ಈ ಬಾರಿ ನಾನು ಶಾಸಕ ಸ್ಥಾನದ ಅಭ್ಯರ್ಥಿ ಆಗಬೇಕಾಗಿತ್ತು,
ಮನದಾಳದ ನೋವು ಸಮುದಾಯದೊಂದಿಗೆ ಹಂಚಿಕೊಂಡ ಎಸ್ಎಲ್ಎನ್,
ಎಚ್ ಡಿ ಕುಮಾರಸ್ವಾಮಿ ‘2a ಗೆ ಬಲಿಜ ‘ಸೇರಿಸಲು ಒಪ್ಪಿಗೆ ಎಸ್ಎಲ್ಎನ್ ಮುಂದಾಳತ್ವ,
ಜಿಕೆ ವೆಂಕಟಶಿವಾ ರೆಡ್ಡಿ ರವರನ್ನು 20 ರಿಂದ 30ಸಾವಿರ ಲೀಡ್ ಗೆಲುವು ತರಲು ಇಂದಿನಿಂದಲೇ ಪ್ರಯತ್ನಿಸಿ ನನಗೆ ಸಾತ್ ನೀಡಿ ತಾಲೂಕಿನ ಜನತೆಗೆ ಎಸ್ ಎಲ್ ಎನ್ ಮಂಜುನಾಥ್ ಕೆರೆ,
ನಮ್ಮಿಬ್ಬರ ಮಿಲನ ಎಸ್ ಎಲ್ ಎನ್ ನನ್ನ ಜೊತೆಗಿನ ಸಂಭ್ರಮ ಹಬ್ಬದ ವಾತಾವರಣ ಸೃಷ್ಟಿ :ಜಿ ಕೆ ವೆಂಕಟಶಿವಾರೆಡ್ಡಿ
ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬಲಿಜಿಗ ಸ್ವಾಭಿಮಾನಿ ಸಮಾವೇಶ
ಕಾರ್ಯಕ್ರಮದಲ್ಲಿ ಕೇಂದ್ರಬಿಂದುವಾದ sln ಮಂಜುನಾಥ್ ಮಾತನಾಡಿ
ನಂಬಿಹಳ್ಳಿ ಗ್ರಾಮ ನಮ್ಮ ಮೂಲ ಗ್ರಾಮವಾಗಿದ್ದು ಏನಾದರೂ ಸಾಧಿಸಬೇಕು ಎಂಬ ಹಂಬಲ ನನಗಿದೆ ಈ ಹಂಬಲ ನಮ್ಮ ಗ್ರಾಮದಿಂದಲೇ ಪ್ರಾರಂಭವಾಗಬೇಕು ನಮ್ಮ ಮೂಲ ಗ್ರಾಮದಿಂದ ನನ್ನ ಕೊಡುಗೆ ಈ ಸಮಾಜಕ್ಕೆ ಮತ್ತು ರಾಜ್ಯಕ್ಕೆ ಕೊಡುಗೆ ಆಗಬೇಕು ಎಂದು ಹಲವಾರು ರೀತಿಯಲ್ಲಿ ಪ್ರಯತ್ನಪಟ್ಟೆ ಈ ಬಾರಿ ನಾನು ಈ ಶ್ರೀನಿವಾಸ್ ಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಗಬೇಕಾಗಿತ್ತು ಆದರೆ ಅನುಕೂಲ ವಾತಾವರಣ ಸೃಷ್ಟಿಯಾಗಲಿಲ್ಲ ಎಂದು ಬಲಿಜ ಸಮುದಾಯದ ಜನಾಂಗದೊಂದಿಗೆ ತನ್ನ ಮನದಾಳದ ನೋವನ್ನು ಎಸ್ಎಲ್ಎನ್ ಮಂಜುನಾಥ್ ಹಂಚಿಕೊಂಡು ಈ ಬಾರಿ ನೀವು ನನ್ನೊಂದಿಗೆ ಸಲಹೆಯನ್ನು ನೀಡಿ ನನ್ನೊಂದಿಗೆ ಇರಬೇಕು ಎಂದು ಒಪ್ಪಿಗೆಯನ್ನು ಪಡೆದರು
ನಾನು ನನ್ನ 9 ವರ್ಷಗಳ ಕಾಲವನ್ನು ಇದೆ ಶ್ರೀನಿವಾಸಪುರದಲ್ಲಿಯೇ ನಿರಂತರವಾಗಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ ಈ ಕ್ಷೇತ್ರ ಆಯ್ಕೆ ಮಾಡಲು ನನ್ನ ಸ್ವಂತ ಗ್ರಾಮವಾಗಿದೆ ಕೆಲ ಹಿರಿಯರು ಬೇರೆ ಕಡೆ ಹೋಗಿ ಅಲ್ಲಿ ನಮ್ಮ ಜನಾಂಗದ ಅತಿಹೆಚ್ಚಿನ ಮತದಾರರು ಇದ್ದು ಅಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಹೋಗಿ ಎಂದು ಹಲವಾರು ಸಲಹೆಗಳನ್ನು ನೀಡಿದರು ಅದರಿಂದ ನಾನು ಬಿಜೆಪಿ ಸೇರ್ಪಡೆಯಾಗಿ ಅಂದಿನಿಂದಲೂ ಯುವ ಪಡೆಯನ್ನು ಶ್ರೀನಿವಾಸಪುರ ತಾಲೂಕಿನಲ್ಲಿ ಕಟ್ಟಿದೆ ಆದರೆ ಯಾರೂ ನನಗೆ ಸಹಕಾರ ನೀಡಲಿಲ್ಲ
ಆದರೆ ನನ್ನ ಸ್ವಂತ ಶಕ್ತಿಯಿಂದ ಕೆಲಸ ಮಾಡಿದೆ ಕೆಲವರು 2018ರಲ್ಲಿ ಅಭ್ಯರ್ಥಿಯಾಗಬೇಕು ನನ್ನ ಕುಲಬಾಂಧವರಿಗೆ ಹಿತೈಷಿಗಳಿಗೆ ಹೇಳಿ ಸೀಟನ್ನು ನನ್ನಿಂದ ಕೈ ತಪ್ಪಿಸಿದರು
ನಮ್ಮ ಸಮುದಾಯವನ್ನು ಕಡೆಗೆಣಿಸಲು ಎತ್ತಿಸಿದರು ಆದರೂ ಸಹ ನನ್ನ ಜನ ಸಮಾಜ ಸೇವೆಸಿಕೊಂಡು ಬರುತ್ತಿದ್ದೇನೆ
ಆರು ತಿಂಗಳ ಹಿಂದೆ ಜನಪರ ಸೇವೆಯನ್ನು ಮಾಡಿಕೊಂಡು ಬಿಜೆಪಿ ಪಕ್ಷದ ವತಿಯಿಂದ ಇಲ್ಲಿ ಸಮಾಜ ಸೇವೆ ಮಾಡುತ್ತಾ ಸದೃಢ ನಿರ್ಧಾರ ತೆಗೆದುಕೊಂಡು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಪ್ರವಾಸಗಳನ್ನು ಕೈಗೊಂಡು ಪಕ್ಷ ಸಂಘಟನೆಯನ್ನು ಮಾಡಿದೆ ಆದರೆ ಬಿಜೆಪಿ ಪಕ್ಷದ ವತಿಯಿಂದ ನನಗೆ ಯಾವುದೇ ರೀತಿಯಲ್ಲಿ ಸಹಕಾರ ಸಿಗಲಿಲ್ಲ ಎಂದು ಮನದಾಳದ ನೋವನ್ನು ಹಂಚಿಕೊಂಡರು
ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪುರದಲ್ಲಿ ಗುಂಜೂರು ಶ್ರೀನಿವಾಸ್ ರವರು ಸೇರ್ಪಡೆಯಾದರು ಅನಂತರ ಬಿಜೆಪಿ ಪಕ್ಷದ ವತಿಯಿಂದ ಈ ರೀತಿ ನಮ್ಮ ಪಕ್ಷಕ್ಕೆ ಬೇರೆಯವರು ಸೇರ್ಪಡೆಯಾಗಿದ್ದಾರೆ ಎಂಬುದು ನನಗೆ ಪಕ್ಷದಿಂದ ಮಾಹಿತಿ ನೀಡಲಿಲ್ಲ ಕನಿಷ್ಠಪಕ್ಷ ಇಲ್ಲಿನ ಗುಂಜೂರು ಶ್ರೀನಿವಾಸ್ ರೆಡ್ಡಿ ರವರು ನಾಮಪತ್ರವನ್ನು ಸಲ್ಲಿಸಲು ಮೊದಲನೇ ಬಾರಿ ಹೋಗುವಾಗ ನನಗೆ ಹೇಳಲೇ ಇಲ್ಲ ಆನಂತರ ಎರಡನೇ ಬಾರಿ ನಾಮಪತ್ರವನ್ನು ಸಲ್ಲಿಸಲು ಹೋಗುವಾಗ ರಾತ್ರಿ ಸರಿ ಸುಮಾರು ಎಂಟರಿಂದ ಒಂಬತ್ತು ಗಂಟೆ ಸಮಯದಲ್ಲಿ ಒಮ್ಮೆ ಕರೆ ಮಾಡಿ ನಾನು ಮುಂಜಾನೆ ನಾಮಪತ್ರವನ್ನು ಸಲ್ಲಿಸಲು ಹೋಗುತ್ತಿದ್ದೇನೆ ನೀವು ಬನ್ನಿ ಎಂದು ನಾಮಕಾವಸ್ತಿಗೆ ಕೇಳಿದರು ಆಗ ನನಗೆ ಬಹಳ ನೋವಾಯಿತು ನನ್ನ ಬೆಲೆ ಕಡಿಮೆ ಆಗುತ್ತದೆ ಎಂಬ ಆಲೋಚನೆ ಮಾಡ್ತಾ ಇದ್ದೆ
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನನಗೆ ತುಂಬಾ ಮನಸ್ಸಿಗೆ ಜಾಸ್ತಿಯಾಗಿತ್ತು ಅಂತಹ ಸಮಯದಲ್ಲಿ ನಾನು ದೊಡ್ಡ ಮನಸ್ಸಿನಿಂದ ನನ್ನ ಸಮಾಜ ಸೇವೆಯನ್ನು ಮುಂದುವರಿಸಲು ಹೋಗೋಣ ಎಂದು ತೀರ್ಮಾನ ಕೈಗೊಂಡೆ ಆಗ ನನ್ನ ಸಮುದಾಯದ ಮುಖಂಡರು ನನ್ನ ಬಳಿ ಬಂದು ನಿಮ್ಮ ಜೊತೆಯಲ್ಲಿ ನಾವು ಸದಾ ಇರುತ್ತೇವೆ ನೀವು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಸಮಾಜ ಸೇವೆಯನ್ನು ಮುಂದುವರಿಸಿ ಎಂದು ನನಗೆ ಉರುದುಂಬಿಸಿದ ನಮ್ಮ ಜನಾಂಗವನ್ನು ನನ್ನ ಹಣ ಇರುವವರೆಗೂ ಮರೆಯುವುದಿಲ್ಲ ಮತ್ತು ಈ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಇರುತ್ತೇನೆ ಶಾಶ್ವತವಾಗಿ ಸಮಾಜ ಸೇವೆಯಲ್ಲಿ ಇಲ್ಲಿ ಕಾಣಿಸುತ್ತೇನೆ ಎಂದು ಶಪಥ ಮಾಡಿದರು
ಆರು ತಿಂಗಳ ಹಿಂದೆ ನಾನು ಹಳ್ಳಿ ಸುತ್ತಾಡುವ ಸಮಯದಲ್ಲಿ ಯುವಕರ ತಂಡವನ್ನು ಕಟ್ಟಿ ನಿರಂತರವಾಗಿ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದೆ ಆಗ ಜಾತಿವಾರು ಸಮೀಕ್ಷೆಯಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ನನಗೆ ಟಿಕೆಟ್ ನೀಡುವ ಹಿನ್ನಡೆಯನ್ನು ಮನಗಂಡೇ ಆದರೂ ಸಹ ಬಿಜೆಪಿ ಪಕ್ಷದ ಪಾಂಪ್ಲೆಟ್ ಗಳನ್ನು ಪ್ರತಿ ಮನೆಮನೆಗೂ ತಲುಪಿಸುವ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದೆ ಪ್ರತಿ ಹಳ್ಳಿಯಲ್ಲಿಯೂ ಸಹ ಎಸ್ಎಲ್ಎನ್ ಮಂಜುನಾಥ್ ರವರು ನೀವು ಶ್ರೀನಿವಾಸಪುರದಲ್ಲಿ ಟಿಕೆಟ್ ಪಡೆದು ವಿಧಾನಸಭೆಗೆ ಸ್ಪರ್ಧಿಸಿದರೆ ನಿಮ್ಮ ಗೆಲುವು ಎಂಬ ಅಲೆಯೂ ನನ್ನ ಪರವಾಗಿ ಶ್ರೀನಿವಾಸಪುರ ತಾಲೂಕಿನಾದ್ಯಂತ ಎದ್ದಿದ್ದು
ಇಂತಹ ಸಮಯದಲ್ಲಿ ಬೇರೆಯವರಿಗೆ ಟಿಕೆಟ್ ನೀಡಿದ ಪಕ್ಷವು ನಾನು ಬಿಡಲು ಕಾರಣವಾಯಿತು ಇಂತಹ ಬಿಜೆಪಿ ಪಕ್ಷದಲ್ಲಿ ನಾನು ಇರಬೇಕೆ ನನ್ನಲ್ಲಿ ಪ್ರಶ್ನೆ ಮೂಡಿತು
ನನ್ನ ಸಮಾಜ ಸೇವೆಯನ್ನು ಗುರುತಿಸಿರುವ ಈ ಶ್ರೀನಿವಾಸ್ ಪುರ ತಾಲೂಕಿನಲ್ಲಿ ಹಳ್ಳಿಗಳಿಗೆ ಭೇಟಿ ನೀಡಿದಾಗ ನಾನು ಮಾಡಿರುವ ಸಹಾಯವನ್ನು ಪಡೆದ ಜನರು ನನಗೆ ಜ್ಞಾಪಿಸಿದರು ನಮಗೆ ನಿಮ್ಮಿಂದ ಸಹಕಾರವಾಗಿದೆ ಮತ್ತು ಸಹಾಯವಾಗಿದೆ ಎಂಬ ಅವರ ಮನದಾಳದ ಮಾತುಗಳನ್ನು ನಾನು ಅರಿತು ಇಂಥ ಜನಕ್ಕೆ ನಾನು ಏನಾದರೂ ಮಾಡಬೇಕು ಎಂಬ
ಹಂಬಲ ನನ್ನಲ್ಲಿ ಹೆಚ್ಚಿಸಿತು
ಈ ಆಲೋಚನೆ ಮಾಡುತ್ತಿರುವಾಗ ಕಾಂಗ್ರೆಸ್ ಪಕ್ಷದ ವತಿಯಿಂದ ಇಬ್ಬರು ಯುವಕರಾದ ಹರೀಶ್ ಮತ್ತು ವೇಣು ಎಂಬುವರು ನನಗೆ ಕರೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು ಆದರೆ ನಾನು ಸರಿಯಾಗಿ ಕಿವಿ ಕೊಡಲಿಲ್ಲ ಅನಂತರ ಪಕ್ಷದ ಹಿರಿಯ ನಾಯಕರು ದೊಡ್ಡ ನಾಯಕರು ಸಹ ಕಾಂಗ್ರೆಸ್ ಪಕ್ಷಕ್ಕೆ ಸಾಕಾರ ನೀಡಬೇಕು ನೀನು ನಮ್ಮೊಂದಿಗೆ ಇರಬೇಕು ನಿನ್ನ ಕೈಲಾದ ಸಹಕಾರವನ್ನು ಮಾಡು ಮತ್ತು ಸಹಾಯವನ್ನು ಮಾಡು ಎಂದು ದೂರವಾಣಿ ಮೂಲಕ ನನಗೆ ಕರೆ ಮಾಡಿದ್ದರು ಎಂದು ಸಮುದಾಯದ ಜನತೆಗೆ
ತಿಳಿಸಿದರು
ನನ್ನ ನಡೆಯನ್ನು ಗಮನಿಸಿದಂತಹ ಕೆಲವು ಸ್ನೇಹಿತರು ಮತ್ತು ಹಿರಿಯರ ಸಲಹೆಯಂತೆ ಜಿಕೆ ವೆಂಕಟಶಿವಾರೆಡ್ಡಿರವರು ಅಣ್ಣನಿಗೆ ಒಂದು ಗಂಟೆಯ ಸವಿವರವಾಗಿ ರಾಜಕೀಯವಾಗಿ ಚರ್ಚೆ ಮಾಡಿ ಆನಂತರ ದೇಶದ ಬೆಂಬಲವನ್ನು ಕೋರಿದರು
ಆ ವೇಳೆಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಬಳಿ ಮಾತನಾಡಿ ಅವರೊಂದಿಗೆ ಮಾತನಾಡಲು ಸಮಯವನ್ನು ನಿಗದಿ ಮಾಡಲು ಯತ್ನಿಸಿದರು ಆಗ ಕುಮಾರಸ್ವಾಮಿಯವರು ಚುನಾವಣಾ ಪ್ರಚಾರದಲ್ಲಿ ಇದ್ದರೂ ಸಹ ಎರಡು ದಿನಗಳಲ್ಲಿ ನನ್ನೊಂದಿಗೆ ಭೇಟಿ ಮಾಡಲು ಬೆಂಗಳೂರಿನ ಜಕ್ಕೂರು ಏರೋಡ್ರಮ್‌ನಲ್ಲಿ ಭೇಟಿಯಾದವು ಆಗ ನಾನು ಕೆಲವು ಸ್ನೇಹಿತರೊಂದಿಗೆ ಕುಮಾರಸ್ವಾಮಿಯವರನ್ನು ಮತ್ತು ಈ ಕ್ಷೇತ್ರದ ಆರ್ ಚೌಡರೆಡ್ಡಿ ರವರನ್ನು ಮತ್ತು ಜಿಕೆ ವೆಂಕಟಶಿವಾರೆಡ್ಡಿರವರ ಬಳಿ ಚರ್ಚೆ ಮಾಡಿದವು
ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನನ್ನ ಬಳಿ ಯಾರು ಬಂದರೂ ಅವರಿಗೆ ಸಹಾಯ ಸಹಕಾರ ನೀಡುತ್ತೇನೆ ಎಂದು ಕುಮಾರಸ್ವಾಮಿಗಳು ವಿವರಿಸಿದರು ಇನ್ನು ರಾಜಕೀಯವಾಗಿ ಗುಪ್ತ ಚರ್ಚೆಗಳು ಸಹ ನಾನು ಮಾಡಿದೆ ಆಗ ನಮ್ಮ ಜನಾಂಗದ ಮೀಸಲಾತಿಯನ್ನು 2 ಎ ಗೆ ಸೇರಿಸಬೇಕು ಎಂಬ ಕಟ್ಟುನಿಟ್ಟಿನ ಒತ್ತಾಯವನ್ನು ಮಾಡಿದ್ದೇನೆ ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರು ಸರ್ಕಾರ ಬಂದ ಕೂಡಲೇ 2 ಎ ಸೇರಿಸಲು ಒಪ್ಪಿಗೆಯನ್ನು ಸಹ ನೀಡಿದ್ದಾರೆ ಎಂದು ಸಮುದಾಯದ ಜನತೆಗೆ ತಮ್ಮ ಇಡೀ ಜೀವನದ ರಾಜಕೀಯ ಚರಿತ್ರೆಯನ್ನು ವಿವರಿಸಿದ್ದರು
ಸಮುದಾಯ ಮುಖಂಡರಾದ ಚಲಪತಿ ಶ್ರೀನಿವಾಸ್ ಸಗತರೂ ನಾರಾಯಣಸ್ವಾಮಿ ಮಾಜಿ ಪುರಸಭೆಯ ಅಧ್ಯಕ್ಷರಾದ ಚಂದ್ರಕಲಾ ಮಿಲ್ಕ್ ಪಾರ್ಲರ್ ಮುರಳಿ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಇಂದಿರಾ ರಾಜಣ್ಣ ತೂಪಲ್ಲಿ ಆರ್ ನಾರಾಯಣಸ್ವಾಮಿ ಎಂವಿ ಶ್ರೀನಿವಾಸ್ ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀನಿವಾಸಪ್ಪ ಅಂಬೇಡ್ಕರ್ ಪಾಳ್ಯ ಸಿ ಮುನಿಯಪ್ಪ ವಕೀಲ ಮಾರುತಿ ರೆಡ್ಡಿ ಜೆಡಿಎಸ್ ಮಹಿಳಾ ಮುಖಂಡರಾದ ಗಾಯತ್ರಿ ಮುತ್ತಪ್ಪ ಮುಖಂಡರಾದ ಆಟೋ ಜಗನ್, ಶಿವಾರೆಡ್ಡಿ ಸೇರಿದಂತೆ ಅನೇಕ ಜೆಡಿಎಸ್ ಕಾರ್ಯಕರ್ತರು ಸಮುದಾಯದ ಎಲ್ಲಾ ಮುಖಂಡರು ಭಾಗಿಯಾಗಿದ್ದರು.