ಶ್ರೀನಿವಾಸಪುರ, ಸಂಪತ್ತುಗಳಿಸಲು ಹಾಳುಮಾಡಿಕೊಂಡ ಆರೋಗ್ಯವನ್ನು ಎಷ್ಟು ತೆತ್ತರೂ ತಿರುಗಿಗಳಿಸಲಾಗುದು. ಆ ಅರಿವಿನಿಂದಲೇ ನಮ್ಮ ನಡೆ ನುಡಿಗಳನ್ನು ರೂಡಿಸಿಕೊಂಡು ಆರೋಗ್ಯ ಭಾಗ್ಯ ಪಡೆಯೋಣವೆಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ರಾಯಲ್ಪಾಡು ಹೋಬಳಿ ಗೌನಿಪಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಶಸ್ತç ಚಿಕಿತ್ಸಾ ಕೊಠಡಿಯನ್ನು ಉದ್ಗಾಟಿಸಿ ಮಾತನಾಡಿದರು.
ಆರೋಗ್ಯದ ಬಗ್ಗೆ ನಿರ್ಲಕ್ಷö್ಯ ವಹಿಸುವುದು ಬೇಡ, ನಿಯಮಿತವಾದ ತಪಾಸಣೆ ಕಾಲಕಾಲಕ್ಕೆ ಅಗತ್ಯ , ಗ್ರಾಮೀಣ ಭಾಗದಲ್ಲಿ ವಯಸ್ಸಾದವರು ಅರಿವಿಲ್ಲದೆ ಅನಾರೋಗ್ಯದ ನಡುವೆಯೇ ಬದುಕು ಸಾಗಿಸುತ್ತಿದ್ದಾರೆ .
ಗ್ರಾಮೀಣ ಭಾಗದಲ್ಲಿನ ಗರ್ಭಣಿ ಮಹಿಳೆಯರಿಗೆ ಹರಿಗೆ ಸಮಯದಲ್ಲಿ ಅನೇಕ ಸರಿಯಾದ ಚಿಕಿತ್ಸೆಗಳು ದೊರೆಯದೆ ಅನೇಕ ಅನಾಹುತಗಳು ನಡೆಯುತ್ತಿರುತ್ತವೆ ಇದನ್ನ ಮನಗಂಡ ಸರ್ಕಾರವು ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಶಸ್ತç ಚಿಕಿತ್ಸಾ ಸೌಲಭ್ಯಗಳನ್ನು ತರೆದಿದೆ.
ಗ್ರಾಮೀಣ ಭಾಗದಲ್ಲಿನ ನಾಗರೀಕರು ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಿ, ಕಾಲಕಾಲಕ್ಕೆ ತಪಾಸನೆ ಪಡೆದುಕೊಂಡು ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಇದೇ ಸಮಯದಲ್ಲಿ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಹಾಗೂ ಸಿಬ್ಬಂದಿಗಳ ಕೊರತೆ ಬಗ್ಗೆ ಡಿಎಚ್‌ಒ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂರ್ಪಕಿಸಿ ಅದಕ್ಕೆ ಅತಿ ಶೀಘ್ರವಾಗಿ ಪರಿಹಾರ ಸೂಚಿಸುವಂತೆ ಸೂಚಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ನಾಗರಾಜ್, ಗ್ರಾ.ಪಂ ಅಧ್ಯಕ್ಷ ಶೇಷಾದ್ರಿ, ವೈದ್ಯಾಧಿಕಾರಿಗಳಾದ ಶರೀಫ್, ಚಂದ್ರಕಳಾ, ಮುಖಂಡರಾದ ರಾಮಮೋಹನ, ಚಂದ್ರಪ್ಪ, ರವಿಕುಮಾರ್, ಪ್ರೆಸ್ ಸೀನಪ್ಪ, ಗಂಡ್ರಾಸಪಲ್ಲಿ ರೆಡ್ಡಪ್ಪ, ಬುರುಜು ಕೃಷ್ಣಾರೆಡ್ಡಿ ಇದ್ದರು.