾಗದಂತೆ ನೋಡಿಕೊಳ್ಳುವುದು. ಸರ್ಕಾರಿ ಶಾಲೆಗಳಿಗೆ ಕೊಠಡಿ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ಗ್ರಂಥಾಲಯಗಳ ನಿರ್ಮಾಣ ಯೋಜನೆಗಳನ್ನು ಪ್ರಾಧಿಕಾರ ಹಮ್ಮಿಕೊಂಡಿದೆ. ನಾಡಿನಲ್ಲಿ ಸಂಸ್ಕೃತಿ ಇಲ್ಲದಿದ್ದರೆ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಮನುಷ್ಯನ ಮನದಲ್ಲಿ ಕನ್ನಡದ ಸಂಸ್ಕೃತಿ ವಿಶೇಷವಾಗಿ ಅರಳಬೇಕು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಸಂಸ್ಕೃತಿ ಕನ್ನಡದ ಸಂಸ್ಕೃತಿಯಾಗಿದೆ. ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂದು ತಿಳಿಸುವ ದೊಡ್ಡ ಸಂಸ್ಕೃತಿ ನಮ್ಮ ಕನ್ನಡ ಸಂಸ್ಕೃತಿ. ಆದಿಕವಿ ಪಂಪ ರವರು ಮಾನವ ಕುಲಂ ಒಂದೇ ವಲಂ ಎಂದು ತಿಳಿಸಿಕೊಟ್ಟರು. ವಿಶೇಷವಾಗಿ ಮಕ್ಕಳ ಮನಸ್ಸಿನಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬಿತ್ತಬೇಕು. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಡೀ ವಿಶ್ವದಲ್ಲೇ ಕನ್ನಡದ ವಾಸ್ತುಶಿಲ್ಪ, ನೃತ್ಯ, ಸಂಗೀತ ಶ್ರೇಷ್ಠತೆಯನ್ನು ಹೊಂದಿರುತ್ತವೆ. ಯಾವುದೇ ಕಾರಣಕ್ಕೂ ಕನ್ನಡ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಬರದಂತೆ ಹಾಗೂ ಆ ಶಾಲೆಯ ಮಕ್ಕಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಪಟ್ಟಿ ಮಾಡಿ ನೀಡಿದ್ದಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಸೌಲಭ್ಯಗಳನ್ನು ಒದಗಿಸಲಾಗುವುದು. ಖಾಸಗಿ ಶಾಲೆಗಳಿಗೆ ಸವಾಲು ನೀಡುವಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಡಿಭಾಗದಲ್ಲಿ ಕನ್ನಡಕ್ಕಾಗಿ ಅವಿರತ ಶ್ರಮಿಸಿದ ಸಾಧಕರಿಗೆ ಗಡಿನಾಡ ಕನ್ನಡ ಸೇನಾನಿ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನೆಲವಂಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌತಮಿ ಮುನಿರಾಜು, ಲಕ್ಷಿö್ಮÃಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಚಾಂದ್‌ಪಾಷ.ಆರ್, ದೊಡ್ಡರಂಗೇಗೌಡ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಗೋವಿಂದಹಳ್ಳಿ ಕೃಷ್ಣೇಗೌಡ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎನ್.ಬಿ. ಗೋಪಾಲಗೌಡ. ಶ್ರೀನಿವಾಸಪುರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಖ್ಯಾತ ವೈದ್ಯರಾದ ಡಾ|| ವೈ.ವಿ.ವೆಂಕಟಾಚಲ, ಖ್ಯಾತ ಮಕ್ಕಳ ತಜ್ಞ
ಡಾ|| ವೈ.ಸಿ.ಬೀರೇಗೌಡ, ಲಕ್ಷಿö್ಮÃಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಆರ್.ಶ್ರೀನಿವಾಸಲು, ವಕೀಲರಾದ ಮುನಿರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.