ದುಬಾರಿ ಡೋನೆಷನ್ ಹಾವಳಿಗೆ ಕಡಿವಾಣ ಹಾಕಿ : ರೈತ ಸಂಘದಿoದ ಉಪ ನಿರ್ದೇಶಕರಾದ ರಾಮಚಂದ್ರಪ್ಪರವರಿಗೆ ಮನವಿ

ಕೋಲಾರ, ಜಿಲ್ಲಾದ್ಯಂತ ಅನದೀಕೃತ ಕಾಲೇಜುಗಳ ನಡೆಸುತ್ತಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ದುಬಾರಿ ಡೋನೆಷನ್ ಹಾವಳಿಗೆ ಕಡಿವಾಣ ಹಾಕಿ ಶಿಕ್ಷಣ ಇಲಾಖೆಯನ್ನು ಆಂದ್ರದವರಿಗೆ ಮಾರಾಟಕ್ಕಿಟ್ಟಿರುವ ಗೋಪಿನಾಥ್‌ರವರ ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ರೈತ ಸಂಘದಿoದ ಉಪ ನಿರ್ದೇಶಕರಾದ ರಾಮಚಂದ್ರಪ್ಪರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ದೇಶದ ಭವಿಷ್ಯ ರೂಪಿಸುವ ಕೊನೆಯ ಹಂತದ ಕಾಲೇಜು ಶಿಕ್ಷಣ ದಿನೇ ದಿನೇ ಕಾರ್ಪೋರೇಟ್ ಕಂಪನಿಗಳ ಕಪಿಮುಷ್ಠಿಯಲ್ಲಿ ಬಡಕೂಲಿ ಕಾರ್ಮಿಕರ ಮಕ್ಕಳ ಭವಿಷ್ಯ ಕರಗಿಹೋಗುತ್ತಿದೆ. ಒಂದು ಕಡೆ ಸರ್ಕಾರಿ ಕಾಲೇಜುಗಳ ಅವ್ಯವಸ್ಥೆ ಗುಣಮಟ್ಟ ನೆಪದಲ್ಲಿ ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಗಲ್ಲಿಗೊಂದು ಪ್ರಾರಂಭ ಮಾಡಿಕೊಂಡು ನಿಮ್ಮ ಮಕ್ಕಳ ಭವಿಷ್ಯ ರೂಪಿಸುವ ನಮ್ಮ ಶಾಲೆಗೆ ದಾಖಲು ಮಾಡಿ ನಿಮ್ಮ ಮಕ್ಕಳನ್ನು ರಾಜಕಾರಣಿಗಳ ಹಿಂದೆ ಜೈಕಾರ ಹಾಕುವ ಅವಿಜ್ಞಾವಂತರಾಗಿ ಮಾಡುತ್ತೇವೆ ಎಂಬ ಮಟ್ಟಕ್ಕೆ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಯವಾದ ಮಾತುಗಳನ್ನು ಹೇಳಿ ಪೋಷಕರನ್ನು ಮರಳು ಮಾಡಿ ಕಾಲೇಜುಗಳಿಗೆ ಹಾಜರಾತಿ ಮಾಡಿಸಿಕೊಳ್ಳುವ ಖಾಸಗಿ ಶಾಲೆಗಳ ಆಡಳಿತ ಮಂಡಳಿ ನೀಟ್, ಸಿ.ಇ.ಟಿ, ಟೆಟ್, ಮತ್ತಿತರ ಆಸೆ ಆಕಾಂಕ್ಷಿಗಳನ್ನು ಹುಟ್ಟಿಸಿ ದಾಖಲಾತಿ ಮಾಡಿಕೊಂಡ ನಂತರ ಲಕ್ಷ ಲಕ್ಷ ಡೋನೆಷನ್ ಗಾಗಿ ಪೋಷಕರನ್ನು ಪೀಡಿಸುವ ಮೂಲಕ ಇತ್ತ ಕಾಲೇಜಿನಲ್ಲಿ ಶುಲ್ಕ ಕಟ್ಟಲಾಗದೆ ಮಕ್ಕಳ ಭವಿಷ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕುಟುಂಬಗಳೇ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿದ್ದರೂ ಶಿಕ್ಷಣ ವ್ಯವಸ್ಥೆ ಮಾತ್ರ ಸರಿಪಡಿಸಲು ಅಧಿಕಾರಿಗಳು ಮುಂದಾಗದೆ ಇರುವುದು ದುರಾದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ನೂರಾರು ಖಾಸಗಿ ಶಾಲೆಗಳು ಪರವಾನಗಿ ಪಡೆದು ನಂತರ ತಮ್ಮ ಕಾಲೇಜುಗಳನ್ನು ಹೊರ ರಾಜ್ಯದ ಆಂದ್ರ ಕಾರ್ಪೋರೇಟ್ ವ್ಯಕ್ತಿಗಳಿಗೆ ಕಾಲೇಜಿನಲ್ಲಿ ತರಗತಿಗಳು ಪ್ರಾರಂಭ ಮಾಡಲು ಅನುಮತಿ ನೀಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಜೊತೆಗೆ ವಿದ್ಯಾಜ್ಯೋತಿ ಪದವಿ ಪೂರ್ವ ಕಾಲೇಜು ಈಗ ಆಂದ್ರದ ಎಕ್ಸೆಲ್ ಆಕಾಡಮೆ ಕಾಲೇಜು ಹೇಗೆ ಆಯಿತುರ‍್ಯಾಕ್ ವ್ಯಾಲಿ ಕಾಲೇಜು ನಮ್ಮ ನಾರಾಯಣ ಕಾಲೇಜು ಹೇಗೆ ಆಯಿತು ಇಂತಹ ನೂರಾರು ಕಾಲೇಜುಗಳು ಅನಧಿಕೃತವಾಗಿ ತಲೆ ಎತ್ತಿದ್ದರೂ ಕ್ರಮ ಕೈಗೊಂಡು ಕ್ರಮಿನಲ್ ಪ್ರಕರಣ ದಾಖಲು ಮಾಡಲು ಶಿಕ್ಷಣ ಇಲಾಖೆ ವಿಪಲವಾಗಿದೆಯೇ ಎಂದು ಪ್ರಶ್ನೆ ಮಾಡಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಯಾವುದೇ ಕಾಲೇಜು ಪ್ರಾರಂಭ ಮಾಡಬೇಕಾದರೆ ಮೊದಲು ಮೂಲಭೂತ ಸೌಕರ್ಯಗಳಿರಬೇಕು. ಅಂತಹ ಕಾಲೇಜುಗಳು ಮಾತ್ರ ತರಗತಿ ನಡೆಸಲು ಅರ್ಹವಾಗಿರುತ್ತವೆ. ಅದನ್ನು ಬಿಟ್ಟು ಮನೆಗಳಲ್ಲಿ ಶೆಡ್‌ಗಳಲ್ಲಿ ಪರವಾನಗಿ ಪಡೆಯದ ಅನಧಿಕೃತ ನಕಲಿ ರವಾನಗಿ ಪತ್ರ ಪಡೆದು ಇಟ್ಟುಕೊಂಡು ಬಡಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುವ ಕಾಲೇಜುಗಳ ವಿರುದ್ದ ಕ್ರಮವಿಲ್ಲವೇಕೆ? ಪ್ರತಿ ತಿಂಗಳು ಮಾಲೀಕರು ನೀಡುವ ತಿಂಗಳ ಪ್ರಸಾದಕ್ಕೆ ಪವಿತ್ರವಾದ ಶಿಕ್ಷಣ ಸಂಸ್ಥೆಯನ್ನು ಅಡವಿಟ್ಟಿದ್ದೀರೆಯೇ ಶಿಕ್ಷಣ ಅವ್ಯವಸ್ಥೆ ವಿರುದ್ದ ಕಿಡಿ ಕಾರಿದರು.
ಪ್ರತಿ ವರ್ಷ ಸರ್ಕಾರಿ ಕಾಲೇಜುಗಳ ದಾಖಲಾತಿ ಮಾಡದೆ ಮೊದಲ ಆದ್ಯತೆ ಖಾಸಗಿ ಶಾಲೆಗಳಿಗೆ ಬಿಟ್ಟುಕೊಟ್ಟು ಆನಂತರ ಸರ್ಕಾರಿ ಶಾಲೆಗಳಿಗೆ ಹಾಜರಾತಿ ಮಾಡಿಕೊಡಲು ಹಿರಿಯ ಅಧಿಕಾರಿಗಳು ಮುಂದಾಗಿರುವುದು ಶಿಕ್ಷಣ ವ್ಯವಸ್ಥೆಯ ೨ನೇ ಕರಾಳ ಮುಖವಾಗಿದೆ ಎಂದು ಆರೋಪ ಮಾಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಯಾರ ಕೈಯಲ್ಲಿದೆ ಹತ್ತಾರು ವರ್ಷಗಳಿಂದ ಇಲಾಖೆಯಲ್ಲಿ ಎಪ್.ಡಿ.ಎ ಆಗಿ ಕೆಲಸ ನಿರ್ವಹಿಸುತ್ತಿರುವ ಗೋಪಿನಾಥ್‌ರವರ ಕೈಗೊಂಬೆಯಾಗಿ ಇಲಾಖೆ ನಡೆಯುತ್ತಿದೆಯೇ ಯಾವುದೇ ಪರವಾನಗಿ ನೀಡಬೇಕಾದರೂ ಇವರ ಅನುಮತಿ ಇಲ್ಲದೆ ಉಪ ನಿರ್ದೇಶಕರ ಕಚೇರಿಗೆ ಕಡತ ರವಾನೆ ಆಗಬಾರದೇ, ಪ್ರತಿ ಕಾಲೇಜಿನ ಪರವಾನಗಿ ನಿಡುವ ಮೊದಲು ಲಕ್ಷ ಲಕ್ಷ ಲಂಚ ಪಡೆದುಕೊಂಡು ಅನಧೀಕೃತ ಕಾಲೇಜುಗಳ ಪಿತಾಮಹರಾಗಿರುವ ಈ ವ್ಯಕ್ತಿ ಅಷ್ಟು ಪ್ರಭಾವಿಯೇ? ಇಲಾಖೆಯ ಗೌರವ ಅನಧಿಕೃತ ಕಾಲೇಜಿಗಳಿಗೆ ಕಡಿವಾಣ ಹಾಕಬೇಕಾದರೆ ಮೊದಲು ಈ ವ್ಯಕ್ತಿಯನ್ನು ಇಲಾಖೆಯಿಂದ ವರ್ಗಾವಣೆ ಮಾಡಿ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಮಾತ್ರ ಶಿಕ್ಷಣ ಉಳಿಯುತ್ತದೆ ಇಲ್ಲವಾದರೆ ಕೆಲವೇ ದಿನಗಳಲ್ಲಿ ನೊಂದ ಪೋಷಕರೇ ಕೈಗೆ ಪೊರಕೆ ಎತ್ತಿಕೊಳ್ಳುವ ಕಾಲ ದೂರವಿಲ್ಲವೆಂದು ಎಚ್ಚರಿಕೆ ನೀಡಿದರು.
ಒಂದು ವಾರದೊಳಗೆ ಜಿಲ್ಲಾದ್ಯಂತ ಅನದೀಕೃತ ಕಾಲೇಜುಗಳ ನಡೆಸುತ್ತಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ದುಬಾರಿ ಡೋನೆಷನ್ ಹಾವಳಿಗೆ ಕಡಿವಾಣ ಹಾಕಿ ಶಿಕ್ಷಣ ಇಲಾಖೆಯನ್ನು ಆಂದ್ರದವರಿಗೆ ಮಾರಾಟಕ್ಕಿಟ್ಟಿರುವ ಗೋಪಿನಾಥ್‌ರವರ ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಮಾನ್ಯರನ್ನು ಒತ್ತಾಯ ಮಾಡುತ್ತಿದ್ದೇವೆ ಇಲ್ಲವಾದರೆ ದಾಖಲೆಗಳೊಂದಿಗೆ ಮುಖ್ಯಮಂತ್ರಿಗಳ ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯನ್ನು ನಿಡುವ ಮುಖಾಂತರ ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪನಿರ್ದೇಶಕರಾದ ರಾಮಚಂದ್ರಪ್ಪರವರು ನೀವು ಮಾಡಿರುವ ಎಲ್ಲಾ ಆರೋಪಗಳು ಸತ್ಯವಾಗಿದೆ ಅನಧೀಕೃತ ಕಾಲೇಜುಗಳ ವಿರುದ್ದ ಕ್ರಮ ಕೈಗೊಳ್ಳಲು ರಾಜಕೀಯ ಒತ್ತಡ ಜೊತೆಗೆ ಇಲಾಖೆಯಲ್ಲಿನ ಕೆಳಹಂತದ ಸಿಬ್ಬಂದಿಯಾದ ಗೋಪಿನಾಥ್ ಅನಧೀಕೃತ ಶಾಲೆಗಳ ಕಾವಲುಗಾರರಾಗಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ವಕ್ಕಲೇರಿ ಹನುಮಯ್ಯ, ಕೆ.ಇ.ಬಿ ಚಂದ್ರು, ಪಾರುಕ್‌ಪಾಷ, ಬಂಗಾರಿ ಮಂಜು, ಮಂಜುಳಾ, ಕಾವ್ಯ, ಭಾಸ್ಕರ್, ರಾಜೇಶ್, ವಿಜಯಪಾಲ್, ಸುನಿಲ್‌ಕುಮಾರ್, ವಿಶ್ವನಾಥ್, ಆನಂದ್‌ರೆಡ್ಡಿ, ಯಲ್ಲಪ್ಪ, ಹರೀಶ್, ಅಪ್ಪೋಜಿರಾವ್, ಮಂಗಸoದ್ರ ತಿಮ್ಮಣ್ಣ, ನರಸಿಂಹಯ್ಯ, ಗೀರೀಶ್, ಚಾಂದ್‌ಪಾಷ, ಹಸಿರುಸೇನೆ ಜಿಲ್ಲಾದ್ಯಕ್ಷ ಕಿರಣ್, ಜಾವೇದ್, ಶೋಹಿಬ್, ನಟರಾಜ್, ಗೋವಿಂದಪ್ಪ, ರಾಮಸಾಗರ ವೇಣು, ಸುರೇಶ್‌ಬಾಬು, ಮುಂತಾದವರಿದ್ದರು.

Leave a Reply

Your email address will not be published. Required fields are marked *