ಶ್ರೀನಿವಾಸಪುರದಲ್ಲಿ ನೆನ್ನೆಯ ತನಕ ಏನಾಗಿದೆ ಎಂಬುದನ್ನು ಮರೆಮಾಚಿ ಇಂದಿನಿಂದ ಯಾವ ರೀತಿಯಲ್ಲಿ ಕಾರ್ಯ ನಿರ್ವಕರಾಗಬೇಕು ಎಂದು ಹೇಳುತ್ತಾ ಇಂದು ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಪ್ರತಿ ಹಳ್ಳಿಗಾಡಿನಲ್ಲಿಯೂ ಸಹ ಅವರ ಆಡಳಿತವನ್ನು ಕೊಂಡಾಡುತ್ತಿದ್ದಾರೆ ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿ ಬೊಮ್ಮಾಯಿ ರವರ ಆಡಳಿತವನ್ನು ಸಹ ಮೆಚ್ಚಿಕೊಂಡಿದ್ದಾರೆ.ಪಕ್ಷಕ್ಕೆ ಸೇರ್ಪಡೆಯಾದ ನಂತರ ಶ್ರೀನಿವಾಸ್ ರೆಡ್ಡಿ ಮಾತನಾಡಿ ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿದ್ದು ಯಾವುದೇ ರೀತಿಯಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿಲ್ಲ ಈ ಭಾಗದಲ್ಲಿ ಅಪಾರ ಪ್ರಮಾಣದ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದೆ.
ನನಗೆ ಈ ಭಾಗದಲ್ಲಿ ಯುವಕರಿಗೆ ಮಹಿಳೆಯರಿಗೆ ಮತ್ತು ರೈತಾಪಿ ವರ್ಗದ ಜನರಿಗೆ ಹೆಚ್ಚಿನ ಪ್ರಯೋಜನ ರೀತಿಯಲ್ಲಿರುವ ಕಾಮಗಾರಿಗಳನ್ನು ನಡೆಸಿ ಅಭಿವೃದ್ಧಿ ಪದದತ್ತ ಕೊಂಡೊಯ್ಯುತ್ತೇನೆ ಎಂದು ಎಂದು ಹೇಳಿದರು.
ಶ್ರೀನಿವಾಸಪುರ ತಾಲೂಕಿನಲ್ಲಿ ಬಿಜೆಪಿಯನ್ನು ವಾರೇಗಣ್ಣಿನಲ್ಲಿ ನೋಡುತ್ತಾ ಇದ್ದರು ಇಂದು ಮಂಚೂಣಿಯಲ್ಲಿ ತಂದು ಬಿಜೆಪಿ ಪಕ್ಷವನ್ನು ಬಲಪಡಿಸುತ್ತೇನೆ ಎಂದು ಶಪಥ ಮಾಡಿದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ನಾನು ಶ್ರಮಿಸುತ್ತೇನೆ ಎಂದು ಹೇಳಿದರು. ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿ ಕಳೆದ ಎರಡು ವರ್ಷಗಳಿಂದ ನಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಗುಂಜೂರ್ ಆರ್ ಶ್ರೀನಿವಾಸ ರೆಡ್ಡಿ ರವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.
ಗುಂಜೂರು ಶ್ರೀನಿವಾಸ್ ರೆಡ್ಡಿ ರವರ ಈ ನಡೆ ಶ್ರೀನಿವಾಸಪುರ ತಾಲೂಕಿನಲ್ಲಿ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಜಗನ್ನಾಥ ಭವನದ ಬಿಜೆಪಿ ಪಕ್ಷದ ಕಚೇರಿಯಲ್ಲಿ ವಿಧಾನ ಪರಿಷತ್ನ ಮುಖ್ಯ ಸಚೇತಕರಾದ ವೈ ಎ ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಸಚಿವರಾದ ಡಾಕ್ಟರ್ ಅಶ್ವತ್ ನಾರಾಯಣ ಬೈರತಿ ಬಸವರಾಜ್ ಹಿರಿಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರ ಹಾಗೂ ಜನರಲ್ ಸೆಕ್ರೆಟರಿ ಸಿದ್ದರಾಜು ರವರ ಒಳಗೊಂಡಂತೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಜಯಚಂದ್ರ ರೆಡ್ಡಿ ಅವರ ಸಮ್ಮುಖದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಬಿಜೆಪಿ ಧ್ವಜವನ್ನು ಸಮಾಜ ಸೇವಕ ಗುಂಜೂರ್ ಆರ್ ಶ್ರೀನಿವಾಸ ರೆಡ್ಡಿ ಕೈ ಹಿಡಿದರು.
ಶ್ರೀನಿವಾಸಪುರ ಗಡಿ ಭಾಗದಲ್ಲಿ ಎಷ್ಟೋ ಸಂಪನ್ಮೂಲಗಳು ನಷ್ಟವಾಗುತ್ತಿವೆ ಅದು ಸದ್ಬಳಕೆ ಆಗಬೇಕಾಗಿದೆ ಯುವ ಪೀಳಿಗೆಗೆ ವರವಾಗಬೇಕಾಗಿದೆ ಆ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇನೆ ಎಂದರು.
ಇದೆ ವೇಳೆಯಲ್ಲಿ ಸಚಿವರಾದ ಬೈರತಿ ಬಸವರಾಜು ಮಾತನಾಡಿ ಶ್ರೀನಿವಾಸ ರೆಡ್ಡಿ ರವರು ಈ ಹಿಂದೆ ತಾಲೂಕು ಪಂಚಾಯಿತಿ ಸದಸ್ಯರಾಗಿ ಇವರು ನನ್ನ ಆತ್ಮೀಯ ಸ್ನೇಹಿತರಾಗಿದ್ದು ಇವರು ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಾರೆ ಮುಂದಿನ ದಿನಗಳಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ಆನೆಗೆ ಬಲಬಂದಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.
ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣರವರು ಮಾತನಾಡಿ ಶ್ರೀ ರಾಮನವಮಿ ಎಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಎಲ್ಲರಿಗೂ ಶುಭಾಶಯಗಳು ಕೋರಿ ನಂತರ ರಾಜ್ಯದ ಜನರಿಗೂ ಶುಭಾಶಯಗಳು ಕೋರಿದರು ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿ ನಂತರ ಮುಂದುವರೆದು ದೇಶದಲ್ಲಿ ಪ್ರಧಾನಮಂತ್ರಿಯವರ ಆಡಳಿತ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರ್ಕಾರ ಎಲ್ಲಾ ವರ್ಗದ ಜನರಿಗೆ ಸಮಾನತೆಯನ್ನು ನೀಡಿ ಎಲ್ಲರೂ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಶ್ರಮಿಸುತ್ತಿದ್ದಾರೆ ಪ್ರತಿಯೊಬ್ಬ ವ್ಯಕ್ತಿಗೂ ಪರಿಹಾರ ಎಂದರೆ ಬಿಜೆಪಿ ಪಕ್ಷ ಮಾತ್ರ ದೇಶ ಕಟ್ಟಲು ಏಕೈಕ ಪಕ್ಷ ಎಂದರೆ ಬಿಜೆಪಿ ಪಕ್ಷ ಎಂದರು.
ಇಂದು ಸೇರ್ಪಡೆಯಾಗಿರುವ ಅಭ್ಯರ್ಥಿಗಳು ಒಳ್ಳೆಯ ನಿರ್ಧಾರವನ್ನು ಕೈಗೊಂಡಿದ್ದಾರೆ ಒಳ್ಳೆಯ ದಿನ ಈ ಶ್ರೀರಾಮ ನವಮಿ ಇದೇ ರೀತಿಯಲ್ಲಿ ರಾಮರಾಜ್ಯವನ್ನು ಕಟ್ಟಬೇಕು ಎಂದರೆ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ ಮಾತನಾಡಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಬಲಪಡಿಸಲು ಗುಂಜೂರು ಶ್ರೀನಿವಾಸ ರೆಡ್ಡಿ ರವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯನ್ನು ಮೀರಿ ಶ್ರಮಿಸಬೇಕಾಗಿದೆ ಮತ್ತು ಬಿಜೆಪಿ ಪಕ್ಷವನ್ನು ಬಲಪಡಿಸುತ್ತಾರೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿ ಸಲಹೆಯನ್ನು ನೀಡಿದರು.
ಇದೆ ವೇಳೆಯಲ್ಲಿ ಶ್ರೀನಿವಾಸಪುರ ತಾಲೂಕಿನ ಗುಂಜೂರು ಶ್ರೀನಿವಾಸ ರೆಡ್ಡಿ ಅಭಿಮಾನಿ ಬಳಗದ ಪೆಟ್ರೋಲ್ ಬಂಕ್ ಪೆದ್ದ ರೆಡ್ಡಿ ಅಲಿಯಾಸ್ ರಾಜೇಂದ್ರ ಪ್ರಸಾದ್, ಅತ್ತಿಕುಂಟೆ ರಾಜಶೇಖರ ರೆಡ್ಡಿ, ಯಲ್ದೂರು ಶಿವಣ್ಣ ಹಳೆಪೇಟೆಮು ನಿ ರೆಡ್ಡಿ, ಸಂಶೀರ್, ಕೊರ ನಹಳ್ಳಿ ಆಂಜನೇಯ ರೆಡ್ಡಿ, ಸೇರಿದಂತೆ ಇವರ ಮುಂದಾಳತ್ವದಲ್ಲಿ ಬಂದಿದ್ದ ಎಲ್ಲಾ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ಪಕ್ಷದ ಕಾರ್ಯಕರ್ತರಾದ ಗವಿರೆಡ್ಡಿ ಎ ಲ್ದೂರು ಪದ್ಮನಾಭ ರವೀಂದ್ರನಾಥ್ ಗೌಡ ಕಂಬಲ ಪಲ್ಲಿ ವೆಂಕಟರೆಡ್ಡಿ ಶ್ರೀರಾಮರೆಡ್ಡಿ ಪಾತಪೇಟೆ ರಮೇಶ್ ಶ್ರೀನಿವಾಸಪುರ ಶಪಿ ಕೊಳತೂರು ಆನಂದ್ ಲಕ್ಷ್ಮಿ ಸಾಗರ ಪ್ರಭಾಕರ್ ಹೋ ಳೂರು ಮಂಜು ಪಾದ ಮತ್ತು ಕಪಲ್ಲಿ ಸುರೇಶ್ ಕೊತ್ತೂರು ಸೀನಪ್ಪ.
ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ ರೆಡ್ಡಿ, ಬಂಗವಾದಿ ಶಿವಶಂಕರೇಗೌಡ, ಕೊಟ್ರಗುಳಿ ನಾರಾಯಣಸ್ವಾಮಿ, ಗೌನಪಲ್ಲಿ ಶೇಖರ್
ಗುಂಜೂರು ಅಭಿಮಾನಿ ಬಳಗದ ಜಿ ತಿಮ್ಮಸಂದ್ರ ಸುರೇಶ ವೆಂಕಟರೆಡ್ಡಿ ಜಾವಿದ್ದು, ಶಂಶೇರು ಬಂಗವಾದಿ ನಾಗರಾಜ ಗೌಡ ಪಾಳ್ಯ ಕೋದಂಡ ರೆಡ್ಡಿ ಲಕ್ಷ್ಮಣ ರೆಡ್ಡಿ ಗೌನಿ ಪಲ್ಲಿ ಸೋಮಶೇಖರ್ ಶ್ರೀನಿವಾಸಪುರ ಮಂಜುನಾಥ ರಾಘವ ರೆಡ್ಡಿ ರಾಯಲ ಪಾಡು ಮೋಹನ್ ಲಕ್ಷ್ಮಿಪುರ ಅಪ್ಪನ ಪುಲಗೂರು ಕೋಟೆ ಮಂಜು ಶಾಗತ್ತೂರು ರಮೇಶ.ಶ್ರೀನಿವಾಸಪುರ ದಿಂದ 7 ಬಸ್ ಗಳು ಹಾಗೂ ಸುಮಾರು 40 ಟಾಟಾ ಸುಮೋ ಸೇರಿದಂತೆ ಕಾರುಗಳು ಜನಸಂದಣಿ ಎಂದ ಕೂಡಿದ ಅಪರ ಜನಸಂಖ್ಯೆಯೊಂದಿಗೆ ಗುಂಜೂರು ಶ್ರೀನಿವಾಸ್ ರೆಡ್ಡಿ ಅಭಿಮಾನಿ ಗಳು ಭಾಗಿಯಾಗಿದ್ದರು.