ರೈತರ ಹಾಗೂ ಜನಪರ ಕಾಳ ಜಿ ಇರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾಗಿ ಪಂಚರತ್ನ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಹ ತಲುಪಲು ಹಾಗೂ ಈ ಯೋಜನೆಗಳ ಫಲಾನುಭವಿಗಳಾಗಿ ಸಂಪೂರ್ಣ ಅನುಕೂಲಗಳನ್ನು ಪಡೆಯಲು ಹಾಗೂ ಕರ್ನಾಟಕ ರಾಜ್ಯವು ಅಭಿವೃದ್ಧಿಯ ಪದದತ್ತ ಸಾಗಲು ಜೆಡಿಎಸ್ ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರ ಅಧ್ಯಕ್ಷರಾದ ಎಚ್ ಡಿ ದೇವೇಗೌಡ ರವರು ಕರೆ ನೀಡಿದ್ದಾರೆ.
ಕದಲ್ಲಿ ಮುಳಬಾಗಿಲು ನಗರದ ಬಾಲಾಜಿ ಭವನದ ಪಕ್ಕದ ಆವರಣದಲ್ಲಿ ಪಂಚರತ್ನ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಚ್ ಡಿ ದೇವೇಗೌಡರವರು ನಾನು ಈ ರಾಜ್ಯದಲ್ಲಿ ಕೋವಿಡ್ ಅನಾಹುತ ಹಾಗೂ ಮಳೆಯ ವೈಪರಿತ್ಯಗಳಿಂದ ಜನರು ಅನುಭವಿಸುತ್ತಿರುವ ಸಂಕಟಗಳನ್ನು ನಿವಾರಣೆ ಮಾಡಿ ಜನಸಾಮಾನ್ಯರು ಸುಗಮ ಜೀವನವನ್ನು ಸಾಗಿಸಲು ಪಂಚರತ್ನ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ ಈ ಎಲ್ಲಾ ಪಂಚರತ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗಲು ಈ ರಾಜ್ಯದ ಜನತೆಯು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ ಮಾತ್ರ ಪಂಚರತ್ನ ಯೋಜನೆಗಳು ಕಾರ್ಯರೂಪ ಗೊಳ್ಳುತ್ತವೆ ಎಂದು ಹೇಳಿದರು
ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ರವರು ಮಾತನಾಡಿ ನಾನು ಈ ರಾಜ್ಯದ ಮುಖ್ಯಮಂತ್ರಿ ಯಾರು ಅವಧಿಯಲ್ಲಿ ಕೋಲಾರ ಜಿಲ್ಲೆಗೆ ಎರಗೊಳ್ ಯೋಜನೆ ನಿರ್ಮಾಣ ಮಾಡಲು ಸುಮಾರು 50 ಕೋಟಿ ಹಣವನ್ನು ಮೀಸಲಿಟ್ಟು ಯೋಜನೆಯ ಅಭಿವೃದ್ಧಿಗೆ ಸರ್ಕಾರ ನೀಡಿದ್ದೇನೆ ಆದರೆ ಅನಂತರಾ ಬಂದ ಕಾಂಗ್ರೆಸ್ ಪಕ್ಷವು ಬೆಂಗಳೂರಿನಿಂದ ಕೊಳಚೆ ನೀರನ್ನು ತಂದು ಕೋಲಾರ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಿ ಈ ಜಿಲ್ಲೆಯ ಜನರು ಆ ನೀರನ್ನು ಕುಡಿದರೆ ಮಾರಕ ರೋಗಗಳು ಬರುವುದರಲ್ಲಿ ಸಂಶಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ಕೋಲಾರ ಜಿಲ್ಲೆಯಲ್ಲಿನ ಪರಿಸ್ಥಿತಿಯು ಇಂದು ಯಾವ ಮಟ್ಟಕ್ಕೆ ಇದೆ ಎಂದರೆ ಇಲ್ಲಿನ ರೈತರು ಬೆಳೆಯುವ ಟೊಮೇಟೊ ಬೆಂಗಳೂರಿನ ಮಾರುಕಟ್ಟೆ ಗೆ ಹೋಗಿ ಕೋಲಾರದ ಟೊಮೊಟೊ ಎಂದು ಹೇಳಿದರೆ ಮಾರಾಟಗಾರರು ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದ ಅವಧಿಯಲ್ಲಿ 14 ತಿಂಗಳು ನಾನು ಮುಖ್ಯಮಂತ್ರಿ ಆಗಿದ್ದಾಗ 25,000 ಕೋಟಿ ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದೆ ಆದರೆ ಕಾಂಗ್ರೆಸ್ ಸರ್ಕಾರವು ಎತ್ತಿನಹೊಳೆ ಎಂಬ ಹೆಸರಿಗೆ ಮುಂದಾಳತ್ವ ವಹಿಸಿ ಸುಮಾರು 13 ಸಾವಿರ ಕೋಟಿ ಅನುದಾನವನ್ನ ನುಂಗಿ ನೀರು ಪಾಲು ಮಾಡಿದ್ದಾರೆ . ಈಗ ಅದೇ ಚುನಾವಣೆಯ ಹೆಸರಿಟ್ಟುಕೊಂಡು ಮರಳಿ ನೀರನ್ನು ತರಲು 23,000 ಕೋಟಿ ಅನುದಾನ ಬೇಕೆಂದು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು
2018ನೇ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಮುಂಚೆ ನಾನು ಸಮ್ಮಿಶ್ರ ಸರ್ಕಾರ ನಡೆಸಿದ ನಂತರ ನಾನು ಆಶ್ವಾಸನೆ ನೀಡಿದ್ದ ಮಾತಿನಂತೆ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಒತ್ತಡಗಳು ಇದ್ದರೂ ಸಹ ನಾನು ಕೊಟ್ಟ ಮಾತನ್ನು ಚಾಚು ತಪ್ಪದೇ 14 ತಿಂಗಳ ಅಧಿಕಾರ ಅವಧಿಯಲ್ಲಿ 25,000 ರೈತರ ಸಾಲ ಮನ್ನಾ ಮಾಡಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದರು
ಪಂಚಾಯಿತ್ ನ ಯೋಜನೆಗಳ ಮುಖ್ಯ ಉದ್ದೇಶವೆಂದರೆ ರಾಜ್ಯದ ಎಲ್ಲಾ ಮಕ್ಕಳಿಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ಎಲ್ಲಾ ವರ್ಗದ ಜನರಿಗೂ ಈ ರಾಜ್ಯದಲ್ಲಿ ಆರೋಗ್ಯ ಸಂಪತ್ತು ಎಲ್ಲಾ ವರ್ಗದ ರೈತರಿಗೂ ರೈತ ಚೈತನ್ಯ ಎಲ್ಲಾ ಜನರಿಗೂ ವಸತಿಯ ಆಸರೆ ರಾಜ್ಯದ ಎಲ್ಲಾ ಮಹಿಳಾ ಮಣಿಗಳಿಗೆ ಯುವ ನವ ಮಹಿಳಾ ಸಬಲೀಕರಣ ಈ ಎಲ್ಲಾ ಯೋಜನೆಗಳು ಶಿಕ್ಷಣ ಕ್ರಾಂತಿ ಪ್ರತಿ ಹಳ್ಳಿಯ ಮನೆಮನೆಗೂ ತಲುಪಿಸ ಲೂ ಪಕ್ಷದ ಹಾಗೂ ಪಂಚರತ್ನ ಯೋಜನೆಗಳ ಅರಿವನ್ನು ಮೂಡಿಸಲು ಈ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು
ಶಿಕ್ಷಣ ವ್ಯಾಪಾರಿಕರಣವಾಗಿರುವ ಬಗ್ಗೆ ಆತಂಕ.
ರಾಜ್ಯದಲ್ಲಿ ಶಿಕ್ಷಣವು ವ್ಯಾಪಾರಿಕರಣವಾಗಿರುವ ಇಂತಹ ಸಮಯದಲ್ಲಿ ಎಲ್ಕೆಜಿ ಇಂದ ಹಿಡಿದು ಪಿಯುಸಿ ವ್ಯಾಸಂಗದವರಿಗೆ ಎಲ್ಲಾ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಸಂಕಲ್ಪವನ್ನು ಹೊಂದಿದ್ದೇನೆ ಅದೇ ರೀತಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6,000 ಮಕ್ಕಳ ಸರ್ಕಾರಿ ಹೈಟೆಕ್ ಮಾದರಿ ಶಾಲೆಗಳನ್ನು ತೆರೆಯಲು ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಎರಡು ಮೂರು ವಾರ್ಡ್ ಗಳಿಗೆ ಒಂದು ಹೈಟೆಕ್ ಸರ್ಕಲ್ ಶಾಲೆಯನ್ನು ನಿರ್ಮಿಸಲು ಯೋಜನೆಯ ಉದ್ದೇಶವಾಗಿದೆ
ಆರೋಗ್ಯ ಸಂಪತ್ತು
ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನರಿಗೂ ಸಹ ಉತ್ತಮ ಆರೋಗ್ಯ ಸಿಗಲು 30 ಹಾಸಿಗೆ ಸಾಮರ್ಥ್ಯವುಳ್ಳ ಸರ್ಕಾರಿ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುವುದು ಆಸ್ಪತ್ರೆಯಲ್ಲಿ ಐಸಿಯು ವಿಶೇಷ ವಾರ್ಡುಗಳು ಡಯಾಲಿಸಿಸ್ ಕೇಂದ್ರ ರಕ್ತಪರಿಕ್ಷ ಕೇಂದ್ರ ಉಚಿತ ಆಂಬುಲೆನ್ಸ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಒಳಗೊಂಡಿರುವ ಬೀ ಪಿಎಲ್ ಫಲಾನುಭವಿಗಳಿಗೆ ಸರ್ಕಾರದಿಂದಲೇ 25 ರಿಂದ 30 ಲಕ್ಷ ರೂಪಾಯಿಗಳ ಆರೋಗ್ಯ ವಿಮೆಯನ್ನು ಸಹ ಮಾಡಿಸಲಾಗುವುದು ಕಾಯಿಲೆಗಳಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಂಪೂರ್ಣವಾಗಿ ಅನುಕೂಲವಾಗುತ್ತದೆ ಎಂದು ತಿಳಿಸಿದರು
ಯುವನವ ಮಹಿಳಾ ಸಬಲೀಕರಣ ಯೋಜನೆ
ರಾಜ್ಯದಲ್ಲಿ ಇರುವ ಎಲ್ಲಾ ಮಹಿಳೆಯರಿಗೆ ಕೌಶಲ್ಯ ತರಬೇತಿ ಮತ್ತು ತಂತ್ರಜ್ಞಾನ ಆಧಾರಿತ ಉದ್ಯೋಗ ಮತ್ತು ಉದ್ಯಮಶೀಲತೆ ಆಧಾರಿತ ತರಬೇತಿಗಳನ್ನು ನೀಡುವುದಾಗುವ ಈ ಕಾರ್ಯಕ್ರಮ ಪ್ರತಿ ಗ್ರಾಮಕ್ಕೂ ಈ ಕೌಶಲ್ಯ ತರಬೇತಿ ವಾಹನ ಮಹಿಳೆಯರ ಗೃಹ ಬಳಕೆ ವಸ್ತುಗಳ ತಯಾರಿಕಾ ತರಬೇತಿ ಕೇಂದ್ರ ಕೇಂದ್ರಗಳನ್ನು ರಾಜ್ಯದ ಎಲ್ಲಾ ಪಂಚಾಯಿತಿಗಳ ಕೇಂದ್ರ ಸ್ಥಾನದಲ್ಲಿ ಒಂದು ತರಬೇತಿ ಕೇಂದ್ರವನ್ನು ತೆರೆಯಲಾಗುವುದು ಎಂದು ತಿಳಿಸಿದರು ಈ ಎಲ್ಲಾ ಯೋಜನೆಗಳಿಗೆ ಕಾರ್ಯ ಆಗಲು ೧,೨೫,೦೦೦ ಕೊಟ್ಟೂರುಪಾಯಿಗಳ ಅನುದಾನಗಳು ಮೀಸಲೂ ಇಡಲಾಗುವುದು ಎಂದು ವಿವರಿಸಿದರು
ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಮಾತನಾಡಿ ಈ ರಾಜ್ಯದ ಜನತೆಯ ಕುರಿತು ಪ್ರತಿನಿತ್ಯ ಆಲೋಚನೆ ಮಾಡುವ ನಾಯಕರ ಅಂದರೆ ಎಚ್ ಡಿ ಕುಮಾರಸ್ವಾಮಿ ರವರು ಅವರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ನಮ್ಮ ರಾಜ್ಯದ ಹೊರ ಹೊರ ರಾಜ್ಯಗಳಿಂದ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಮೀಸಲಾತಿ ಅನುಕಂಪದ ಆಧಾರದ ಮೇಲೆ ಕಾರ್ಯವನ್ನು ಕೆಲಸಗಳನ್ನು ಮಾಡುತ್ತಿರುವ ಅವರಿಂದ ನಮ್ಮ ಕರ್ನಾಟಕದ ಜನರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ನಮ್ಮ ಕರ್ನಾಟಕದ ಮುಖ್ಯಮಂತ್ರಿಯಾದರೆ ನಮ್ಮ ಕನ್ನಡಿಗರಿಗಾಗಿ ಪ್ರತ್ಯೇಕ ಮೀಸಲಾತಿಯನ್ನು ತರಬೇಕು ಇದರಿಂದ ನಾಡಿನ ಜನರಿಗೆ ಕನ್ನಡ ಭಾಷೆಯ ವಿದ್ಯಾಭ್ಯಾಸ ಪಡೆದಿರುವ ಎಲ್ಲರಿಗೂ ಪ್ರತ್ಯೇಕ ಮೀಸಲಾತಿಯನ್ನು ತರುವುದರಿಂದ ಉದ್ಯೋಗವನ್ನು ಕಲ್ಪಿಸಲಾಗಬೇಕು ಎಂದು ಒತ್ತಾಯ ಮಾಡಿದರು ರಾಜ್ಯದ ಪ್ರತಿ ಜಿಲ್ಲೆಗೊಂದು ಕೈಗಾರಿಕಾ ವಲಯವನ್ನು ಸ್ಥಾಪಿಸಿ ಉದ್ಯೋಗಗಳನ್ನು ಕಲ್ಪಿಸುವಲ್ಲಿ ಮುಂದಾಗ ಬೇಕಿದೆ ಎಂದು ಸಲಹೆಯನ್ನು ನೀಡಿದರು.
ಈ ಸಮಾರಂಭದಲ್ಲಿ ಕಾರ್ಯಕ್ರಮದಲ್ಲೀ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಮಾಜಿ ಸಚಿವರಾದ ಜಿ ಟಿ ದೇವೇಗೌಡ ಕೋಲಾರ ಜಿಲ್ಲೆಯ ಅಧ್ಯಕ್ಷರಾದ ಜಿಕೆ ವೆಂಕಟಶಿವಾರೆಡ್ಡಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮುಳಬಾಗಿಲು ಸಮೃದ್ಧಿ ಮಂಜುನಾಥ್ ದೇವಾನಂದ ಚೌಹಾಣ್ ನಾಯಕ್ ಸಿಎಂಆರ್ ಶ್ರೀನಾಥ್ ಮಲ್ಲೇಶ್ ಬಾಬು ರಾಮೇಗೌಡ ಮಲ್ಲೇಶ್ ಶಾರದಾಪೂರ್ ಕಾಶಂಪುರ್ ಮುದ್ದಪ್ಪ ರಾಜ್ಯ ಕಾರ್ಯದರ್ಶಿ ವಜಾ ತುಲ್ಲಾಕನ್, ತಾಲೂಕು ಅಧ್ಯಕ್ಷ ಕಾಡಿನ ಹಳ್ಳಿ ನಾಗರಾಜ್ ತಾಲೂಕು ಕಾರ್ಯದರ್ಶಿ ನೆಲ್ಲೂರು ರಘುಪತಿ ರೆಡ್ಡಿ ಮಾಜಿ ನಗರಸಭಾ ಅಧ್ಯಕ್ಷ ಎಂ ಆರ್ ಮುರಳಿ ವಕೀಲರಾದ ಎಸ್ ಶ್ರೀನಿವಾಸ ರೆಡ್ಡಿ ರಾಜ್ಯ ವಿಧಾನಸಭಾ ಜೆಡಿಎಸ್ ಪಕ್ಷದ ಆಕಾಂಕ್ಷಿಗಳು ಮತ್ತು ಅಭ್ಯರ್ಥಿಗಳು ಸೇರಿದಂತೆ ಶ್ರೀನಿವಾಸಪುರ ತಾಲೂಕಿನ ಜಿಲ್ಲಾ ಪಂಚಾಯಿತಿ ಸದಸ್ಯರಾದ ತೂಪಲ್ಲಿ ನಾರಾಯಣಸ್ವಾಮಿ ಮಹಿಳಾ ಅಧ್ಯಕ್ಷರಾದ ಗಾಯತ್ರಿ ಮುತ್ತಪ್ಪ, ತಾಲೂಕು ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಸಿ ರವಿ, ಪೊ ಲೂ ಶಿವಾರೆಡ್ಡಿ ದಳಸನೂರು ಮಂಜುನಾಥ್, ರಾಮಚಂದ್ರಗೌಡ, ಶ್ರೀ ರಾಮೇಗೌಡ, ಕೆ ಪಿ ನಾಗೇಶ್, ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಭಾಗಿಯಾಗಿದ್ದರು.