ಶ್ರೀನಿವಾಸಪುರ : ಸ್ವಾವಲಂಬನೆಯನ್ನು ಶಿಕ್ಷಣದೊಂದಿಗೆ ಸಂಯೋಜಿಸುವುದು ತಪ್ಪು. ನಮ್ಮ ದೇಶದ ರೈತರು ಸ್ವಾವಲಂಬಿಗಳು ಆದರೆ ವಿದ್ಯಾವಂತರಲ್ಲ. ಶಿಕ್ಷಣವು ಜೀವನಕ್ಕೆ ಬಹಳ ಮುಖ್ಯ . ಶಿಕ್ಷಣವು ನಮ್ಮ ಜೀವನದಲ್ಲಿ ತ್ವರಿತ ಬೆಳವಣಿಗೆಗೆ ಕಾರಣವಾಗುತ್ತದೆ. ನಮ್ಮ ಮತ್ತು ದೇಶದ ಸಿದ್ದಾಂತವು ಶಿಕ್ಷಣದ ಮೂಲಕ ಮಾತ್ರ ಬದಲಾಗುತ್ತದೆ. ಸಣ್ಣ ಕೆಲಸವನ್ನು ಮಾಡುವ ದೇಶದ ದಿನಕೂಲಿ ವರ್ಗವು ಸ್ವಾವಲಂಬಿಯಾಗಿದೆ. ಸ್ವಾವಲಂಬಿ ಮನುಷ್ಯನನ್ನು ಶ್ರೀಮಂತ ಎಂದು ಪರಿಗಣಿಸಲಾಗುತ್ತಿದೆ.
ಇಂದು ಭಾರತದ ಜನರು ಸ್ವಾವಲಂಬಿಗಳಾಗಿದ್ದಾರೆ. ಆದ್ದರಿಂದ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಮಗೆ ಪ್ರಪಂಚನಾದ್ಯಾoತ ಒಂದು ಹೆಸರು ಇದೆ. ಇಂದಿನ ಕಾಲದಲ್ಲಿ ಸ್ವಾಭಿಮಾನಿ ಮನುಷ್ಯನನ್ನು ಮಾತ್ರ ಗೌರವಿಸಲಾಗುತ್ತದೆ.
ಸ್ವಾವಲಂಬನೆ ಬದುಕಿನಲ್ಲಿ ಕಠಿಣ ಪರಿಶ್ರಮ ಮುಖ್ಯ ಅದರಂತೆ ಆತ್ಮವಿಆಶ್ವಾಸವು ಮುಖ್ಯ ಇವರೆಡು ಇದ್ದಲ್ಲಿ ಏನು ಬೇಕಾದರೂ ಸಾಧಿಸಿ, ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ನಮ್ಮ ಹೆತ್ತವರು ನಮಗೆ ಉತ್ತಮ ಶಿಕ್ಷಣವನ್ನು ನೀಡುತ್ತಾರೆ. ಇದರಿಂದ ನಾವು ಬೆಳೆದು ನಮ್ಮ ಕಾಲುಗಳ ಮೇಲೆ ನಿಲ್ಲಬಹುದು , ಜೊತೆಗೆ ಇಡೀ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು.
ಸ್ವಾವಲಂಬಿಯಾಗಿರುವುದು ಮನುಷ್ಯನಲ್ಲಿ ಆತ್ಮವಿಶ್ವಾಸವನ್ನು ಉಂಟು ಮಾಡುತ್ತದೆ. ಇದರಿಂದಾಗಿ ಒಬ್ಬ ವ್ಯಕ್ತಿಯು ಪ್ರಪಂಚದ ಯಾವುದೇ ಸಮಸ್ಯೆಯನ್ನು ಎದುರಿಸಲು ಏಕಾಂಗಿಯಾಗಿ ನಿಲ್ಲುತ್ತಾನೆ. ಸ್ವಾವಲಂಬಿಯಾಗಿರುವವರಲ್ಲಿ ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ.
ರಾಯಲ್ಪಾಡು ಸಮೀಪದ ತಾಟಿಮಾನಪಲ್ಲಿ ಗ್ರಾಮದ ಅಮರವಾತಮ್ಮ ಆಂಜನೇಯರೆಡ್ಡಿ ದಂಪತಿಗಳ ಮಗನಾದ ನರೇಶ್ ಬಿಕಾಂ ಓದಿ , ತಮ್ಮ ಸ್ವಂತ ೨ ಎಕರೆ ಜಮೀನಿನಲ್ಲಿ ರೇಷ್ಮೆ ನೂಲು ತೆಗೆಯುವ ಕಾರ್ಖನೆಯನ್ನು ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಿಸಿ, ಸ್ವಾವಲಂಬನೆ ಜೀವನದ ಮೂಲಕ ಸ್ವಾವಲಂಬನೆ ಜೀವನಕ್ಕೆ ಸೈ ಎನ್ನುವ ರೀತಿಯಲ್ಲಿ ಗ್ರಾಮೀಣ ಭಾಗದ ಯುವಪೀಳಿಗೆಗೆ ಸ್ಪೂರ್ಥಿಯಾಗಿದ್ದಾರೆ.
ಮುದಿಮಡುಗು ಗ್ರಾಮಪಂಚಾಯಿತಿ ವ್ಯಾಪ್ತಿಯ ಎಂ.ವ್ಯಾಪಲಪಲ್ಲಿ ಕ್ರಾಸ್ ಬಳಿ ರೇಷ್ಮೆ ನೂಲು ತೆಗೆಯುವ ಸಿದ್ದವಿನಾಯಕ ಕಾರ್ಖನೆಯು ಗ್ರಾಮೀಣ ಭಾಗದ ವಿದ್ಯಾವಂತ ಯುವಕ ನರೇಶ್ ಸ್ವಾವಲಂಬನೆಯೊoದಿಗೆ ಜೀವನವನ್ನು ಸಾಗಿಸುತ್ತಿದ್ದು,
ತಾಟಿಮಾನಿಪಲ್ಲಿ ಗ್ರಾಮದ ನರೇಶ್ ಬಿಕಾಂ ಓದಿ ಸರ್ಕಾರಿ ಅಥವಾ ಖಾಸಗಿ ಕೆಲಸಕ್ಕಾಗಿ ನಗರ ಪ್ರದೇಶಗಳಲ್ಲಿ ಅಲೆಯದೇ ಸ್ವಾವಲಂಬನೆ ಜೀವನವನ್ನು ಸಾಗಿಸ ಬೇಕೆಂಬ ಛಲದಿಂದ ಕೇಂದ್ರ ರೇಷ್ಮೆ ಮಂಡಲಿ ಹಾಗೂ ಕರ್ನಾಟಕ ರೇಷ್ಮೆ ಇಲಾಖೆ ಅನುಮತಿ ಪಡೆದು, ಸರ್ಕಾರ ನೀಡುವ ಸಮಗ್ರ ರೇಷ್ಮೆ ಅಭಿವೃದ್ಧಿ ಯೋಜನೆಡಿಯಲ್ಲಿ ಸಬ್ಸಿಡಿ ಪಡೆದು, ಆಂಜನೇಯರೆಡ್ಡಿ ರವರ ಸಲಹೆ ಸಹಕಾರವನ್ನು ಪಡೆದು, ಒಟ್ಟು ೫೫ ಲಕ್ಷ ವೆಚ್ಚ ಮಾಡಿ ರೇಷ್ಮೆ ನೂಲು ತೆಗೆಯುವ ಯಂತ್ರಗಳನ್ನು ಬೆಂಗಳೂರು ಹಾಗೂ ಇತರೆ ನಗರ ಪ್ರದೇಶಗಳಿಂದ ತರಿಸಿ, ನಂತರ ಕಳೆದ ಎರಡು ವರ್ಷಗಳ ಹಿಂದೆ ಕೆಲಸವನ್ನು ಪ್ರಾರಂಬಿಸಲಾಗಿ, ಈ ಕಾರ್ಖನೆಯಲ್ಲಿ ಒಟ್ಟು ೧೮ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.
ವಿದ್ಯಾವಂತ ಯುವಕರು ದುಶ್ಚಕ್ಕೆ ಬಲಿಯಾಗದೆ, ಸರ್ಕಾರಿ ಕೆಲಸಕ್ಕೆಂದೆ ಕಾಯದೆ, ತಮ್ಮ ಸ್ವಂತ ಆಲೋಚನೆಯೊಂದಿಗೆ ಆತ್ಮವಿಶ್ವಾಸದೊಂದಿಗೆ ಕಠಿಣ ಪರಿಶ್ರಮದೊಂದಿಗೆ ಕೆಲಸ ಕಾರ್ಯವನ್ನು ನಿರ್ವಹಿಸಿ, ಸ್ವಾವಲಂಬನೆ ಜೀವನದೊಂದಿಗೆ ಸುಖಮಯ ಜೀವನವನ್ನು ಕಟ್ಟಿಕೊಳ್ಳಬಹುದು ಎಂಬುದಕ್ಕೆ ತಾಟಮಾನಿಪಲ್ಲಿ ನರೇಶ್ ಮಾದರಿಯಾಗಿದ್ದಾನೆ.
ನಾನು ಹುಬ್ಬಳಿಯಲ್ಲಿ ಪಾಲುದರಿಕೆಯಲ್ಲಿ ದಿನಕ್ಕೆ ೩೦ ಕೆಜಿಯಷ್ಟು ನೂಲು ತೆಗೆಯುವ ಯಂತ್ರವನ್ನು ನಿರ್ಮಾಣ ಮಾಡಿಕೊಂಡಿದ್ದು, ಉತ್ತಮ ಲಾಭಂಶವನ್ನು ಪಡೆದುಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ತಾಟಿಮಾನಿಪಲ್ಲಿ ಬಳಿ ನಮ್ಮ ಜಮೀನು ಇದ್ದು, ಆ ಗ್ರಾಮದ ವಿದ್ಯಾವಂತ ಯುವಕ ನರೇಶ್ ಪರಿಚಯವಾಗಿ ನಂತರ ನರೇಶ್‌ರವರಿಗೆ ರೇಷ್ಮೆ ನೂಲು ತೆಗೆಯುವದರ ಬಗ್ಗೆ ಲಾಭಂಶವನ್ನು ತಿಳಿಸಿದ ನಂತರ ಹುಬ್ಬಳಿಯ ನಮ್ಮ ಕಾರ್ಖನೆಯಲ್ಲಿ ತರಬೇತಿ ನೀಡಲಾಗಿ, ನರೇಶ್ ರೇಷ್ಮೆ ನೂಲು ತೆಗೆಯುವ ಕಾರ್ಖನೆ ತರೆಯಲು ಮಾರ್ಗದರ್ಶನವನ್ನು ನೀಡಲಾಗಿತ್ತು ಎಂದರು.
ಸುರೇಶ್. ಸಾಫ್ಟ್ವೇರ್ ಇಂಜನಿಯರ್.ಬೆoಗಳೂರು.
ನಾನು ಈ ಹಿಂದೆ ಬೆಂಗಳೂರಿನಲ್ಲಿ ಗುತ್ತಿಗೆ ದಾರರ ಬಳಿ ಕಾರ್ಯನಿರ್ವಹಿಸುತ್ತಿದೆ, ನನಗೆ ಬೆಂಗಳೂರಿನ ಸಾಫ್ಟ್ವೇರ್ ಇಂಜನಿಯರ್ ಸುರೇಶ್‌ರವರ ಪರಿಚಯವಾ¬ತು. ಅವರ ಪ್ರೇರಣೆಯಿಂದ ಈ ಸ್ವಾವಲಂಬಿ ಬದುಕಿಗೆ ಕಳೆದ ಮೂರು ವರ್ಷಗಳ ಹಿಂದೆ ಕಾಲಿಟ್ಟೆ, ಇಂದು ಒಂದು ತಿಂಗಳಿಗೆ ಆದಾಯ ೯೫ ಸಾವಿರ ಆದಾಯ ಬರುತ್ತಿದೆ.
ರೇಷ್ಮೆ ಗೂಡನ್ನು ಕೋಲಾರ, ಮಾರುಕಟ್ಟೆಯಿಂದ ಗೂಡು ತಂದು ನೂಲು ಸಿದ್ದಪಡಿಸಿ ಸೇಲಂ, ವಾರಣಾಸಿ, ಬೆಂಗಳೂರು ಹಾಗೂ ಇತರೆ ನಗರಗಳಲ್ಲಿನ ರೇಷ್ಮೆ ವ್ಯಾಪಾರಸ್ಥರಿಗೆ ಮಾರಲಾಗುತ್ತದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಈ ಸ್ವಾವಲಂಬನೆ ಜೀವನವು ಸಂತಸ ತಂದಿದೆ.
ನರೇಶ್. ಮಾಲೀಕ. ಸಿದ್ದಿವಿನಾಯಕ ರೇಷ್ಮೆ ನೂಲು ತೆಗೆಯುವ ಕಾರ್ಖಾನೆ . ತಾಟಿಮಾನಿಪಲ್ಲಿ.