ಶ್ರೀನಿವಾಸಪುರ ಮಾವು ಮಾರುಕಟ್ಟೆ ಕಳೆದ ವರ್ಷ 21431.2 ಟನ್ ನಾವು ವಹಿವಾಟು ನಡೆದು 29,71,600 ರೂಪಾಯಿಗಳ ಆದಾಯ ಬಂದಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಉಮಾ ಅವರು ತಿಳಿಸಿದ್ದಾರೆ.
ಕಳೆದ ಮೂರು ದಿನಗಳ ಮಾವು ವಹಿವಾಟು 551 ಟನ್ ನಡೆದಿದೆ ಈ ತಿಂಗಳ 17 ರಿಂದಮಾವು ಖರೀದಿ ಪ್ರಕ್ರಿಯೆ ನಡೆಯುತ್ತಿದೆ.
ಈಗ ಪ್ರಾರಂಭವಾಗಿರುವ ಮಾವು ಕೊಯ್ಲು ರಾಜಗಿರ, ತೋತಾಪುರಿ, ನಾಟಿ, ಮಲ್ಲಿಕಾ ಹಾಗೂ ರಸ ಪುರಿ ಮಾವಿನ ಕಾಯಿಗಳು ರೈತರು ಕಿತ್ತು ತಂದು ಎಪಿಎಂಸಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದಾರೆ.
ಈಗಿನ ಮಾರುಕಟ್ಟೆ ಬೆಲೆ ರಾಜಗಿರ 18 ಸಾವಿರದಿಂದ 26 ಸಾವಿರ, ಮಲ್ಲಿಕಾ ಮೂವತ್ತು ಸಾವಿರದಿಂದ 40,000, ನಾಟಿ 8000 ದಿಂದ 10,000 ಒಂದು ಟನ್ ಮಾವು ಬೆಲೆಗೆ ಖರೀದಿ ನಡೆಯುತ್ತಿದೆ ಎಂದು ಕಾರ್ಯದರ್ಶಿ ಉಮಾ ಅವರು ತಿಳಿಸಿದ್ದಾರೆ.
ಈಗ ಮಾವು ಖರೀದಿ ನಡೆಯುತ್ತಿದೆ ಇನ್ನು ಮೇ, ಜೂನ್, ಜುಲೈ, ಅಂತಿಮ ತಿಂಗಳವರೆಗೂ ಮಾವು ವಹಿವಾಟು ನಡೆಯಲಿದೆ.
ಈ ಶ್ರೀನಿವಾಸಪುರ ತಾಲೂಕು ಪ್ರಪಂಚ ಪ್ರಸಿದ್ಧಿಯ ಖ್ಯಾತಿಯನ್ನು ಪಡೆದಿದ್ದು ಇಲ್ಲಿಗೆ ಮಾವುಖರೀದಿ ಮಾಡಲು ನಮ್ಮ ದೇಶಾದ್ಯಂತ ಜಮ್ಮು ಕಾಶ್ಮೀರ ಮಹಾರಾಷ್ಟ್ರ ಉತ್ತರ ಪ್ರದೇಶ ಮಧ್ಯಪ್ರದೇಶ ಗುಜರಾತ್ ಉತ್ತರಖಂಡ್ ಕೇರಳ ತಮಿಳುನಾಡು ಆಂಧ್ರ ತೆಲಂಗಾಣ ಸೇರಿದಂತೆ ದೇಶದ ಮೂಲೆ ಮೂಲಗಳಿಂದ ಬಂದು ವ್ಯಾಪಾರಸ್ಥರು ಖರೀದಿಯನ್ನು ಮಾಡಿ ಕೊಂಡೊಯ್ಯುತ್ತಾರೆ.
ಈ ಬಾರಿಯ ವಹಿವಾಟು ಅತಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದು ಇಲ್ಲ ಏಕೆಂದರೆ ಇತ್ತೀಚೆಗೆ ಬಿದ್ದ ಮಳೆಯಿಂದ ಪ್ರಕೃತಿ ವಿಕೋಪ ಕಾರಣದಿಂದ ಆಲಿಕಲ್ಲು, ಮಂಗು ಕಾಯಿಲೆ ಬಂದು ಮಾವು ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ ಈ ನಷ್ಟದಿಂದ ರೈತರಿಗೆ ಆದಾಯ ಕೊರತೆಯು ಕಾಣುತ್ತದೆ ಈ ತಾಲೂಕಿನಲ್ಲಿ ಮಾವು ಬೆಳೆಯನ್ನೇ ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದು ಈ ಬಾರಿ ಹೆಚ್ಚಿನ ರೈತರು ನಷ್ಟವನ್ನೇ ಅನುಭವಿಸಿದ್ದಾರೆ ಎಂದರೆ ತಪ್ಪಾಗಲಾರದು.
ಎಪಿಎಂಸಿ ಮಾರುಕಟ್ಟೆಗೆ ವಿವಿಧ ರೀತಿಯ ಮಾವು ಬೆಳೆಗಳೆಂದರೆ ರಾಜಗಿರ, ನಾಟಿ,ಬಾದಾಮಿ, ತೋತಾಪುರಿ ಅಥವಾ ಬೆಂಗಳೂರ, ಮಲ್ಲಿಕಾ, ಕಾಲಪೂಡ, ಮಲಗುವ, ರಸ ಪುರಿ, ಚಕ್ರಗುತ್ತ, ಬೇನಿಶ, ನೀಲಂ, ಲಡ್ಡು ಸೇರಿದಂತೆ ವಿವಿಧ ಬಗೆಯ ಮಾವುಗಳು ಮಾರುಕಟ್ಟೆಗೆ ಬರುತ್ತವೆ.
ಮಾವು ತಿರುಳು ಹಾಗೂ ಜ್ಯೂಸ್ ಘಟಕಕ್ಕೆ ಬೆಂಗಳೂರು ಅಥವಾ ತೋತಾಪುರಿ ಮಾವಿನಕಾಯಿಗಳು ಖರೀ ದಿಯನ್ನು ಮಾಡಿ ಕೊಂಡು ಬೇರೆ ರಾಜ್ಯಗಳಿಗೆ ಸಾಗಿಸಿಕೊಂಡು ಜ್ಯೂಸ್ ಮಾಡಿ ಮಾರಾಟಗಳನ್ನು ಮಾಡುತ್ತಾರೆ.
ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಮೂಲಭೂತ ಸೌಕರ್ಯಗಳನ್ನು ಇತ್ತೀಚೆಗೆ ಉತ್ತಮ ರೀತಿಯಲ್ಲಿ ಒದಗಿಸಲು ಸಜ್ಜಾಗಿದ್ದೇವೆ ಈ ಬಾರಿಯ ವಹಿವಾಟು ಈಗ ಪ್ರಾರಂಭ ವಾಗಿದ್ದು ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ವ್ಯಾಪಾರಸ್ಥರಿಗೆ ಹಾಗೂ ಇಲ್ಲಿ ಕಾರ್ಯನಿರ್ವಹಿಸಲು ಬರುವ ಎಲ್ಲಾ ನೌಕರರಿಗೂ ಅನುಕೂಲವಾಗುವ ರೀತಿಯಲ್ಲಿ ನೀರನ್ನು ಒದಗಿಸಲಾಗುತ್ತಿದೆ.
ಶೌಚಾಲಯಗಳನ್ನು ಸಹ ಒಳ್ಳೆಯ ರೀತಿಯಲ್ಲಿ ನಿರ್ವಹಣೆ ಮಾಡುವ ಗುತ್ತಿಗೆದಾರರಿಗೆ ನೀಡಲಾಗಿದ್ದು ಅವರು ಶೌಚಾಲಯಗಳು ಸೇರಿದಂತೆ ಸ್ಥಾನದ ಗೃಹಗಳನ್ನು ಸಹ ಶುಚಿತ್ವ ಕಾಪಾಡಿಕೊಂಡು ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಮತ್ತು ಇಲ್ಲಿ ನಡೆಸುವ ಕೂಲಿ ಕಾರ್ಮಿಕರಿಗೂ ಸಹ ಅನುಕೂಲವಾಗುವ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ.
ಗುಡ್ಡುಜ ಎಂಬ ಶೌಚಾಲಯ ಗುತ್ತಿಗೆದಾರರು ಗುತ್ತಿಗೆಯನ್ನು ಪಡೆದುಕೊಂಡಿದ್ದು ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ.
ಎಪಿಎಂಸಿ ಆವರಣದಲ್ಲಿ ಇರುವ ವಿದ್ಯುತ್ ಟ್ರಾನ್ಸ್ಫರಂ ಗಳ ಸುತ್ತಲೂ ಯಾವುದೇ ರೀತಿಯಲ್ಲಿ ಅವಘಡಗಳು ನಡೆಯದಂತೆ ತಂತಿಯನ್ನು ಅಳವಡಿಸಲಾಗಿದೆ ಇದರಿಂದ ಅಹಿತಕರ ಘಟನೆಗಳು ನಡೆಯಲು ಅವಕಾಶ ಇಲ್ಲ ಎಲ್ಲಾ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಇಲ್ಲಿ ಹಣದ ವಹಿವಾಟು ಹೆಚ್ಚಿನ ರೀತಿಯಲ್ಲಿ ನಡೆಯಲಿದ್ದು ಪೊಲೀಸ್ ಹೊರ ಠಾಣೆಯನ್ನು ಮಾಡಲು ಸ್ಥಳೀಯ ಪೊಲೀಸ್ ಇಲಾಖೆಗೆ ತಿಳಿಸಲಾಗಿದ್ದು ಇದೇ ವಾರದಲ್ಲಿಯೇ ಪೊಲೀಸರನ್ನು ಇಲ್ಲಿಗೆ ನಿಯೋಜಿಸಲಾಗುವುದು ಎಂದು ಕಾರ್ಯದರ್ಶಿ ಉಮಾ ರವರು ತಿಳಿಸಿದರು.
ಇಲ್ಲಿ ಎರಡು ರೈತ ಭವನಗಳು ಇದ್ದು ಒಂದು ಪುರುಷರಿಗೆ ಮತ್ತೊಂದು ಮಹಿಳೆಯರಿಗೆ ವರ್ಗೀಕರಣ ಮಾಡಲಾಗಿದೆ ಈ ರೈತ ಭವನದಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರು ಬಳಸಿಕೊಳ್ಳಬಹುದು ಒಂದು ರೈತ ಭವನದಲ್ಲಿ ಸುಮಾರು 50 ಜನರು ಉಳಿದುಕೊಳ್ಳಲು ಅವಕಾಶವಿರುತ್ತದೆ ಸದುಪಯೋಗವನ್ನು ರೈತರು ಹಾಗೂ ಕೂಲಿ ಕಾರ್ಮಿಕರು ಮತ್ತು ವ್ಯಾಪಾರಸ್ಥರು ಪಡೆದುಕೊಳ್ಳಬಹುದು ಎಂಬುದಾಗಿ ಹೇಳಿದರು.
ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಟೊಮೊಟೊ ವಹಿವಾಟು 37565 ಟನ್ಗಳಷ್ಟು ಆಗಿದ್ದು ಈ ವ್ಯಾಪಾರದಿಂದ 35,43,000 ಸಾವಿರ ಆದಾಯ ಬಂದಿರುತ್ತದೆ.
2020-2021ರಲ್ಲಿ 37778879 ಕ್ವಿಂಟಾಲ್,4,00,508 ಬಳಕೆದಾರರ ಶುಲ್ಕ 377887.9 ಟನ್ ಗಳಷ್ಟು ವಹಿವಾಟು ನಡೆದಿದೆ.2021-2022 ರಲ್ಲಿ430074 ಕ್ವಿಂಟಾಲ್,31,74,008 ಬಳಕೆದಾರರ ಶುಲ್ಕ,43007.4 ಟನ್ ವಹಿವಾಟು ನಡೆದಿದೆ .2022-2023 ರಲ್ಲಿ 29,71,600 ಕ್ವಿಂಟಾಲ್,29,71,600 ಬಳಕೆದಾರರು ಶುಲ್ಕ,21431.2 ಟನ್ ವಹಿವಾಟು ನಡೆದಿದೆ.
ಎಪಿಎಂಸಿ ಆವರಣದಲ್ಲಿ ಲೈಸೆನ್ಸ್ ಪಡೆದ ಕಾರ್ಯಕರ್ತರ ಸಂಖ್ಯೆ ದಲ್ಲಾಲಿ 357, ಮಾರುಕಟ್ಟೆ ಪ್ರಾಂಗಣದಲ್ಲಿ ವಿಂಗಡಿಸಿರುವ ನಿವೇಶನಗಳು 114, ಹಂಚಿಕೆ ಮಾಡಲಾದ ನಿವೇಶನಗಳ ಸಂಖ್ಯೆ 105, ವೇ ಬ್ರಿಡ್ಜ್ ಗಾಗಿ ಪ್ಲೀಸ್ ಕಮ್ ಸೇಲ್ ಆಧಾರದ ಮೇಲೆ ನೀಡಿರುವ ನಿವೇಶನ ಸಂಖ್ಯೆ ಒಂದು, ಸಮಿತಿ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ನಿವೇಶನಗಳ ಸಂಖ್ಯೆ ನಾಲ್ಕು, ಬಾಕಿ ಉಳಿದಿರುವ ಅಮೂಲ್ಯ ನಿವೇಶನಗಳ ಸಂಖ್ಯೆ 4, ಈ ಎಲ್ಲಾ ನಿವೇಶನಗಳು ಮಾರುಕಟ್ಟೆಯ ಪ್ರಾಂಗಾಣ 19 ಎಕರೆ 6 ಗುಂಟೆಯಲ್ಲಿ ಇರುತ್ತದೆ.
ಮೇರೆ ಖರೀದಿ ಕೇಂದ್ರಗಳಾದ ಮಿಲನ್ಸರ್ ಮ್ಯಾಂಗೋ ಸೆಂಟರ್, ಕೆಜಿಎನ್ ಮ್ಯಾಂಗೋ ಸೆಂಟರ್, ಎಂ ಕೆ ಎಸ್ ಮುಬಿನ್ ಮ್ಯಾಂಗೋ ಸೆಂಟರ್, ಮುಷ್ಕೂರು ಮ್ಯಾಂಗೋ ಸೆಂಟರ್, ನಸೀಬ್ ಮ್ಯಾಂಗೋ ಸೆಂಟರ್, ರಾಜಧಾನಿ ಮ್ಯಾಂಗೋ ಸೆಂಟರ್ ಗಳಾಗಿವೆ.
2022 -23ನೇ ಸಾಲಿನಲ್ಲಿ ಮಾರುಕಟ್ಟೆ ಶುಲ್ಕ 2,763 ರೂಪಾಯಿಗಳು, ಬಳಕೆದಾರರ ಶುಲ್ಕ 65,14,802 ರೂಪಾಯಿಗಳು, ಒಟ್ಟು ಆದಾಯ 65,17,565 ರೂಪಾಯಿಗಳಾಗಿದೆ ಎಂದು ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿಯಾದ ಕುಮಾರ್ ಅವರು ತಿಳಿಸಿದ್ದಾರೆ.
ತಾಲೂಕಿನಲ್ಲಿ ಯಾವುದೇ ರೀತಿಯ ಸರ್ಕಾರಿ ಅಥವಾ ಸಹಕಾರಿ ಸಂಘದ ಮಾವಿನ ತಿರುಳು ಘಟಕ ಇರುವುದಿಲ್ಲ ಈ ಘಟಕಗಳು ಆರಂಭವಾದರೆ ಇಲ್ಲಿನ ರೈತರಿಗೆ ಬಹಳ ಅನುಕೂಲ ವಾತಾವರಣ ಸೃಷ್ಟಿಯಾಗುತ್ತದೆ ಇದರಿಂದ ರೈತರಿಗೆ ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು ಈ ಮಾವಿನ ತಿರುಳು ಘಟಕ ಅಥವಾ ಜ್ಯೂಸ್ ಫ್ಯಾಕ್ಟರಿ ಯನ್ನು ತೆರೆಯಲು ಸ್ಥಳೀಯ ಜನಪ್ರತಿನಿಧಿಗಳು ಶಾಸಕರು ಸರ್ಕಾರದ ಮನವೊಲಿಸಿ ತಂದರೆ ರೈತರಿಗೆ ವರದಾನವಾಗಲಿದೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ಸಹ ದೊರೆಯಲಿದೆ ಎಂಬುದು ಇಲ್ಲಿನ ರೈತರ ಅಭಿಪ್ರಾಯವಾಗಿರುತ್ತೆದೆ.
ಖಾಸಗಿ ಜ್ಯೂಸ್ ತಿರುಳು ಘಟಕ ಅಥವಾ ಫ್ಯಾಕ್ಟರಿಗಳೆಂದರೆ ಚಿಂತಾಮಣಿ ರಸ್ತೆಯಲ್ಲಿ ಸನ್ ಶಿಪ್, ಆರ್ ಕೆ ಎಸ್, ಯೂಲ್ದುರು ಬಳಿ ಸಮಿವುಲ್ಲಾ ರವರ ಒಂದು ಜ್ಯೂಸ್ ಫ್ಯಾಕ್ಟರಿ ಇದೆ ಎಂದು ಸ್ಥಳೀಯ ರೈತರು ಹೇಳುತ್ತಾರೆ.