ಶ್ರೀನಿವಾಸಪುರ, ನಮ್ಮ ಮನೆತನದ ಹಿರಿಯರಾದ ನಮ್ಮ ತಾತ-ನಮ್ಮ ಅಪ್ಪ ಸಂಪಾದನೆ ಮಾಡಿದ ಬಸ್ಸುಗಳಿಂದಲೇ ಸಂತೃಪ್ತಿ ಜೀವನ ಮಾಡುತ್ತಿದ್ದೇನೆ, ನಿಮ್ಮ ಹಾಗೆ ಬಡವರ ಹೆಸರು ಹೇಳಿಕೊಂಡು ನಾಲ್ಕು ತಲೆಮಾರಿಗೆ ಆಗುವಷ್ಟು ಸಂಪಾದನೆ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಜಾಯಮಾನ ನನ್ನದಲ್ಲಾ, ಹಾಗೆಯೇ ಬಡವರ ಜಮೀನುಗಳಿಗೆ ಒಂದೇ ಒಂದು ಸಾಗುವಳಿ ಚೀಟಿ ಕೊಡಿಸಲಾಗದ ನೀವು ನೂರಾರು ಎಕರೆ ಅರಣ್ಯ ಭೂಮಿಗೆ ದಾಖಲೆಗಳು ಸೃಷ್ಟಿ ಮಾಡಿಕೊಳ್ಳುವಷ್ಟು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಹಾಲಿ ಶಾಸಕ ಕೆ,ಆರ್, ರಮೇಶ್ ಕುಮಾರ್ ವಿರುದ್ದ ಮಾಜಿ ಶಾಸಕ ಜಿ. ಕೆ. ವೆಂಕಟಶಿವಾರೆಡ್ಡಿ ವ್ಯಂಗ್ಯ ಮಾಡಿದರು.
ಅಪಾರ ಜನ ಸಾಗರದೊಂದಿಗೆ ನಮ್ಮ ನಡೆ ಸ್ವಾಭಿಮಾನದ ಕಡೆ ಎಂಬ ಪಾದಯಾತ್ರೆ ಪ್ರಾರಂಬಿಸಿ ಬೆಳಿಗ್ಗೆ ೧೧ ಗಂಟೆಗೆ ಶ್ರೀನಿವಾಸಪುರ ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅನಂತರ ಮುಳಬಾಗಿಲು ವೃತ್ತದ ಮೂಲಕ ಹೂ ಮಳೆಯ ಸುರಿಸುವ ಜನ ಸಾಗರವು ಎಂ.ಜಿ ರಸ್ತೆಯ ಮೂಲಕ ಜಯ ಘೋಷಣೆಗಳು ಕೂಗುತ್ತ ಕಾಂಗ್ರೇಸ್ ಕಛೇರಿ ಪಕ್ಕದಲ್ಲಿ ಇರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜೆ.ಡಿ.ಎಸ್. ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ರ‍್ಯಾಲಿ ಮತ್ತು ಸೇರ್ಪಡೆ ಕಾರ್ಯಕ್ರಮ ಉದ್ಘಟನೆ ಮಾಡಿದ ಜೆ,ಡಿ,ಎಸ್,ಜಿಲ್ಲಾದ್ಯಕ್ಷ ಹಾಗು ಮಾಜಿ ಶಾಸಕ ಜಿ,ಕೆ,ವೆಂಕಟಶಿವಾರೆಡ್ಡಿ ನಮ್ಮ ಜೆ.ಡಿ.ಎಸ್ ಪಕ್ಷದಲ್ಲಿ ಹಳಬರು ಹೊಸ ಕಾರ್ಯಕರ್ತರು ಎಂಬ ಯಾವುದೇ ಭೇದಭಾವ ಇಲ್ಲ, ಪ್ರತಿಯೊಬ್ಬರಿಗೂ ಸರಿಸಮಾನವಾದ ಅವಕಾಶಗಳು ಕಲ್ಪಿಸಲಾಗುವುದು, ಯಾವ ಜಾತಿ ಧರ್ಮವನ್ನು ತಾರತಮ್ಯವಿಲ್ಲದೆ ಎಲ್ಲರು ನನ್ನವರು, ಎಲ್ಲರ ಮನುಷ್ಯ ನಾನು ಎಂಬ ಭಾವನೆಯಿಂದಲೇ ೪೫ ವರ್ಷಗಳಿಂದ ಕ್ಷೇತ್ರದ ಜನತೆ ಮುಂದೆ ಓಡಾಡುತ್ತಿದ್ದೇನೆ. ರಮೇಶ್‌ಕುಮಾರ್ ರವರ ರೀತಿಯಲ್ಲಿ ಸುಳ್ಳು ಆಶ್ವಾಸನೆಗಳನ್ನು ಹೇಳಿಕೊಂಡು ಕಾಲಹರಣ ಎಂದೂ ನಾನು ಮಾಡಿಲ್ಲ, ಯಾರ ಅವಧಿಯಲ್ಲಿ ಅಭಿವೃದ್ದಿ ಕೆಲಸಗಳು ಆಗಿದೆ ಎಂಬುದು ನನ್ನ ವಿರುದ್ದ ಮಾತನಾಡುವ ಕಾಂಗ್ರೆಸ್ಸಿಗರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ, ಅವರ ಸುಳ್ಳು ಮಾತುಗಳು ಕೇಳಿ ಜನರು ಎಚ್ಚರಿಕೆಯಾಗಿದ್ದಾರೆ. ಶ್ರೀನಿವಾಸಪುರ ವಿದಾನ ಸಭಾ ಕ್ಷೇತ್ರದ ಉದ್ದಗಲಕ್ಕೂ ಹಿಂದೆದೂ ಕಾಣದ ರೀತಿಯಲ್ಲಿ ಎಲ್ಲಾ ಸಮಾಜದವರು ನನಗೆ ಬೆಂಬಲ ನೀಡುತ್ತಿದ್ದಾರೆ, ಈ ಪರಿ ನನ್ನ ಪರವಾಗಿ ಜನಸಾಗರ ನೋಡಿ ಹತಾಶೆಗೊಂಡ ವಿರೋಧಿಗಳು ಅವರ ಪಕ್ಷದವರಿಗೆ ಅವರೇ ಹೂವಿನ ಹಾರಗಳು ಹಾಕಿಕೊಂಡು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗಳು ಎಂದು ಮತದಾರರಲ್ಲಿ ಇಲ್ಲ ಸಲ್ಲದ ಗೊಂದಲ ಎಬ್ಬಿಸುತ್ತಿದ್ದಾರೆ, ಇಂತಹ ಘಟನೆಗಳಿಗೆ ನಮ್ಮ ಜೆ.ಡಿ.ಎಸ್ ಪಕ್ಷದ ಸೇನಾನಿಗಳು ಹೆದರುವ ಅಗತ್ಯವಿಲ್ಲ ಎಂದರು ಹುರಿದುಂಬಿಸಿದರು.
ಶಾಸಕ ಕೆ,ಆರ್, ರಮೇಶ್ ಕುಮಾರ್ ಕಳೆದ ೧೦ ವರ್ಷಗಳಿಂದ ಅಲ್ಪಸಂಖ್ಯಾತರು, ಹಿಂದುಳಿದವರ್ಗ, ಪ. ಜಾ, ಪ. ಪಂ ಜನಾಂಗಕ್ಕಾಗಿ ಬಂದ ಅನುದಾನಗಳು ಹಾಗು ಯೋಜನೆಗಳನ್ನು ಅವರಗೆ ತಲಪಿಸದೆ ಸರ್ಕಾರಕ್ಕೆ ವಾಪಸ್ ಕಳಿಸುವ ಮನಸ್ಸಾದರು ಹೇಗೆ ಬಂತು, ಕನಿಷ್ಠ ಅವರ ಜಮೀನುಗಳಿಗೆ ಒಂದೇ ಒಂದು ಸಾಗುವಳಿ ಚೀಟಿ ಕೊಡಿಸದೆ ತಾವು ಅಕ್ರಮಿಸಿರುವ ಭೂಮಿಗೆ ದಾಖಲೆಗಳು ಸೃಷ್ಟಿ ಮಾಡಿಕೊಂಡು ಬಡವರಿಗೆ ವಂಚನೆ ಮಾಡಿದ್ದಲ್ಲದೆ, ನಬಾರ್ಡ್ನಿಂದ ಬರುವ ಹಣವನ್ನು ಮಹಿಳ ಸಂಘದ ಮಹಿಳೆಯರಿಗೆ ಗುಂಪು-ಗುoಪಾಗಿ ಸೇರಿಸಿ ಅಯ್ಯೋ-ಅಮ್ಮ-ತಲ್ಲಿ ಎಂದು ಭಾವುಕರಾಗಿ ಅವರ ಅನುಕಂಪ ಗಿಟ್ಟಿಸಿಕೊಳ್ಳಲು ಮಾಡಿರುವ ಪ್ರಯತ್ನಗಳು ಸಂಪೂರ್ಣ ವಿಫಲವಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೆ,ಡಿ,ಎಸ್, ಪಕ್ಷಕ್ಕೆ ಸೇರ್ಪಡೆ ಬಿ. ಎಲ್. ಕುಟುಂಬದ ಮಾಜಿ ಪುರಸಭಾ ಅಧ್ಯಕ್ಷೆ ಚಂದ್ರಕಳಾ ಮಲ್ಲಿಕಾರ್ಜುನ್, ಮಾಜಿ ಸದಸ್ಯ ಅಪ್ಪೂರ್ ಮುನಿರಾಜು, ನೆತ್ತೋಳ್ಳ ಶ್ರೀರಾಮ್, ಶಂಕರ, ಅಶೋಕ್, ಬಾಂಬೆ ನಾಗಣ್ಣ, ಗಾರ್ ಮೇಸ್ತಿç ನಾಗಪ್ಪ ಮತ್ತು ಕುಟುಂಬದವರು, ಕುಂಬಾರ್ ಕೃಷ್ಣಪ್ಪ ಅವರ ಬೆಂಬಲಿಗರೊoದಿಗೆ ಕಾಂಗ್ರೆಸ್ ತೊರೆದು ಜೆ.ಡಿ.ಎಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್ ನಾರಾಯಣಸ್ವಾಮಿ,ಇಂದಿರಾಭವನ್ ರಾಜಣ್ಣ, ಮಾಜಿ ಉಪಾಧ್ಯಕ್ಷ ಜಿ. ಸೋಮಶೇಖರ್, ಪುರಸಭಾ ಸದಸ್ಯ ಗೋಲಿಬಾರ್ ವೆಂಕಟರೆಡ್ಡಿ, ಶಬ್ಬೀರ್, ಅಪ್ಪೂರ್ ರಾಜು, ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ, ಮಾಜಿ ಪುರ ಸಭಾ ಅಧ್ಯಕ್ಷ ಶ್ರೀನಿವಾಸಪ್ಪ, ತಾ ಪಂ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ರಾದ ಹಳೇಪೇಟೆ ಮಂಜುನಾಥರೆಡ್ಡಿ, ಕೆ,ಪಿ ನಾಗೇಶ್ ,ಕಾಡುದೇವಂಡ ಹಳ್ಳಿ ರಾಮಚಂದ್ರೇಗೌಡ, ಜೆ.ಡಿ.ಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಜೆಡಿಎಸ್ ಯುವ ಮುಖಂಡರಾದ ಅಂಭೇಡ್ಕರ್ ಪಾಳ್ಯ ರವಿ, ಜಗ್ಗು ಅಲಿಯಾಸ್ ಜಗದೀಶ್, ಕಾರ್ ಬಾಬು, ಪೂಲು ಶಿವಾರೆಡ್ಡಿ, ದಳಸನೂರು ಮಂಜುನಾಥ್, ಒಕ್ಕಲಿಗ ಸಂಘದ ಅದ್ಯಕ್ಷ ವೇಣುಗೋಪಾಲರೆಡ್ಡಿ, ಅಲ್ಪಸಂಖ್ಯತ ಯುವ ಸಂಘದ ಅದ್ಯಕ್ಷ ಸಾಧಿಕ್,ಎಜಾಜ್,ನಯಾಜ್, ಮೌಲಾ,ರಸೂಲ್, ಸಿ,ಆರ್, ಶಭ್ಭೀರ್,ಮುಂತಾದವರು ಇದ್ದರು.