ರಾಯಲ್ಪಾಡು ಹೋಬಳಿಯ ಬಯ್ಯಪ್ಪಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ಮಂಜೂರಾಗಿದ್ದ ದರಖಾಸ್ತು ಜಮೀನು ವಿಚಾರವಾಗಿ ಎಸಿ ಕೋಟ್‌ನಲ್ಲಿ ೨೦೧೮ ರಿಂದ ವಿಚಾರಣೆಯು ನಡೆಯುತ್ತಿತ್ತು, ಇದರ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಲು ಸೋಮವಾರ ಬೇಟಿ ನೀಡಿದ್ದರು.
೨೦೧೭-೧೮ ರಲ್ಲಿ ಗ್ರಾಮದ ರ‍್ರಪ್ಪರೆಡ್ಡಿ, ವೆಂಕಟರವಣ ಹಾಗೂ ನಾರಾಯಣಮ್ಮ ಎಂಬುವವರಿಗೆ ಸರ್ವೆ ನಂಬರ್ ೫೬ರಲ್ಲಿ ೧೧.೬ ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಗ್ರಾಮಸ್ಥರು, ಗ್ರಾಮದ ಜಾನುವಾರು ಮೇಯಲು ಜಮೀನು ಇಲ್ಲದಿರುವುದರಿಂದ, ಜಮೀನು ಮಂಜೂರಾತಿ ರದ್ದುಪಡಿಸುವಂತೆ ಕೋರಿ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ರದ್ದುಪಡಿಸುವ ಅಧಿಕಾರ ತಹಶೀಲ್ದಾರ್‌ಗೆ ಇಲ್ಲದಿರುವುದರಿಂದ ಅರ್ಜಿಯನ್ನು ಉಪ ವಿಭಾಗಾಧಿಕಾರಿಗೆ ಕಳುಹಿಸಿಕೊಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆ ಬಳಿಕ, ಗ್ರಾಮದ ಜನಸಂಖ್ಯೆ, ಜಾನುವಾರು ಸಂಖ್ಯೆ ಹಾಗೂ ಉಳಿಕೆ ಜಮೀನು ಮಾಹಿತಿ ನೀಡುವಂತೆ ಕಂದಾಯ ನಿರೀಕ್ಷಕ ಶಂಕರರೆಡ್ಡಿ ಅವರಿಗೆ ಸೂಚಿಸಿದರು.
ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಚಂದ್ರಮೋಹನ್, ಮುರಳಿ, ಗ್ರಾಮ ಲೆಕ್ಕಾಧಿಕಾರಿ ಸಿಕಂದರ್ ಸಾಬ್, ಗ್ರಾಮದ ಮುಖಂಡರಾದ ಕೃಷ್ಣಾರೆಡ್ಡಿ, ಚಲಪತಿ, ಕಟ್ಟಣ್ಣ, ವೆಂಕಟರವಣ, ರಾಜಣ್ಣ, ಶ್ರೀನಿವಾಸ್, ಮನೋಜ್ ಕುಮಾರ್, ನಾಗಮ್ಮ ಇದ್ದರು.