ಸುತ್ತಮುತ್ತಲಿನ ಅನಕ್ಷರಸ್ಥರನ್ನ ಸಾಕ್ಷರನ್ನಾಗಿ ಮಾಡಬೇಕಂಬ ಫಣತೊಡಬೇಕು : ಕೆ.ಸಿ.ವಸಂತ

ಶ್ರೀನಿವಾಸಪುರ, ಅನಕ್ಷರತೆ ಎನ್ನುವುದು ನಮ್ಮ ಸಮಾಜದಲ್ಲಿ ದೊಡ್ಡ ಶಾಪ. ಇದನ್ನ ಹೋಗಲಾಡಿಸಬೇಕಾದರೆ ನಾವೆಲ್ಲರೂ ಸೇರಿ ನಮ್ಮ ಸುತ್ತಮುತ್ತಲಿನ ಅನಕ್ಷರಸ್ಥರನ್ನ ಸಾಕ್ಷರನ್ನಾಗಿ ಮಾಡಬೇಕಂಬ ಫಣತೊಡಬೇಕು ಎಂದು ತಾಲೂಕು ಸಾಕ್ಷರತಾ ನೋಡಲ್ ಅಧಿಕಾರಿ ಕೆ.ಸಿ.ವಸಂತ ಎಂದು ಸಲಹೆ ನೀಡಿದರು.
ತಾಲೂಕಿನ ಸೋಮಯಾಜಲಪಲ್ಲಿ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಾಕ್ಷರತಾ ಸ್ವಯಂ ಸೇವಕರಿಗೆ ೨ ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಗಾಟಿಸಿ ಮಾತನಾಡಿದರು.
ಸಾಕ್ಷರತೆಯನ್ನು ಪರಿಶೀಲಿಸಿದರೇ ಇನ್ನೂ ನಮ್ಮ ದೇಶದಲ್ಲಿ ಶೇ ೧೦೦ ರಷ್ಟು ಸಾಕ್ಷರಾಗಿಲ್ಲ. ಹಾಗಾಗಿ ಸ್ವಯಂ ಸೇವಕರು ಅನಕ್ಷಸ್ಥರಿಗೆ ಅಕ್ಷರಾಭ್ಯಾಸವನ್ನು ಮಾಡಿಸುವಾಗ ಅವರ ವಯಸ್ಸಿಗೆ ತಕ್ಕಂತೆ ಪ್ರೀತಿಯಿಂದ ಹಬ್ಬದ ವಾತಾವರಣದೊಂದಿಗೆ ಅಕ್ಷರವನ್ನು ಹೇಳಿಕೊಟ್ಟು ಸಾಕ್ಷರರನ್ನಾಗಿ ಮಾಡಬೇಕು ಎಂದರು.
ನಮ್ಮ ತಾಲೂಕಿನಲ್ಲಿ ೫ ಗ್ರಾ.ಪಂ ಗಳನ್ನು ಸಂಪೂರ್ಣ ಸಾಕ್ಷರನ್ನಾಗಿ ಮಾಡುವ ಉದ್ದೇಶದಿಂದ ಈ ತರಬೇತಿ ನೀಡಲಾಗುತ್ತಿದೆ. ಒಟ್ಟು ೪ ದಿನಗಳ ತರಬೇತಿ ಇದಾಗಿದ್ದು ಸದ್ಯ ೨ ದಿನಗಳ ತರಬೇತಿ ಇದಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೆರಡೂ ದಿನಗಳ ತರಬೇತಿಯನ್ನ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಾಲಿನಲ್ಲಿಯೇ ಸಾಕ್ಷರತಾ ಇಲಾಖೆಯನ್ನು ಶಿಕ್ಷಣ ಇಲಾಖೆಯೊಂದಿಗೆ ಜೋಡಣೆ ಮಾಡಿರುವ ಹಿನ್ನೆಲ್ಲೆಯಲ್ಲಿ ಶಿಕ್ಷಕರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಿದ್ದು, ಶಿಕ್ಷಕರು ಸ್ವಯಂ ಸೇವಕರ , ಗ್ರಾಮಸ್ಥರ ಸಹಕಾರವನ್ನು ಪಡೆದು ನಿಮ್ಮ ಶಾಲೆಗೆ ಸಂಬoದಿಸಿದ ಗ್ರಾಮಗಳಲ್ಲಿ ಅನಕ್ಷರಸ್ಥರನ್ನು ಪಟ್ಟಿ ಮಾಡಿ ಅಂತಹವರಿಗೆ ಅಕ್ಷರವನ್ನು ಕಳಿಹಿಸುವ ಕಾರ್ಯವನ್ನು ಹಮ್ಮಿಕೊಳ್ಳಬೇಕು ಎಂದರು.
ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲರಮೇಶ್, ಬಿಆರ್‌ಪಿ ವೆಂಕಟಾಚಲಪತಿ, ರಾಜ್ಯ ಸಂಪನ್ಮೂಲ ವ್ಯಕ್ತಿ ಕಲಾಶಂಕರ್, ಉಪಪ್ರಾಂಶುಪಾಲ ನಾಗರಾಜ್, ಸಂನ್ಮೂಲ ವ್ಯಕ್ತಿ ಜಿ.ವಿ.ಚಂದ್ರಪ್ಪ, ಸಿಆರ್‌ಪಿ ಗಳಾದ ಪೆದ್ದಪ್ಪಯ್ಯ, ವೆಂಕಟೇಶಪ್ಪ, ವೇಣುಗೋಪಾಲ್, ಶಿಕ್ಷಕರಾದ ಎ.ಸುಜಾತ, ಶಿವಲಿಂಗಯ್ಯ, ರವಣಪ್ಪ, ಕಾತೀಕ್, ನಾರಾಯಣಸ್ವಾಮಿ, ನಾಗೇಂದ್ರ, ಅನುಸೂಯಮ್ಮ, ಕೋದಂಡಪ್ಪ ಇದ್ದರು.

Leave a Reply

Your email address will not be published. Required fields are marked *