ಶ್ರೀನಿವಾಸಪುರ, ಬೇರೆ ಪಕ್ಷದವರಿಗೆ ಅಭಿವೃದ್ಧಿಯ ಉದ್ದೇಶವಿಲ್ಲ. ಅಧಿಕಾರವನ್ನು ಮಾತ್ರ ಬಯಸುತ್ತಾರೆ ಒಳ್ಳೇಯ ಆಡಳಿತ ನೀಡುವ ಗುರಿಯಿಲ್ಲ ಎಂದು ಸಂಸದೀಯ ಮತ್ತು ಸಂಸ್ಕೃತಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು.
ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ಪಕ್ಷದವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಗೆಲ್ಲುವುದೊಂದೇ ಅವರ ಉದ್ದೇಶ. ರಾಜ್ಯದ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಅತ್ಯವಶ್ಯಕ ಎಲ್ಲಾ ಅಭಿವೃದ್ಧಿ ಯೋಜನೆಗಳು ಜಾರಿಗೊಳ್ಳುತ್ತವೆ. ಇಂದು ನಾವು ನಿಮ್ಮೆಲ್ಲರ ಸಮಸ್ಯೆಗಳನ್ನು ಆಲಿಸಲು ಬಂದಿದ್ದೇವೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಿ ದೇಶದ ದೇಶದ ಅಭಿವೃದ್ಧಿಗೆ ಕೈ ಜೋಡಿಸಿ ಎಂದರು.
ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ ಸಿದ್ದರಾಮಯ್ಯನವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ, ಇಡೀ ಲಿಂಗಾಯುತ ಭ್ರಷ್ಟ ಸಮಾಜವನ್ನು ಹೇಳುತ್ತಾ, ಸಮುದಾಯದ ವಿರುದ್ಧ ಮಾತನಾಡುವ ಮೂಲಕ ಕಾಂಗ್ರೆಸ್ ಸಂಸ್ಕೃತಿಯನ್ನು ಪ್ರದರ್ಶಿಸುತ್ತಾರೆ. ಲಿಂಗಾಯುತ ಮತ್ತು ವೀರಶೈವ ಲಿಂಗಾಯುತರನ್ನ ಬರ‍್ಪಡಿಸುವ ಕೆಲಸಕ್ಕೆ ಕೈ ಹಾಕಿದ್ದರು. ಅಲ್ಲದೆ ಕೋಲಾರ ಜಿಲ್ಲೆಯ ಘಟಬಂದನ್ ನಾಯಕರಿಗೆ ಕೈಕೊಟ್ಟವರು ಸಿದ್ದರಾಮಯ್ಯನವರು. ರಾಜ್ಯದ ಮುಖ್ಯ ಮಂತ್ರಿಗಳಾಗಿ ಮಾಡಿರುವ ಅಪರಾವಾದ ಅನುಭವಿ ಇರುವ ಸಿದ್ದರಾಮಯ್ಯ ಇಡೀ ಲಿಂಗಾಯುತ ಸಮುದಾಯದ ವಿರುದ್ಧ ಕಟ್ಟಿಗೊಂಡಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದ್ದು, ನಾಲಿಗೆ ಹಿಡಿತ ತಪ್ಪುತಿದ್ದೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರ ಪರಿಸ್ಥಿತಿಯು ದಹನೀಯವಾಗಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಯಾರಿಗೂ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುತ್ತದೆ ಎಂಬ ವಿಶ್ವಾವಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಂದುಕೊoಡಷ್ಟು ಸ್ಥಾನಗಳು ಬರುವುದಿಲ್ಲ. ಇನ್ನು ಜೆಡಿಎಸ್ ಪಕ್ಷ ಕುಟುಂಬ ಪಕ್ಷ ಅಪ್ಪ ರಾಜ್ಯಸಭೆ ಸದಸ್ಯ, ಮಗ ಇಬ್ಬರು ಎಂಎಲ್‌ಎಗಳು ಮತ್ತು ಸೊಸೆ ಎಂಎಲ್‌ಎ, ಮೊಮ್ಮಕ್ಕಳು ಒಬ್ಬರು ಎಂಪಿ, ಇನ್ನೊಬ್ಬರು ಎಂಎಲ್‌ಸಿ ಇನ್ನೊಬ್ಬರು ಸೀಟಿಗಾಗಿ ಕಾದಾಟ. ಇಡೀ ಪಕ್ಷ ಕುಟುಂಬ ಸದಸ್ಯರೇ ತುಂಬಿತುಳುಕುತ್ತಿದೆ. ಎಲ್ಲಿ ಅಧಿಕಾರ ಸಿಗುತ್ತದೆ ಎಂದು ಕಾತುರದಿಂದ ಕಾಯುತ್ತಿರುವುದು ಜೆಡಿಎಸ್‌ಪಕ್ಷ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷವು ಬರುವುದು ನೂರಕ್ಕೆ ನೂರು ಸತ್ಯ. ಇದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರದಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ೧೫೧ ಸ್ಥಾನಗಳು ಬರುತ್ತವೆ ಎಂದು ಹೇಳಿಕೊಳ್ಳುತ್ತಾರೆ, ಜೆಡಿಎಸ್ ಪಕ್ಷವು ೧೨೩ ಸ್ಥಾನಗಳು ಬರುತ್ತವೆ ಎಂದು ಹೇಳುಕೊಳ್ಳುತ್ತವೆ .ಇವರ ಲೆಕ್ಕಚಾರ ಉಲ್ಟ ಆಗಲಿದೆ ಎಂದು ಟೀಕಿಸಿದರು.
ಕೋಲಾರಕ್ಕೆ ಇದೇ ತಿಂಗಳು ೩೦ ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರುತ್ತಿದ್ದು ೧೫ ಕ್ಷೇತ್ರಗಳಿಂದ ಸುಮಾರು ೫ ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು ಅದಕ್ಕಾಗಿ , ೨೦೦ ಎಕರೆಯಲ್ಲಿ ಬೃಹತ್ ವೇದಿಕೆ ನಿರ್ಮಾಣ ವಾಗುತ್ತಿದ್ದು, ಇದು ಒಂದು ಬೃಹತ್ ಕಾರ್ಯಕ್ರಮ ನಡೆಯುತ್ತಿದ್ದು, ಬಿಜೆಪಿ ಪಕ್ಷದ ಪರ ಸಂಚಲ ಸೃಷ್ಟಿಯಾಗಲಿದೆ. ಈ ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಮತಷ್ಟು ಬಲಿಷ್ಟವಾಗಲಿದೆ ಎಂದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಗುಂಜೂರು ಆರ್. ಶ್ರೀನಿವಾಸರೆಡ್ಡಿ ಮಾತನಾಡಿ ಈ ಕ್ಷೇತ್ರದಲ್ಲಿ ಕಳೆದ ೪೫ ವರ್ಷಗಳಿಂದ ಇಬ್ಬರ ವ್ಯಕ್ತಿಗಳ ನೋಡಿದ್ದೀರಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದ್ದು, ಈ ಭಾರಿ ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಿ ಈ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಈ ಭಾರಿ ಮತದಾರರು ನನಗೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.
ತಾಲೂಕಿನ ಯಲ್ದೂರು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರೋಡ್‌ಶೋ ಹಮ್ಮಿಕೊಳ್ಳಲಾಗಿತ್ತು. ಈ ಕ್ಷೇತ್ರದ ಬಿಜೆಪಿ ಪಕ್ಷದ ಉಸ್ತುವಾರಿ ಆಂದ್ರ ಪ್ರದೇಶದ ಶಶಿಭೂಷನ್‌ರೆಡ್ಡಿ , ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಅಶೋಕ್‌ರೆಡ್ಡಿ, ಮುಖಂಡರಾದ ಲಕ್ಷಣಗೌಡ, ರಾಜಶೇಖರರೆಡ್ಡಿ, ಪೆದ್ದರೆಡ್ಡಿ ರಾಜೇಂದ್ರಪ್ರಸಾದ್, ಟಿ.ಎನ್.ನಾರಾಯಣಸ್ವಾಮಿ, ಕೊಟ್ರಗುಲಿ ನಾರಾಯಣಸ್ವಾಮಿ, ರೈತ ಮೊರ್ಚ್ ತಾಲೂಕು ಅಧ್ಯಕ್ಷ ಶಾಗೊತ್ತೂರು ಡಾ.ಆರ್.ನಾರಾಯಣಸ್ವಾಮಿ, ಶ್ರೀರಾಮ್, ಆಂಜಪ್ಪ, ಯಲ್ದೂರು ಪದ್ಮನಾಭ್, ಓಬೇನಹಳ್ಳಿ ಪಿ.ಮಂಜುನಾಥರೆಡ್ಡಿ, ಶಂಶೀರ್, ಶ್ರೀರಾಮ್, ಜೆ.ತಿಮ್ಮಸಂದ್ರ ಸುರೇಶ್ ಇದ್ದರು.