ಶ್ರೀನಿವಾಸಪುರ, ತಾಲ್ಲೂಕಿನ ರೋಣೂರು ಹೋಬಳಿ ವ್ಯಾಪ್ತಿಯ ತಾಡಿಗೋಳ್ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಜೆ ಡಿ ಎಸ್ ಬೆಂಬಲಿತ ಅಭ್ಯರ್ಥಿ ಕೆ ವಿ ಮಂಜುನಾಥ್ ತೆಕ್ಕೆಗೆ ಸೇರಿದೆ.
ಪರಿಶಿಷ್ಟ ಮೀಸಲಾತಿ ಅಧ್ಯಕ್ಷ ಸ್ಥಾನಕ್ಕೆ ಜೆ ಡಿ ಎಸ್ ಬೆಂಬಲಿತ ಅಭ್ಯರ್ಥಿ ಕೆ ವಿ ಮಂಜುನಾಥ್ ರ ಒಂದೇ ಒಂದು ನಾಮ ಪತ್ರ ಸಲ್ಲಿಸಿದ್ದ ಹಿನ್ನೆಲೆ ಅಧ್ಯಕ್ಷ ಸ್ಥಾನ ಜೆ ಡಿ ಎಸ್ ತೆಕ್ಕೆಗೆ ಸೇರಿದ್ದು, ತಾಡಿಗೋಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 19 ಸದಸ್ಯರಿದ್ದು 13 ಜೆ ಡಿ ಎಸ್ ಬೆಂಬಲಿತ ಹಾಗೂ 6 ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಪೈಕಿ ಜೆ ಡಿ ಎಸ್ ಬೆಂಬಲಿತ ಮಂಜುನಾಥ್ ಅಧ್ಯಕ್ಷರಾಗಿದ್ದಾರೆ ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ವೇಳೆ ಜೆ ಡಿ ಎಸ್ ಹಿರಿಯ ಮುಖಂಡ ಅಂಬೇಡ್ಕರ್ ಪಾಳ್ಯ ರವಿ, ಆಟೋ ಜಗನ್, ತಿರುಮಲೇಶ, ಸುಬ್ರಮಣಿ, ಸದಸ್ಯ ಮಕ್ ಬುಲ್ ಬರೀದ್ ಹಾಗೂ ಇನ್ನಿತರ ಸದಸ್ಯರು ಹಾಗೂ ಬೆಂಬಲಿಗರು ಇದ್ದರು.