ಶ್ರೀನಿವಾಸಪುರ ತಾಲೂಕಿಗೆ ಇದೇ ತಿಂಗಳು 22 ರಂದು ಆಗಮಿಸಲಿರುವ ಪಂಚರತ್ನ ಯೋಜನೆಯ ರಥ ಯಾತ್ರೆ ಯನ್ನು ಅದ್ದೂರಿಯಾಗಿ ಸ್ವಾಗತಿಸಲು ತಾಲೂಕಿನ ತಾಲೂಕಿನಾದ್ಯಂತ ಇರುವ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಬೇಕೆಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಜಿಕೆ ವೆಂಕಟಶಿವಾರೆಡ್ಡಿ ಅವರು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವರಿಗೆ ಹೂಮಳೆ ಸುರಿಸಿ ಸ್ವಾಗತಿಸಲು : ಶ್ರೀನಿವಾಸಪುರ ಜೆಡಿಎಸ್ ಕಾರ್ಯಕರ್ತರು ಸಿದ್ದ
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಸುಗಟೂರಿನಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪಂಚರತ್ನ ಯೋಜನೆಯ ರಥ ಯಾತ್ರೆ ಪ್ರಾರಂಭವಾಗಿ ಹನ್ನೊಂದು ಗಂಟೆಗೆ ರೋಜಾ ಹಳ್ಳಿ ಕ್ರಾಸ್ ಅನಂತರ 12 ಗಂಟೆಗೆ ಹೋಳೂರಿನಲ್ಲಿ ಒಂದು ಗಂಟೆಗೆ ಯಲದುರು ನಲ್ಲಿ ಅನಂತರ ಎರಡು ಗಂಟೆಗೆ ಶ್ರೀನಿವಾಸಪುರ ಪಟ್ಟಣದಲ್ಲಿ 3:00ಗೆ ಪುಂಗನೂರು ಕ್ಲಾಸ್ ನಲ್ಲಿ ಹೆಲಿಕ್ಯಾಪ್ಟರ್ ಮೂಲಕ ಹೂ ಮಳೆಯನ್ನು ಸುರಿಸಿ ಅದ್ದೂರಿಯಾಗಿ ಬರಮಾಡಿಕೊಳ್ಳ ಲು ಕಾರ್ಯಕರ್ತರು ಸಿದ್ದರಾಗಿದ್ದಾರೆ ಅನಂತರಾ ನಾಲ್ಕು ಗಂಟೆಗೆ ಗೌನಿಪಲ್ಲಿ ಹಾಗೂ ರಾತ್ರಿ ನಕ್ಕಲಗಡ್ಡ ಗ್ರಾಮದಲ್ಲಿ ಎಚ್ ಡಿ ಕುಮಾರಸ್ವಾಮಿ ರವರು ಗ್ರಾಮ ವಾಸವ್ಯ ಇರಲಿದ್ದು ಎಲ್ಲಾ ಸಾರ್ವಜನಿಕರ ಅವಾಲುಗಳನ್ನು ಸ್ವೀಕರಿಸಲಿದ್ದಾರೆ ಮತ್ತು ಕುಂದು ಕೊರತೆಗಳನ್ನು ಆಲಿಸಲಿದ್ದಾರೆ ಈ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದವರು ಕುರಿತು ಅವರ ಏಳು ಬೀಳುಗಳನ್ನು ಆಲಿಸಲಿದ್ದಾರೆ ಎಂದು ಮಾಜಿ ಶಾಸಕ ಜಿಕೆ ವೆಂಕಟಶಿವಾರೆಡ್ಡಿರವರು ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರ ಅತ್ಯಂತ ಆಗಮಿಸಲಿರುವ ರಥಯಾತ್ರೆಗೆ ಕಾರ್ಯಕರ್ತರು ಮತ್ತು ನಾಗರಿಕರು ಸಹಸ್ರರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದ್ದಾರೆ.
ಈ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ತೂಪಲ್ಲಿನಾರಾಯಣಸ್ವಾಮಿ ಶ್ರೀನಿವಾಸ್ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಇಂದಿರಾ ಭವನ ರಾಜಣ್ಣ ಕಾಡು ದೇವನಹಳ್ಳಿ ರಾಮಚಂದ್ರಗೌಡ ತಾಲೂಕು ಪಂಚಾಯಿತಿ ಕೆ ಪಿ ನಾಗೇಶ್ ಹಾಗೂ ಶ್ರೀನಿವಾಸಪುರ ಪಟ್ಟಣದ ಮಾಜಿ ಪುರಸಭಾ ಸದಸ್ಯ ಏಜು, ಅವಲಕುಪ್ಪ ಶೋರೂಮ್ ನಾರಾಯಣಸ್ವಾಮಿ, ಪುಲು ಶಿವಾರೆಡ್ಡಿ, ಸಾಧಿಕ್ ಅಹಮದ್, ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಇದ್ದರು.