ಶ್ರೀನಿವಾಸಪುರ :- ಆಂಬೇಡ್ಕರ್ ವಿಚಾರಧಾರೆಗಳ ಕ್ಯಾಸೆಟ್ ಮಾಡಿ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ಪಕ್ಷಾತೀತವಾಗಿ ಎಲ್ಲಾ ವರ್ಗಗಳ ಜನತೆ ಹಾಗು ದಲಿತ ಸಂಘಟನೆಯ ಮುಖಂಡರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿ.ಪಂ.ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮನವಿ ಮಾಡಿದರು.
ಪಟ್ಟಣದ ನೌಕರರ ಭವನದಲ್ಲಿ ಸೋಮವಾರ ಅಂಬೇಡ್ಕರ್ ರವರ ಬರಹಗಳು ಮತ್ತು ಭಾಷಣಗಳ ೨೨ ಸಂಪುಟಗಳನ್ನು “ಸ್ಯಾಮ್” ಆಡಿಯೋ ಕಂಪನಿ ಮೂಲಕ ಧ್ವನಿ ಸುರಳಿಯನ್ನು ಬಿಡುಗಡೆ ಕಾರ್ಯಕ್ರಮದ ಪೂರ್ವಬಾವಿ ಸಭೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇದೇ ತಿಂಗಳು ೧೯ ರಂದು ಮಾಲೂರು ಪಟ್ಟಣದಲ್ಲಿ ಆಯೋಜಿಸಿರುವುದು ತಂಬಾ ಸಂತಸದ ವಿಷಯ. ಬಾಬಾ ಸಾಹೇಬ್‌ರವರ ವಿಚಾರದಾರೆಗಳನ್ನು ಇಂದಿನ ಯುವ ಜನಾಂಗ ತಿಳಿದುಕೊಳ್ಳಬೇಕು. ಪ್ರಪಂಚದಲ್ಲಿ ನಾನಾ ಭಾಗಗಳಲ್ಲಿ ಅಂಬೇಡ್ಕರ್ ವಿಚಾರದಾರೆಗಳು ತಿಳಿದುಕೊಂಡು, ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ಮುಖೇನ ಅವರಿಗೆ ಗೌರವವನ್ನು ಸೂಚಿಸಬೇಕು ಎಂದರು.
ಸ್ಯಾಮ್ ಆಡಿಯೋ ಸಂಸ್ಥಾಪಕ ಸಿದ್ದಾರ್ಥ್ ಆನಂದ್ ಮಾತನಾಡಿ ಡಾ.¨ಬಾಬಾ ಸಾಹೇಬ್ ಬರಹಗಳು ಮತ್ತು ಭಾಷಣಗಳ ೨೨ ಸಂಪುಟಗಳನ್ನು ಎಲ್ಲಾ ವರ್ಗದ ಜನರಿಗೆ ಸುಲಭವಾಗಿ ಕೇಳಿ ಅರ್ಥ ಮಾಡಿಕೊಳ್ಳುವ ಪ್ರಥಮ ಭಾರಿಗೆ ಸ್ಯಾಮ್ ಆಡಿಯೋ ಕಂಪನಿಯ ಮೂಲಕ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸ್ಯಾಮ್ ಆಡಿಯೋ ಕಂಪನಿಯ ಮೂಲಕ ಧ್ವನಿ ಸುರಳಿ ಬಿಡುಗಡೆ ಮಾಡಿ, ಆಡಿಯೋ ಮೂಲಕ ಕೇಳುಗರಿಗೆ ತಲುಪಿಸುತ್ತಿದೆ.
ಓದುವ ಹವ್ಯಾಸ ಇಲ್ಲದವರಿಗೂ, ಓದುವ ಸಮಯ ಇಲ್ಲದವರಿಗೂ , ಕೇಳಿ ಅರ್ಥ ಮಾಡಿಕೊಳ್ಳುವ ಅನಕ್ಷರಸ್ಥರಿಗೂ ಇದೊಂದು ಕೊಡಿಗೆ ಯಾಗಲಿದ್ದು, ಯಾವುದೇ ರೀತಿಯಾದ ಪ್ರಯಾಣ ಮಾಡುವಾಗ, ವಿಶ್ರಾಂತಿ ಸಮಯದಲ್ಲಿ ಕೇಳಿಸಿಕೊಳ್ಳಬಹುದು. ಎಂದು ಆಶಯವ್ಯಕ್ತಪಡಿಸಿದರು.
ಈ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್, ಮಾಜಿ ಸಚಿವ ಹಾಗು ಹಾಲಿ ಶಾಸಕ ಸತೀಶ್‌ಜಾರಕಿಹೊಲಿ, ನಟ ಸತೀಶ್‌ನೀನಾಸಂ ಸೇರಿದಂತೆ ಆನೇಕ ಜಿಲ್ಲೆಯ ಹಾಗು ರಾಜ್ಯದ ಮುಖಂಡರು ಭಾಗವಹಿಸುತ್ತಿದ್ದು, ಎಲ್ಲಾ ಪ್ರಗತಿ ಪರ ಸಂಘನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ರೂಪಗೊಳ್ಳಲುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ದಲಿತ ಮುಖಂಡರಾದ ಚಲ್ದಿಗಾನಹಳ್ಳಿ ಗ್ರಾಮದ ಈರಪ್ಪ, ವೆಂಕಟೇಶ್, ನಿಂರಜನ್, ಉಪ್ಪರಪಲ್ಲಿ ತಿಮ್ಮಯ್ಯ, ಅಂಬೇಡ್ಕರ್ ಪಾಳ್ಯ ನರಸಿಂಹಮೂರ್ತಿ, ಶಿವಕುಮಾರ್, ಸುಬ್ರಮಣಿ, ಕೃಷ್ಣಪ್ಪ, ಕೊಂಡಸoದ್ರ ಶಿವ, ಸಂತೋಷ್, ನಾರಾಯಣಪುರ ವೆಂಕಟೇಶ್ ಇನ್ನು ಹಲವಾರು ದಲಿತ ಮುಖಂಡರು ಇದ್ದರು.